50ರ ಪ್ರಾಯದಲ್ಲಿ ಬ್ಯುಸಿನೆಸ್ ಆರಂಭಿಸಿ, 2 ಕೋಟಿ ಗಳಿಸಿದ ಅಮ್ಮಂದಿರು!

By Suvarna NewsFirst Published Sep 15, 2020, 4:39 PM IST
Highlights

ಇದು ಇಬ್ಬರು ಮಧ್ಯವಯಸ್ಸಿನ ಮಹಿಳೆಯರ ಕತೆ. ತಮ್ಮ 50 ವರ್ಷ ವಯಸ್ಸಿನ ನಂತರ ಸ್ವ ಉದ್ಯಮ ಆರಂಭಿಸಿದ ಇವರು, ಮೂರೇ ವರ್ಷದಲ್ಲಿ 2 ಕೋಟಿ ರೂ .ಗಳಿಸಿದ್ದಾರೆ!

ಡೆಹ್ರಾಡೂನ್‌ ಮೂಲದ ನಿಶಾ ಗುಪ್ತಾ ಹಾಗೂ ಗುಡ್ಡಿ ತಾಪ್ಲಿಯಾಲ್ ಎಂಬ ಇಬ್ಬರು ಮಹಿಳೆಯರ ಕತೆ ಇದು. ಇಬ್ಬರೂ ಹೆಚ್ಚು ಓದಿದವರೇನಲ್ಲ. ಗುಡ್ಡಿ ಓದಿದ್ದು ಐದನೇ ತರಗತಿ. ನಿಶಾ ಓದಿದ್ದು ಪದವಿ. ಇಬ್ಬರೂ ಗೃಹಿಣಿಯರು. ತಮ್ಮ ಐವತ್ತನೇ ವಯಸ್ಸಿನವರೆಗೂ ಸ್ವ ಉದ್ಯಮದ ಬಗೆಗಾಗಲೀ, ಉದ್ಯೋಗದ ಬಗೆಗಾಗಲೀ ಯೋಚಿಸಿದವರೇ ಅಲ್ಲ. ಆನ್‌ಲೈನ್ ಬ್ಯುಸಿನೆಸ್‌ ಹೇಗಿರುತ್ತದೆ ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲ. ಗೀಕ್‌ಮಂಕಿ ಎಂಬ ಹೆಸರಿನ ಇವರ ಹೋಂ ಬ್ಯುಸಿನೆಸ್‌ ಸ್ಥಾಪನೆಯಾದದ್ದು 2017ರಲ್ಲಿ. ಈಗ ಇದಕ್ಕೆ ಸುಮಾರು 1.5 ಲಕ್ಷ ಗ್ರಾಹಕರು ದೇಶಾದ್ಯಂತ ಇದ್ದಾರೆ. ಕಳೆದ ವರ್ಷ ಇವರು 2 ಕೋಟಿ ರೂ. ಆದಾಯ ಗಳಿಸಿದ್ದಾರೆ. ಅಂದಹಾಗೆ ಇವರಿಬ್ಬರೂ ಬೀಗಿತ್ತಿಯರು. ಗುಡ್ಡಿಯ ಮಗ ಅನಿಲ್‌, ನಿಶಾ ಅವರ ಮಗಳನ್ನು ಮದುವೆಯಾಗಿದ್ದಾನೆ. ಇಬ್ಬರೂ ಐಟಿ ಉದ್ಯೋಗಿಗಳು. 

ಉದ್ಯಮದ ಐಡಿಯಾ ಹೊಳೆದದ್ದು ನಿಶಾಗೆ. ಯಾವುದೋ ಪಾರ್ಟಿಯ ನಂತರ ಮರಳಿ ಬರುವಾಗ, ಕೈಲಿದ್ದ ರಿಟರ್ನ್ ಗಿಫ್ಟ್ ನೋಡುತ್ತ, ಇಂಥದನ್ನು ತಾನು ಮಾಡಿ ಮಾರಬಾರದೇಕೆ ಎಂಬ ಐಡಿಯಾ ಬಂತು. ಗುಡ್ಡಿಯ ಜೊತೆ ಸೇರಿ ಹಾಗೇ ಮಾಡಿದಳು. ಇದಕ್ಕೆ ಒಳ್ಳೆಯ ಬೇಡಿಕೆ ಬಂತು. ಮನೆಯಿಂದಲೇ ಗಿಫ್ಟ್‌ಗಳನ್ನು ಸಿದ್ಧ ಮಾಡಿ, ಮಾರತೊಡಗಿದರು. ಒಂದು ಸಣ್ಣ ಅಂಗಡಿ ಇಡೋಣವೇ ಎಂದು ಯೋಚಿಸಿದರು. ಆದರೆ ಅನಿಲ್‌, ಅಂಗಡಿಯ ಬದಲು ಆನ್‌ಲೈನ್ ಶಾಪ್‌ ಆರಂಭಿಸುವ ಐಡಿಯಾ ಕೊಟ್ಟ. ಆದರೆ ಇಬ್ಬರಿಗೂ ಕಂಪ್ಯೂಟರ್‌, ಇಂಟರ್‌ನೆಟ್‌ ಹ್ಯಾಂಡಲ್‌ ಮಾಡಿಯೂ ಗೊತ್ತಿರಲಿಲ್ಲ. ಅನಿಲ್‌ ಇವರಿಗೆ ವೆಬ್‌ಸೈಟ್‌ ಡಿಸೈನ್‌ ಮಾಡಿ ನೀಡಿದ. ವಿಭಿನ್ನ ಪ್ರಾಯದವರಿಗೆ, ವಿಭಿನ್ನ ಅಭಿರುಚಿಯವರಿಗೆ ನೀಡಬಹುದಾದ ಗಿಫ್ಟ್‌ಗಳನ್ನು ವಿಂಗಡಿಸಿ ಪಬ್ಲಿಶ್‌ ಮಾಡುವುದನ್ನು ಹೇಳಿಕೊಟ್ಟ. ಸ್ಥಳೀಯ ಕಲಾವಿದರು, ಕಸೂತಿ ಕಲಾವಿದರು, ಶಿಲ್ಪಿಗಳನ್ನು ಹುಡುಕಿ ಮಾತನಾಡಿಸಿ, ತಮ್ಮ ಸಾಹಸದ ಭಾಗವಾಗಿಸಿಕೊಂಡರು. ೨೦೧೮ರಲ್ಲಿ ಬಾಯಿಯಿಂದ ಬಾಯಿಗೆ ಇವರ ವೆಬ್‌ಸೈಟ್‌ನ ಬಗ್ಗೆ, ಮಾಹಿತಿ ಹರಡಿತು. ಫೇಸ್‌ಬುಕ್‌ ಮುಂತಾದ ತಾಣಗಳನ್ನೂ ಪಬ್ಲಿಸಿಟಿಗೆ ಬಳಸಿಕೊಂಡರು. 

ಹೇಗಿದೆ ಅಂಬಾನಿ ಫ್ಯಾಮಿಲಿ ಸೊಸೆಯರ ನಡುವಿನ ಸಂಬಂಧ? 
ಇವರ ವೆಬ್‌ಸೈಟ್‌ ಎಲ್ಲ ಸಾಮಾನ್ಯ ಗಿಫ್ಟ್ ವೆಬ್‌ಸ್ಐಟ್‌ಗಳ ಹಾಗಲ್ಲ. ಇವರು ಮಾರುವುದು ಕಸ್ಟಮೈಸ್‌ಡ್‌ ಉತ್ಪನ್ನಗಳನ್ನು. ಇವರ ಜಾಲತಾಣದಲ್ಲಿ ನಲುವತ್ತಕ್ಕೂ ಹೆಚ್ಚು ವಿಭಾಗಗಳಿವೆ. ಪ್ರತಿಯೊಬ್ಬನೂ ಇವುಗಳಲ್ಲಿ ಒಂದಲ್ಲ ಒಂದು ವಿಭಾಗದಲ್ಲಿ ತನಗೆ ಅಥವಾ ತನ್ನ ಅಚ್ಚುಮೆಚ್ಚಿನವರಿಗೆ ಕೊಡಬೇಕಾದಂಥ ಪಕ್ಕಾ ಗಿಫ್ಟ್‌ಗಳನ್ನು ಕಂಡುಕೊಳ್ಳಬಹುದು. ಅದೇ ಇವರ ಉದ್ಯಮದ ಯಶಸ್ಸಿನ ಗುಟ್ಟು. 
ನಿರಂತರ ಸಂಶೋಧನೆ, ಒಳ್ಳೆಯ ಉತ್ಪನ್ನಗಳನ್ನು ಕಂಡುಹಿಡಿದು ತಮ್ಮ ತಾಣದಲ್ಲಿ ಅಳವಡಿಸಿಕೊಳ್ಳುವುದನ್ನು ಇವರು ಮಾಡುತ್ತಲೇ ಇರುತ್ತಾರೆ. ಗ್ರಾಹಕರ ಸಮಾಧಾನವೇ ಇವರ ಯಶಸ್ಸಿನ ಗುಟ್ಟು. ಒಂದು ವೇಳೆ ಐಟಂ ಇಷ್ಟವಾಗದಿದ್ದರೆ, ನೀವು ಅದನ್ನು ಮರಳಿಸಬಹುದು, ಇವರೇನೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಿ ಕಿರಿಕಿರಿ ಮಾಡುವುದಿಲ್ಲ. ಹೀಗೆ ಸಮಾಧಾನ ಪಡೆದ ಗ್ರಾಹಕರೇ ಮುಂದಿನ ಬೇಡಿಕೆ ಮಂಡಿಸುತ್ತಾರೆ. ಇವರು ಹೊಸ ಅನ್ವೇಷಣೆ ಅಥವಾ ಪ್ರಯೋಗ ಮಾಡುವುದರಲ್ಲೂ ನಿಸ್ಸೀಮರು. ಉದಾಹರಣೆಗೆ, ಇವರು ತಂದಿಟ್ಟ ಅಗಲದ ಮಗ್‌ ಒಂದು ಮಾರಾಟವಾಗಲಿಲ್ಲ. ಗುಡ್ಡಿ ಅದಕ್ಕೆ ಮೂರು ಕಾಲುಗಳನ್ನು ಜೋಡಿಸಿ ಅದನ್ನು ಗಿಡಗಳ ಪಾಟ್‌ ಮಾಡಿದಳು. ಅದಕ್ಕೆ ಬೇಡಿಕೆ ಬಂತು. ಈಗ ಮಗ್‌ಗಳನ್ನು ಪ್ಲಾಂಟರ್‌ ಮಾಡಿ ಮಾರಲಾಗುತ್ತಿದೆ.

ಈ ರೆಸ್ಟೋರೆಂಟ್‌ನಲ್ಲಿ ಫುಡ್ ಡೆಲಿವರಿ ಮಾಡೋದು ಬಾಡಿ ಬಿಲ್ಡರ್ಸ್..! 
ಈ ಇಬ್ಬರು ಗೃಹಿಣಿಯರು ಯಶಸ್ಸಿನ ಕತೆ ತೋರಿಸಿರುವ ಸತ್ಯ ಎಂದರೆ, ಯಶಸ್ವಿ ಉದ್ಯಮ ಕಟ್ಟಬೇಕಾದರೆ ಪದವಿ, ಬ್ಯುಸಿನೆಸ್‌ ಡಿಗ್ರಿ ಮುಖ್ಯವಲ್ಲ, ನೀವು ಟೀನೇಜ್‌ನವರಾಗಿಯೂ ಇರಬೇಕಿಲ್ಲ. ಒಂದಿಷ್ಟು ಹಠ, ಛಲ, ಉತ್ಸಾಹ, ವಿವೇಕ, ಇದ್ದರೆ ಸಾಕು. 

ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಮಾಡಿದ ಕೆಲಸ ನೋಡಿ! 

click me!