ಭಾರತ ಮತ್ತು ಚೀನಾದಂತಹ ದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಅಮೆರಿಕ ಕಂಪನಿಗಳಿಗೆ ಈ ವೀಸಾ ಅನುಕೂಲ ಒದಗಿಸಲಿದೆ.
ಟೊರಂಟೋ (ಜೂನ್ 29, 2023): ಅಮೆರಿಕದಲ್ಲಿ ಎಚ್-1 ಬಿ ವೀಸಾ ಪಡೆದುಕೊಂಡಿರುವ 10 ಸಾವಿರ ಮಂದಿಗೆ ಕೆಲಸ ಮಾಡಲು ಕೆನಡಾ ಸರ್ಕಾರ ಅನುಮತಿ ನೀಡಿದೆ. ಇದು ಅಮೆರಿಕ ಪ್ರವಾಸ ಕೈಗೊಂಡಿರುವ ಸಾವಿರಾರು ಭಾರತೀಯ ಟೆಕ್ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ನಾಯಕನಾಗಲು ಬಯಸಿರುವ ಕೆನಡಾ ಅಮೆರಿಕದ ಟೆಕ್ ಕಂಪನಿಗಳಲ್ಲಿ ನಡೆದಿರುವ ಉದ್ಯೋಗ ಕಡಿತದ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದೆ. ಅಮೆರಿಕದ ಕಂಪನಿಗಳಲ್ಲಿ ಕೆಲಸ ಮಾಡುವ ತಜ್ಞ ವಿದೇಶಿಗರಿಗೆ ಎಚ್-1 ಬಿ ವೀಸಾ ನೀಡಲಾಗುತ್ತದೆ.
undefined
ಇದನ್ನು ಓದಿ: ಗುಡ್ ನ್ಯೂಸ್: ಈ ವರ್ಷ 10 ಲಕ್ಷ ಭಾರತೀಯರಿಗೆ ಅಮೆರಿಕ ವೀಸಾ
ಭಾರತ ಮತ್ತು ಚೀನಾದಂತಹ ದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಅಮೆರಿಕ ಕಂಪನಿಗಳಿಗೆ ಈ ವೀಸಾ ಅನುಕೂಲ ಒದಗಿಸಲಿದೆ. ಜುಲೈ 16ರಿಂದ ಎಚ್-1 ಬಿ ವೀಸಾ ಹೊಂದಿರುವ 10 ಸಾವಿರ ಮಂದಿಗೆ ಕೆನಡಾಗೆ ಬಂದು ಉದ್ಯೋಗ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಕೆನಡಾದ ವಲಸೆ ಮತ್ತು ಪೌರತ್ವ ಸಚಿವ ಸೀನ್ ಫ್ರಾಸೆರ್ ಹೇಳಿದ್ದಾರೆ.
ಕೆನಡಾದಲ್ಲಿ ಕೆಲಸ ಮಾಡಲು ಅನುಮತಿ ಪಡೆದುಕೊಳ್ಳುವ ವ್ಯಕ್ತಿಗಳಿಗೆ 3 ವರ್ಷಗಳ ಕಾಲಾವಧಿಯನ್ನು ನೀಡಲಾಗುತ್ತದೆ. ಅವರು ಕೆನಡಾದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು, ಅವರ ಪತ್ನಿ ಹಾಗೂ ಕುಟುಂಬದವರು ಸಹ ಕೆಲಸ ಅಥವಾ ಶಿಕ್ಷಣದ ಜೊತೆಗೆ ತಾತ್ಕಾಲಿಕ ನಿವಾಸಿ ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮತ್ತೆ ಚೀನಾ ಕಿರಿಕ್: ಇಬ್ಬರು ಭಾರತೀಯ ಪತ್ರಕರ್ತರ ವೀಸಾ ಫ್ರೀಜ್ ಮಾಡಿದ ಜಿನ್‌ಪಿಂಗ್ ಸರ್ಕಾರ..!
ಇತ್ತೀಚೆಗೆ ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ಗಳಂತಹ ಕಂಪನಿಗಳಲ್ಲಿ ನಡೆದ ಉದ್ಯೋಗ ಕಡಿತದಿಂದಾಗಿ ಸುಮಾರು 2 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇವರಲ್ಲಿ ಶೇ.30 ರಿಂದ 40 ರಷ್ಟು ಮಂದಿ ಭಾರತೀಯರಾಗಿದ್ದಾರೆ. ಕೆನಡಾದ ಈ ಹೊಸ ನಿಯಮದಿಂದ ಇವರುಗಳಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ಎಚ್-1ಬಿ, ಎಲ್-1 ವೀಸಾದಾರರಿಗೆ ಸಂತಸದ ಸುದ್ದಿ; ಇನ್ಮುಂದೆ ಅಮೆರಿಕದಲ್ಲೇ ವೀಸಾ ನವೀಕರಣ..!