ಜಾಬ್‌ ಕಟ್‌ ನಡುವೆ ಭಾರತದಲ್ಲಿ 20 ಸಾವಿರ ಉದ್ಯೋಗಿಗಳ ನೇಮಕ ಘೋಷಿಸಿದ ಟೆಕ್‌ ದೈತ್ಯ ಒರಾಕಲ್‌!

By Santosh Naik  |  First Published Aug 12, 2024, 5:03 PM IST

ಇಂಟೆಲ್‌, ಡೆಲ್‌ನಂಥ ಜಾಗತಿಕ ದೈತ್ಯ ಕಂಪನಿಗಳು ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡುತ್ತಿರುವ ಹೊತ್ತಿನಲ್ಲಿ ಜಾಗತಿಕ ದೈತ್ಯ ಟೆಕ್‌ ಕಂಪನಿ ಒರಾಕಲ್‌ ಭಾರತದಲ್ಲಿ 20 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡುವ ನಿರ್ಧಾರ ಮಾಡಿದೆ.


ಮುಂಬೈ (ಆ.12): ಜಗತ್ತಿನ ಪ್ರಮುಖ ಕಂಪನಿಗಳು ಜಾಬ್‌ ಕಟ್‌ ಘೋಷಣೆ ಮಾಡಿದೆ. ಅಮೇಜಾನ್‌, ಫೇಸ್‌ಬುಕ್‌, ಗೂಗಲ್‌ ಈಗಾಗಲೇ ಒದು  ಹಂತದ ಜಾಬ್‌ ಕಟ್‌ ಪ್ರಕ್ರಿಯೆ ಮುಗಿಸಿದ್ದರೆ, ಇಂಟೆಲ್‌ ಹಾಗೂ ಡೆಲ್‌ ಕಂಪನಿಗಳು ಕೂಡ ವರ್ಕ್‌ಫೋರ್ಸ್‌ಅನ್ನು ಇಳಿಸುವ ನಿರ್ಧಾರ ಮಾಡಿದೆ. ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಜಾಗತಿಕ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಕಂಪನಿ ಒರಾಕಲ್ ಭಾರತದಲ್ಲಿ ತನ್ನ ಉದ್ಯೋಗಿಗಳ ಪ್ರಮಾಣವನ್ನು ಹೆಚ್ಚಳ ಮಾಡುವ ನಿರ್ಧಾರ ಮಾಡಿದೆ. ಭಾರತದಲ್ಲಿ ಈಗ ಇರುವ ಉದ್ಯೋಗಿಗಳಿಗೆ ಇನ್ನೂ 20 ಸಾವಿರ ಹೊಸ ಉದ್ಯೋಗಿಗಳನ್ನು ಸೇರಿಸುವ ಸಾಧ್ಯತೆ ಇದೆ. ಉನ್ನತ ಪ್ರತಿಭೆಗಳನ್ನು ಆಕರ್ಷಿಸಲು, ಹೊಸತನವನ್ನು ಹೆಚ್ಚಿಸಲು ಮತ್ತು ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವ ಗುರಿಯೊಂದಿಗೆ 20 ಸಾವಿರ ಉದ್ಯೋಗಿಗಳ ನೇಮಕ ಮಾಡುವುದಾಗಿ ತಿಳಿಸಿದೆ.

ಒರಾಕಲ್‌ನ ಈ ಡೊಮೇನ್‌ಗಳಿಗೆ ಉದ್ಯೋಗಿಗಳ ನೇಮಕ:
ಸಾಫ್ಟ್‌ವೇರ್ ಡೆವಲಪ್‌ಮೆಂಟ್‌ ಮತ್ತು ಎಂಜಿನಿಯರಿಂಗ್:
ಒರಾಕಲ್ ಸಾಫ್ಟ್‌ವೇರ್ ಡೆವಲಪರ್‌ಗಳು, ಎಂಜಿನಿಯರ್‌ಗಳು ಮತ್ತು ಸಿಸ್ಟಮ್ ಟೆಸ್ಟರ್‌ಗಳನ್ನು ಹುಡುಕುತ್ತಿದೆ. ನೀವು Linux, ಡೇಟಾಬೇಸ್‌ಗಳು, ಅಪ್ಲಿಕೇಶನ್‌ಗಳು ಅಥವಾ ನೆಟ್‌ವರ್ಕ್‌ಗಳ ಬಗ್ಗೆ ಆಸಕ್ತಿ ಹೊಂದಿದ್ದರೆ, ನೀವು ಈ ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸಬಹುದು.

Tap to resize

Latest Videos

undefined

ಪ್ರೊಡಕ್ಷನ್ ಸಾಫ್ಟ್‌ವೇರ್ ಎಂಜಿನಿಯರ್‌ಗಳು: ಬೆಂಗಳೂರು ಮತ್ತು ಅದರಾಚೆ ಇರುವ ಪ್ರೊಡಕ್ಷನ್ ಸಾಫ್ಟ್‌ವೇರ್ ಎಂಜಿನಿಯರ್‌ಗಳ ತಂಡವನ್ನು ಸೇರುವ ಅವಕಾಶವೂ ಇದೆ. ಒರಾಕಲ್‌ನ ಕ್ಲೌಡ್ ಸಲ್ಯೂಷನ್‌ಗಳನ್ನು ಬಲಪಡಿಸುವ ತಂತ್ರಜ್ಞಾನಗಳಿಗೆ ಕೊಡುಗೆ ನೀಡಲು ಸಾಧ್ಯ ಎನ್ನುವವರು ಅರ್ಜಿ ಸಲ್ಲಿಕೆ ಮಾಡಬಹುದು.

ವಿದ್ಯಾರ್ಥಿ ಮತ್ತು ಇತ್ತೀಚಿನ ಪದವೀಧರರಿಗೆ: ನೀವು ವಿದ್ಯಾರ್ಥಿ ಅಥವಾ ಇತ್ತೀಚಿನ ಪದವೀಧರರಾಗಿದ್ದರೆ, ಒರಾಕಲ್ ನಿಮ್ಮ ವೃತ್ತಿಜೀವನವನ್ನು ಕಿಕ್‌ಸ್ಟಾರ್ಟ್ ಮಾಡಲು ಅವಕಾಶ ನೀಡುತ್ತಿದೆ. ನಿಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ, ಪ್ರಾಯೋಗಿಕ ಅನುಭವವನ್ನು ಪಡೆಯಿರಿ ಮತ್ತು ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.

ಅರ್ಜಿ ಸಲ್ಲಿಸುವುದು ಹೇಗೆ: ಒರಾಕಲ್ ಇಂಡಿಯಾದ ಕೆರಿಯರ್ ಪುಟದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.  ಒರಾಕಲ್‌ನ ಲಿಂಕ್ಡ್‌ಇನ್ ಪುಟ ಮತ್ತು ಇತರ ಜಾಬ್ ಪೋರ್ಟಲ್‌ಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಅನ್ವೇಷಿಸಬಹುದು.

ಒರಾಕಲ್‌ನಲ್ಲಿ ಆಗಿರುವ ಬೆಳವಣಿಗೆಗಳು: ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಜೆನ್ ಎಐ) ಬೆಳವಣಿಗೆಯ ಮಧ್ಯೆ, ಯುಎಸ್ ಮೂಲದ ಟೆಕ್ ದೈತ್ಯ ಒರಾಕಲ್ ಭಾರತದಲ್ಲಿ ತನ್ನ ಹೂಡಿಕೆಗಳನ್ನು ಹೆಚ್ಚಿಸಲು ಯೋಜಿಸಿದೆ, ಎಐ ಮತ್ತು ಡೇಟಾದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. Oracle ತನ್ನ ಸಾಫ್ಟ್‌ವೇರ್-ಆಸ್-ಎ-ಸೇವೆ (SaaS) ಅಪ್ಲಿಕೇಶನ್‌ಗಳು, AI ಸೇವೆಗಳು, ಡೇಟಾ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿಯಲ್ಲಿದೆ.

ಅಮೆರಿಕದಲ್ಲಿ 75,000 ಕೋಟಿ ಸಾಮ್ರಾಜ್ಯ ನಿರ್ಮಿಸಿದ ಭಾರತೀಯ ಮಹಿಳೆ: ಕನಸಿನ ಉದ್ಯೋಗ ತೊರೆದು ಸ್ವಂತ ಕಂಪನಿ ಸ್ಥಾಪನೆ!

"Oracle ಕಂಪನಿ AI ಅನ್ನು ಸಾಫ್ಟ್‌ವೇರ್-ಆಸ್-ಸೇವೆ (SaaS) ಅಪ್ಲಿಕೇಶನ್‌ಗಳು, AI ಸೇವೆಗಳು, ಡೇಟಾ ಮತ್ತು ಮೂಲಸೌಕರ್ಯದಲ್ಲಿ ತರಲು ಉದ್ದೇಶಿಸಿದೆ" ಎಂದು ಒರಾಕಲ್ ಜಪಾನ್ ಮತ್ತು ಏಷ್ಯಾ ಪೆಸಿಫಿಕ್‌ನಲ್ಲಿ ತಂತ್ರಜ್ಞಾನ ಮತ್ತು ಗ್ರಾಹಕ ಕಾರ್ಯತಂತ್ರದ ಹಿರಿಯ ವಿಪಿ ಕ್ರಿಸ್ ಚೆಲ್ಲಿಯಾ ಹೇಳಿದ್ದಾರೆ. ಅದರೊಂದಿಗೆ ತನ್ನ ಪ್ರಮುಖ ಕಾರ್ಯಗಳಲ್ಲಿ ಎಐ ಬಳಸಿಕೊಳ್ಳಲು ತೀರ್ಮಾನ ಮಾಡಿದೆ.

 

ಫೇಸ್‌ಬುಕ್, ಅಮೆಜಾನ್ ಬಳಿಕ ಒರಾಕಲ್‌ಗೂ ತಟ್ಟಿದ ಉದ್ಯೋಗ ಕಡಿತ, 3,000 ನೌಕರರಿಗೆ ಕೊಕ್!


 

click me!