
ಕೊರೊನಾ ನಂತ್ರ ವರ್ಕ್ ಫ್ರಂ ಹೋಮ್ (Work from home) ಜಾಬ್ ಹೆಚ್ಚು ಪ್ರಸಿದ್ಧಿಗೆ ಬಂದಿತ್ತು. ಅನೇಕರು ವರ್ಕ್ ಫ್ರಮ್ ಹೋಮ್ ಜಾಬ್ ಹುಡುಕಾಟ ನಡೆಸ್ತಿದ್ರು. ರಿಮೋಟ್ ಮತ್ತು ಹೈಬ್ರಿಡ್ ಕೆಲಸ (hybrid job)ಗಳಲ್ಲಿ ಉದ್ಯೋಗದ ಭವಿಷ್ಯವಿದೆ ಅಂತ ನಂಬಲಾಗಿತ್ತು. ಆದ್ರೆ ಈಗ ಅಚ್ಚರಿಯ ಬೆಳವಣಿಗೆ ಆಗ್ತಿದೆ. ಜೆನ್ ಜೀ (Gen Z)ಗಳು ಮನೆಯಲ್ಲಿ ಕುಳಿತು ಕೆಲ್ಸ ಮಾಡೋದನ್ನು ಇಷ್ಟಪಡ್ತಿಲ್ಲ. ಅಮೆಜಾನ್ ಹಾಗೂ ಟೆಸ್ಕೋದಂತಹ ಕಂಪನಿಗಳು ಸಂಸ್ಕೃತಿ ಮತ್ತು ಕನೆಕ್ಟಿವಿಟಿ ಹೆಸರಿನಲ್ಲಿ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ತಿದೆ. ಆದ್ರೆ ಒತ್ತಾಯದ ಮೂಲಕ ಈ ಕೆಲ್ಸ ನಡೀತಿಲ್ಲ. ಹೊಸ ಸಂಶೋಧನೆ ಪ್ರಕಾರ, ಕಚೇರಿಗೆ ಬನ್ನಿ ಅಂತ ಕಂಪನಿ ಹೇಳೋ ಬದಲು ಕಚೇರಿಗೆ ಬರಲು ಉದ್ಯೋಗಿಗಳೇ ಹೆಚ್ಚು ಆಸಕ್ತಿ ತೋರ್ತಿದ್ದಾರೆ. ಬುಪಾ ಸಮೀಕ್ಷೆ 8,000 ಬ್ರಿಟಿಷ್ ಉದ್ಯೋಗಿಗಳ ಮೇಲೆ ನಡೆದಿದೆ. ಅದ್ರಲ್ಲಿ ಶೇಕಡಾ 45 ರಷ್ಟು ಉದ್ಯೋಗಿಗಳು, ವ್ಯಕ್ತಿಗತ ಸಂಪರ್ಕ ಇರುವ ಉದ್ಯೋಗ ಹುಡುಕಲು ಬಯಸ್ತಿದ್ದಾರೆ. ಇದ್ರಲ್ಲಿ ಬಹುತೇಕರು ಜೆನ್ ಜೀಗಳು. ಶೇಕಡಾ 25 ರಷ್ಟು ಮಾತ್ರ ಹಳೆ ತಲೆಮಾರಿನ ಜನರು ಅಂತ ಸಂಶೋಧನಾ ವರದಿ ಹೇಳಿದೆ.
ಬರೀ ಕಚೇರಿ ಕೆಲ್ಸ ಮಾಡೋರು ಮಾತ್ರವಲ್ಲ ಇನ್ಫ್ಲುಯೆನ್ಸರ್ ಹೆಚ್ಚು ಒಂಟಿತನ ಎದುರಿಸುತ್ತಿದ್ದಾರೆಂಬ ಅಚ್ಚರಿಯ ವರದಿಯನ್ನು ಸಂಶೋಧನೆ ನೀಡಿದೆ. ಇನ್ಪ್ಲುಯೆನ್ಸರ್ ರಲ್ಲಿ ಅರ್ಧದಷ್ಟು ಜನರು ಒಂಟಿತನ ಎದುರಿಸ್ತಿದ್ದಾರಂತೆ. ಅಷ್ಟೇ ಅಲ್ದೆ ಮೂರರಲ್ಲಿ ಒಬ್ಬರು, ಇನ್ನು ಐದು ವರ್ಷದೊಳಗೆ ಫುಲ್ ಟೈಂ ಕೆಲ್ಸಕ್ಕೆ ಮತ್ತೆ ಸೇರುವ ಪ್ಲಾನ್ ಮಾಡ್ತಿದ್ದಾರೆ. ಅನೇಕ ರಿಮೋಟ್ ಕಂಟೆಂಟ್ ಕ್ರಿಯೇಟರ್ಸ್ ಮತ್ತು ಡಿಜಿಟಲ್ ಫ್ರೀಲ್ಯಾನ್ಸರ್ಗಳು ಹೆಚ್ಚಿನ ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ, ಲೈಫ್ ಎಂಜಾಯ್ ಮಾಡ್ತಾರೆ ಅಂತ ಅನೇಕರು ಅಂದ್ಕೊಂಡಿದ್ದಾರೆ. ಆದ್ರೆ ವರದಿ, ಎಲ್ಲರಿಗಿಂತ ಅವರೇ ಹೆಚ್ಚು ಒಂಟಿತನ ಅನುಭವಿಸ್ತಾರೆ ಎಂದಿದೆ.
ವರ್ಕ್ ಫ್ರಮ್ ಕಚೇರಿಯಲ್ಲಿ ಸಹೋದ್ಯೋಗಿಗಳ ಸಪೋರ್ಟ್ ಸಿಗುತ್ತೆ, ಅವ್ರ ಜೊತೆ ಕುಳಿತು ಊಟ ಮಾಡ್ಬಹುದು, ಬ್ರೇಕ್ ಟೈಂನಲ್ಲಿ ಹರಟೆ ಹೊಡೀತಾ ರಿಲ್ಯಾಕ್ಸ್ ಮಾಡ್ಬಹುದು, ಸ್ಪೇಷಲ್ ಸಂದರ್ಭದಲ್ಲಿ ಕಚೇರಿ ಕಲರ್ ಫುಲ್ ಆಗಿರುತ್ತೆ, ಕೆಲ್ಸದ ನಂತ್ರ ಸಂಜೆ ಸ್ನೇಹಿತರನ್ನು ಭೇಟಿಯಾಗ್ಬಹುದು ಅಂತ ಕೆಲ ಜೆಜ್ ಜೀಗಳು ತಮ್ಮ ಅಭಿಪ್ರಾಯ ಹಚ್ಚಿಕೊಂಡಿದ್ದಾರೆ.
ವರ್ಕ್ ಫ್ರಮ್ ಹೋಮ್ ನಿಂದ ಏನು ಕಳೆದುಕೊಳ್ತಿದೆ ಜೆನ್ ಜೀ : ಒಂಟಿತನದ ಜೊತೆ ಜೆನ್ ಜೀ ಉದ್ಯೋಗಿಗಳು ಮಾರ್ಗದರ್ಶನ, ವಿಸಿಬಿಲಿಟಿ, ಕಲಿಕೆಯ ಅವಕಾಶ ಹಾಗೂ ದೀರ್ಘಾವಧಿಯ ವೃತ್ತಿ ಅಭಿವೃದ್ಧಿಯನ್ನು ಅವರು ಮಿಸ್ ಮಾಡಿಕೊಳ್ತಿದ್ದಾರೆ. ಜೆನ್ ಜೀಗಳು ಹೈಬ್ರಿಡ್ ವರ್ಕನ್ನು ಹೆಚ್ಚು ಇಷ್ಟಪಡ್ತಾರೆ ಅಂತ ಅನೇಕ ವರದಿಗಳು ಹೇಳಿವೆ. ಇಲ್ಲಿ ಫ್ಲೆಕ್ಸಿಬಿಲಿಟಿ ಹಾಗೂ ಸಂವಹನ ಎರಡನ್ನೂ ಬ್ಯಾಲೆನ್ಸ್ ಮಾಡ್ಬಹುದು.
ಹೊಸ ಪೀಳಿಗೆ ಜನರು, ಕಚೇರಿ ಸ್ಥಳದ ಅರ್ಥವನ್ನು ಬದಲಿಸಲು ಬಯಸ್ತಾರೆ. ಕಚೇರಿ ಉದ್ಯೋಗಿಗಳ ಕಣ್ಗಾವಲಾಗಿ ಕೆಲ್ಸ ಮಾಡ್ಬಾರದು. ಉದ್ಯೋಗಿಗಳಿಗೆ ಸಪೋರ್ಟ್ ನೀಡುವ ಜೊತೆಗೆ ಉದ್ಯೋಗಿಗಳ ಬೆಳವಣಿಗೆಯ ಸ್ಥಳವಾಗಬೇಕು. ವರ್ಕ್ ಫ್ರಮ್ ಹೋಮ್ ಮಾಡುವ ಬಹುತೇಕ ಜನರಿಗೆ ಸರಿಯಾಗಿ ಮಾರ್ಗದರ್ಶನ ಸಿಗ್ತಿಲ್ಲ. ವೃತ್ತಿಯಲ್ಲಿ ಅಭಿವೃದ್ಧಿ ಕಷ್ಟವಾಗ್ತಿದೆ. ಸ್ನೇಹಿತರ ಕೊರತೆ ಕೂಡ ಎದ್ದು ಕಾಣ್ತಿದೆ.