ಬೋಳುತಲೆ ಎಂದು ಕೆಲಸ ತೊರೆಯುವಂತೆ ಒತ್ತಡ: ಸಂಸ್ಥೆಯಿಂದ 71 ಲಕ್ಷ ಪರಿಹಾರ ಗೆದ್ದ ಉದ್ಯೋಗಿ

By BK AshwinFirst Published Feb 13, 2023, 7:14 PM IST
Highlights

ಮಾರ್ಕ್ ಜೋನ್ಸ್ ಕಂಪನಿಯಲ್ಲಿ 2 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಮೊದಲು ಅವರನ್ನು ಸಂಸ್ಥೆಯಿಂದ ತೆಗೆದುಹಾಕಲು ಇಬ್ಬರು ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವುದಾಗಿ ಉನ್ನತ ಅಧಿಕಾರಿಗೆ ತಿಳಿಸಿದರು ಎಂದೂ ತಿಳಿದುಬಂದಿದೆ.

ಲಂಡನ್‌ (ಫೆಬ್ರವರಿ 13, 2023): ಇತ್ತೀಚೆಗೆ ಕೆಲ ತಿಂಗಳಿಂದ ಕಂಪನಿಯ ಉದ್ಯೋಗಿಗಳನ್ನು ನಾನಾ ಕಾರಣ ನೀಡಿ ತೆಗೆದುಹಾಕಲಾಗುತ್ತಿದೆ. ಆರ್ಥಿಕ ಹಿಂಜರಿತ, ಅಗತ್ಯಕ್ಕಿಂತ ಹೆಚ್ಚು ನೇಮಕಾತಿ, ಸಂಸ್ಥೆಯಲ್ಲಿ ನಷ್ಟ, ಹಣದುಬ್ಬರ ಹೆಚ್ಚಳ - ಹೀಗೆ ನಾನಾ ಕಾರಣ ನೀಡಲಾಗುತ್ತಿದೆ. ಆದರೆ, ಇಲ್ಲೊಬ್ಬರಿಗೆ ಬೋಳು ತಲೆ ಎಂಬ ಕಾರಣ ನೀಡಿ ಕೆಲಸ ಬಿಡುವಂತೆ ಒತ್ತಾಯಿಸಲಾಗತ್ತಂತೆ.ಕೂದಲಿದ್ದರೂ ಸಹ ಬೋಳು ತಲೆಯ 50 ವರ್ಷಕ್ಕಿಂತ ಹೆಚ್ಚು ವ್ಯಕ್ತಿ ನಮಗೆ ಬೇಡ ಎಂದು ಕಂಪನಿಯ ಬಾಸ್‌ ಹೇಳಿದ್ದರಂತೆ. 61 ವರ್ಷ ವಯಸ್ಸಿನ ಸೇಲ್ಸ್‌ ನಿರ್ದೇಶಕರು ಈ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದು, ನಂತರ ಸಂಸ್ಥೆಯ ಬಾಸ್‌ ತಾರತಮ್ಯ ಹಿನ್ನೆಲೆ ಕೋರ್ಟ್‌ನಲ್ಲಿ ಬರೋಬ್ಬರಿ 71 ಲಕ್ಷ ರೂ. ಪರಿಹಾರವನ್ನೂ ಗೆದ್ದಿದ್ದಾರೆ. 

ಮಾರ್ಕ್ ಜೋನ್ಸ್ (Mark Jones) ಅವರು ತಮ್ಮ ವರ್ಷಕ್ಕೆ 60 ಸಾವಿರ ಪೌಂಡ್‌ ಸಂಬಳದ (Salary) ಕೆಲಸ ತೊರೆಯುವಂತೆ ಮಾಡಿದ ಲೀಡ್ಸ್-ಆಧಾರಿತ ಟ್ಯಾಂಗೋ ನೆಟ್‌ವರ್ಕ್ (Tango Network) ಮೊಬೈಲ್‌ ಫೋನ್‌ (Mobile Phone) ಸಂಸ್ಥೆಯ (Company) ವಿರುದ್ಧ ನ್ಯಾಯಮಂಡಳಿಯ ಮೊರೆ ಹೋಗಿ ಗೆದ್ದುಬಂದಿದ್ದಾರೆ. ಅಲ್ಲದೆ, 71 ಲಕ್ಷ ರೂ. ಪರಿಹಾರವನ್ನೂ ಪಡೆದುಕೊಂಡಿದ್ದಾರೆ. 

ಇದನ್ನು ಓದಿ: ಇನ್ಫೋಸಿಸ್‌‌ನಲ್ಲಿ ಉದ್ಯೋಗ ಕಡಿತ, ಪರೀಕ್ಷೆ ಪಾಸ್ ಮಾಡದ 100ಕ್ಕೂ ಹೆಚ್ಚು ಹೊಸಬರ ವಜಾ!

ಲೀಡ್ಸ್ ಕೋರ್ಟ್ ಮ್ಯಾನೇಜರ್ ಫಿಲಿಪ್ ಹೆಸ್ಕೆತ್ (Philip Hesketh), ಸ್ವತಃ ಬೋಳು ತಲೆಯ (Bald Head) ಮಧ್ಯವಯಸ್ಕ ವ್ಯಕ್ತಿಯಾಗಿದ್ದು, ಅವರು ತನ್ನ ಹಾಗೆ ಬೋಳು ತಲೆಯ ಉದ್ಯೋಗಿಗಳನ್ನು ಬಯಸುವುದಿಲ್ಲ ಎಂದು ಹೇಳಿದ್ದರಂತೆ. ನಾನು ಬೋಳು ತಲೆಯ 50 ವರ್ಷ ವಯಸ್ಸಿನ ಪುರುಷರ ತಂಡವನ್ನು ಬಯಸುವುದಿಲ್ಲ. ನಾನು ಡೈನಾಮಿಕ್ಸ್ ಅನ್ನು ಬದಲಾಯಿಸಲು ಬಯಸುತ್ತೇನೆ ಎಂದು ಅವರು ಹೇಳಿದರು. ಬದಲಾಗಿ, ಬಾಸ್ ಉದ್ಯೋಗಕ್ಕಾಗಿ "ಶಕ್ತಿಯುತ" ಮತ್ತು "ಯುವ" ಅಭ್ಯರ್ಥಿಗಳನ್ನು ಬಯಸಿದ್ದರು ಎಂದೂ ತಿಳಿದುಬಂದಿದೆ. 

ಇನ್ನು, 61 ವರ್ಷದ ಮಾರ್ಕ್‌ ಜೋನ್ಸ್‌ ತಲೆ ಕೂದಲನ್ನು ಹೊಂದಿದ್ದರೂ ಸಹ ವಯಸ್ಸಾದ ಕಾರಣ ತನ್ನನ್ನು ಕಂಪನಿಯಿಂದ ತೆಗೆಯುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ಪಟ್ಟುಕೊಂಡಿದ್ದಾರೆ. ಅಲ್ಲದೆ, ತಾನು 2 ವರ್ಷಗಳ ಕಾಲ ಟ್ಯಾಂಗೋದಲ್ಲಿದ್ದರೆ, ಉದ್ಯೋಗದ ಹಕ್ಕುಗಳನ್ನು ಪಡೆಯುತ್ತಿದ್ದೆ. ಆದರೆ ಒಂದು ವರ್ಷ ಅಲ್ಲಿದ್ದ ತನ್ನನ್ನು ತೆಗೆದುಹಾಕುವ ಯತ್ನ ನಡೆಯುತ್ತಿದೆ ಎಂದು ಭಾವಿಸಿದ್ದಾರೆ. 

ಇದನ್ನೂ ಓದಿ : ಝೂಮ್‌ ಕಂಪನಿಯಲ್ಲಿ 1,300 ಜನರ ವಜಾ : ಶೇ. 98 ರಷ್ಟು ವೇತನ ಕಡಿತಗೊಳಿಸಿಕೊಂಡ ಸಿಇಒ

ಅಲ್ಲದೆ, ಮಾರ್ಕ್‌ ಜೋನ್ಸ್‌ನನ್ನು ಕಂಪನಿಯಿಂದ ತೆಗೆದುಹಾಕಲು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ನೆಪವನ್ನೂ ಒಡ್ಡಿದ್ದಾರೆ ಎಂದು ಮಾರ್ಕ್‌ ಜೋನ್ಸ್ ಟ್ರಿಬ್ಯೂನಲ್‌ನಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ದೂರು ನೀಡುವ ಮುನ್ನ ಸಂಸ್ಥೆಗೆ ರಾಜೀನಾಮೆ ನೀಡಿ ಬಳಿಕ ಕಾನೂನು ಕ್ರಮ ಪ್ರಾರಂಭಿಸಿದ್ದಾರೆ. 

ಫಿಲಿಪ್ ಹೆಸ್ಕೆತ್ ಅವರು ಮಾರ್ಕ್‌ ಜೋನ್ಸ್‌ ಅವರು ಡೈನಾಮಿಕ್‌ ಅಲ್ಲ ಎಂದು ಗ್ರಹಿಸಿದ್ದು ಮತ್ತು ಅವರು ಹೆಚ್ಚು ಕ್ರಿಯಾತ್ಮಕ ಜನರನ್ನು ಕಿರಿಯ ಜನರ ಗುಣಲಕ್ಷಣಗಳೊಂದಿಗೆ ಸಂಯೋಜಿಸಿದ್ದಾರೆ ಎಂದು ನ್ಯಾಯಮಂಡಳಿ ಈ ವಾರ ಅಭಿಪ್ರಾಯಪಟ್ಟಿದೆ. ಅಲ್ಲದೆ, ಮಾರ್ಕ್‌ ಜೋನ್ಸ್‌ ಅವರು ಶಿಫಾರಸು ಮಾಡಿದ್ದ 57 ವರ್ಷ ವಯಸ್ಸಿನ ಅಭ್ಯರ್ಥಿಯನ್ನು ತಿರಸ್ಕರಿಸಿ 40ರ ಹರೆಯದ ಇಬ್ಬರನ್ನು ಸಂದರ್ಶನ ಪ್ರಕ್ರಿಯೆ ಮಾಡಿ ನೇಮಕ ಮಾಡಿಕೊಳ್ಳಲಾಗಿದೆ ಎಂಬುದು ಬಹಿರಂಗವಾಗಿದೆ. 

ಇದನ್ನು ಓದಿ: Layoff: ಕಂಪನಿಯ ಶೇ. 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಶೇರ್‌ಚಾಟ್‌..!

ಇಷ್ಟೇ ಅಲ್ಲದೆ, ಡಿಸೆಂಬರ್ 18, 2020 ರಂದು, ಫಿಲಿಪ್ ಹೆಸ್ಕೆತ್ ಅವರು ಮಾರ್ಕ್ ಜೋನ್ಸ್ ಕಂಪನಿಯಲ್ಲಿ 2 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಮೊದಲು ಅವರನ್ನು ಸಂಸ್ಥೆಯಿಂದ ತೆಗೆದುಹಾಕಲು ಇಬ್ಬರು ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವುದಾಗಿ ಉನ್ನತ ಅಧಿಕಾರಿಗೆ ತಿಳಿಸಿದರು ಎಂದೂ ತಿಳಿದುಬಂದಿದೆ. ಬಳಿಕ ಪ್ಯಾನಿಕ್ ಅಟ್ಯಾಕ್ ಅನುಭವಿಸಿ ಒತ್ತಡದಿಂದ ಸಹಿ ಹಾಕಿದ್ದಾರೆ ಮಾರ್ಕ್‌ ಜೋನ್ಸ್‌. 

ಆದರೆ ಮಾರ್ಚ್‌ನಲ್ಲಿ ಕಂಪನಿಯ ವಿರುದ್ಧ ಕಾನೂನು ಮೊಕದ್ದಮೆಯನ್ನೂ ಹಾಕಿದ್ದಾರೆ. ಈ ಹಿನ್ನೆಲೆ 71 ಲಕ್ಷ ರೂ. ಮೊತ್ತದ ಪರಿಹಾರವನ್ನು ಪಡೆದುಕೊಂಡಿದ್ದಾರೆ 61 ವರ್ಷ ವಯಸ್ಸಿನ ಮಾರ್ಕ್‌ ಜೋನ್ಸ್‌.

ಇದನ್ನೂ ಓದಿ: ಮೈಕ್ರೋಸಾಫ್ಟ್‌ನಿಂದ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ವಜಾ: ಟೆಕ್‌ ಸಂಸ್ಥೆಗಳಿಂದ ದಿನಕ್ಕೆ 1,600 ಸಿಬ್ಬಂದಿಗೆ ಗೇಟ್‌ಪಾಸ್..!

click me!