ತಾಯಿಯ ಅನಾರೋಗ್ಯದ ಸಮಯದಲ್ಲಿ ಬೆಂಬಲ ಕೋರಿದ ಉದ್ಯೋಗಿಗೆ ಹಿರಿಯ ಅಧಿಕಾರಿಯಿಂದ ಕಿರುಕುಳ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲಸದ ಸ್ಥಳದಲ್ಲಿ ಮಾನವೀಯತೆ ಕಡಿಮೆಯಾಗುತ್ತಿದೆ ಎಂಬ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರ ಪೋಸ್ಟೊಂದು ವೈರಲ್ ಆಗುತ್ತಿದ್ದು, ಇತ್ತೀಚೆಗೆ ಕೆಲಸದ ಸ್ಥಳದಲ್ಲಿ ಕರುಣೆ ಮಾನವೀಯತೆ ಎಂಬುದು ಹೇಗೆ ಮರೆಯಾಗಿದೆ ಎಂಬುದನ್ನು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ದುಃಖ ತೋಡಿಕೊಂಡಿದ್ದಾರೆ. ಇವರ ಪೋಸ್ಟ್ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯುಕೆಯಲ್ಲಿ ಸಣ್ಣ ಸೇವಾ-ಆಧಾರಿತ ಕಂಪನಿಯ (small service-based company) ಪ್ರಾಜೆಕ್ಟ್ ಮ್ಯಾನೇಜರ್ ಒಬ್ಬರು ತಮಗಾದ ಸಂಕಟದ ಅನುಭವವನ್ನು ಹಂಚಿಕೊಂಡಿದ್ದು, ಈ ವೇಳೆ ಅವರ ಹಿರಿಯ ಅಧಿಕಾರಿ ಕರುಣೆ ಇಲ್ಲದಂತೆ ಹೇಗೆ ವರ್ತಿಸಿದರು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.
ಕಂಪನಿಯ ಎರಡು ಪ್ರಮುಖ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಸಮರ್ಪಣೆ ಮತ್ತು ಮಹತ್ವದ ಕೆಲಸದ ಹೊರತಾಗಿಯೂ, (ಅದರಲ್ಲೊಂದು ಮಾರುಕಟ್ಟೆ ಬಿಡುಗಡೆಗೆ ಸಿದ್ಧವಾಗಿದೆ), ಪ್ರಾಜೆಕ್ಟ್ ಮ್ಯಾನೇಜರ್‌ನ್ನು ಅವರ ಕಷ್ಟದ ಸಮಯದಲ್ಲಿ ಕರುಣೆ ತೋರದೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಗೆ ನಡೆಸಿಕೊಂಡರು ಎಂಬ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.
undefined
ಹೀಗೆ ವಿಚಾರ ಹೇಳಿಕೊಂಡ ಪ್ರಾಜೆಕ್ಟ್ ಮ್ಯಾನೇಜರ್ ತಮ್ಮ ತಾಯಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಸಮಯದಲ್ಲಿ ಆಕೆಗೆ ಮಾನಸಿಕ ಬೆಂಬಲ ನೀಡುವ ಸಲುವಾಗಿ ಆಕೆಯ ಜೊತೆಗಿರಲು ತಮಗೆ ಸರಿ ಹೊಂದುವ ಕೆಲಸದ ಸಮಯವನ್ನು ತನಗೆ ನೀಡುವಂತೆ ತಮ್ಮ ಹಿರಿಯ ಅಧಿಕಾರಿಗಳ ಬಳಿ ಕೇಳಿದ್ದರು ಆದರೆ ಈ ವೇಳೆ ಅವರು ಬೆಂಬಲ ನೀಡುವ ಬದಲು ಅವರನ್ನು ತಮ್ಮ ಕಾರ್ಯವೈಖರಿಯ ವಿಮರ್ಶೆ(performance review) ಮಾಡಲು ಕರೆದರು ಅಲ್ಲದೇ ತಮಗೆ ಯಾವುದೇ ಸಂಬಂಧ ಇಲ್ಲದ ಹಳೆಯ ಸಮಸ್ಯೆಗಳನ್ನು ಎಳೆದು ತಂದು ಕಿರಿಕಿರಿ ಮಾಡಲು ಶುರು ಮಾಡಿದರು.
ಈ ರೀತಿ ಮಾಡುವ ಮೂಲಕ ಕಂಪನಿಯೂ ತನ್ನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಯನ್ನು ತೆಗೆದುಹಾಕುವ ಮೂಲಕ ವೆಚ್ಚವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿರುವ ಒಂದು ಉದಾಹರಣೆಯಾಗಿದೆ ಎಂದು ಪ್ರಾಜೆಕ್ಟ್ ಮ್ಯಾನೇಜರ್ ಹೇಳಿಕೊಂಡಿದ್ದಾರೆ. ಭಾರತೀಯ ಈ ಹಿರಿಯ ಅಧಿಕಾರಿಯ ಅದ್ಭುತವಾದ ಪ್ರಖ್ಯಾತಿಯನ್ನು ಗಮನಿಸಿದರೆ ಈ ನಡವಳಿಕೆಯಿಂದ ನಮಗೇನು ಹೆಚ್ಚು ಆಶ್ಚರ್ಯವಾಗಿಲ್ಲ ಎಂದು ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ ಜೊತೆಗೆ ಈ ಹಿರಿಯ ಅಧಿಕಾರಿಗಳ ಕಿರುಕುಳದ ನಡುವೆಯೇ ಮುಂದುವರೆಯಲು ನಿರ್ಧರಿಸಿದ್ದು, ಈಗಾಗಲೇ ಹೊಸ ಉದ್ಯೋಗಳಿಗೆ ಅರ್ಜಿ ಸಲ್ಲಿಸಲು ಆರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ಇವರು ಮಾಡಿದ ಈ ಪೋಸ್ಟ್‌ಗೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಅನೇಕರು ಈ ಪ್ರಾಜೆಕ್ಟ್ ಮ್ಯಾನೇಜರ್‌ಗೆ ಬೆಂಬಲ ಸೂಚಿಸಿದ್ದಾರೆ. ಚಿಂತೆ ಮಾಡಬೇಡಿ, ಮುಂದೆ ಒಳ್ಳೆಯದಾಗುತ್ತದೆ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ಬಾಗಿಲು ತೆರೆದುಕೊಳ್ಳುತ್ತದೆ ಗುಡ್‌ಲಕ್ ಎಂದು ಒಬ್ಬರು ಹಾರೈಸಿದ್ದಾರೆ. ಹೌದು ಇಂತಹ ಸಮಸ್ಯೆಗಳು ಎಲ್ಲಾ ಕಡೆ ಇದೆ. ಈ ರೀತಿ ಕೆಟ್ಟ ಆಟ ಆಡುವ ಬದಲು ಸಂಸ್ಥೆಯ ಮಾಲೀಕರು ಹಾಗೂ ಮ್ಯಾನೇಜರ್‌ಗಳು ನಮಗೆ ನಿಮ್ಮನ್ನು ಖರೀದಿಸಲಾಗದು ಎಂದು ನೇರವಾಗಿ ಹೇಳಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆದರೆ ಎಲ್ಲರನ್ನೂ ಒಂದೇ ಬ್ರಷ್‌ನಿಂದ ಚಿತ್ರಿಸುವುದನ್ನು ನಿಲ್ಲಿಸಿ, ಭಾರತೀಯರನ್ನು ಕೆಟ್ಟ ಮ್ಯಾನೇಜರ್ ಎಂದು ಎಲ್ಲರಿಗೂ ಒಂದೇ ಹಣೆಪಟ್ಟಿ ನೀಡುವುದು ಸರಿಯಲ್ಲ, ನಾನು ಭಾರತೀಯರು ಹಾಗೂ ಹಲವು ಮ್ಯಾನೇಜರ್‌ಗಳ ಜೊತೆ ಕೆಲಸ ಮಾಡಿದ್ದೇನೆ. ಅವರಲ್ಲಿ ಅನೇಕರು ಅದ್ಭುತವಾದ ಮ್ಯಾನೇಜರ್‌ಗಳಿದ್ದರು, ಇದು ಸಂಪೂರ್ಣವಾಗಿ ವ್ಯಕ್ತಿ ಮೇಲೆ ಅವಲಂಬಿತವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.