ಟ್ವಿಟರ್ ಖರೀದಿಸಿದ ಬಳಿಕ ಎಲಾನ್ ಮಸ್ಕ್ ಹಲವು ಉದ್ಯೋಗಿಗಳಿಗೆ ಕೊಕ್ ನೀಡಿದ್ದರು. ಇದೀಗ ಎಲಾನ್ ಮಸ್ಕ್ ಸಂಕಷ್ಟಕ್ಕೆ ಕಾರಣವಾಗಿದೆ. ಮಸ್ಕ್ ಇಮೇಲ್‌ಗೆ ಉತ್ತರಿಸದೆ ಕೆಲಸ ಕಳೆದುಕೊಂಡ ಉದ್ಯೋಗಿಗೆ 5 ಕೋಟಿ ರೂಪಾಯಿ ಪರಿಹಾರ ನೀಡು ಕಮಿಷನ್ ಆದೇಶಿಸಿದೆ.
ಐರ್ಲೆಂಡ್(ಆ.16) ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿ ಇದೀಗ ಎಕ್ಸ್ ಆಗಿ ಬದಲಾಗಿದೆ. ಹಲವು ನೀತಿಗಳು ಬದಲಾಗಿದೆ. ಆದರೆ ಎಲಾನ್ ಮಸ್ಕ್ ಸಂಕಷ್ಟ ಮಾತ್ರ ಬದಲಾಗಿಲ್ಲ. ಟ್ವಿಟರ್ ಖರೀದಿಸಿದ ಬಳಿಕ ಮಸ್ಕ್ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಆದರೆ ಈ ಬಾರಿ ಕಂಗಾಲಾಗಿದ್ದಾರೆ. ಟ್ವಿಟರ್ ಖರೀದಿಸಿದ ಬೆನ್ನಲ್ಲೇ ಎಲಾನ್ ಮಸ್ಕ್ ಹಲವು ಉದ್ಯೋಗಿಗಳನ್ನು ಕಿತ್ತು ಹಾಕಿದ್ದರು. ಹೊಸ ತಂಡ ರಚಿಸಿ ಟ್ವಿಟರ್‌ಗೆ ಹೊರ ರೂಪ ನೀಡಿದ್ದರು. ಆದರೆ ಹೀಗೆ ಕೆಲಸ ಕಳೆದುಕೊಂಡು ಉದ್ಯೋಗಿ ಗ್ಯಾರಿ ರೂನಿಗೆ , ಟ್ವಿಟರ್ ಸಂಸ್ಥೆ ಬರೋಬ್ಬರಿ 5 ಕೋಟಿ ಪರಿಹಾರ ನೀಡುವಂತೆ ವರ್ಕ್‌ಪ್ಲೇಸ್ ರಿಲೇಶನ್ ಕಮಿಷನ್ ಆದೇಶಿಸಿದೆ.
ಗ್ಯಾರಿ ರೂನಿ 2013ರಿಂದ ಟ್ವಿಟರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಐರ್ಲೆಂಡ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ರೂನಿ 2022ರಲ್ಲಿ ಕೆಲಸ ಕಳೆದುಕೊಂಡಿದ್ದು. ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಮಹತ್ತರ ಬದಲಾವಣೆ ಮಾಡಿದ್ದರು. ಕೆಲ ಉದ್ಯೋಗಿಗಳು ನೆರವಾಗಿ ಕಿತ್ತು ಹಾಕಿದ್ದರೆ, ಮತ್ತೆ ಹಲವರನ್ನು ಸ್ವಯಂ ರಾಜೀನಾಮೆ ನೀಡುವಂತೆ ಮಾಡಲಾಗಿತ್ತು. ಹೀಗೆ ರೂನಿ ಸ್ವಯಂ ರಾಜೀನಾಮೆ ನೀಡಬೇಕಾದ ಅನಿವಾರ್ಯತೆಯಿಂದ ಕೆಲಸ ಕಳೆದುಕೊಂಡಿದ್ದರು. ಬಳಿಕ ಕಾನೂನು ಹೋರಾಟ ಆರಂಭಿಸಿದ್ದರು.
undefined
ಇವಿಎಂ ಹ್ಯಾಕ್ ಎಂದವರಿಗೆ ಆಯೋಗದ ಸವಾಲು, ಅಭ್ಯರ್ಥಿಗಳಿಗೆ ಪರಿಶೀಲನೆಯ ಅವಕಾಶ
ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್, ಹಲವು ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದರು. ಹೊಸ ಟ್ವಿಟರ್ ಸಂಸ್ಥೆಯಲ್ಲಿ ಕೆಲಸ ಮಾಡಲು ಮತ್ತಷ್ಟು ಜವಾಬ್ದಾರಿಯುತವಾಗಿ ಹೆಚ್ಚಿನ ಗಂಟೆ ಕೆಲಸ ಮಾಡಬೇಕು. ಇಲ್ಲದಿದ್ದರೆ 3 ತಿಂಗಳ ಸಂಬಳ ಪಡೆದುಕೊಳ್ಳಿ. ಈ ಆದೇಶ ಒಪ್ಪುವುದಾದರೆ ಯೆಸ್ ಎಂದು ಕ್ಲಿಕ್ ಮಾಡಿ ಎಂಬ ಇಮೇಲ್ ಕಳುಹಿಸಲಾಗಿತ್ತು.
ರೂನಿ ಈ ಇಮೇಲ್ ಸಂದೇಶಕ್ಕೆ ಉತ್ತರಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೆಸದಿಂದ ಹೊರಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಪ್ರಕಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಐರೀಶ್ ವರ್ಕ್‌ಪ್ಲೆಸ್ ರಿಲೇಶನ್ ಕಮಿಷನ್ ವಿಚಾರಣೆ ನಡೆಸಿತ್ತು. ಒಂದು ಸಂಸ್ಥೆ, ಉದ್ಯೋಗಿಗಳನ್ನು ಈ ರೀತಿ ನಡೆಸಿಕೊಳ್ಳಬಾರದು. ಇದು ಐರಿಶ್ ಉದ್ಯೋಗಿಗಳ ನಿಯಮಕ್ಕೆ ವಿರುದ್ಧವಾಗಿದೆ. ಇಷ್ಟೇ ಅಲ್ಲ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ 5,50,000 ಯೂರೋ ಮೊತ್ತ(ಭಾರತೀಯ ರೂಪಾಯಿಗಳಲ್ಲಿ 5 ಕೋಟಿ) ಮೊತ್ತ ಪರಿಹಾರವಾಗಿ ಟ್ವಿಟರ್ ಸಂಸ್ಥೆ ನೀಡಬೇಕು ಎಂದು ಆದೇಶಿಸಿದೆ.
ಈ ಆದೇಶ ಎಲಾನ್ ಮಸ್ಕ್ ಕಂಗಾಲಾಗುವಂತೆ ಮಾಡಿದೆ. ಕಾರಣ ಇದೀಗ ಟ್ವಿಟರ್ ಸಂಸ್ಥೆಯಿಂದ ಅಮಾನತುಗೊಂಡ, ಕೆಲಸ ಕಳೆದುಕೊಂಡ ಉದ್ಯೋಗಿಗಳು ಪರ ಈ ರೀತಿ ಆದೇಶ ಹೊರಬಿದ್ದರೆ, ಪ್ರತಿಯೊಬ್ಬರಿಗೆ 5 ಕೋಟಿ ನೀಡಿದರೆ ಟ್ವಿಟರ್ ಸಂಸ್ಥೆ ಬಾಗಿಲು ಮುಚ್ಚಬೇಕಾಗುತ್ತದೆ ಅನ್ನೋ ಆತಂಕ ಮಸ್ಕ್‌ಗೆ ಕಾಡಲು ಶುರುವಾಗಿದೆ.
12ನೇ ಮಗುವಿಗೆ ತಂದೆಯಾದ ಎಲಾನ್ ಮಸ್ಕ್, ಕಳೆದ 5 ವರ್ಷದಲ್ಲಿ 6 ಬಾರಿ ಅಪ್ಪನ ಪಟ್ಟ!