ಟಿಶ್ಯೂ ಪೇಪರ್‌ ನಲ್ಲಿ ರಾಜೀನಾಮೆ ನೀಡಿದ Gen Z, ಇದಕ್ಕೆ ಕಾರಣ ಇಂಟರೆಸ್ಟಿಂಗ್

Published : Oct 02, 2026, 03:36 PM IST
resignation letter

ಸಾರಾಂಶ

ರಾಜೀನಾಮೆ ಪತ್ರವನ್ನು ನೀವು ಪೇಪರ್‌ ಇಲ್ಲ ಮೇಲ್‌ ಮೂಲಕ ಕಳಿಸಿರ್ತೀರಿ. ಆದ್ರೆ ಈ ವ್ಯಕ್ತಿ ಟಿಶ್ಯೂ ಪೇಪರ್‌ ನಲ್ಲಿ ರಾಜೀನಾಮೆ ಪತ್ರ ನೀಡಿದ್ದಾನೆ. ಅದಕ್ಕೆ ಆತ ಹೇಳಿದ ಕಾರಣ ಏನು ಗೊತ್ತಾ?

ಕಂಪನಿ ಕೆಲಸಕ್ಕೆ ರಾಜೀನಾಮೆ ನೀಡಬೇಕಾದ್ರೆ ಸಾಮಾನ್ಯವಾಗಿ ಇ-ಮೇಲ್ ಮೂಲಕ ರಿಸೈನ್ ಲೆಟರ್ ಕಳುಹಿಸಲಾಗುತ್ತೆ. ಆದ್ರೆ ಇಲ್ಲೊಬ್ಬ Gen Z ಉದ್ಯೋಗಿ ತನ್ನ ರಾಜೀನಾಮೆಯನ್ನು ಟಿಶ್ಯೂ ಪೇಪರ್ ಮೇಲೆ ಬರೆದು ಕೊಟ್ಟಿದ್ದಾನೆ. ಸದ್ಯ ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಟಿಶ್ಯೂ ಪೇಪರ್‌ ನಲ್ಲಿ ರಿಸೈನ್‌ ಲೆಟರ್

ಟಿಶ್ಯೂ ಪೇಪರ್‌ ನಲ್ಲಿ ರಾಜೀನಾಮೆ ನೀಡಿದ ವ್ಯಕ್ತಿ, ರಾಜೀನಾಮೆ ಏಕೆ ನೀಡಿದ್ದೇನೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾನೆ. ಕಂಪನಿ ತನ್ನನ್ನು ಟಿಶ್ಯೂ ಪೇಪರ್ನಂತೆ ಬಳಸಿಕೊಂಡಿದೆ. ಹಾಗಾಗಿ ರಾಜೀನಾಮೆ ನೀಡಲು ಕೂಡ ಟಿಶ್ಯೂ ಪೇಪರ್ನ್ನೇ ಬಳಸಿದ್ದೇನೆ ಎಂದು ಆತ ಹೇಳಿದ್ದಾನೆ. ಆದ್ರೆ ಯಾವ ಕಂಪನಿ ಉದ್ಯೋಗಿ, ಉದ್ಯೋಗಿ ಹೆಸರೇನು ಎಂಬುದು ಸ್ಪಷ್ಟವಾಗಿಲ್ಲ.

ಜೆನ್‌ ಜಿಗೆ ಕೆಲಸದಲ್ಲಿ ಸಂಬಳ ಮಾತ್ರ ಮುಖ್ಯವಲ್ಲ

ಇಂದಿನ ಯುವ ಪೀಳಿಗೆಯ ಕೆಲಸದ ಕುರಿತಾದ ದೃಷ್ಟಿಕೋನ ಹಿಂದಿನ ಪೀಳಿಗೆಗಿಂತ ಸ್ವಲ್ಪ ಭಿನ್ನವಾಗಿದೆ. ಸಂಬಳದ ಜೊತೆಗೆ ಕೆಲಸದ ವಾತಾವರಣ, ಗೌರವ, ಸಮಯ ಮತ್ತು ಉದ್ಯೋಗಿಗಳೊಂದಿಗೆ ಕಂಪನಿ ನಡೆದುಕೊಳ್ಳುವ ರೀತಿಗೂ ಹೆಚ್ಚಿನ ಮಹತ್ವ ನೀಡುತ್ತಾರೆ. ಕೆಲಸದ ಸ್ಥಳದಲ್ಲಿ ತಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಅಥವಾ ತಮ್ಮ ಕೆಲಸಕ್ಕೆ ಸೂಕ್ತ ಮೌಲ್ಯ ಸಿಗುತ್ತಿಲ್ಲ ಎಂದು ಅನಿಸಿದರೆ, ಅದರ ಬಗ್ಗೆ ಪ್ರಶ್ನಿಸುವುದಕ್ಕೂ ಯುವ ಉದ್ಯೋಗಿಗಳು ಹಿಂದೆ ಸರಿಯುವುದಿಲ್ಲ.

ಎಲ್ಲವನ್ನೂ ಸುಮ್ಮನೆ ಸಹಿಸಿಕೊಳ್ಳಲು ಸಿದ್ಧರಿಲ್ಲ

ಹೆಚ್ಚುವರಿ ಕೆಲಸ, ನಿರಂತರವಾಗಿ ಬರುವ ಆಫೀಸ್ ಮೆಸೇಜ್ಗಳು ಅಥವಾ ಯಾವಾಗಲೂ ಕೆಲಸಕ್ಕೆ ಲಭ್ಯವಿರಬೇಕೆಂಬ ನಿರೀಕ್ಷೆಯನ್ನು ಎಲ್ಲರೂ ಸಹಜ ಎಂದು ಪರಿಗಣಿಸುವುದಿಲ್ಲ. ಕೆಲಸದ ಒತ್ತಡ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಇರಬೇಕು ಎಂಬ ನಿರೀಕ್ಷೆಯೂ ಹೆಚ್ಚಾಗಿದೆ. ಕೆಲಸದ ಸ್ಥಳದಲ್ಲಿ ತಮ್ಮೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅನಿಸಿದರೆ, ಕೆಲವರು ತಮ್ಮ ಮಾತನ್ನು ನೇರವಾಗಿ ಹೇಳಲು ಅಥವಾ ಕೆಲಸ ಬದಲಿಸುವ ನಿರ್ಧಾರ ತೆಗೆದುಕೊಳ್ಳಲು ಮುಂದಾಗುತ್ತಾರೆ. ಈ ಘಟನೆ ಉದ್ಯೋಗ ಮಾತ್ರ ಮುಖ್ಯವಲ್ಲ ಕೆಲಸದ ಸ್ಥಳದಲ್ಲಿ ಗೌರವ ಮತ್ತು ವೈಯಕ್ತಿಕ ಸಮಯಕ್ಕೂ ಮಹತ್ವವಿದೆ ಎಂಬ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

PREV
Read more Articles on
click me!

Recommended Stories

ಭಾರತೀಯ ಜವಳಿ ರಫ್ತಿನಲ್ಲಿ ಹೊಸ ಕ್ರಾಂತಿ: ಉದ್ಯಮದಿಂದ 5 ಕೋಟಿ ಜನರಿಗೆ ಉದ್ಯೋಗ
MRPL ನೇಮಕಾತಿ: 16 ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 14 ಲಕ್ಷದವರೆಗೆ ಸಂಬಳ!