ಮಹಿಳಾ ದಿನಾಚರಣೆ, ವೋಡಾಫೋನ್ ಐಡಿಯಾದಿಂದ ಮಹಿಳೆಯರಿಗೆ ಭರ್ಜರಿ ಕೊಡುಗೆ, ಸಾವಿರಾರು ಉದ್ಯೋಗವಕಾಶ!

By Suvarna News  |  First Published Mar 8, 2023, 8:17 PM IST

ಮಹಿಳಾ ದಿನಾಚರಣೆಗೆ ವೋಡಾಫೋನ್ ಐಡಿಯಾ ಮಹಿಳೆಯರಿಗೆ ವಿಶೇಷ ಕೂಡುಗೆ ಘೋಷಿಸಿದೆ. ಮಹಿಳೆಯರಿಗಾಗಿ ಸಾವಿರಾರು ಉದ್ಯೋಗವಕಾಶ ನೀಡುತ್ತಿದೆ. ಇದರ ಜೊತೆಗೆ ಹಲವು ತರಬೇತಿ ಕೋರ್ಸ್‌ಗೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಲಾಗಿದೆ.
 


ನವದೆಹಲಿ(ಮಾ.08):  ಮಹಿಳಾ ದಿನಾಚರಣೆಗೆ ವೋಡಾಫೋನ್ ಐಡಿಯಾ ಕೆಲ ಆಫರ್ ಘೋಷಿಸಿದೆ. ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣ ಮಾಡಲು ವಿಐ ಸಾವಿರಾರು ಉದ್ಯೋಗವಕಾಶದ ಆಫರ್ ನೀಡಿದೆ. ವಿಐ ಇದೀಗ  ಅಪ್ನಾ ಸಹಭಾಗಿತ್ವದಲ್ಲಿ ಭಾರತದಾದ್ಯಂತ ಸಾವಿರಾರು ಉದ್ಯೋಗಾವಕಾಶಗಳನ್ನು ಮಹಿಳೆಯರಿಗೆ ಒದಗಿಸುತ್ತಿದೆ. ಮಹಿಳೆಯರು ವಿಐ ಆ್ಯಪ್‌ (Vi App) ನ ವಿಐ ಜಾಬ್ಸ್‌ ಮತ್ತು ಎಜುಕೇಷನ್‌ (Vi Jobs & Education) ವಿಭಾಗದಲ್ಲಿ ಶಿಕ್ಷಕರು, ಟೆಲಿ ಕಾಲರ್‌ಗಳು, ಸ್ವಾಗತಕಾರರು ಮತ್ತಿತರ ಉದ್ಯೋಗಗಳು ಮತ್ತು ಸಾವಿರಾರು ಅರೆಕಾಲಿಕ ಮತ್ತು ಮನೆಯಿಂದಲೇ ಕೆಲಸ ಮಾಡಬಹುದಾದ ವೃತ್ತಿ ಅವಕಾಶಗಳಿಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.        

ಇದರೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸೂಕ್ತ ವೇದಿಕೆ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಉದ್ಯೋಗ ಅವಕಾಶಗಳಿಗಾಗಿ ಹೆಚ್ಚಿನ ಸಂಖ್ಯೆಯ ಮಹಿಳೆಯರು  ಉದ್ಯೋಗದ ಸ್ಥಳ ಪ್ರವೇಶಿಸಲು ವೊಡಾಫೋನ್‌ ಐಡಿಯಾ (Vi) ಅನುಕೂಲ ಮಾಡಿಕೊಡಲಿದೆ.ಇದಕ್ಕೆ ಪೂರಕವಾಗಿ, ಅಪ್ನಾ ಸಹಭಾಗಿತ್ವದಲ್ಲಿ  ಟೆಲೆ ಕಾಲರ್ಸ್‌ಗಳಾಗಿ ಕೆಲಸ ನಿರ್ವಹಿಸಲು ಬಯಸುವ ಮಹಿಳೆಯರಿಗೆ ₹ 5,000 ಡಿಸ್ಕೌಂಟ್‌ನ ಉದ್ಯೋಗ ನೇಮಕಾತಿ ಖಾತರಿಯ ತರಬೇತಿ ಕಾರ್ಯಕ್ರಮವನ್ನು ಸಹ ವೊಡಾಫೋನ್‌ ಐಡಿಯಾ ನೀಡಲಿದೆ.

Tap to resize

Latest Videos

undefined

 

Viನಿಂದ ಬಂಪರ್ ಆಫರ್, ಕೇವಲ 99 ರೂಪಾಯಿಗೆ ಕಾಲ್ ಹಾಗೂ ಡೇಟಾ ಪ್ಲಾನ್!

ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವುದು ಉದ್ಯೋಗ ಪಡೆಯುವ ಸಾಧ್ಯತೆ ಮತ್ತು ಪ್ರತಿಯೊಬ್ಬರ ವೃತ್ತಿಜೀವನದಲ್ಲಿ ಪ್ರಗತಿಯ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ. ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ತಮ್ಮ ಇಂಗ್ಲಿಷ್ ಮಾತನಾಡುವ ಕೌಶಲ ಕಲಿಯಲು ಮತ್ತು ಸುಧಾರಿಸಲು ಬಯಸುವ ಮಹಿಳೆಯರಿಗೆ ವೊಡಾಫೋನ್‌ ಐಡಿಯಾ ವಿಶೇಷ ಕೊಡುಗೆ ನೀಡಲಿದೆ. ದೇಶದ ಇಂಗ್ಲಿಷ್ ಕಲಿಕೆಯ ಪ್ರಮುಖ ವೇದಿಕೆಯಾಗಿರುವ ಇಂಗುರು (Enguru) ಸಹಭಾಗಿತ್ವದಲ್ಲಿ, ಭಾಷಾ ಪರಿಣತರು ನಡೆಸುವ ಅನಿಯಮಿತ ಸಂವಾದಾತ್ಮಕ ನೇರ ಪ್ರಸಾರದ ಇಂಗ್ಲಿಷ್ ಕಲಿಕೆಯ ತರಬೇತಿ ಕೋರ್ಸ್‌ಗಳಲ್ಲಿ ಶೇ 50ರಷ್ಟು ರಿಯಾಯ್ತಿ ನೀಡಲಿದೆ.

ಮಹಿಳೆಯರು ಉದ್ಯೋಗ ಕ್ಷೇತ್ರ ಪ್ರವೇಶಿಸಲು ಮತ್ತು ಅವರ ವೃತ್ತಿಪರತೆಯ ಗುರುತು ಅಭಿವೃದ್ಧಿಪಡಿಸುವುದಕ್ಕೆ ಸಹಾಯ ಮಾಡಲು, ಅಪ್ನಾ ಮತ್ತು ಇಂಗುರು (Enguru) ಸಹಭಾಗಿತ್ವದಲ್ಲಿ ಮಹಿಳೆಯರಿಗೆ ವೃತ್ತಿ ಸಮಾಲೋಚನೆ, ಇಂಗ್ಲಿಷ್ ಭಾಷೆಯು ಮಹಿಳೆಯರಿಗೆ ಹೇಗೆ ಸಬಲಿಕರಣಗೊಳಿಸಲಿದೆ ಇತ್ಯಾದಿ ವಿಷಯಗಳ ಕುರಿತು ವೆಬ್‌ನಾರ್‌ಗಳ ಸರಣಿಯನ್ನು ಸಹ ವೊಡಾಫೋನ್‌ ಐಡಿಯಾ (Vi) ನಡೆಸಲಿದೆ. ಈ ಕೊಡುಗೆಗಳು Vi App (ಉದ್ಯೋಗ ಮತ್ತು ಶಿಕ್ಷಣ) ನಲ್ಲಿ 2023ರ ಮಾರ್ಚ್‌ 7 ರಿಂದ ಮಾರ್ಚ್‌ 14ರವರೆಗೆ ಲಭ್ಯ  ಇರಲಿವೆ.

ವಿಶ್ವದ ಮೊದಲ SMS ಯಾವ್ದು? ಅದ್ರ ಇತಿಹಾಸ ಏನು?

click me!