ಪ್ರಯಾಗ್‌ರಾಜ್‌ನ ಟ್ರಿಪಲ್‌ ಐಟಿಯ ಐದು ವಿದ್ಯಾರ್ಥಿಗಳಿಗೆ ಅಮೆಜಾನ್‌, ಗೂಗಲ್‌ನಲ್ಲಿ ಕೋಟಿಗೂ ಹೆಚ್ಚು ಪ್ಯಾಕೇಜ್

By Suvarna News  |  First Published May 30, 2022, 6:04 PM IST

ಅಮೆಜಾನ್ ಮತ್ತು ಗೂಗಲ್‌ನಂತಹ ಕಂಪನಿಗಳನ್ನು ಹೊರತುಪಡಿಸಿ, ಫೇಸ್‌ಬುಕ್‌ನಂತಹ ಅನೇಕ ಕಂಪನಿಗಳಲ್ಲಿ, 250 ವಿದ್ಯಾರ್ಥಿಗಳು ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚು ಪ್ಯಾಕೇಜ್‌ನಲ್ಲಿ ಉದ್ಯೋಗವನ್ನು ಪಡೆದಿದ್ದಾರೆ.


ಉತ್ತರಪ್ರದೇಶ (ಮೇ 30): ಉತ್ತರ ಪ್ರದೇಶದ ಸಾಂಸ್ಕೃತಿಕ ನಗರಿ ಪ್ರಯಾಗ್‌ರಾಜ್‌ನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ಈ ಬಾರಿ ಪ್ಲೇಸ್‌ಮೆಂಟ್ (Placements) ವಿಷಯದಲ್ಲಿ ಹೊಸ ದಾಖಲೆ ಮಾಡಿದೆ. ಈ ವರ್ಷ ಟ್ರಿಪಲ್ ಐಟಿ ಪ್ರಯಾಗರಾಜ್‌ನ 5 ವಿದ್ಯಾರ್ಥಿಗಳು ಒಂದು ಕೋಟಿ ರೂಪಾಯಿಗೂ ಹೆಚ್ಚು ಪ್ಯಾಕೇಜ್ ಪಡೆದಿದ್ದಾರೆ. ಟ್ರಿಪಲ್ ಐಟಿ ಪ್ರಯಾಗರಾಜ್‌ನ ಈ ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ 5 ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ವಾರ್ಷಿಕ ಪ್ಯಾಕೇಜ್ ಪಡೆದಿದ್ದಾರೆ. 

ಬಿಟೆಕ್-ಎಂಟೆಕ್ 5 ವರ್ಷದ ಕೋರ್ಸ್‌ನ ಕೊನೆಯ ವರ್ಷದ ವಿದ್ಯಾರ್ಥಿ ಪ್ರಥಮ್ ಪ್ರಕಾಶ್ ಗುಪ್ತಾ ಗೂಗಲ್‌ನಿಂದ ಗರಿಷ್ಠ 1.46 ಕೋಟಿ ರೂ.ಗಳ ಪ್ಯಾಕೇಜ್ ಸ್ವೀಕರಿಸಿದ್ದಾರೆ. ಇದರೊಂದಿಗೆ ಎಮ್ಟೆಕ್‌ನ ಪ್ರಶಾಂತ್ ಅಮೆಜಾನ್‌ನಲ್ಲಿ 1.25 ಕೋಟಿ ರೂಪಾಯಿ ಪ್ಯಾಕೇಜ್‌, ಪಾಲಕ್ ಮಿತ್ತಲ್ ಮತ್ತು  ಅನುರಾಗ್ ಮಕಾಡೆ  ಅಮೆಜಾನ್ ಬರ್ಲಿನ್-ಡಬ್ಲಿನ್‌ನಲ್ಲಿ 1.2 ಕೋಟಿ ರೂಪಾಯಿ ಪ್ಯಾಕೇಜ್‌ನಲ್ಲಿ ಉದ್ಯೋಗ ಆಫರ್‌ಗಳನ್ನು ಪಡೆದಿದ್ದಾರೆ.

Tap to resize

Latest Videos

ಇದನ್ನೂ ಓದಿ: ಪಿಎಚ್‌ಡಿ ಅಭ್ಯರ್ಥಿಗಳಿಗೆ ಗೂಗಲ್ ಇಂಡಿಯಾ ಫೆಲೋಶಿಪ್!

ಟ್ರಿಪಲ್ ಐಟಿ ಪ್ರಯಾಗ್‌ರಾಜ್‌ನ ತರಬೇತಿ ಮತ್ತು ನಿಯೋಜನೆ ಅಧಿಕಾರಿ ಡಾ.ವಿನೀತ್ ತಿವಾರಿ ಮಾತನಾಡಿ, ಈ ಬಾರಿ 226 ಕಂಪನಿಗಳು ಪ್ಲೇಸ್‌ಮೆಂಟ್‌ಗಳಲ್ಲಿ ಭಾಗವಹಿಸಿದ್ದವು. ಬಿ.ಟೆಕ್ ನ 328 ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು ದೇಶ ವಿದೇಶಗಳ ಪ್ರಮುಖ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

250 ವಿದ್ಯಾರ್ಥಿಗಳ ಪ್ಲೆಸ್‌ಮೆಂಟ್:  ಅಮೆಜಾನ್ ಮತ್ತು ಗೂಗಲ್‌ನಂತಹ ಕಂಪನಿಗಳನ್ನು ಹೊರತುಪಡಿಸಿ, ಫೇಸ್‌ಬುಕ್‌ನಂತಹ ಅನೇಕ ಕಂಪನಿಗಳಲ್ಲಿ, 250 ವಿದ್ಯಾರ್ಥಿಗಳು ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚು ಪ್ಯಾಕೇಜ್‌ನಲ್ಲಿ ಉದ್ಯೋಗವನ್ನು ಪಡೆದಿದ್ದಾರೆ. ಟ್ರಿಪಲ್ ಐಟಿ ಪ್ರಯಾಗರಾಜ್‌ನ ವಿದ್ಯಾರ್ಥಿಗಳಿಗೆ ಸರಾಸರಿ ವೇತನ ಪ್ಯಾಕೇಜ್ ₹ 20 ಲಕ್ಷಗಳು ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಿದ್ಯಾರ್ಥಿಗಳ ಸರಾಸರಿ ವೇತನ ಪ್ಯಾಕೇಜ್ 40% ಹೆಚ್ಚಾಗಿದೆ.

ಟ್ರಿಪಲ್ ಐಟಿ ಪ್ರಯಾಗ್‌ರಾಜ್‌ನ ವಿದ್ಯಾರ್ಥಿಗಳ ನೇಮಕಾತಿ ಬಗ್ಗೆ ನಾವು ಮಾತನಾಡಿದರೆ, 75% ಎಂಬಿಎ ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲಿ ಪ್ಲೇಸ್‌ಮೆಂಟ್ ಪಡೆದಿದ್ದಾರೆ. ಎಂಬಿಎ ವಿದ್ಯಾರ್ಥಿಗಳಿಗೆ ₹ 35 ಲಕ್ಷದ ಅದ್ಭುತ ಪ್ಯಾಕೇಜ್ ಸಿಕ್ಕಿದೆ. ಎಂಬಿಎ ವಿದ್ಯಾರ್ಥಿಗಳು ಏರ್‌ಟೆಲ್, ಇಂಪ್ಯಾಕ್ಟ್ ಗುರು, ರುದ್ರಾಕ್ಷಿ ಟೆಕ್ನಾಲಜೀಸ್ ಮತ್ತು ಯಂಗ್‌ನಂತಹ ಕಂಪನಿಗಳಿಂದ ಪ್ಲೇಸ್‌ಮೆಂಟ್ ಆಫರ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ಓಲಾ ಝೊಮ್ಯಾಟೋದಲ್ಲಿ ದುಡಿಯುತ್ತ ಸಾಫ್ಟವೇರ್ ಇಂಜಿನಿಯರ್ ಆದ ಯುವಕ

ಐಐಐಟಿ ಪ್ರಯಾಗ್‌ರಾಜ್‌ನ ಎಂಟೆಕ್‌ನ 161 ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಈ ಹಿಂದೆ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಬಿ.ಟೆಕ್ ಅಂತಿಮ ವರ್ಷದ ವಿದ್ಯಾರ್ಥಿ ಲೋಕೇಶ್ ರಾಜ್ ಸಿಂಘಿ ವಾರ್ಷಿಕ ₹ 1.16 ಕೋಟಿ ಪ್ಯಾಕೇಜ್ ಪಡೆದಿದ್ದರು. ಅಮೆಜಾನ್ ವೆಬ್ ಸೇವೆಗಳು ಸಿಂಘಿಗೆ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಕೆಲಸ ಮಾಡಲು ಈ ಕೆಲಸವನ್ನು ನೀಡಿತು. ಓದು ಮುಗಿಯುವ ಮುನ್ನವೇ ಲೋಕೇಶ್‌ಗೆ ತಮ್ಮ ಸಂಸ್ಥೆಯ ಪ್ರಾಧ್ಯಾಪಕರಿಗಿಂತ 4 ಪಟ್ಟು ಹೆಚ್ಚು ಸಂಬಳದಲ್ಲಿ ಉದ್ಯೋಗಾವಕಾಶ ಸಿಕ್ಕಿತ್ತು.

click me!