ಮತ್ತೆ ಶಾಕ್ ನೀಡಿದ ಮೆಟಾ, ಫೇಸ್‌ಬುಕ್ ಮಾತೃಸಂಸ್ಥೆಯಿಂದ 10 ಸಾವಿರ ಉದ್ಯೋಗ ಕಡಿತ!

By Suvarna NewsFirst Published Mar 14, 2023, 8:57 PM IST
Highlights

ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಇದೀಗ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಬಾರಿ 10,000 ಉದ್ಯೋಗಿಗಳನ್ನು ವಜಾ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಇದೀಗ ಮೆಟಾ ಉದ್ಯೋಗಿಗಳ ಆತಂಕ ಹೆಚ್ಚಾಗಿದೆ.

ನವದೆಹಲಿ(ಮಾ.14): ಜಾಗತಿಕವಾಗಿ ಆರ್ಥಿಕ ಹಿಂಜರಿತ ಹಲವು ಕಂಪನಿಗಳಿಗೆ ಹೊಡೆತ ನೀಡುತ್ತಿದೆ. ಪೂರೈಕೆ ಸರಪಳಿಯಲ್ಲಿನ ಹೊಡೆತ ಕಂಪನಿಗಳಿಗೆ ಆರ್ಥಿಕ ನಷ್ಟ ಸೃಷ್ಟಿಸುತ್ತಿದೆ. ಹೀಗಾಗಿ ಹಲವು ಕಂಪನಿಗಳು ಉದ್ಯೋಗ ಕಡಿತದ ಅಸ್ತ್ರ ಪ್ರಯೋಗಿಸುತ್ತಿದೆ. ಇದೀಗ ಫೇಸ್‌ಬುತ್ ಮಾತೃಸಂಸ್ಥೆ ಮೆಟಾ ಎರಡನೇ ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಬಾರಿ 10,000 ಉದ್ಯೋಗಿಗಳಿಗೆ ಕೊಕ್ ನೀಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಇದೀಗ ಮೆಟಾ ಉದ್ಯೋಗಿಗಳು ಆತಂಕದಲ್ಲೇ ದಿನ ದೂಡುತ್ತಿದ್ದಾರೆ. 

ಫೇಸ್‌ಬುಕ್ ಮೊದಲ ಸುತ್ತಿನ ಉದ್ಯೋಗ ಕಡಿತದಲ್ಲಿ 11,000 ನೌಕರರನ್ನು ವಜಾ ಮಾಡಿತ್ತು. ಇದೀಗ ಎರಡನೇ ಸುತ್ತಿನ ಸರದಿ. ಮೆಟಾದಲ್ಲಿನ ಹಲವು ಪ್ರಾಜೆಕ್ಟ್‌ಗಳನ್ನು ರದ್ದು ಮಾಡಲಾಗಿದೆ. ಕಡಿಮೆ ಆದಾಯದ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ತಂಡದ ಬಲವನ್ನು ಕಡಿಮೆ ಮಾಡಲಾಗುತ್ತದೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. 

ಮೈಕ್ರೋಸಾಫ್ಟ್‌ನಲ್ಲಿ 3ನೇ ಸುತ್ತಿನ ಉದ್ಯೋಗ ಕಡಿತ, ವಜಾಗೊಂಡ 10,000 ನೌಕರರಿಂದ ಕೆಲಸಕ್ಕೆ ಮನವಿ!

2022ರ ನವೆಂಬರ್ ತಿಂಗಳಲ್ಲಿ ಮೆಟಾ ಮೊದಲ ಬಾರಿಗೆ 11,000 ಉದ್ಯೋಗಿಗಳನ್ನು ವಜಾ ಮಾಡಿತ್ತು. ಒಟ್ಟಾರೆ ಇರುವ 87000 ಸಿಬ್ಬಂದಿಗಳ ಪೈಕಿ ಶೇ.13ರಷ್ಟುಸಿಬ್ಬಂದಿಯನ್ನು ಒಂದೇ ಬಾರಿಗೆ ತೆಗೆದು ಹಾಕಲಾಗಿತ್ತು.  ಅಮೆರಿಕ ಮೂಲದ ಮತ್ತೊಂದು ಸಾಮಾಜಿಕ ಜಾಲತಾಣ ಟ್ವೀಟರ್‌, ತನ್ನ ಶೇ.7500 ಸಿಬ್ಬಂದಿ ಪೈಕಿ ಶೆ.50ರಷ್ಟುಅಂದರೆ 3500 ಜನರನ್ನು ಕಿತ್ತುಹಾಕಿದ ಬೆನ್ನಲ್ಲೇ ಮೆಟಾ ಕೂಡಾ ಇಂಥ ಕಠಿಣ ನಿರ್ಧಾರ ಪ್ರಕಟಿಸಿತ್ತು.

ವಜಾಗೊಂಡ ಸಿಬ್ಬಂದಿಗೆ, 16 ವಾರಗಳ ಮೂಲ ವೇತನಕ್ಕೆ ಸಮನಾದ ಮೊತ್ತ, ಇದುವರೆಗೆ ಕೆಲಸ ಮಾಡಿದ ಪ್ರತಿ ವರ್ಷಕ್ಕೆ 1 ವಾರದಂತೆ ವೇತನ, ಮುಂದಿನ 6 ತಿಂಗಳ ಅವಧಿಯ ಆರೋಗ್ಯ ವಿಮೆಯ ಮೊತ್ತವನ್ನು ಕಂಪನಿ ಪರಿಹಾರ ರೂಪದಲ್ಲಿ ನೀಡಲಿದೆ.ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಆದಾಯ ಲಾಭ 36000 ಕೋಟಿ ರು.ಗೆ ಇಳಿದಿತ್ತು. ಈ ಪ್ರಮಾಣ ಹಿಂದಿನ ವರ್ಷದ ಇದೇ ಅವಧಿಯಲ್ಲಿ 75000 ಕೋಟಿ ರು.ನಷ್ಟಿತ್ತು. ಜೊತೆಗೆ ಕಂಪನಿಯ ಆದಾಯ ಕೂಡಾ ಹಿಂದಿನ ವರ್ಷದ 2.38 ಲಕ್ಷ ಕೋಟಿ ರು.ನಿಂದ ಈ ವರ್ಷ 2.27 ಲಕ್ಷ ಕೋಟಿ ರು.ಗೆ ಇಳಿದಿದೆ. ಹೀಗಾಗಿ ಕಂಪನಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿತ್ತು.

Twitter India ಭಾರತದ ಮೇಲೇ ಮಸ್ಕ್ ಕಣ್ಣು, ಬೆಂಗಳೂರು ಬಿಟ್ಟು ಇನ್ನುಳಿದ ಕಚೇರಿಗೆ ಬೀಗ!

2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಕಾರಣ ಜಾಗತಿಕ ತಂತ್ರಜ್ಞಾನ ಕಂಪನಿಗಳು 2022ರ ಅಂತ್ಯದ ವೇಳೆಗೆ ಆರಂಭಿಸಿದ್ದ ಉದ್ಯೋಗ ಕಡಿತ 2023ರ ಮೊದಲ ತಿಂಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಮುಂದುವರೆದಿದೆ. ಕಳೆದೊಂದು ತಿಂಗಳಲ್ಲೇ ಜಾಗತಿಕ ಮಟ್ಟದಲ್ಲಿ ಖ್ಯಾತನಾಮವಾದ ಮಾಹಿತಿ ತಂತ್ರಜ್ಞಾನ ಸೇರಿದಂತೆ ಇತರೆ ಕೆಲ ವಲಯದ ಪ್ರಮುಖ ಕಂಪನಿಗಳು 50000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಉದ್ಯೋಗದಿಂದ ತೆಗೆದು ಹಾಕಿವೆ. ಮಾರಾಟದಲ್ಲಿ ಕುಸಿತ, ವೆಚ್ಚ ಹೆಚ್ಚಳ, ಹೆಚ್ಚುವರಿ ಸಿಬ್ಬಂದಿ ತೆಗೆತ ಮೊದಲಾದ ಕಾರಣಗಳನ್ನು ನೀಡಿ ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಈ ಪೈಕಿ ಆನ್‌ಲೈನ್‌ ಮಾರಾಟ ಸಂಸ್ಥೆ ಅಮೆಜಾನ್‌ 18,000, ಸೇಲ್ಸ್‌ಫೋ​ರ್‍ಸ್ ಸಂಸ್ಥೆ 8,000, ಕಾಯಿನ್‌ಬೇಸ್‌ 950, ಮೈಕ್ರೋಸಾಫ್‌್ಟ, 10,000, ಗೂಗಲ್‌ 12,000, ಸ್ಪಾಟಿಪೈ 6,600, ಸ್ಯಾಪ್‌ 3,000, ಪೇಪಾಲ್‌ 2,000, ಐಬಿಎಂ 3,900 ಉದ್ಯೋಗಿಗಳನ್ನು ವಜಾ ಮಾಡಿವೆ. ಅಲ್ಲದೇ ಫೆಬ್ರವರಿಯಲ್ಲಿ ಡೆಲ್‌ ಸಂಸ್ಥೆ 6,600 ಉದ್ಯೋಗಿಗಳನ್ನು ಕೆಲಸದಿಂದ ಕೈಬಿಡುವುದಾಗಿ ತಿಳಿಸಿದೆ. 2022ರ ನವೆಂಬರ್‌ನಲ್ಲಿ ಟ್ವೀಟರ್‌ ಸಂಸ್ಥೆ 7,500, ಮೆಟಾ 11,000, ಲಿಫ್‌್ಟ700 ಕೆಲಸಗಾರರನ್ನು ತೆಗೆದು ಹಾಕಿದ್ದವು.

click me!