ಮೈಕ್ರೋಸಾಫ್ಟ್‌ನಲ್ಲಿ 3ನೇ ಸುತ್ತಿನ ಉದ್ಯೋಗ ಕಡಿತ, ವಜಾಗೊಂಡ 10,000 ನೌಕರರಿಂದ ಕೆಲಸಕ್ಕೆ ಮನವಿ!

By Suvarna News  |  First Published Mar 11, 2023, 6:09 PM IST

ಆರ್ಥಿಕ ಹಿಂಜರಿತಕ್ಕೆ ಅಮೆರಿಕ, ಯುಕೆ ಸೇರಿದಂತೆ ಹಲವು ರಾಷ್ಟ್ರಗಳು ತತ್ತರಿಸಿದೆ. ಇದೀಗ ಟೆಕ್ ದಿಗ್ಗದ ಮೈಕ್ರೋಸಾಫ್ಟ್ ಮೂರನೇ ಸುತ್ತಿನ ಉದ್ಯೋಗ ಕಡಿತ ಮಾಡಿದೆ. 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಭಾರತೀಯ ಟೆಕ್ಕಿ ಹಾಗೂ ಆತನ ಇಡೀ ತಂಡವನ್ನು ಕಿತ್ತು ಹಾಕಲಾಗಿದೆ. ಇದೀಗ ವಜಾಗೊಂಡ ಉದ್ಯೋಗಿಗಳ ಕೆಲಸಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ.
 


ವಾಶಿಂಗ್ಟನ್(ಮಾ.11): ಕೋವಿಡ್ ಬಳಿಕ ಹಲವು ದೇಶಗಳ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಆದರೆ ಹಲವು ದೇಶಗಳ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತದ ಭೀತಿ ಶುರುವಾಗಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಟೆಕ್ ದಿಗ್ಗಜ ಮೈಕ್ರೋಸಾಫ್ಟ್ ಈಗಾಗಲೇ ಉದ್ಯೋಗ ಕಡಿತ ಮೂಲಕ ಸುದ್ದಿಯಾಗಿದೆ. ಇದೀಗ ಮೂರನೇ ಸುತ್ತಿನ ಉದ್ಯೋಗ ಕಡಿತ ಮಾಡಿದೆ. ಈ ಬಾರಿ 10,000 ಉದ್ಯೋಗಿಗಳನ್ನು ವಜಾ ಮಾಡಿದೆ. ಏಕಾಏಕಿ ಕೆಲಸ ಕಳೆದುಕೊಂಡು ನೌಕರರು ಆಘಾತಕ್ಕೊಳಗಾಗಿದ್ದಾರೆ. ಹಲವರು ಉದ್ಯೋಗಿಗಳು ಲಿಂಕ್ಡ್‌ಇನ್ ಮೂಲಕ ಹೊಸ ಕೆಲಸಕ್ಕೆ ಮನವಿ ಮಾಡಿದ್ದಾರೆ. ಇದರಲ್ಲಿ ಭಾರತೀಯ ಟೆಕ್ಕಿಯೋರ್ವ ತೀವ್ರ ಆಘಾತ ವ್ಯಕ್ತಪಡಿಸಿದ್ದು, ತನ್ನ ಸೇರಿದಂತೆ ತನ್ನ ಇಡೀ ತಂಡವನ್ನೇ ವಜಾ ಮಾಡಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮೈಕ್ರೋಸಾಫ್ಟ್ ಪೂರೈಕೆ ಸರಪಳಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಇಂಟರ್ನೆಟ್ ಸೇರಿದಂತೆ ಹಲವು ವಿಭಾಗದಿಂದ ಉದ್ಯೋಗ ಕಡಿತ ಮಾಡಲಾಗಿದೆ. ಏಕಾಏಕಿ ಉದ್ಯೋಗದಿಂದ ಕಡಿತ ಮಾಡಲಾಗಿದೆ. ಬಂದಿದ್ದ ಹೊಸ ಅವಕಾಶವನ್ನು ನಿರಾಕರಿಸಿದ್ದೆವು. ಇದೀಗ ಅತ್ತ ಹೊಸ ಅವಕಾಶವೂ ಇಲ್ಲ, ಇತ್ತ ಇರುವ ಕೆಲಸವೂ ಇಲ್ಲದಂತಾಗಿದೆ ಎಂದು ಹಲವರು ಹೇಳಿದ್ದಾರೆ. ಮೈಕ್ರೋಸಾಫ್ಟ್ ಉದ್ಯೋಗ ಕಡಿತದಲ್ಲಿ ಕೆಲಸ ಕಳೆದುಕೊಂಡು ಭಾರತ ಮೂಲದ ಟೆಕ್ಕಿ ವಂದನ್ ಕೌಶಿಕ್, ಲಿಂಕ್ಡ್‌ಇನ್ ಮೂಲಕ ಹೊಸ ಕೆಲಸಕ್ಕೆ ಮನವಿ ಮಾಡಿದ್ದಾರೆ. ಹಲವರು ಲಿಂಕ್ಡ್‌ಇನ್‌ನಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ.

Latest Videos

undefined

Twitter India ಭಾರತದ ಮೇಲೇ ಮಸ್ಕ್ ಕಣ್ಣು, ಬೆಂಗಳೂರು ಬಿಟ್ಟು ಇನ್ನುಳಿದ ಕಚೇರಿಗೆ ಬೀಗ!

ವಂದನ್ ಕೌಶಿಕ್ ಕಳೆದ 8 ವರ್ಷಗಳಿಂದ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ತಂಡದ ಮುಖ್ಯಸ್ಥರಾಗಿ ಎಲ್ಲಾ ಕೆಲಸಗಳನ್ನು ನಿಭಾಯಿಸುತ್ತಿದ್ದರು.ಆದರೆ ನನ್ನ ಸೇರಿದಂತೆ ಇಡೀ ನನ್ನ ತಂಡವನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇದು ಆಘಾತ ತಂದಿದೆ. ಹೊಸ ಕೆಲಸ ಹುಡುಕುವುದು, ಸೇರಿಕೊಳ್ಳುವ ಸವಾಲು ಎದುರಾಗಿದೆ ಎಂದು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

ಕೆಲಸದಿಂದ ವಜಾಗೊಂಡಿರುವ ಭಾರತೀಯ ಮೂಲದ ಉದ್ಯೋಗಳು ತೀವ್ರ ಸಂಕಷ್ಟ ಎದುರಿಸವಂತಾಗಿದೆ. H1B ವೀಸಾದಲ್ಲಿ ಕೆಲಸ ಮಾಡುತ್ತಿರುವ ವಜಾಗೊಂಡ ಭಾರತೀಯ ಉದ್ಯೋಗಿಗಳು ಇದೀಗ 60 ದಿನಗಲ್ಲಿ ಹೊಸ ಕೆಲಸ ಹುಡುಕಿ ಸೇರಿಕೊಳ್ಳಬೇಕಿದೆ. ಇಲ್ಲದಿದ್ದರೆ ಭಾರತಕ್ಕೆ ಮರಳಬೇಕು. H1B ವೀಸಾದಲ್ಲಿ ಕೆಲಸವಿಲ್ಲದೆ 60ಕ್ಕಿಂತ ಹೆಚ್ಚು ದಿನ ಅಮೆರಿಕದಲ್ಲಿ ನಿಲ್ಲುವಂತಿಲ್ಲ. 

ಫೇಸ್‌ಬುಕ್‌ ಉದ್ಯೋಗಿಗಳ ವಜಾ ಬೆನ್ನಲ್ಲೇ ಜುಕರ್‌ಬರ್ಗ್‌ ಭದ್ರತಾ ವೆಚ್ಚದಲ್ಲಿ 82 ಕೋಟಿ ಏರಿಕೆ!

ಆರ್ಥಿಕ ಹಿಂಜರಿತದ ಕಾರಣ ವಿದೇಶದಲ್ಲಿ 480 ಕಂಪನಿಗಳಿಂದ ಸುಮಾರು 1.2 ಲಕ್ಷ ಮಂದಿಯನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ. ವೆಚ್ಚ ಕಡಿತ, ನಷ್ಟ ಸರಿದೂಗಿಸಲು ಸೇರಿದಂತೆ ಹಲವು ಕಾರಣಗಳಿಂದ ಉದ್ಯೋಗ ಕಡಿತ ನಡೆಯುತ್ತಿದೆ. ಇದೀಗ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ಹಲವು ಕಂಪನಿಗಳಲ್ಲಿ ಆರಂಭಗೊಂಡಿದೆ. ಇದು ಹಲವರ ಆತಂತಕ್ಕೆ ಕಾರಣವಾಗಿದೆ.
 

click me!