ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ಯೋಗಾವಕಾಶ, 10ನೇ ತರಗತಿ ಆಗಿದ್ರೆ ಸಾಕು

By Gowthami K  |  First Published Aug 27, 2024, 3:11 PM IST

ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಉತ್ತರಾಖಂಡದ 4,000 ಮಹಿಳೆಯರಿಗೆ ತನ್ನ ತಮಿಳುನಾಡು ಮತ್ತು ಕರ್ನಾಟಕ ಘಟಕಗಳಲ್ಲಿ ಉದ್ಯೋಗ ನೀಡಲಿದೆ. 10 ನೇ ತರಗತಿ ಪಾಸಾದ ಮಹಿಳೆಯರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ವಸತಿ, ಊಟ ಮತ್ತು ಸಾರಿಗೆ ಸೌಲಭ್ಯ ಸಹ ಇರಲಿದೆ.


ಬೆಂಗಳೂರು (ಆ.27): ಭಾರತದ ಅತ್ಯಂತ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ಅವರು ತಮ್ಮ ಸಾಮಾಜಿಕ ಕಾಳಜಿ ಮತ್ತು ಜನರ ಜೀವನವನ್ನು ಸುಧಾರಿಸುವ ಪ್ರಯತ್ನಗಳಿಗೆ ಹೆಸರು ವಾಸಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಟಾಟಾ ಸಮೂಹ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇದರಿಂದ ಲಕ್ಷಾಂತರ ಜನರ ಜೀವನದಲ್ಲಿ ಉತ್ತಮ ಬದಲಾವಣೆಗಳಾಗಿವೆ. ಈಗ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತೊಂದು ಮಹತ್ವದ ಯೋಜನೆಯನ್ನು ಕೈಗೊಂಡಿದ್ದು, ಉತ್ತರಾಖಂಡದ 4,000 ಮಹಿಳೆಯರಿಗೆ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಉದ್ಯೋಗ ನೀಡಲು ನಿರ್ಧರಿಸಿದೆ.

ಮಹಿಳೆಯರಿಗೆ ದೊಡ್ಡ ಅವಕಾಶ:
ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಉತ್ತರಾಖಂಡದ 4,000 ಮಹಿಳೆಯರಿಗೆ ತಮ್ಮ ಹೊಸೂರು (ತಮಿಳುನಾಡು) ಮತ್ತು ಕೋಲಾರ (ಕರ್ನಾಟಕ) ಘಟಕಗಳಲ್ಲಿ ಉದ್ಯೋಗ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಯೋಜನೆಯ ಉದ್ದೇಶ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮಾತ್ರವಲ್ಲ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಜೊತೆಗೆ ಅವರನ್ನು ಮುಖ್ಯವಾಹಿನಿಗೆ ತರುವುದು.

Tap to resize

Latest Videos

undefined

ದರ್ಶನ್ ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಶಿಫ್ಟ್ , ನ್ಯಾಯಾಲಯದ ಒಪ್ಪಿಗೆಯೊಂದೇ ಬಾಕಿ!

ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಯಡಿಯಲ್ಲಿ, 10 ನೇ ತರಗತಿ ಅಥವಾ 12 ನೇ ತರಗತಿ ಪಾಸಾದ ಮಹಿಳೆಯರು ಎನ್‌ಪಿಎಸ್ (ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮೋಷನ್ ಸ್ಕೀಮ್) ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಐಟಿಐ ಡಿಪ್ಲೊಮಾ ಹೊಂದಿರುವವರು ಎನ್‌ಎಟಿಎಸ್ (ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ) ಕಾರ್ಯಕ್ರಮದಡಿಯಲ್ಲಿ ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬಯಸುವ ಮಹಿಳೆಯರಿಗೆ ಈ ಯೋಜನೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ವೇತನದ ಜೊತೆಗೆ ಇತರ ಸೌಲಭ್ಯಗಳು
ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಉದ್ಯೋಗವನ್ನು ಮಾತ್ರವಲ್ಲದೆ ಉದ್ಯೋಗ ಸಂಬಂಧಿತ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದೆ. ಆಯ್ಕೆಯಾದ ಮಹಿಳೆಯರಿಗೆ ನಿಗದಿತ ವೇತನದ ಜೊತೆಗೆ ವಸತಿ, ಊಟ, ಸಾರಿಗೆ ಮತ್ತು ಇತರ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಈ ಮಹಿಳೆಯರು ಯಾವುದೇ ರೀತಿಯ ಅನಾನುಕೂಲತೆಯನ್ನು ಎದುರಿಸಬಾರದು ಮತ್ತು ಅವರು ತಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕೆಂದು ಈ ಯೋಜನೆ ಖಚಿತಪಡಿಸುತ್ತದೆ.

ಉನ್ನತ ವ್ಯಾಸಂಗಕ್ಕಾಗಿ ಅಣ್ಣಾಮಲೈ ಲಂಡನ್‌ಗೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಪಟ್ಟ ಯಾರಿಗೆ?

ರತನ್ ಟಾಟಾ ಅವರ ದೃಷ್ಟಿಕೋನ ಮತ್ತು ಕೊಡುಗೆ
ಟಾಟಾ ಸಮೂಹದ ಮಾಜಿ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರು ಯಾವಾಗಲೂ ಸಮಾಜದ ಬಗ್ಗೆ ಏಳಿಗೆಗಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.   86 ವರ್ಷದ ರತನ್ ಟಾಟಾ ಅವರು ತಮ್ಮ ಅನುಕರಣೀಯ ಕಾರ್ಯಗಳಿಗಾಗಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹಲವಾರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. 2008 ರಲ್ಲಿ ಭಾರತ ಸರ್ಕಾರವು ಅವರಿಗೆ ತನ್ನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ನೀಡಿ ಗೌರವಿಸಿತು. ಅವರ ನೇತೃತ್ವದಲ್ಲಿ ಟಾಟಾ ಸಮೂಹ ಉದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.

click me!