ಕಂಪನಿಯು ಮುಂದಿನ ಕೆಲವು ದಿನಗಳವರೆಗೆ ತನ್ನ ಕಚೇರಿ ಕಟ್ಟಡಗಳನ್ನು ಮುಚ್ಚುವುದಾಗಿ ಸಂದೇಶಗಳನ್ನು ಕಳುಹಿಸಿದ್ದರಿಂದ ಟ್ವಿಟ್ಟರ್ ತನ್ನ ಹೊಸ ಮಾಲೀಕರಾದ ಎಲೋನ್ ಮಸ್ಕ್ ಅಡಿಯಲ್ಲಿ ತೀವ್ರ ಅವ್ಯವಸ್ಥೆಗೆ ಸಿಲುಕಿದೆ.
ಎಲಾನ್ ಮಸ್ಕ್ (Elon Musk) ಖರೀದಿ ಬಳಿಕ ಟ್ವಿಟ್ಟರ್‌ನಲ್ಲಿ (Twitter) ಸೃಷ್ಟಿಯಾಗಿರುವ ಗೊಂದಲ ಮತ್ತಷ್ಟು ಅಯೋಮಯವಾಗಿದ್ದು, ಇನ್ನಷ್ಟು ಸಿಬ್ಬಂದಿ (Employees) ಇದೀಗ ತಮ್ಮ ಹುದ್ದೆಗಳಿಗೆ ರಾಜೀನಾಮೆ (Resign) ನೀಡಿದ್ದಾರೆ. ಎಲಾನ್ ಮಸ್ಕ್ ಅವರ ಷರತ್ತುಗಳಿಗೆ ಒಪ್ಪಲಾಗದೆ ಭಾರಿ ಪ್ರಮಾಣದಲ್ಲಿ ಸಿಬ್ಬಂದಿ ರಾಜೀನಾಮೆ ನೀಡಿರುವ ಕಾರಣ, ಹಲವು ಕಡೆ ಟ್ವಿಟ್ಟರ್ ಕಚೇರಿಗಳನ್ನೇ (Offices) ಮುಂದಿನ ಕೆಲ ದಿನಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಂಪನಿಯಲ್ಲಿ ಇನ್ನೂ ಉಳಿದಿರುವ ಸಿಬ್ಬಂದಿಗೆ ಮಾಹಿತಿ ರವಾನಿಸಲಾಗಿದ್ದು, ಅವರಿಗೆ ಲಾಗಿನ್ ಅವಕಾಶ ನಿರಾಕರಿಸಲಾಗಿದೆ. ಮತ್ತೊಂದೆಡೆ ಕಂಪನಿಯ ಉಳಿವು, ಬೆಳವಣಿಗೆ ಅತ್ಯಗತ್ಯವಾಗಿರುವ ಸಿಬ್ಬಂದಿಗಳನ್ನು ಉಳಿಸಿಕೊಳ್ಳಲು ಎಲಾನ್ ಮಸ್ಕ್ ಮತ್ತು ಅವರ ಆಪ್ತ ಬಳಗ ಹರ ಸಾಹಸ ಮಾಡುತ್ತಿದೆ ಎನ್ನಲಾಗಿದೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ವಾಣಿಜ್ಯೋದ್ಯಮಿಯ ಗಡುವಿನ ನಂತರ ಹಲವಾರು ಉದ್ಯೋಗಿಗಳು ಕಂಪನಿಯನ್ನು ತೊರೆದಿದ್ದಾರೆ. ಇನ್ನು, ಕಂಪನಿಯು ಮುಂದಿನ ಕೆಲವು ದಿನಗಳವರೆಗೆ ತನ್ನ ಕಚೇರಿ ಕಟ್ಟಡಗಳನ್ನು ಮುಚ್ಚುವುದಾಗಿ ಸಂದೇಶಗಳನ್ನು ಕಳುಹಿಸಿದ್ದರಿಂದ ಟ್ವಿಟ್ಟರ್ ತನ್ನ ಹೊಸ ಮಾಲೀಕರಾದ ಎಲೋನ್ ಮಸ್ಕ್ ಅಡಿಯಲ್ಲಿ ತೀವ್ರ ಅವ್ಯವಸ್ಥೆಗೆ ಸಿಲುಕಿರುವ ವರದಿಗಳು ಬಂದಿವೆ.
ಇದನ್ನು ಓದಿ: ರಾಹುಲ್ ಲಿಗ್ಮಾ, ಡೇನಿಯಲ್ ಜಾನ್ಸನ್ ಟ್ವಿಟರ್‌ಗೆ ಮರು ಸೇರ್ಪಡೆ, ಜಗತ್ತಿನ ಮಾಧ್ಯಮಗಳನ್ನೇ ಟ್ರೋಲ್ ಮಾಡಿದ ಮಸ್ಕ್!
ಟ್ವಿಟ್ಟರ್‌ನಲ್ಲಿ ಉಳಿಯಬೇಕೇ ಅಥವಾ ತೊರೆಯಬೇಕೇ ಎಂದು ಆಯ್ಕೆ ಮಾಡಲು ಉದ್ಯೋಗಿಗಳಿಗೆ ಎಲಾನ್ ಮಸ್ಕ್ ಅವರು ಉದ್ಯೋಗಿಗಳಿಗೆ ನೀಡಿದ ಗುರುವಾರ ಸಂಜೆ 5 ಗಂಟೆಯ ಗಡುವಿನ ನಂತರ, "ನೂರಾರು ಟ್ವಿಟ್ಟರ್ ಉದ್ಯೋಗಿಗಳು 3 ತಿಂಗಳ ವೇತನದೊಂದಿಗೆ ನಿರ್ಗಮಿಸಲು ನಿರ್ಧರಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ (NYT) ವರದಿ ಮಾಡಿದೆ. ನೂರಾರು ಟ್ವಿಟ್ಟರ್ ಉದ್ಯೋಗಿಗಳು 3 ತಿಂಗಳ ವೇತನದೊಂದಿಗೆ ನಿರ್ಗಮಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದೆ.
ಇನ್ನು, ನಮ್ಮ ಕಚೇರಿ ಕಟ್ಟಡಗಳನ್ನು ಮುಚ್ಚುವುದಾಗಿ ಮತ್ತು ಸೋಮವಾರದವರೆಗೆ ಉದ್ಯೋಗಿ ಬ್ಯಾಡ್ಜ್ ಪ್ರವೇಶ ಆಕ್ಸೆಸ್ ನಿಷ್ಕ್ರಿಯಗೊಳಿಸುವುದಾಗಿ ಇಮೇಲ್ ಮೂಲಕ ಟ್ವಿಟ್ಟರ್ ಘೋಷಿಸಿದೆ. ಈ ಮಧ್ಯೆ, ಎಲಾನ್ ಮಸ್ಕ್ ಮತ್ತು ಅವರ ಸಲಹೆಗಾರರು ಟ್ವಿಟ್ಟರ್ ಕಾರ್ಯಾಚರಣೆಗೆ ನಿರ್ಣಾಯಕ ಎಂದು ಪರಿಗಣಿಸಲಾದ ಕೆಲವು ಟ್ವಿಟ್ಟರ್ ಉದ್ಯೋಗಿಗಳೊಂದಿಗೆ ಸಭೆಗಳನ್ನು ನಡೆಸಿದರು ಮತ್ತು ಅವರು ಕಂಪನಿಯನ್ನು ತೊರೆಯದಂತೆ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: Twitter ಬ್ಲೂಟಿಕ್‌ಗೆ 8 ಡಾಲರ್ ಶುಲ್ಕಕ್ಕೆ ತಡೆ..! ನಕಲಿ ಖಾತೆಗಳು ಹೆಚ್ಚಿದ ಕಾರಣ ಅಮಾನತು..?
ಈ ಮಧ್ಯೆ, ಕಂಪನಿಯ ರಿಮೋಟ್ ಕೆಲಸದ ನೀತಿಯ ಬಗ್ಗೆ ಎಲಾನ್ ಮಸ್ಕ್‌ನಿಂದ ಗೊಂದಲಮಯ ಸಂದೇಶಗಳು ಸಹ ಟ್ವಿಟ್ಟರ್‌ನ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಆದರೆ, ಎಲಾನ್ ಮಸ್ಕ್ ಮಾತ್ರ ತಮಗೆ ಗೆಲ್ಲುವುದು ಹೇಗೆ ಎಂದು ತಿಳಿದಿದೆ, ಮತ್ತು ಗೆಲ್ಲಲು ಬಯಸುವವರು ನನ್ನೊಂದಿಗೆ ಸೇರಿಕೊಳ್ಳಬೇಕು ಎಂದು ಸಭೆಯಲ್ಲಿ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ.
ಒಂದು ಸಭೆಯಲ್ಲಿ ಕೆಲವು ಉದ್ಯೋಗಿಗಳನ್ನು ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ಕಾನ್ಫರೆನ್ಸ್ ಕೋಣೆಗೆ ಕರೆಸಲಾಯಿತು, ಇತರರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕರೆಯಲಾಗಿತ್ತು. ಆದರೆ, ಸಂಜೆ 5 ಗಂಟೆಯ ಗಡುವು ಮುಗಿದಂತೆ, ಕೆಲವರು ಸಭೆ ನಡೆಯುತ್ತಿದ್ದ ಮಧ್ಯಯೇ ಹಾಗೂ ಎಲಾನ್ ಮಸ್ಕ್ ಮಾತನಾಡುತ್ತಿರುವ ಮಧ್ಯೆಯೇ, ಕಂಪನಿ ತೊರೆಯಲು ಮೊದಲೇ ನಿರ್ಧರಿಸಿದ್ದವರು ಸಭೆಯ ನಡುವೆಯೋ ಹೊರ ನಡೆದರು ಎಂದು ವರದಿಯಾಗಿದೆ.
ಇದನ್ನೂ ಓದಿ: Twitter ನೌಕರರಿಗೆ ವಾರಕ್ಕೆ 80 ತಾಸುಗಳ ಕೆಲಸ: ಉಚಿತ ಊಟ, ತಿಂಡಿ ಸೌಲಭ್ಯ ಕಟ್..!
ಕಳೆದ ಕೆಲ ವಾರಗಳಲ್ಲಿ, ಎಲಾನ್ ಮಸ್ಕ್ ತನ್ನನ್ನು ಸಾರ್ವಜನಿಕ ಟ್ವೀಟ್‌ಗಳ ಮೂಲಕ ವಿರೋಧಿಸುವ ಅಥವಾ ಒಪ್ಪದವರನ್ನು ಸಾಮಾನ್ಯವಾಗಿ ವಜಾ ಮಾಡುತ್ತಿದ್ದಾರೆ. ಕಂಪನಿಯನ್ನು ಯಶಸ್ವಿಯಾಗಿಸಲು ಉದ್ಯೋಗಿಗಳು ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕು ಹಾಗೂ, ಇದಕ್ಕೆ ಒಪ್ಪದವರು ಕೇವಲ 36 ಗಂಟೆಗಳ ಕಾಲಾವಕಾಶದಲ್ಲಿ ಕಂಪನಿ ತೊರೆಬೇಕೆಂದು ಗಡುವು ನೀಡಲಾಗಿತ್ತು. ಇಲ್ಲದಿದ್ದರೆ ಟ್ವಿಟ್ಟರ್ 2.0 ನಿರ್ಮಿಸಲು ಬದ್ಧರಾಗಿರಬೇಕು ಎಂದೂ ಎಲಾನ್ ಮಸ್ಕ್ ಹೇಳಿದ್ದರು.
ಕಳೆದ ತಿಂಗಳು ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು 44 ಬಿಲಿಯನ್ ಅಮೆರಿಕ ಡಾಲರ್‌ಗೆ ಸ್ವಾಧೀನಪಡಿಸಿಕೊಂಡ ಎಲಾನ್ ಮಸ್ಕ್, ಭಾರತದಲ್ಲಿನ 200 ಕ್ಕೂ ಹೆಚ್ಚು ಉದ್ಯೋಗಿಗಳು ಸೇರಿದಂತೆ ಟ್ವಿಟ್ಟರ್‌ನ 7,500 ಉದ್ಯೋಗಿಗಳಲ್ಲಿ ಅರ್ಧದಷ್ಟು ಜನರನ್ನು ವಜಾಗೊಳಿಸಿದ್ದರು.
ಇದನ್ನೂ ಓದಿ: ಮುಂಬರುವ ಕಷ್ಟಕರ ಸಮಯಕ್ಕೆ ಸಿದ್ಧರಾಗಿ: ಟ್ವಿಟ್ಟರ್ ಸಿಬ್ಬಂದಿಗೆ ಇ - ಮೇಲ್ ಕಳಿಸಿದ Elon Musk..!