Tesla Job ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿ ಹೊಸ ಜಾಬ್ ಆಫರ್ ನೀಡಿದೆ. ಈ ಕೆಲಸಕ್ಕೆ ಟೆಸ್ಲಾ ಕಂಪನಿ ಗಂಟೆಗೆ 28 ಸಾವಿರ ರೂಪಾಯಿ ವೇತನ ನೀಡುವುದಾಗಿ ಘೋಷಣೆ ಮಾಡಿದೆ.
ಬೆಂಗಳೂರು (ಅ.20): ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿ ತನ್ನ ಮಹತ್ವಾಕಾಂಕ್ಷೆಯ ಹ್ಯೂಮನಾಯ್ಡ್ ರೋಬೋಟ್ ಆಪ್ಟಿಮಸ್ ಮೇಲೆ ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಮಾಡುತ್ತಿದೆ. ಈಗ ಇದೇ ಆಪ್ಟಿಮಸ್ ರೋಬೋಟ್ ಪ್ರಾಜೆಕ್ಟ್‌ನಲ್ಲಿ ವಿಆರ್ ಹೆಡ್‌ಹೆಟ್ ಹಾಗೂ ಮೋಷನ್ ಕ್ಯಾಪ್ಚರ್ ಸೂಟ್ ಧರಿಸಿ ದಿನಕ್ಕೆ 7 ಗಂಟೆಗಳ ಕಾಲ ನಡೆಯುವ ಆಫರ್‌ಅನ್ನು ನೀಡಿದೆ. ಅದಕ್ಕಾಗಿ ದಿನಕ್ಕೆ ಗರಿಷ್ಠ ಗಂಟೆಗೆ 48 ಯುಎಸ್ ಡಾಲರ್ ಅಂದರೆ 28 ಸಾವಿರ ರೂಪಾಯಿ ವೇತನ ನೀಡುವುದಾಗಿ ತಿಳಿಸಿದೆ. ತನ್ನ ಹ್ಯೂಮನಾಯ್ಡ್ ಆಪ್ಟಿಮಸ್ ರೋಬೋಟ್‌ಗೆ ತರಬೇತಿ ನೀಡಲು ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಪಾಲೋ ಆಲ್ಟೋ ಕೇಂದ್ರ ಕಚೇರಿಯಲ್ಲಿ ಈ ಕೆಲಸ ಇರುತ್ತದೆ. ಟೆಸ್ಲಾ ಬೋಟ್‌ನ ಡೇಟಾ ಕಲೆಕ್ಷನ್ ಆಪರೇಟರ್ ಹುದ್ದೆ ಇದಾಗಿದ್ದು, ವ್ಯಕ್ತಿಗಳು ಕನಿಷ್ಠ 5.7 ಇಂದ 5.11 ಎತ್ತರ ಇರಬೇಕು ಎಂದು ತಿಳಿಸಲಾಗಿದೆ.
ಇದರು ಪೂರ್ಣ ಪ್ರಮಾಣದ ಉದಯೋಗಿಯಾಗಿ ಇರಲಿದ್ದು, ನೈಟ್‌ಶಿಫ್ಟ್‌ನಲ್ಲಿಯೇ ಕೆಲಸ ಮಾಡಬೇಕಿದೆ ಎಂದು ಟೆಸ್ಲಾ ತಿಳಿಸಿದೆ. ತನ್ನ ಡೇಟಾ ಕಲೆಕ್ಷನ್ ಟೀಮ್‌ಅನ್ನು ಬೆಂಬಲಿಸುವ ನಿಟ್ಟಿನಲ್ಲಿ ಉತ್ಸಾಹಿ ವ್ಯಕ್ತಗಳನ್ನು ಕಂಪನಿ ನೋಡುತ್ತಿದೆ. ಈ ಕೆಲಸದ ಪ್ರಮುಖ ಉದ್ದೇಶವ ಡೇಟಾವನ್ನು ಸಂಗ್ರಹಣೆ ಮಾಡುವುದು, ಇಂಜಿನಿಯರಿಂಗ್ ರಿಕ್ವೆಸ್ಟ್‌ಗಳಿಗೆ ಸಹಾಯ ಮಾಡುವುದು ಮಾತ್ರ ಇಕ್ವಿಪ್‌ಮೆಂಟ್ ಫೀಡ್‌ಬ್ಯಾಕ್‌ಅನ್ನು ರಿಪೋರ್ಟ್ ಮಾಡುವುದು ಎಂದು ತಿಳಿಸಿದೆ.
ಈ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳು ಡೇಟಾ ಚಾಲಿತ ನಿರ್ಧಾರಗಳನ್ನು ಅತ್ಯಂತ ವೇಗವಾದ ಕೆಲಸದ ವಾತಾವರಣದಲ್ಲಿ ಮಾಡಬೇಕಾಗಿರುತ್ತದೆ. ರೊಬೊಟಿಕ್ಸ್ ಕ್ಷೇತ್ರದಲ್ಲಿ ಉತ್ಸಾಹ ಮತ್ತು ಟೆಸ್ಲಾ ಬಾಟ್‌ನ ಅಭಿವೃದ್ಧಿಗೆ ಕೊಡುಗೆ ನೀಡುವ ಬಲವಾದ ಬಯಕೆಯನ್ನು ಹೊಂದಿರುವ ಯಾರನ್ನಾದರೂ ನಾವು ಈ ಕೆಲಸಕ್ಕೆ ಹುಡುಕುತ್ತಿದ್ದೇವೆ ಎಂದಿದ್ದಾರೆ.
ಮಾಡಬೇಕಾಗಿರೋದೇನು: ಡೇಟಾ ಸಂಗ್ರಹಣೆಗಾಗಿ ಪ್ರತಿದಿನ ಪೂರ್ವನಿರ್ಧರಿತ ಪರೀಕ್ಷಾ ಮಾರ್ಗದಲ್ಲಿ ನಡೆಯಬೇಕಾಗುತ್ತದೆ. ಯೋಜನೆಯ ಅವಶ್ಯಕತೆಗಳ ಆಧಾರದ ಮೇಲೆ ಗೊತ್ತುಪಡಿಸಿದ ಚಲನೆಗಳು ಮತ್ತು ಕ್ರಿಯೆಗಳನ್ನು ನಿರ್ವಹಿಸುವಾಗ ಮೋಷನ್ ಕ್ಯಾಪ್ಚರ್ ಸೂಟ್ ಮತ್ತು ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಅನ್ನು ಧರಿಸಬೇಕಾಗುತ್ತದೆ. ರೆಕಾರ್ಡಿಂಗ್ ಸಾಧನಗಳನ್ನು ಸ್ಟಾರ್ಟ್ ಮಾಡುವುದು ಮತ್ತು ನಿಲ್ಲಿಸುವುದು, ಸಣ್ಣ ಉಪಕರಣಗಳು ಮತ್ತು ಸಾಫ್ಟ್‌ವೇರ್ ಡೀಬಗ್ ಮಾಡುವಿಕೆಯನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಇಕ್ವಿಪ್‌ಮೆಂಟ್‌ಗಳ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯೆಯನ್ನು ನೀಡಬೇಕಿರುತ್ತದೆ. ಶಿಫ್ಟ್ ಸಮಯದಲ್ಲಿ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಿ ಮತ್ತು ವರದಿ ಮಾಡಬೇಕಾಗುತ್ತದೆ. ನಿಯೋಜಿಸಲಾದ ಉಪಕರಣಗಳು ಸರಿಯಾದ ಮತ್ತು ಸುರಕ್ಷಿತ ಕೆಲಸದ ಸ್ಥಿತಿಯಲ್ಲಿವೆ ಮತ್ತು ಸುರಕ್ಷಿತವಾಗಿ ವಿವಿಧ ಸಂಗ್ರಹಣೆ ಸೈಟ್‌ಗಳಿಗೆ ಸಾಗಿಸಲಾಗಿದೆ ಎನ್ನುವುದನ್ನು ತಿಳಿಸಬೇಕಿರುತ್ತದೆ. ಸಕಾಲಿಕವಾಗಿ ಪರಿಹರಿಸಬೇಕಾದ ಸಮಸ್ಯೆಗಳು ಉದ್ಭವಿಸಿದಾಗ ಟೀಮ್ ಜೊತೆಗೆ ಸಂವಹನ ನಡೆಸಬೇಕಿರುತ್ತದೆ ಎಂದು ಹೇಳಿದೆ.
ಕಾರು ಕೊಳ್ಳುವವರ ಸಂಖ್ಯೆ ಭಾರಿ ಇಳಿಕೆ: ವಿತರಕರ ಬಳಿ 60 ಸಾವಿರ ಕೋಟಿ ಮೊತ್ತದ ಕಾರು ದಾಸ್ತಾನು ಬಾಕಿ
ಇನ್ನು ಈ ಹುದ್ದೆಗೆ ಸೇರುವವರಿಗೆ ಸಾಕಷ್ಟು ಆಫರ್‌ಗಳನ್ನು ಕೂಡ ಕಂಪನಿ ನೀಡಿದೆ. ಗಂಟೆಯ ವೇತನದೊಂದಿಗೆ ಕ್ಯಾಶ್ & ಸ್ಟಾಕ್ ಅವಾರ್ಡ್‌ಗಳು ಹಾಗೂ ಇತರ ಹೆಲ್ತ್ ಬೆನಿಫಿಟ್‌ಗಳನ್ನು ನೀಡಲಿದೆ. ಕುಟುಂಬ-ನಿರ್ಮಾಣ, ಫಲವತ್ತತೆ, ದತ್ತು ಮತ್ತು ಬಾಡಿಗೆ ತಾಯ್ತನದ ಪ್ರಯೋಜನಗಳನ್ನು ಕಂಪನಿ ನೀಡಲಿದೆ. ಕಂಪನಿಯು ಬೇಸಿಕ್ ಲೈಫ್, AD&D, ಅಲ್ಪಾವಧಿಯ ಮತ್ತು ದೀರ್ಘಾವಧಿಯ ಅಂಗವೈಕಲ್ಯ ವಿಮೆಯನ್ನು ಕೂಡ ಪಾವತಿಸಲಿದೆ ಎಂದು ಹೇಳಿದೆ.
ಎಲಾನ್ ಮಸ್ಕ್ ಸಂಬಳಕ್ಕೆ ಅನುಮೋದನೆ; ಇದು ಟಾಟಾ ಮೋಟಾರ್ಸ್ ಆದಾಯಕ್ಕಿಂತಲೂ ಹೆಚ್ಚು