AI, Chatgpt ಯುಗದಲ್ಲಿ ಕೆಲಸ ಉಳಿಸಿಕೊಳ್ಳೋದು ಹೇಗೆ? ಹೊಸ ಜಾಬ್‌ ಹುಡ್ಕೊಳೋದು ಹೇಗೆ?

Published : Aug 26, 2025, 01:59 PM IST
Job offfer

ಸಾರಾಂಶ

ಇಂದು ಎಐ ಯುಗದಲ್ಲಿದ್ದೇವೆ. ಸಾಕಷ್ಟು ಜನರ ಕೆಲಸವನ್ನು ಕೆಲವೇ ನಿಮಿಷಗಳಲ್ಲಿ ಎಐ ಮಾಡುತ್ತಿದೆ. ಈಗ ಉದ್ಯೋಗ ಉಳಿಸಿಕೊಳ್ಳುವುದು, ಹೊಸ ಜಾಬ್‌ ಪಡೆಯುವುದು ಕಷ್ಟ ಆಗಿದೆ. ಹಾಗಾದರೆ ಏನು ಮಾಡಬಹುದು? 

2025ರಲ್ಲಿ ನಾವು ಎಐ (ಕೃತಕ ಬುದ್ಧಿಮತ್ತೆ) ಯುಗದಲ್ಲಿದ್ದೇವೆ. ಸಾಕಷ್ಟು ಉದ್ಯೋಗಗಳನ್ನು ಎಐ ಮಾಡುತ್ತಿದ್ದು, ಅವಕಾಶಗಳು ಕಡಿಮೆಯಾಗುತ್ತಿವೆ. ಗೋಲ್ಡ್‌ಮನ್ ಸ್ಯಾಕ್ಸ್ ವರದಿಯ ಪ್ರಕಾರ, ಎಐಯಿಂದಾಗಿ ಸುಮಾರು 300 ಮಿಲಿಯನ್ ಉದ್ಯೋಗಗಳು ಅಪಾಯದಲ್ಲಿವೆಯಂತೆ. ವರ್ಲ್ಡ್ ಎಕನಾಮಿಕ್ ಫೋರಮ್‌ನ 2025ರ ಫ್ಯೂಚರ್ ಆಫ್ ಜಾಬ್ಸ್ ವರದಿ ಪ್ರಕಾರ, ಎಐಯಿಂದಾಗಿ 9 ಮಿಲಿಯನ್ ಉದ್ಯೋಗಗಳು ಕಳೆದುಹೋಗುತ್ತಿದೆ, ಆದರೆ ಡೇಟಾ ಸೈನ್ಸ್, ಎಐ ಡೆವಲಪ್‌ಮೆಂಟ್, ಮಾನವ-ಎಐ ಸಹಯೋಗದ ಕ್ಷೇತ್ರಗಳಲ್ಲಿ 97 ಮಿಲಿಯನ್ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ, ಈಗ ನಿಮ್ಮ ಜಾಬ್‌ ಉಳಿಸಿಕೊಳ್ಳಲು ಏನು ಮಾಡಬೇಕು?

ಎಐ ಕೌಶಲ್ಯಗಳನ್ನು ಅಪ್‌ಸ್ಕಿಲ್ ಮಾಡಿಕೊಳ್ಳಿ

ಎಐಯನ್ನು ಬಳಸಿಕೊಂಡು ನಿಮ್ಮ ಕೆಲಸವನ್ನು ಹೆಚ್ಚು ದಕ್ಷತೆಯಿಂದ ಮಾಡಬೇಕು. ಮ್ಯಾಕ್‌ಕಿನ್ಸೆ ವರದಿಯ ಪ್ರಕಾರ, ಉದ್ಯೋಗಿಗಳು ಎಐಯನ್ನು ನಿತ್ಯದ ಕೆಲಸಗಳಲ್ಲಿ ಬಳಸಿದರೆ, ಅವರ ಪ್ರೊಡಕ್ಟ್ ಹೆಚ್ಚುತ್ತದೆ‌, ಉದ್ಯೋಗ ಉಳಿಯುವುದು.

ಎಐ ಟೂಲ್‌ಗಳನ್ನು ಕಲಿಯಿರಿ

ಚ್ಯಾಟ್‌ಜಿಪಿಟಿ, ಗೂಗಲ್ ಬಾರ್ಡ್ / ಮೈಕ್ರೋಸಾಫ್ಟ್ ಕೋಪೈಲಟ್‌ನಂತಹ ಟೂಲ್‌ಗಳನ್ನು ಬಳಸಿ ಡೇಟಾ ವಿಶ್ಲೇಷಣೆ, ಕೋಡಿಂಗ್ ಅಥವಾ ಕ್ರಿಯೇಟಿವ್ ಕೆಲಸಗಳನ್ನು ಸುಲಭ ಮಾಡಿಕೊಳ್ಳಿ

ಆನ್‌ಲೈನ್ ಕೋರ್ಸ್‌ಗಳು

ಕೋರ್ಸೆರಾ, ಯುಡೆಮಿ ಅಥವಾ ಲಿಂಕ್ಡ್‌ಇನ್ ಲರ್ನಿಂಗ್‌ನಲ್ಲಿ ಎಐ, ಮೆಷಿನ್ ಲರ್ನಿಂಗ್ ಅಥವಾ ಡಿಜಿಟಲ್ ಸ್ಕಿಲ್ಸ್ ಕೋರ್ಸ್‌ಗಳನ್ನು ಮಾಡಿ. ಉದಾಹರಣೆಗೆ, ಎಐಯನ್ನು ಬಳಸಿ ಸ್ಟ್ರಾಟೆಜಿಕ್ ಥಿಂಕಿಂಗ್, ಕ್ರಿಯೇಟಿವಿಟಿಯನ್ನು ಹೆಚ್ಚಿಸಿಕೊಳ್ಳಿ.

ನಿಮ್ಮ ಉದ್ಯೋಗದಲ್ಲಿ ಬಳಸಿ

ನಿಮ್ಮ ಕೆಲಸದಲ್ಲಿ ಎಐಯನ್ನು ಬಳಸಿ ಹೆಚ್ಚು ದಕ್ಷರಾಗಿ, ನಿಮ್ಮ ಮ್ಯಾನೇಜರ್‌ಗಳಿಗೆ ನಿಮ್ಮ ಮೌಲ್ಯವನ್ನು ತೋರಿಸಿಕೊಡಿ.

ಮಾನವೀಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ

ಎಐ ಬದಲಾಯಿಸಲಾಗದ 15ಕ್ಕೂ ಹೆಚ್ಚು ಉದ್ಯೋಗಗಳು ಮಾನವ ಸಂಬಂಧಗಳು, ಸೃಜನಶೀಲತೆ, ಸಂಕೀರ್ಣ ನಿರ್ಧಾರಗಳನ್ನು ಒಳಗೊಂಡಿವೆ. ಇವುಗಳಿಗೆ ಬೆಲೆ ಕೊಡಿ

ಭಾವನಾತ್ಮಕ ಬುದ್ಧಿಮತ್ತೆ

ಗ್ರಾಹಕ ಸೇವೆ, ನಾಯಕತ್ವ/ ಟೀಮ್ ವರ್ಕ್‌ನಲ್ಲಿ ಭಾವನಾತ್ಮಕ ಬುದ್ಧಿಮತ್ತೆ ಬಳೆಸಿ. ಎಐಗೆ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ.

ಸೃಜನಶೀಲತೆ, ಸಮಸ್ಯೆ ಪರಿಹಾರ

ಹೊಸ ಐಡಿಯಾಗಳನ್ನು ಸೃಷ್ಟಿಸಿ ಅಥವಾ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಿ. ನಾರ್ಥ್‌ಈಸ್ಟರ್ನ್ ಯೂನಿವರ್ಸಿಟಿ ಸಲಹೆಯಂತೆ, ಎಐಯನ್ನು ಬಳಸಿ ನಿರ್ಧಾರಗಳನ್ನು ಸುಧಾರಿಸಬಹುದು. ಟೀಂ ಲೀಡರ್ಸ್‌ ಎಐಗೆ ಬೆಂಬಲ ನೀಡಿದರೆ, ಉಳಿದ ಉದ್ಯೋಗಿಗಳು ಅದನ್ನು ಬಳಸಿ ಹೊಂದಿಕೊಳ್ಳುತ್ತಾರೆ. ನಿರಂತರ ಕಲಿಕೆಯ ಮೂಲಕ ನಿಮ್ಮನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಮುಖ್ಯ.

ಹೊಸ ಉದ್ಯೋಗ ಪಡೆಯುವ ತಂತ್ರಗಳು

ನೆಟ್‌ವರ್ಕಿಂಗ್ ಮತ್ತು ಹುಡುಕಾಟ ಅವಕಾಶಗಳು ಕಡಿಮೆಯಿದ್ದರೂ, ಸರಿಯಾದ ತಂತ್ರಗಳಿಂದ ಹೊಸ ಉದ್ಯೋಗ ಪಡೆಯಬಹುದು. ಪಿಡಬ್ಲ್ಯೂಸಿ 2025ರ ಎಐ ಜಾಬ್ಸ್ ಬ್ಯಾರೋಮೀಟರ್ ಪ್ರಕಾರ, ಎಐ ಹೆಚ್ಚು ಆಟೋಮೇಟ್ ಮಾಡಬಲ್ಲ ಜಾಬ್‌ಗಳಲ್ಲಿಯೂ ಮಾನವರ ಮೌಲ್ಯ ಹೆಚ್ಚುವುದು.

ಲಿಂಕ್ಡ್‌ಇನ್, ನೆಟ್‌ವರ್ಕಿಂಗ್

ನಿಮ್ಮ ಪ್ರೊಫೈಲ್ ಅಪ್‌ಡೇಟ್ ಮಾಡುತ್ತಿರಿ, ಎಐ ಸಂಬಂಧಿತ ಕೌಶಲ್ಯಗಳನ್ನು ಹೈಲೈಟ್ ಮಾಡಿ. ಇಂಡಸ್ಟ್ರಿ ಈವೆಂಟ್‌ಗಳಲ್ಲಿ ಭಾಗವಹಿಸಿ.

ರೆಸ್ಯೂಮ್‌ನ್ನು ಎಐ-ಫ್ರೆಂಡ್ಲಿ ಮಾಡಿ

ಎಐ ರಿಕ್ರೂಟ್‌ಮೆಂಟ್ ಟೂಲ್‌ಗಳು ಕೀವರ್ಡ್‌ಗಳನ್ನು ಸ್ಕ್ಯಾನ್ ಮಾಡುತ್ತವೆಯಾದರೂ, ನಿಮ್ಮ ಅನುಭವಗಳನ್ನು ಸ್ಟೋರಿ ರೂಪದಲ್ಲಿ ಬರೆಯಬೇಕಾಗುವುದು. ಶ್ಯಾಂಡಿಯಾಗೋ ಯೂನಿವರ್ಸಿಟಿ ಪ್ರಕಾರ, ಎಐ ಹೈರಿಂಗ್ ಪ್ರಕ್ರಿಯೆಯನ್ನು ದಕ್ಷಗೊಳಿಸುತ್ತದೆ.

ಹೊಸ ಕ್ಷೇತ್ರಗಳನ್ನು ಅನ್ವೇಷಿಸಿ

ಎಐ ಡೆವಲಪರ್, ಎಥಿಕಲ್ ಎಐ ಸ್ಪೆಷಲಿಸ್ಟ್ ಅಥವಾ ಹ್ಯೂಮನ್-ಎಐ ಕೊಲ್ಯಾಬರೇಟರ್ ನಂತಹ ಹೊಸ ಜಾಬ್‌ಗಳ ಕಡೆಗೆ ಗಮನ ಕೊಡಿ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಎಐ 22 ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಮಾನಸಿಕ, ಆರ್ಥಿಕ ಸಿದ್ಧತೆ

ಉದ್ಯೋಗ ಬದಲಾವಣೆಯ ನಡುವೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಜೋಶ್ ಬರ್ಸಿನ್ ಬ್ಲಾಗ್ ಪ್ರಕಾರ, ಎಐಯ ಹಾನಿಯ ಬಗ್ಗೆ ಭಯಪಡೋದು ಬೇಡ, ನಿಜ ಏನೆಂದರೆ ಅದು ನಮ್ಮನ್ನು ಹೆಚ್ಚು ಮೌಲ್ಯಯುತಗೊಳಿಸುತ್ತದೆ.

ಆರ್ಥಿಕ ಬ್ಯಾಕಪ್‌

ಉಳಿತಾಯ ಮಾಡಿ, ಸೈಡ್ ಹಸ್ಟಲ್‌ಗಳನ್ನು ಆರಂಭಿಸಿ (ಉದಾ: ಫ್ರೀಲ್ಯಾನ್ಸಿಂಗ್)

 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?