ಜೇನ್ ಸ್ಟ್ರೀಟ್ ಕಂಪನಿ ಐಐಟಿ ಮದ್ರಾಸ್‌ನ ವಿದ್ಯಾರ್ಥಿಯೊಬ್ಬರಿಗೆ ₹4.3 ಕೋಟಿ ವಾರ್ಷಿಕ ವೇತನ ಪ್ಯಾಕೇಜ್ ನೀಡಿದೆ. ಈ ಹುದ್ದೆ ಹಾಂಕಾಂಗ್‌ನಲ್ಲಿದ್ದು, ಪ್ಯಾಕೇಜ್‌ನಲ್ಲಿ ವೇತನ, ಬೋನಸ್ ಮತ್ತು ರಿಲೋಕೇಷನ್ ಸೇರಿವೆ.
ಚೆನ್ನೈ (ಡಿ.3): ಐಐಟಿ ಮದ್ರಾಸ್ ಮತ್ತೊಮ್ಮೆ ತನ್ನ ವಿದ್ಯಾರ್ಥಿಯೊಬ್ಬನ ಪ್ರೀ ಪ್ಲೇಸ್‌ಮೆಂಟ್ ಆಫರ್ (ಪಿಪಿಓ) ಕಾರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ. ಜಾಗತಿಕ ಟ್ರೇಡಿಂಗ್ ಕಂಪನಿ ಜೇನ್ ಸ್ಟ್ರೀಟ್ ಐಐಟಿ ಮದ್ರಾಸ್‌ನ ವಿದ್ಯಾರ್ಥಿಯೊಬ್ಬನಿಗೆ ವಾರ್ಷಿಕ 4.3 ಕೋಟಿ ರೂಪಾಯಿ ವೇತನ ಪ್ಯಾಕೇಜ್ ಆಫರ್ ಮಾಡಿದೆ. ಇದು ಹಾಲಿ ವರ್ಷದ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತದ ವೇತನ ಪ್ಯಾಕೇಜ್ ಆಗಿದೆ. ಈ ಹುದ್ದೆ ಹಾಂಕಾಂಗ್‌ನಲ್ಲಿ ಇರಲಿದ್ದು, ಈ ಪ್ಯಾಕೇಜ್‌ನಲ್ಲಿ ವೇತನ, ಬೋನಸ್ ಹಾಗೂ ರಿಲೋಕೇಷನ್ ಸೇರಿದೆ ಎಂದು ಕಂಪನಿ ತಿಳಿಸಿದೆ. ಐಐಟಿ ಮದ್ರಾಸ್‌ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಫೈ ಪ್ರೀಕ್ವೆನ್ಸಿ ಟೇಡಿಂಗ್ ಫರ್ಮ್ ಆಗಿರುವ ಜೇನ್ ಸ್ಟ್ರೀಸ್ ಈ ಆಫರ್ ನೀಡಿದೆ. ಇದೇ ಕಂಪನಿಯೊಂದಿಗೆ ವಿದ್ಯಾರ್ಥಿ ಕೆಲ ತಿಂಗಳ ಕಾಲ ಇಂಟರ್ನ್‌ಶಿಪ್ ಕೂಡ ಮಾಡಿದ್ದ. ಮೂಲಗಳ ಪ್ರಕಾರ, ಹಾಂಗ್ ಕಾಂಗ್‌ನಲ್ಲಿ ಕ್ವಾಂಟಿಟೇಟಿವ್ ಟ್ರೇಡರ್ ರೋಲ್‌ಅನ್ನು ಈತ ವಹಿಸಿಕೊಳ್ಳಲಿದ್ದಾನೆ.
ಈ ದುಬಾರಿ ಮೊತ್ತದ ಪ್ಯಾಕೇಜ್ ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ಇದು ವಿದ್ಯಾರ್ಥಿಯ ವೈಯಕ್ತಿಕ ಮೈಲಿಗಲ್ಲು ಮಾತ್ರವಲ್ಲ ದೇಶದ ಪ್ರಮುಖ ಐಐಟಿಯೊಂದರ ಮಹತ್ವವನ್ನು ಇದು ಸಾರಿದೆ. ವಿಶ್ವದರ್ಜೆಯ ಟ್ಯಾಲೆಂಟ್‌ಗಳನ್ನು ರೂಪಿಸುವಲ್ಲಿ ಐಐಟಿ ಮದ್ರಾಸ್‌ನ ಪಾತ್ರವನ್ನೂ ಇದು ತೋರಿಸಿದೆ.
ಐಐಟಿ ಮದ್ರಾಸ್‌ನ ಟಾಪ್ ಆಫರ್‌ಗಳು
ಈ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಹಳೆಯ ಐಐಟಿಗಳಲ್ಲಿ ಹಲವಾರು ಉನ್ನತ ಕಂಪನಿಗಳು ಅದ್ಭುತವಾದ ವೇತನ ಪ್ಯಾಕೇಜ್‌ಗಳನ್ನು ನೀಡಿವೆ. ಬ್ಲ್ಯಾಕ್‌ರಾಕ್, ಗ್ಲೀನ್ ಮತ್ತು ಡಾ ವಿನ್ಸಿ 2 ಕೋಟಿ ರೂ.ಗಿಂತ ಹೆಚ್ಚಿನ ಪ್ಯಾಕೇಜ್‌ಗಳನ್ನು ಭಾರತದ ವಿದ್ಯಾರ್ಥೊಗಳಿಗೆ ನೀಡಿವೆ. ಎಪಿಟಿ ಪೋರ್ಟ್‌ಫೋಲಿಯೊ ಮತ್ತು ರುಬ್ರಿಕ್‌ನಂತಹ ಇತರ ಸಂಸ್ಥೆಗಳು 1.4 ಕೋಟಿ ರೂ.ಗಿಂತ ಹೆಚ್ಚಿನ ಆಫರ್ ನೀಡಿದ್ದರೆ, ಎಬುಲಿಯಂಟ್ ಸೆಕ್ಯುರಿಟೀಸ್ ಮತ್ತು ಐಎಂಸಿ ಟ್ರೇಡಿಂಗ್ 1.3 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್‌ಗಳನ್ನು ನೀಡಿವೆ.
ಕ್ವಾಡೆಯೆಯು ಅಂದಾಜು 1 ಕೋಟಿ ರೂಪಾಯಿಯ ಆಫರ್‌ಅನ್ನು ನೀಡಿದ್ದರೆ, ಕ್ವಾಂಟ್‌ಬಾಕ್ಸ್ ಮತ್ತು ಗ್ರಾವಿಟನ್ ಸುಮಾರು 90 ಲಕ್ಷದ ವಾರ್ಷಿಕ ಪ್ಯಾಕೇಜ್‌ಅನ್ನು ಈ ಬಾರಿ ಐಐಟಿ ಮದ್ರಾಸ್ ವಿದ್ಯಾರ್ಥಿಗೆ ನೀಡಿದೆ.ಡಿಇ ಶಾ ರೂ 66-70 ಲಕ್ಷ, ಪೇಸ್ ಸ್ಟಾಕ್ ಬ್ರೋಕಿಂಗ್ ರೂ 75 ಲಕ್ಷ, ಮತ್ತು ಸ್ಕ್ವೇರ್ ಪಾಯಿಂಟ್ ಕ್ಯಾಪಿಟಲ್ ರೂ 65 ಲಕ್ಷದ ನಡುವೆ ಆಫರ್ ಮಾಡಿದೆ. ಮೈಕ್ರೋಸಾಫ್ಟ್ ಮತ್ತು ಕೊಹೆಸಿಟಿ ಕೂಡ 50-40 ಲಕ್ಷ ರೂಪಾಯಯಿ ವಾರ್ಷಿಕ ವೇತನದ ಆಫರ್ ಮಾಡಿದೆ.
EPFO 3.0: ಎಟಿಎಂ ಮೂಲಕವೂ ಪಿಎಫ್ ವಿತ್‌ಡ್ರಾ ಮಾಡೋಕೆ ಸಿಗಲಿದೆ ಅವಕಾಶ!
ಪ್ಲೇಸ್‌ಮೆಂಟ್‌ನ ಮೊದಲ ದಿನದಂದು, Qualcomm, Microsoft, Goldman Sachs, Bajaj Auto, Ola Electric, Alphonso, ಮತ್ತು Nutanix ಮುಂತಾದ ದೊಡ್ಡ ಕಂಪನಿಗಳು ಭಾಗವಹಿಸಿದ್ದವು. ಹೆಚ್ಚಿನ ಆರಂಭಿಕ ಆಫರ್‌ಗಳು ಒಟ್ಟಾರೆ ಪ್ಲೇಸ್‌ಮೆಂಟ್ ಯಶಸ್ಸನ್ನು ಖಾತರಿಪಡಿಸದಿದ್ದರೂ, ಈ ವರ್ಷದ ಪ್ರಾರಂಭವು ಕಳೆದ ವರ್ಷಕ್ಕಿಂತ ಹೆಚ್ಚು ಭರವಸೆಯನ್ನು ನೀಡುತ್ತದೆ. IIT ಮದ್ರಾಸ್ ಸಿಬ್ಬಂದಿ ತಮ್ಮ ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ ಮತ್ತು ಇಂಥ ಆಫರ್‌ಗಳು, ನಾವೀನ್ಯತೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವಲ್ಲಿ ಸಂಸ್ಥೆಯ ಗಮನವನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
ಮಾಜಿ ಬಾಯ್‌ಫ್ರೆಂಡ್‌ನ ಬಿಟ್‌ಕಾಯಿನ್ ಇದ್ದ ಹಾರ್ಡ್‌ಡ್ರೈವ್ ಕಸದ ಗಾಡಿಗೆ ಎಸೆದ ಯುವತಿ, ಇದರ ಮೌಲ್ಯ 5900 ಕೋಟಿ!