ಫೈಲ್ಸ್ ಉಲ್ಬಣಿಸಿದೆ ರಜೆ ಕೊಡಿ ಎಂದ ಉದ್ಯೋಗಿಗೆ ಸಾಕ್ಷ್ಯ ಕೇಳಿದ ಬಾಸ್: ಆತ ಮಾಡಿದ್ದೇನು?

By Anusha Kb  |  First Published Oct 21, 2024, 1:05 PM IST

ಫೈಲ್ಸ್ ಉಲ್ಬಣಿಸಿದೆ ರಜೆ ಕೊಡಿ ಎಂದ ಉದ್ಯೋಗಿಗೆ ಸಾಕ್ಷ್ಯ ಕೇಳಿದ ಬಾಸ್


ಸಾಮಾನ್ಯವಾಗಿ ಹುಷಾರಿಲ್ಲ ಎಂದು ಸಡನ್ ಆಗಿ ರಜೆ ಕೇಳಿದಾಗ ಬಾಸ್ ಸಂಶಯದಿಂದ ನೋಡೋದೆ ಹೆಚ್ಚು, ಹೀಗಾಗಿ ರಜೆ ಬೇಕಾದಷ್ಟಿದ್ದರೂ ರಜೆ ಕೇಳುವುದೇ ಒಂದು ದೊಡ್ಡ ತಲೆನೋವು. ಬಾಸ್‌ಗೆ ತನ್ನ ಉದ್ಯೋಗಿಗಳ ಮೇಲೆ ನಂಬಿಕೆ ಇಲ್ಲದ ಕಾರಣಕ್ಕೆ ಬಾಸ್ ಒಂದು ದಿನದ ರಜೆಗೂ ಕೆಲವೊಮ್ಮೆ ಸಾಕ್ಷ್ಯ ಕೇಳುತ್ತಾರೆ. ಕೆಲವೊಂದು ವಿಚಾರಗಳಿಗೆ ಸಾಕ್ಷ್ಯ ನೀಡಬಹುದು. ಆದರೆ ಎಲ್ಲಾ ಪ್ರಸಂಗಗಳಲ್ಲಿ ಸಾಕ್ಷ್ಯ ನೀಡಲಾಗದು. ಆದರು ಬಾಸ್‌ಗೆ ಮಾತ್ರ ಉದ್ಯೋಗಿಗೆ ನಿಜವಾಗಿಯೂ ಅಸೌಖ್ಯವೇ ಇಲ್ಲವೇ ಎಂದು ತಿಳಿದುಕೊಳ್ಳಲು ಸಾಕ್ಷ್ಯ ಕೇಳಿಯೇ ಕೇಳುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಫೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತನ್ನ ಬಾಸ್ ಬಳಿ ರಜೆ ಕೇಳಿದ್ದಾನೆ. ಆದರೆ ಬಾಸ್ ಮಾತ್ರ ಅದಕ್ಕೂ ಸಾಕ್ಷ್ಯ ಕೇಳಿದ್ದಾರೆ. ಇದಕ್ಕೆ ಆತ ನೀಡಿದ ಸಾಕ್ಷ್ಯ ಈಗ ಬಾಸ್‌ನ ದಂಗಾಗುವಂತೆ ಮಾಡಿದೆ. 

ಹೆಮೊರೊಯಿಡ್ಸ್ ಅಥವಾ ಫೈಲ್ಸ್  ದೇಹದ ಗುದನಾಳದಲ್ಲಿ ಬೆಳೆಯುವ ಮಾಂಸದ ಗಡ್ಡೆಯಾಗಿದೆ. ಇದು ತೀವ್ರವಾದಾಗ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಇದಕ್ಕೆ ಬೆಚ್ಚಗೆ ಸ್ನಾನ ಮಾಡುವುದು ಮುಲಾಮು ಹಚ್ಚುವುದು ಅದಕ್ಕಿಂತಲೂ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಸಾಕಷ್ಟು ಜನ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಯಾರು ಕೂಡ ಈ ನೋವಿನ ಬಗ್ಗೆ  ಬಹಿರಂಗವಾಗಿ ಎಲ್ಲರೊಂದಿಗೆ ಮಾತನಾಡಲು ಇಷ್ಟಪಡುವುದಿಲ್ಲ, ಏಕೆಂದರೆ ಅದು ಖಾಸಗಿ ಭಾಗದಲ್ಲಿ ಉಲ್ಬಣಿಸುವ ಕಾಯಿಲೆಯಾಗಿರುವುದರಿಂದ ಇದರ ಬಗ್ಗೆ ಮಾತನಾಡಲು ಯಾರು ಇಷ್ಟಪಡುವುದಿಲ್ಲ, ಹೀಗಿರುವಾಗ ಇಲ್ಲಿ ಈ ಸಮಸ್ಯೆಯಿಂದ ಉಲ್ಬಣಿಸಿದ  ವ್ಯಕ್ತಿ ರಜೆ ಕೇಳಿದರೆ ಸಾಕ್ಷ್ಯ ನೀಡುವಂತೆ ಕೇಳಿದ್ದಾನೆ ಆತನ ಬಾಸ್‌.

Tap to resize

Latest Videos

Health Tips: ಮಧುಮೇಹಿಗಳು ಪೈಲ್ಸ್‌ನಿಂದ ಬಚಾವ್ ಆಗೋದು ಹೇಗೆ?

ಸೋಶಿಯಲ್ ಮೀಡಿಯಾ ರೆಡಿಟ್‌ನಲ್ಲಿ ಈ ವಿಚಾರವನ್ನು ಉದ್ಯೋಗಿ ಹಂಚಿಕೊಂಡಿದ್ದು, ಈ ವಿಚಾರವೀಗ ಭಾರಿ ಚರ್ಚೆಗೆ ಕಾರಣವಾಗಿದೆ. ನನಗ ಮೂಲವ್ಯಾಧಿ ಸಮಸ್ಯೆ ಇರುವುದರಿಂದ ನನಗೆ ಸರಿಯಾಗಿ ಬಹಳ ಹೊತ್ತಿನವರೆಗೆ ನಿಲ್ಲಲ್ಲು ಆಗುವುದಿಲ್ಲ, ಹೀಗಾಗಿ ನಾನು ನನ್ನ ಮ್ಯಾನೇಜರ್ ಬಳಿ ರಜೆ ಕೇಳಿದೆ. ಆದರೆ ಮ್ಯಾನೇಜರ್ ಸಾಕ್ಷ್ಯ ನೀಡುವಂತೆ ಕೇಳಿದರು. ಹೀಗಾಗಿ ನಾನು ಅವರಿಗೆ ಫೈಲ್ಸ್ ಇದ್ದ ನನ್ನ ಆ ಭಾಗದ ಫೋಟೋ ಕಳುಹಿಸಿದೆ ಎಂದು ಉದ್ಯೋಗಿ ರೆಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. 

undefined

ಅಲ್ಲದೇ ಹೀಗೆ ಫೋಟೋ ಕಳುಹಿಸಿದ ಉದ್ಯೋಗಿ ಕಂಪನಿಯ ನಿಯಮಗಳ ಸಂಭವನೀಯ ಉಲ್ಲಂಘನೆಯ ಪರಿಣಾಮಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಈಗ ಅವರಿಗೆ ಹೀಗೆ ಫೋಟೋ ಕಳುಹಿಸುವ ಮೂಲಕ ನಾನು ಕಂಪನಿಯ ನಿಯಮಗಳು ಅಥವಾ ಕಾನೂನುಗಳನ್ನು ಉಲ್ಲಂಘಿಸಿದ್ದೇನೆಯೇ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ, ಹೀಗಿರುವಾಗ ಮ್ಯಾನೇಜರ್ ಈ ವಿಚಾರವನ್ನು ಹೆಚ್‌ಆರ್‌ಗೆ ಹೇಳಿದರೆ ನಾನು ಸಮಸ್ಯೆ ಎದುರಿಸಬಹುದೇ ಎಂದು ಆತ ಪ್ರಶ್ನಿಸಿದ್ದಾರೆ.

ಪೈಲ್ಸ್ ಇರೋರು ಆಲೂಗಡ್ಡೆ ಸೇವಿಸಬಹುದಾ?

ಈ ಸೋಶಿಯಲ್ ಮೀಡಿಯಾ ಪೋಸ್ಟ್ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕೆಲ ಸಂಸ್ಥೆಗಳಲ್ಲಿ ಇರುವ ರಜೆಗಳ ಸ್ಥಿತಿ ಬಗ್ಗೆ ಚರ್ಚೆ ಹುಟ್ಟುಹಾಕಿದೆ.ಅಲ್ಲದೇ ರಜೆ ಕೇಳುವ ವೇಳೆ ತಮಗಾದ ಅನುಭವವವನ್ನು ಅನೇಕರು ಹಂಚಿಕೊಂಡಿದ್ದಾರೆ. ಹಾಗೆಯೇ ತುಂಬಾ ಹಿಂದೊಮ್ಮೆ ಮ್ಯಾನೇಜರ್ ಅನಾರೋಗ್ಯದ ರಜೆ ಪಡೆಯಲು ಕೂಡ ವಾರಕ್ಕೂ ಮೊದಲೇ ತನಗೆ ತಿಳಿಸಬೇಕು ಎಂದು ಹೇಳಿದ್ದ ಎಂದು ರೆಡಿಟ್‌ನಲ್ಲಿ ಒಬ್ಬರು ಸಂಕಟ ಹಂಚಿಕೊಂಡಿದ್ದರು. ಆ ವಿಚಾರವೂ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

click me!