Microsoft Lays Off: ಮತ್ತೆ ಉದ್ಯೋಗ ಕಡಿತಗೊಳಿಸಿದ ಮೈಕ್ರೋಸಾಫ್ಟ್, ಸಿಇಓ ವಿರುದ್ಧ ಸಿಡಿದೆದ್ದ ಉದ್ಯೋಗಿಗಳು!

By Gowthami K  |  First Published Jul 11, 2023, 5:12 PM IST

ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಮತ್ತೆ ಮುಂದುವರಿದಿದೆ. ಕಳೆದ ಜನವರಿ 2023 ರಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ 10,000 ಉದ್ಯೋಗ ಕಡಿತ ಮಾಡಿತ್ತು.


ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಮತ್ತೆ ಮುಂದುವರಿದಿದೆ. ಕಳೆದ ಜನವರಿ 2023 ರಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ 10,000 ಉದ್ಯೋಗ ಕಡಿತ ಮಾಡಿತ್ತು. ಜೊತೆಗೆ ವೇತನ ಹೆಚ್ಚಳವನ್ನು ಸ್ಥಗಿತಗೊಳಿಸಿತ್ತು. ಕಂಪೆನಿಗೆ ಈ ಹಣಕಾಸು ವರ್ಷದಲ್ಲಿ ಲಾಭವಾದಾಗ ಸಿಇಒ ಸತ್ಯ ನಾಡೆಲ್ಲಾ ಅವರು ಉದ್ಯೋಗಿಗಳಿಗೆ ಧನ್ಯವಾದ ಎಂದು ಸುದೀರ್ಘ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಸಂಬಳವನ್ನು ಕಡಿಮೆ ಮಾಡುವ ಮೂಲಕ ಲಾಭವನ್ನು ಹೆಚ್ಚಿಸಿದ್ದಕ್ಕಾಗಿ ಮೈಕ್ರೋಸಾಫ್ಟ್ ಉದ್ಯೋಗಿಗಳು ಸಿಇಒ ಸತ್ಯ ನಾಡೆಲ್ಲಾ ಅವರನ್ನು ದೂಷಿಸಿದ್ದರು. ಇದೀಗ ಈ ಹಣಕಾಸು ವರ್ಷದಲ್ಲಿ ಮೈಕ್ರೋಸಾಫ್ಟ್‌ ಉದ್ಯೋಗ ಕಡಿತಕ್ಕೆ ಮತ್ತೆ  275 ಉದ್ಯೋಗ ಕಡಿತವನ್ನು ಸೇರ್ಪಡೆ ಮಾಡುತ್ತಿದೆ. ಈ ಬಗ್ಗೆ ಲಿಂಕ್ಡ್‌ಇನ್‌ ನಲ್ಲಿ ಕೆಲಸ ಕಳೆದುಕೊಂಡ ಉದ್ಯೋಗಿಗಳು ಬರೆದುಕೊಂಡಿದ್ದಾರೆ. ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾಡೆಲ್ಲಾ ವಿರುದ್ಧವೂ ಉದ್ಯೋಗ ಕಳೆದುಕೊಂಡವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ದೊಡ್ಡ ಟೆಕ್ ಕಂಪನಿಯು ತನ್ನ 2024 ರ ಆರ್ಥಿಕ ವರ್ಷ ಪ್ರಾರಂಭವಾದ ಕೇವಲ ಒಂದು ವಾರದ ನಂತರ ತನ್ನ ಉದ್ಯೋಗಿಗಳನ್ನು  ಕಡಿತ ಮಾಡುವುದು  ಅಸಾಮಾನ್ಯವಾಗಿದೆ. ಇವೆಲ್ಲದರ ನಡುವೆ ಮಾಜಿ ಮೈಕ್ರೋಸಾಫ್ಟ್ ಉದ್ಯೋಗಿಗಳು ಹೊಸ ಉದ್ಯೋಗಗಳನ್ನು ಹುಡುಕಲು ಲಿಂಕ್ಡ್‌ಇನ್‌ ಮೊರೆ ಹೋಗುತ್ತಿದ್ದಾರೆ. ಉದ್ಯೋಗದ ಆಕಾಂಕ್ಷಿಯಾಗಿರುವ ವ್ಯಕ್ತಿಯೊಬ್ಬರು ಲಿಂಕ್ಡ್‌ಇನ್‌ ನಲ್ಲಿ,  ನಿಮ್ಮಲ್ಲಿ ಅನೇಕರು ಕೇಳಿರಬಹುದು, ಮೈಕ್ರೋಸಾಫ್ಟ್ ಇತ್ತೀಚೆಗೆ ಹಲವಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಒಂದು ಸುತ್ತಿನ ವಜಾ ಘೋಷಿಸಿತು. ಈ ಸುದ್ದಿ ನೇರವಾಗಿ ಪರಿಣಾಮ ಬೀರುವವರಿಗೆ ನಿರಾಶಾದಾಯಕವಾಗಿದ್ದರೂ, ಇದು ನನ್ನ ಬೆಳವಣಿಗೆಗೆ ಅವಕಾಶವನ್ನು ಒದಗಿಸುತ್ತದೆ. ಬದಲಾವಣೆಯು ನಮ್ಮ ವೃತ್ತಿಪರ ಜೀವನದ ಅನಿವಾರ್ಯ ಭಾಗವಾಗಿದೆ ಎಂದು  ಬರೆದುಕೊಂಡಿದ್ದಾರೆ.

Tap to resize

Latest Videos

NITK Surathkal ಕ್ಯಾಂಪಸ್ ಸೆಲೆಕ್ಷನ್‌, ಅಮೆರಿಕಾ ಕಂಪೆನಿಯಲ್ಲಿ ವಿದ್ಯಾರ್ಥಿಗೆ 2.3 ಕೋಟಿ ರೂ

ಕೋವಿಡ್-19 ಸಾಂಕ್ರಾಮಿಕ ರೋಗದ ಬಳಿಕ ಮೈಕ್ರೋಸಾಫ್ಟ್ ಜೊತೆಗೆ, ಅಮೆಜಾನ್, ಮೆಟಾ ಮತ್ತು ಗೂಗಲ್‌ನಂತಹ ಇತರ ಪ್ರಮುಖ ತಂತ್ರಜ್ಞಾನ ದೈತ್ಯರು ಸಹ ಈ ವರ್ಷ ತಮ್ಮ ಉದ್ಯೋಗಿಗಳನ್ನು ತೆಗೆದು ಹಾಕಿತ್ತು. ಜನವರಿಯಲ್ಲಿ ಮೈಕ್ರೋಸಾಫ್ಟ್ 10,000 ಉದ್ಯೋಗಿಗಳನ್ನು ವಜಾ ಮಾಡಿದಾಗ, ಒಟ್ಟು ಶೇಕಡಾ 5 ರಷ್ಟು ಕೊರತೆ ಕಂಡಿತ್ತು.  ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾಡೆಲ್ಲಾ ಕಂಪನಿಯು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಾಗ, ಇನ್ನೂ ಹೆಚ್ಚಿನವರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದ್ದರು. ಆದರೆ ಮತ್ತೆ ಈಗ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. 

ಮತ್ತೋರ್ವ ಉದ್ಯೋಗಿ ಲಿಂಕ್ಡ್‌ಇನ್‌ ನಲ್ಲಿ ಬರೆದುಕೊಂಡಿದ್ದು, ಕಂಪನಿಯಲ್ಲಿ ತನ್ನ ಮೊದಲ ವಾರ್ಷಿಕೋತ್ಸವದ ಮುನ್ನಾದಿನದಂದು ವಜಾಗೊಳಿಸಲಾಗಿದೆ. ಇದು ವಜಾಗೊಂಡ ಪ್ರತಿಯೊಬ್ಬರಿಗೂ ಒಂದು ಹೊಸ ಟಿಪ್ಪಣಿ. ಹೊಸ ಅಧ್ಯಾಯ, ಪ್ರತಿಯೊಬ್ಬರು ಕೂಡ ಅದ್ಭುತ ವ್ಯಕ್ತಿತ್ವದವರು, ಇದು ಕೇವಲ ಒಂದು ಕ್ಷಣ ಮಾತ್ರ ಎಂದು ಬರೆದುಕೊಂಡಿದ್ದಾರೆ.

ಬಾಸ್‌ನಿಂದ ಕಿರುಕುಳ, ಬ್ರಿಟನ್‌ನ ರಾಯಲ್ ಮೇಲ್‌ನಿಂದ 25 ಕೋಟಿ ರೂ ಪರಿಹಾರ ಪಡೆದ ಭಾರತೀಯ

ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾಡೆಲ್ಲಾ ಅವರು ನಾವು ಕೆಲವು ಪ್ರದೇಶಗಳಲ್ಲಿ ಕೆಲ ಹುದ್ದೆಗಳಿಂದ ತೆಗೆದುಹಾಕುತ್ತಿದ್ದೇವೆ.  ಆದರೆ ಅತ್ಯುತ್ತಮವಾದ ವ್ಯಕ್ತಿಗಳನ್ನು ಹುಡುಕಿ ನೇಮಿಸಿಕೊಳ್ಳುವುದು ಮುಂದುವರಿಸುತ್ತೇವೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಈ ನಮ್ಮ ನಿರ್ಧಾರದ ಪರಿಣಾಮ ಪ್ರತಿಯೊಬ್ಬ ವ್ಯಕ್ತಿಗೂ ಇದು ಸವಾಲಿನ ಸಮಯ ಎಂದು ನಮಗೆ ತಿಳಿದಿದೆ. ನಾವು ಇದನ್ನು ಅತ್ಯಂತ ಚಿಂತನಶೀಲ ಮತ್ತು ಪಾರದರ್ಶಕ ರೀತಿಯಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮೈಕ್ರೋಸಾಫ್ಟ್ ಜನವರಿಯಲ್ಲಿ ತನ್ನ ಪ್ರಮುಖ ಉದ್ಯೋಗ ಕಡಿತಗಳನ್ನು ಘೋಷಿಸಿದಾಗ, ಕಂಪನಿಯು ಮುಖ್ಯವಾಗಿ ಅತಿಯಾದ ನೇಮಕಾತಿ ಮತ್ತು ಆರ್ಥಿಕ ಪರಿಸ್ಥಿತಿಗಳು ಸರಿಯಾಗಿಲ್ಲ ಎಂದು ಕಾರಣ ಕೊಟ್ಟಿತ್ತು.  ಬೃಹತ್ ಆರ್ಥಿಕ ಪರಿಸ್ಥಿತಿಗಳು ಮತ್ತು ಗ್ರಾಹಕರ ಆದ್ಯತೆಗಳನ್ನು ಬದಲಾಯಿಸುವ ಪರಿಣಾಮವಾಗಿ ಕಂಪೆನಿ ಈ ನಿರ್ಧಾರ ತೆಗದುಕೊಂಡಿದೆ ಎಂದು ಹೇಳಿತ್ತು.

ಮೈಕ್ರೋಸಾಫ್ಟ್ ಮಾತ್ರವಲ್ಲ, ಇತರ ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಕೂಡ ಈ ವರ್ಷ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ.  ವರದಿ ಪ್ರಕಾರ, 839 ಟೆಕ್ ಕಂಪನಿಗಳು 2023 ರಲ್ಲಿ ಒಟ್ಟು 2,16,328 ಉದ್ಯೋಗಿಗಳನ್ನು ವಜಾಗೊಳಿಸಿವೆ.

click me!