ಕೆಲಸದ ಟಾರ್ಗೆಟ್ ರೀಚ್ ಆಗದ ಉದ್ಯೋಗಿ ಕುತ್ತಿಗೆಗೆ ಬೆಲ್ಟ್ ಕಟ್ಟಿ ನಾಯಿಯಂತೆ ನಡೆಸಿಕೊಂಡ ಮ್ಯಾನೇಜರ್!

ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಯುವಕನಿಗೆ ನಾಯಿಯಂತೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಇದೀಗ ವೈರಲ್ ದೃಶ್ಯವು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

Manager ties belt around an employee neck like dog for not reaching work targets sat

ಪ್ರಸಿದ್ಧ ಖಾಸಗಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಕ್ರೂರ ಕೆಲಸದ ಕಿರುಕುಳ ನಡೆದಿದೆ ಎಂಬ ಆರೋಪದಲ್ಲಿ ಟ್ವಿಸ್ಟ್. ಕುತ್ತಿಗೆಗೆ ಬೆಲ್ಟ್ ಹಾಕಿ ನಾಯಿಯಂತೆ ಯುವಕನನ್ನು ನಡೆಸುತ್ತಿರುವ ದೃಶ್ಯಗಳು ಕೆಲಸದ ಕಿರುಕುಳ ಎಂದು ಆರೋಪಿಸಿ ಬಿಡುಗಡೆಯಾಗಿತ್ತು. ಈ ಬಗ್ಗೆ ಇದೀಗ ದೇಶದಾದ್ಯಂತ ಚರ್ಚೆ ಶುರುವಾಗಿದೆ.

ಕುತ್ತಿಗೆಗೆ ಬೆಲ್ಟ್ ಹಾಕಿ ಯುವಕರನ್ನು ನಾಯಿಯಂತೆ ನಡೆಸುತ್ತಿರುವ ದೃಶ್ಯಗಳು ಬಿಡುಗಡೆಯಾಗಿವೆ. ಖಾಸಗಿ ಮಾರ್ಕೆಟಿಂಗ್ ಸಂಸ್ಥೆ ಟಾರ್ಗೆಟ್ ಮುಟ್ಟದ ಯುವಕರಿಗೆ ಈ ರೀತಿ ಶಿಕ್ಷೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿದೆ. ಇದೂ ಸೇರಿದಂತೆ ಕ್ರೂರ ಶಿಕ್ಷೆಗಳನ್ನು ಸಂಸ್ಥೆಯಲ್ಲಿ ಅನುಭವಿಸಿದ್ದೇನೆ ಎಂದು ಕೆಲವು ತಿಂಗಳ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದ ಫೋರ್ಟ್ ಕೊಚ್ಚಿಯ ಅಖಿಲ್ ಆರೋಪಿಸಿದ್ದಾರೆ. ಆದರೆ, ಅಲ್ಲಿ ನಡೆದದ್ದು ಕೆಲಸದ ಕಿರುಕುಳ ಅಲ್ಲವೆಂದು, ಈ ವೈರಲ್ ವಿಡಿಯೋದ ದೃಶ್ಯಗಳಲ್ಲಿ ಕಾಣುವ ಯುವಕ ಪೊಲೀಸರು ಮತ್ತು ಕಾರ್ಮಿಕ ಇಲಾಖೆಗೆ ಪ್ರಾಥಮಿಕ ಹೇಳಿಕೆ ನೀಡಿದ್ದಾನೆ.

Latest Videos

ಇದನ್ನೂ ಓದಿ: ಕ್ಯಾಲಿಗ್ರಾಫಿ ಬಗ್ಗೆ ಟೀಚಿಂಗ್ ಮಾಡುತ್ತಲೇ ಪೋಷಕರು ಮಾಡಿದ 23 ಕೋಟಿ ಸಾಲ ತೀರಿಸಿದ ಯುವಕ

ಕೊಚ್ಚಿ ಪಾಲಾರಿವಟ್ಟಂ ಪೊಲೀಸ್ ಠಾಣಾ ವ್ಯಾಪ್ತಿಯ ಹಿಂದೂಸ್ತಾನ್ ಪವರ್ ಲಿಂಕ್ಸ್ ಎಂಬ ಸಂಸ್ಥೆ ಮತ್ತು ಇವರ ಪೆರುಂಬಾವೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡೀಲರ್‌ಶಿಪ್ ಸಂಸ್ಥೆಯಾದ ಕೆಲ್ಟ್ರೋಕೋಪಿ ವಿರುದ್ಧ ಆರೋಪ ಕೇಳಿ ಬಂದಿದೆ. ಕೂಡಲೇ ಕಾರ್ಮಿಕ ಇಲಾಖೆ ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಿಂದೂಸ್ತಾನ್ ಪವರ್ ಲಿಂಕ್ಸ್‌ಗೆ ಈ ಘಟನೆಗೂ ಸಂಬಂಧವಿಲ್ಲ ಎಂದು ಪಾಲಾರಿವಟ್ಟಂ ಪೊಲೀಸರು ತಿಳಿಸಿದ್ದಾರೆ. ನಂತರ ಪೆರುಂಬಾವೂರಿನಲ್ಲಿ ನಡೆಸಿದ ತನಿಖೆಯಲ್ಲಿ ಘಟನೆ ತಿರುವು ಮುರುವಾಗಿದೆ.

ನಡೆದದ್ದು ಕೆಲಸದ ಕಿರುಕುಳ ಅಲ್ಲ ಎಂದು ದೃಶ್ಯಗಳಲ್ಲಿ ಕಾಣುವ ಯುವಕ ಪೊಲೀಸರು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದಾನೆ. ಗಾಂಜಾ ವ್ಯಸನಿಯಾದ ಮನಾಫ್ ಎಂಬ ಉದ್ಯೋಗಿ ತಿಂಗಳುಗಳ ಹಿಂದೆ ಬಲವಂತವಾಗಿ ಚಿತ್ರೀಕರಿಸಿದ ವಿಡಿಯೋ ಇದು. ಸಂಸ್ಥೆಯ ಮಾಲೀಕರನ್ನು ಕೆಟ್ಟವರನ್ನಾಗಿ ಮಾಡಲು ಈಗ ನನ್ನ ಅನುಮತಿ ಇಲ್ಲದೆ ದೃಶ್ಯಗಳನ್ನು ಹರಿಬಿಟ್ಟಿದ್ದಾನೆ ಎಂದು ಯುವಕ ಹೇಳಿಕೆ ನೀಡಿದ್ದಾನೆ. ಕ್ರೂರವಾಗಿ ವರ್ತಿಸಿದ ಮನಾಫ್‌ನನ್ನು ಈ ಹಿಂದೆಯೇ ಸಂಸ್ಥೆಯ ಮಾಲೀಕರು ಕೆಲಸದಿಂದ ತೆಗೆದು ಹಾಕಿದ್ದರು. ನಾನು ಈಗಲೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಯುವಕ ಹೇಳುತ್ತಾನೆ. ಹೆಚ್ಚಿನ ಉದ್ಯೋಗಿಗಳಿಂದ ಹೇಳಿಕೆ ಪಡೆದ ನಂತರ ಮುಂದಿನ ದಿನಗಳಲ್ಲಿ ವಿಸ್ತೃತ ವರದಿಯನ್ನು ಕಾರ್ಮಿಕ ಇಲಾಖೆ ಸಚಿವರಿಗೆ ನೀಡಲಾಗುವುದು ಎಂದು ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯಶಾಸ್ತ್ರ ಓದಿ, ಸ್ಟೆಥೋಸ್ಕೋಪ್ ಹಿಡಿದು ಡಾಕ್ಟರ್ ಆದ ವ್ಯಕ್ತಿ! ವೈದ್ಯಕೀಯ ಜಗತ್ತಿನಲ್ಲಿ ಅಚ್ಚರಿ!

vuukle one pixel image
click me!