ಐಟಿ ಕ್ಷೇತ್ರದಲ್ಲಿ ಅಲ್ಲೋಲ- ಕಲ್ಲೋಲ, ಏಳೇ ತಿಂಗಳಲ್ಲಿ 1.24 ಲಕ್ಷ ಟೆಕ್‌ ನೌಕರರು ಮನೆಗೆ!

By Kannadaprabha News  |  First Published Aug 6, 2024, 6:26 PM IST

ಐಟಿ ಕ್ಷೇತ್ರದಲ್ಲಿ ತಲ್ಲಣ ಮುಂದುವರಿದಿದ್ದು, ಜುಲೈನಲ್ಲಿ 34 ಕಂಪನಿಗಳ ಸುಮಾರು 8 ಸಾವಿರ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕಳೆದ ಜನವರಿಯಿಂದ ಉದ್ಯೋಗ ಕಳೆದುಕೊಂಡ ಟೆಕಿಗಳ ಸಂಖ್ಯೆ 1.24 ಲಕ್ಷಕ್ಕೆ ಏರಿಕೆಯಾಗಿದೆ.


ನವದೆಹಲಿ (ಆ.6): ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ತಲ್ಲಣ ಮುಂದುವರಿದಿದ್ದು, ಜುಲೈನಲ್ಲಿ 34 ಕಂಪನಿಗಳ ಸುಮಾರು 8 ಸಾವಿರ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕಳೆದ ಜನವರಿಯಿಂದ ಉದ್ಯೋಗ ಕಳೆದುಕೊಂಡ ಟೆಕಿಗಳ ಸಂಖ್ಯೆ 1.24 ಲಕ್ಷಕ್ಕೆ ಏರಿಕೆಯಾಗಿದೆ. ಈ ನೌಕರರು ವಿಶ್ವಾದ್ಯಂತ ಇರುವ 384 ವಿವಿಧ ಕಂಪನಿಗಳಿಗೆ ಸೇರಿದವರಾಗಿದ್ದಾರೆ.

ಇಂಟೆಲ್‌ ಕಂಪನಿ 1500, ಮೈಕ್ರೋಸಾಫ್ಟ್‌ 1000, ಅಮೆರಿಕ ಮೂಲದ ಯುಕೆಜಿ ಕಂಪನಿ 2200, ಅಮೆರಿಕದ ಇನ್‌ಟ್ಯೂಟ್‌ 1800, ಬ್ರಿಟನ್‌ನ ಡೈಸನ್‌ 1000, ಬೆಂಗಳೂರು ಮೂಲದ ರೇಶಾಮಂಡಿ ತನ್ನ ಶೇ.80, ಪಾಕೆಟ್‌ಎಫ್‌ಎಂ 200, ಅನ್‌ಅಕಾಡೆಮಿ 250, ಚೆನ್ನೈನ ವೇ ಕೂಲ್‌ 200, ಬಂಗೀ ಕಂಪನಿ 220 ನೌಕರರನ್ನು ತೆಗೆದು ಹಾಕಿವೆ. ಇನ್ನಷ್ಟು ಕಂಪನಿಗಳು ವೆಚ್ಚ ಕಡಿತ ಉದ್ದೇಶದಿಂದ ಮುಂಬರುವ ತಿಂಗಳುಗಳಲ್ಲಿ ಸ್ವಯಂ ನಿವೃತ್ತಿ ಸೌಲಭ್ಯ ಕೊಡುವ ಚಿಂತನೆಯಲ್ಲಿವೆ ಎಂದು ವರದಿಗಳು ತಿಳಿಸಿವೆ.

Tap to resize

Latest Videos

undefined

Instagram ರೀಲ್ಸ್ ನಿಂದ ಲಕ್ಷ ಸಂಪಾದನೆ ಮಾಡುವುದು ಹೇಗೆ?

ಜಿಎಸ್ಟಿ ನೋಟಿಸ್‌ ಹಿಂದಕ್ಕೆ ಪಡೆಯಲಾಗಿದೆ: ಇನ್ಫೋಸಿಸ್‌
 ಭಾರತದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಇನ್ಫೋಸಿಸ್‌ಗೆ 32,403 ಕೋಟಿ ರು. ತೆರಿಗೆ ಕಟ್ಟುವಂತೆ ಕರ್ನಾಟಕದ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ನೀಡಿದ್ದ ನೋಟಿಸ್‌ ಹಿಂಪಡೆದುಕೊಳ್ಳಲಾಗಿದೆ ಎಂದು ಗುರುವಾರ ಇನ್ಫೋಸಿಸ್‌ ಹೇಳಿದೆ.

ಈ ಬಗ್ಗೆ ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಇನ್ಫಿ,‘ಕರ್ನಾಟಕ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ನೀಡಿದ್ದ ಪೂರ್ವ ಶೋಕಾಸ್‌ ನೋಟಿಸ್‌ನನ್ನು ಅಧಿಕಾರಿಗಳು ಹಿಂಪಡೆದುಕೊಂಡಿದ್ದಾರೆ. ಜೊತೆಗೆ ಡಿಜಿಜಿಐನ ಕೇಂದ್ರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಕಂಪನಿಗೆ ಮಾಹಿತಿ ನೀಡಿದೆ’ ಎಂದು ಹೇಳಿದೆ.

ವಿರೋಧಿಗಳಿಗೆ ದುಃಸ್ವಪ್ನವಾಗಿರುವ ಕ್ರಿಕೆಟಿಗ ಶಮಿ ಆಸ್ತಿ ಮೌಲ್ಯ, ವೇತನ, ಫಾರ್ಮ್ ಹೌಸ್‌ ಎಷ್ಟು ಎಕರೆಯಲ್ಲಿದೆ?

ಇನ್ಫಿಗೆ ನೋಟಿಸ್‌- ನ್ಯಾಸ್ಕಾಂ ಆಕ್ಷೇಪ:
ಇನ್ಫೋಸಿಸ್‌ಗೆ 32 ಸಾವಿರ ಕೋಟಿ ತೆರಿಗೆ ಕಟ್ಟುವಂತೆ ಕರ್ನಾಟಕ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ನೀಡಿದ್ದ ನೋಟಿಸ್‌ಗೆ ಗುರುವಾರ ಐಟಿ ಕಂಪನಿಗಳ ಒಕ್ಕೂಟ ನ್ಯಾಸ್ಕಾಂ ಆಕ್ಷೇಪ ವ್ಯಕ್ತಪಡಿಸಿತ್ತು. ಇಂಥ ನೋಟಿಸ್‌ಗಳು ಕಂಪನಿಗಳನ್ನು ಆತಂಕ್ಕೆ ದೂಡುತ್ತವೆ ಎಂದು ಕಳವಳ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಡಿಜಿಜಿಐ ನೋಟಿಸ್‌ ಹಿಂಪಡೆದುಕೊಂಡಿದೆ.

ಟ್ಯಾಕ್ಸ್‌ ಟೆರರಿಸಂ- ಮೋಹನ್‌ದಾಸ್‌ ಪೈ:
ಇನ್ಫೋಸಿಸ್‌ಗೆ ಜಿಎಸ್‌ಟಿ ಅಧಿಕಾರಿಗಳು ನೀಡಿದ್ದ ನೋಟಿಸ್‌ಗೆ ಆಕ್ಷೇಪ ವ್ಯಕ್ತಪಡಿಸಿದ ಪದ್ಮ ಪ್ರಶಸ್ತಿ ವಿಜೇತ ಮೋಹನ್‌ ದಾಸ್‌ ಪೈ,‘ಇದು ಟ್ಯಾಕ್ಸ್‌ ಟೆರರಿಸಂ’ ಎಂದು ಕಿಡಿಕಾರಿದ್ದರು.

click me!