ಟಿಸಿಐ ಗೂಗಲ್‌ನ ಮೂಲ ಕಂಪನಿಯಲ್ಲಿ 6 ಬಿಲಿಯನ್ ಡಾಲರ್ ಪಾಲನ್ನು ಹೊಂದಿದ್ದು, ಈ ಮೂಲಕ ಆಲ್ಫಬೆಟ್ ಕಂಪನಿಯ ಟಾಪ್ 20 ಷೇರುದಾರರ ಪೈಕಿ ಒಂದಾಗಿದೆ ಎಂದು ವರದಿಯಾಗಿದೆ.
ಅಮೆರಿಕದಲ್ಲಿ ಪ್ರಮುಖ ಕಂಪನಿಗಳಲ್ಲಿ ಸಿಬ್ಬಂದಿಯನ್ನು (Staff) ಕೆಲಸದಿಂದ ತೆಗೆದುಹಾಕುವ ವರದಿಗಳು ಹೆಚ್ಚಾಗುತ್ತಲೇ ಇದೆ. ಟ್ವಿಟ್ಟರ್ (Twitter), ಮೆಟಾ (Meta), ಅಮೆಜಾನ್ (Amazon), ಸ್ನ್ಯಾಪ್ (Snapchat), ಮೈಕ್ರೋಸಾಫ್ಟ್ (Microsoft) ಮುಂತಾದ ಟೆಕ್ ದೈತ್ಯ ಕಂಪನಿಗಳು (Tech Company) ತಮ್ಮ ಸಂಸ್ಥೆಯ ಉದ್ಯೋಗಿಗಳ (Employees) ಸಂಖ್ಯೆ ಕಡಿತ ಮಾಡುತ್ತಿದೆ. ಇದರಿಂದ ಟೆಕ್ ಕಂಪನಿಗಳಲ್ಲಿ ಏನೋ ಸಮಸ್ಯೆ ಇದೆ ಎಂಬುದು ಮಾತ್ರ ಸ್ಪಷ್ಟವಾಗಿದೆ. ಈಗ, ಗೂಗಲ್ (Google) ಸಹ ಇದೇ ಹಾದಿ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ. ಗೂಗಲ್ ಮಾತೃಸಂಸ್ಥೆ ಆಲ್ಫಬೆಟ್ (Alphabet) ಉದ್ಯೋಗಿಗಳ ಸಂಖ್ಯೆ ಮತ್ತು ಸಂಬಳದ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ಹೂಡಿಕೆದಾರರಿಗೆ ಸ್ಪಷ್ಟವಾದ ಕ್ರಿಯಾ ಯೋಜನೆಯನ್ನು ತಲುಪಿಸಲು "ಆಕ್ರಮಣಕಾರಿ ಕ್ರಮ" ತೆಗೆದುಕೊಳ್ಳಬೇಕು ಎಂದು ಟಿಸಿಐ (TCI) ಫಂಡ್ ಮ್ಯಾನೇಜ್‌ಮೆಂಟ್ ಆಲ್ಫಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದೆ.
ಟಿಸಿಐ ಗೂಗಲ್‌ನ ಮೂಲ ಕಂಪನಿಯಲ್ಲಿ 6 ಬಿಲಿಯನ್ ಡಾಲರ್ ಪಾಲನ್ನು ಹೊಂದಿದ್ದು, ಈ ಮೂಲಕ ಆಲ್ಫಬೆಟ್ ಕಂಪನಿಯ ಟಾಪ್ 20 ಷೇರುದಾರರ ಪೈಕಿ ಒಂದಾಗಿದೆ ಎಂದು ವರದಿಯಾಗಿದೆ. ಫ್ಯಾಕ್ಟ್‌ಸೆಟ್ ಡೇಟಾದ ಪ್ರಕಾರ TCI ಪಾಲು ಆಲ್ಫಬೆಟ್‌ನ 0.27% ಷೇರುಗಳನ್ನು ಪ್ರತಿನಿಧಿಸುತ್ತದೆ. 2017 ರಿಂದಲೂ ಟಿಸಿಐ ಗೂಗಲ್‌ನಲ್ಲಿ ಷೇರುಗಳನ್ನು ಹೊಂದಿದೆ.
undefined
ಇದನ್ನು ಓದಿ: ಶೀಘ್ರದಲ್ಲೇ 10,000 ಅಮೆಜಾನ್ ಸಿಬ್ಬಂದಿ ವಜಾ..! ಮೆಟಾ, ಟ್ವಿಟ್ಟರ್ ಬಳಿಕ ಮತ್ತೊಂದು ದೊಡ್ಡ ಶಾಕ್
ಟಿಸಿಐ ಕಂಪನಿಯು ಮೂರು ವರ್ಗದ ಷೇರುಗಳನ್ನು ಹೊಂದಿದೆ. ಆದರೆ, ಸಂಸ್ಥೆಯ 2022 ರ ಪ್ರಾಕ್ಸಿ ವರದಿಯ ಪ್ರಕಾರ, ಸಹ-ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು B ವರ್ಗದ ಷೇರುಗಳ ಮಾಲೀಕತ್ವ ಹೊಂದಿದೆ. ಈ ಹಿನ್ನೆಲೆ ಇವರೇ ಮತದಾನದ ಪ್ರಮುಖ ನಿಯಂತ್ರಣವನ್ನು ಹೊಂದಿದ್ದಾರೆ. ಹೀಗಾಗಿ, ಟಿಸಿಐ ಆಲ್ಬಬೆಟ್ ಅನ್ನು ಸ್ವಾಧೀನ ಪಡಿಸಿಕೊಳ್ಳುವುದು ಪರಿಣಾಮಕಾರಿಯಾಗಿ ಅಸಾಧ್ಯವಾಗಿಸುತ್ತದೆ ಎಂದು ವರದಿ ಮಾಡಿದೆ.
"ಮಾಜಿ ಕಾರ್ಯನಿರ್ವಾಹಕರೊಂದಿಗಿನ ನಮ್ಮ ಸಂಭಾಷಣೆಗಳು ಗಮನಾರ್ಹವಾಗಿ ಕಡಿಮೆ ಉದ್ಯೋಗಿಗಳೊಂದಿಗೆ ವ್ಯವಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದೆಂದು ಸೂಚಿಸುತ್ತವೆ" ಎಂದು ಟಿಸಿಐ ಪತ್ರದಲ್ಲಿ ಬರೆದಿದೆ. TCI ಪತ್ರವು ಅಲ್ಟಿಮೀಟರ್ ಕ್ಯಾಪಿಟಲ್‌ನ ಮೆಟಾ ಪತ್ರವನ್ನು ಸೂಚಿಸಿದೆ. ಸಿಲಿಕಾನ್ ವ್ಯಾಲಿಯಲ್ಲಿ ಟೆಕ್ ಕಂಪನಿಗಳಲ್ಲಿ ಅತಿಯಾದ ಸಿಬ್ಬಂದಿ ಇರುವುದು ರಹಸ್ಯ ಎಂದು ವಾದ ಮಾಡಿದೆ.
ಇದನ್ನು ಓದಿ: ಟ್ವಿಟರ್, ಮೆಟಾ ಆಯ್ತು.. ಈಗ ಅಮೆಜಾನ್‌ನಿಂದ 3766 ಉದ್ಯೋಗಿಗಳ ವಜಾ!
2017 ರಿಂದ ವಾರ್ಷಿಕ ದರದಲ್ಲಿ 20% ರಷ್ಟು ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು TCI ಹೇಳಿದ್ದು, ಇಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಹೆಚ್ಚಳ ಅತಿಯಾದದ್ದು ಎಂದೂ ವಾದ ಮಾಡಿದೆ. ಹಾಗೆ, ದೊಡ್ಡ ಮಟ್ಟದ ಪರಿಹಾರ ನೀಡುವುದರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದೆ. ಆಲ್ಫಬೆಟ್ 2021 ಕ್ಕೆ 295,884 ಡಾಲರ್ ಮೌಲ್ಯದ ಸರಾಸರಿ ಪರಿಹಾರ ನೀಡಿರುವುದನ್ನು ಬಹಿರಂಗಪಡಿಸಿತ್ತು.
"ಆಲ್ಫಬೆಟ್ ಕೆಲವು ಅತ್ಯಂತ ಪ್ರತಿಭಾವಂತ ಮತ್ತು ಪ್ರಕಾಶಮಾನವಾದ ಕಂಪ್ಯೂಟರ್ ವಿಜ್ಞಾನಿಗಳನ್ನು ನೇಮಿಸಿಕೊಂಡಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ, ಆದರೆ ಅವರು ಉದ್ಯೋಗಿ ಮೂಲದ ಒಂದು ಭಾಗವನ್ನು ಮಾತ್ರ ಪ್ರತಿನಿಧಿಸುತ್ತಾರೆ" ಎಂದು ಟಿಸಿಐ ಪತ್ರದಲ್ಲಿ ಹೇಳಿದೆ. ಆಲ್ಫಬೆಟ್ ಷೇರುಗಳ ಮೌಲ್ಯ ವರ್ಷದಿಂದ ಇಲ್ಲಿಯವರೆಗೆ 30% ಕ್ಕಿಂತ ಕಡಿಮೆಯಾಗಿದೆ.
2022 ಟೆಕ್ ಉದ್ಯೋಗಿಗಳಿಗೆ ಕಠಿಣ ವರ್ಷವಾಗಿದೆ. ಈ ವಾರದ ಆರಂಭದಲ್ಲಿ, ಅಮೆಜಾನ್ 10,000 ಕಾರ್ಪೊರೇಟ್ ಕಾರ್ಮಿಕರನ್ನು ವಜಾಗೊಳಿಸಲು ತಯಾರಿ ನಡೆಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇನ್ನು, ಮೆಟಾ ಕಳೆದ ವಾರವಷ್ಟೇ 11,000 ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು.
ಇದನ್ನೂ ಓದಿ: TWITTER ನೌಕರರಿಗೆ ವಾರಕ್ಕೆ 80 ತಾಸುಗಳ ಕೆಲಸ: ಉಚಿತ ಊಟ, ತಿಂಡಿ ಸೌಲಭ್ಯ ಕಟ್..!
ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವುದನ್ನು ತಡೆಯುವ ಕೆಲವು ದೊಡ್ಡ ಟೆಕ್ ಕಂಪನಿಗಳಲ್ಲಿ ಆಲ್ಫಬೆಟ್ ಒಂದಾಗಿದೆ. ಆದರೂ, ಗೂಗಲ್ ಸಂಸ್ಥೆ ಅಥವಾ ಆಲ್ಫಬೆಟ್‌ಗೆ ಹೊಸ ನೇಮಕಾತಿಯನ್ನು ನಿಧಾನಗೊಳಿಸಲು ಭಾರತೀಯ ಮೂಲದ ಸಿಇಒ ಸುಂದರ್ ಪಿಚೈ ಘೋಷಿಸಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಮಗಳಿಗೆ ಹಾಲುಣಿಸಲು ಎದ್ದೆ; META ಕೆಲಸ ಕಳೆದುಕೊಂಡ ಮೇಲ್ ನೋಡಿದೆ: ಭಾರತೀಯ ಮೂಲದ ಮಹಿಳೆ ಭಾವುಕ ಪೋಸ್ಟ್