2030ರ ತನಕ ನೀವು ಇದೇ ಉದ್ಯೋಗದಲ್ಲಿದ್ದರೆ ಹೊಟ್ಟೆಗೆ ಹಿಟ್ಟು ಇರಲ್ಲ! ನಿಮ್‌ ಜಾಬ್‌ ಇಲ್ಲಿದ್ಯಾ? ಚೆಕ್‌ ಮಾಡ್ಕೊಳ್ಳಿ!

2030ರೊಳಗಡೆ ಯಾವ ಉದ್ಯಮ ಅವನತಿ ಕಾಣುವುದು? ಯಾವ ಉದ್ಯಮ ಉನ್ನತ ಮಟ್ಟಕ್ಕೆ ಹೋಗುವುದು? 


ಇಂದು ಸಾಕಷ್ಟು ಜನರು ಕೆಲಸ ಇಲ್ಲದೆ ಒದ್ದಾಡುತ್ತಿದ್ದಾರೆ, ಸಾಕಷ್ಟು ಜನರನ್ನು ಕಂಪೆನಿಯಿಂದ ತೆಗೆದು ಹಾಕಲಾಗುತ್ತಿದೆ. ಅಷ್ಟೇ ಅಲ್ಲದೆ ಕಾಸ್ಟ್‌ ಕಟಿಂಗ್‌ ಭೂತ ಕೂಡ ಹೆಗಲೇರಿದೆ. ಇದಕ್ಕೆಲ್ಲ ಬಹುತೇಕ AI ತಂತ್ರಜ್ಞಾನವೇ ಕಾರಣ ಎನ್ನಲಾಗುತ್ತಿದೆ. ಇದೊಂದು ಕಳವಳಕಾರಿ ವಿಷಯವಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, AI ತಂತ್ರಜ್ಞಾನದಿಂದ 300 ಮಿಲಿಯನ್ ಉದ್ಯೋಗಗಳು ನಷ್ಟವಾಗಬಹುದು ಎನ್ನಲಾಗುವುದು. ದಶಕದ ಅಂತ್ಯದಲ್ಲಿ 14% ಕಾರ್ಮಿಕರು ವೃತ್ತಿಜೀವನವನ್ನು ಬದಲಾಯಿಸಬೇಕಾಗಿ ಬರಬಹುದು. 
 
ಲೆಕ್ಕಪತ್ರ ನಿರ್ವಹಣೆ, ಬುಕ್‌ ಕೀಪಿಂಗ್‌, ಆಡಳಿತ ಕಾರ್ಯದರ್ಶಿಗಳಂತಹ ಕೆಲವು ವೈಟ್ ಕಾಲರ್ ಪಾತ್ರಗಳಲ್ಲಿನ ಕಾರ್ಯಗಳು ಕಡಿಮೆ ಆಗುತ್ತವೆ, ಅಂದರೆ ಅವರ 30% ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಯಗಳನ್ನು AI ನಿರ್ವಹಿಸುತ್ತದೆ. ಇನ್ನು AI ಬಹುಬೇಗ ಕೆಲಸ ಮಾಡಿಕೊಡುವುದು, ಹೀಗಾಗಿ ಮ್ಯಾನ್‌ ಪವರ್‌ ಕಡಿಮೆ ಸಾಕಾಗುತ್ತದೆ. ಇದರಿಂದಲೂ ಉದ್ಯೋಗ ನಷ್ಟ ಆಗುವುದು. 2030ರ ಹೊತ್ತಿಗೆ ಯಾವ ಉದ್ಯಮ ಅವನತಿ ಕಾಣುವುದು? ಯಾವ ಉದ್ಯಮ ಹೆಚ್ಚು ಉನ್ನತ ಮಟ್ಟಕ್ಕೆ ಬೆಳೆಯುವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಈ ಒಂದು ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ತಿದ್ದಾರೆ. 

ಸರ್ಕಾರಿ ಕೆಲಸ, ಖಾಸಗಿ ಜಾಬ್‌, ಬ್ಯುಸಿನೆಸ್ : ಯಾವುದು ಬೆಸ್ಟ್ ಇಲ್ಲಿದೆ ಡೀಟೇಲ್ಸ್‌!

Latest Videos

ಅವನತಿ ಕಾಣುತ್ತಿರುವ ಹುದ್ದೆಗಳು

  • ಪೋಸ್ಟಲ್‌ ಸರ್ವೀಸ್‌ ಕ್ಲರ್ಕ್ಸ್‌
  • ಬ್ಯಾಂಕ್‌ ಸಂಬಂಧಪಟ್ಟ ಕ್ಲರ್ಕ್ಸ್‌
  • ಡಾಟಾ ಎಂಟ್ರಿ ಕ್ಲರ್ಕ್ಸ್‌
  • ಕ್ಯಾಶಿಯರ್‌ ಹಾಗೂ ಟಿಕೆಟ್‌‌ ಕ್ಲರ್ಕ್ಸ್‌
  • ಅಡ್ಮಿನಿಸ್ಟ್ರೇಟಿವ್‌ ಅಸಿಸ್ಟಂಟ್ಸ್ಮ ಎಕ್ಸಿಕ್ಯೂಟಿವ್‌ ಸೆಕ್ರೆಟರಿ 
  • ಪ್ರಿಂಟಿಂಗ್‌  ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಟ್ರೇಡ್ಸ್‌ ವರ್ಕರ್ಸ್‌
  • ಅಕೌಂಟಿಂಗ್‌, ಬುಕ್‌ಕೀಪಿಂಗ್‌ ಪೇ ರೋಲ್‌ ಕ್ಲರ್ಕ್ಸ್‌
  • ಮಟಿರಿಯಲ್‌ ರೀಕೋಡಿಂಗ್‌ ಸ್ಟಾಕ್‌ಕೀಪಿಂಕ್‌ ಕ್ಲರ್ಕ್ಸ್‌
  • ಸಾರಿಗೆ ಸಹಾಯಕರು, ಕಂಡಕ್ಟರ್ಸ್
  • ಮನೆ ಮನೆಗೆ ಹೋಗಿ ಸೇಲ್‌ಮಾಡುವವರು, ಬೀದಿ ಮಾರಾಟಗಾರ
  • ಗ್ರಾಫಿಕ್‌ ಡಿಸೈನರ್ಸ್‌
  • ಕ್ಲೇಮ್‌ ಅಡ್ಜಸ್ಟರ್ಸ್‌ ಎಕ್ಸಾಮೈನರ್ಸ್, ತನಿಖೆದಾರರು
  • ಲೀಗಲ್‌ ಅಧಿಕಾರಿಗಳು
  • ಲೀಗಲ್‌ ಸೆಕ್ರೆಟರಿಗಳು
  • ಟೆಲಿಮಾರ್ಕೇಟರ್ಸ್‌

ಬಿಜೆಪಿ ಕೇಂದ್ರ ಸರ್ಕಾರದ ಮೇಲೆ ಪ್ರತಿಭಟನೆ ಮಾಡಲಿ: ಸಚಿವ ರಾಮಲಿಂಗಾರೆಡ್ಡಿ

ಬೆಳೆಯುತ್ತಿರುವ ಹುದ್ದೆಗಳು

  • ಬಿಗ್‌ ಡಾಟಾ ಸ್ಪೆಷಲಿಸ್ಟ್‌
  • ಫಿನ್‌ಟೆಕ್‌ ಇಂಜಿನಿಯರ್ಸ್‌
  • ಎಐ, ಮಶೀನ್‌ ಲರ್ನಿಂಗ್‌ ಸ್ಪೆಷಲಿಸ್ಟ್‌
  • ಸಾಫ್ಟ್‌ವೇರ್‌ ಅಪ್ಲಿಕೇಶನ್ಸ್‌ ಡೆವಲಪರ್ಸ್‌
  • ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್‌ ಸ್ಪೆಷಲಿಸ್ಟ್‌
  • ಡಾಟಾ ವೇರ್‌ಹೌಸಿಂಗ್‌ ಸ್ಪೆಷಲಿಸ್ಟ್‌
  • ಆಟೋನೋಮಸ್‌, ಎಲೆಕ್ಟ್ರಿಕ್‌ ವೆಹಿಕಲ್‌ ಸ್ಪೆಷಲಿಸ್ಟ್‌
  • ಯುಐ, ಯುಎಕ್ಸ್‌ ಡಿಸೈನರ್ಸ್‌
  • ಲೈಟ್‌ ಟ್ರಕ್‌ ಅಥವಾ ಡೆಲಿವರಿ ಸೆರ್ವೀಸಸ್‌ ಡ್ರೈವರ್ಸ್‌
  • ಇಂಟನೆಟ್‌ ಆಫ್‌ ಥಿಂಗ್ಸ್‌ ಸ್ಪೆಷಲಿಸ್ಟ್ಸ್‌
  • ಡಾಟಾ ಅನಾಲಿಸ್ಟ್‌,ಸ್ಪೆಷಲಿಸ್ಟ್ಸ್‌
  • ಎನ್ವಿರೊನ್‌ಮೆಂಟಲ್‌ ಇಂಜಿನಿಯರ್ಸ್‌
  • ಇನ್‌ಫಾರ್ಮೇಶನ್‌ ಸೆಕ್ಯೂರಿಟಿ ಅನಾಲಿಸ್ಟ್‌
  • ಡೆವಲಪ್ಸ್‌ ಇಂಜಿನಿಯರ್ಸ್‌
  • ರೆನ್ಯೂವೇಬಲ್‌ ಎನರ್ಜಿ ಇಂಜಿನಿಯರ್ಸ್‌ 
click me!