ತನ್ನ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಬೇರೆ ಕಡೆ ಕೆಲಸ ಕೊಡಿಸಿದ ಬೆಂಗಳೂರಿನ ಕಂಪನಿ CEO!

ಉದ್ಯೋಗಿಗಳನ್ನು ತೆಗೆದು ಹಾಕುವಾಗ ಕೆಲ ಕಂಪೆನಿಗಳು ಕಿಂಚಿತ್ತೂ ಮಾನವೀಯತೆ ತೋರಿಸೋದಿಲ್ಲ. ಆದರೆ ಬೆಂಗಳೂರು ಮೂಲದ ಸಿಇಒ ನಡೆದುಕೊಂಡ ರೀತಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯುತ್ತಿದೆ.  


ಇತ್ತೀಚೆಗೆ ಉದ್ಯೋಗ ಸಿಗೋದು ಕಷ್ಟ ಆಗಿದೆ. ಐಟಿ ಫೀಲ್ಡ್‌ನಲ್ಲಿಯೂ ಕೂಡ ಲೇಆಫ್‌ ಕೇಳಿ ಬರುತ್ತಿದೆ. ಕೆಲ ಕಂಪೆನಿಗಳಂತೂ ಮೂರು ತಿಂಗಳು ನೋಟೀಸ್‌ ನೀಡದೆ, ದಿನದ ಮಧ್ಯದಲ್ಲಿ ಕರೆದು, ಎರಡು ತಿಂಗಳ ಸಂಬಳ ಕೊಟ್ಟು ಬೀಳ್ಕೊಡುಗೆ ಮಾಡೋದುಂಟು. ಆದರೆ ಬೆಂಗಳೂರು ಸಿಇಒ 70 ಉದ್ಯೋಗಿಗಳನ್ನು ತೆಗೆದರೂ ಕೂಡ, ಅವರಿಗೆ ಮತ್ತೆ ಜಾಬ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಜಕ್ಕೂ ಏನಾಯ್ತು? ಯಾವ ಕಂಪೆನಿ? 
70 ಉದ್ಯೋಗಿಗಳನ್ನು ತೆಗೆದು ಹಾಕಿದ ನಂತರದಲ್ಲಿ, ಸಿಇಒ ಕೈಗೊಂಡ ನಿರ್ಧಾರದ ಬಗ್ಗೆ ಅನೇಕರು ಮಾತನಾಡುತ್ತಿದ್ದಾರೆ. OKCredit ECO ಹಾಗೂ ಸ್ಥಾಪಕ ಹರ್ಷ್‌ ಪೊಖರ್ನ ಅವರು ಈ ಕಥೆಯನ್ನು ಹಂಚಿಕೊಂಡಿದ್ದಾರೆ. ಬಜೆಟ್‌ ಸಮಸ್ಯೆಯಿಂದ ಉದ್ಯೋಗಿಗಳನ್ನು ತೆಗೆದು ಹಾಕಬೇಕಾಗಿ ಬಂತು, ಆಮೇಲೆ ಏನು ಮಾಡಿದೆವು ಎಂದು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Latest Videos

ಉದ್ಯೋಗಿ ಮರಣಾನಂತರ ಪತ್ನಿಗೆ 10 ವರ್ಷ ಸಂಬಳ ಕೊಡೋ, ಮಗುವಿಗೆ ತಿಂಗಳಿಗೆ 86500 ರೂ ಕೊಡೋ ಕಂಪೆನಿ ಇದು

ಬೇಗ ಮರುನೇಮಕ ಮಾಡಿಕೊಂಡ್ವಿ! 
“ಹದಿನೆಂಟು ತಿಂಗಳ ಹಿಂದೆ ನಾವು 70 ಉದ್ಯೋಗಿಗಳನ್ನು ತೆಗೆದವು. ನಮಗೆ ನಿಜಕ್ಕೂ ಇದು ತುಂಬ ಕಷ್ಟ ಆಗಿತ್ತು. ಅಷ್ಟೇ ಅಲ್ಲದೆ ಬಹುಬೇಗ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡೆವು. ಇದು ನಮ್ಮ ತಪ್ಪಾಗಿತ್ತು. ಅದನ್ನು ನಾವು ಭರಿಸಬೇಕಿತ್ತು. ಸ್ಥಾಪಕನಾಗಿ ಇದು ನನ್ನ ಜೀವನದಲ್ಲಿ ತೆಗೆದುಕೊಂಡ ಕಠಿಣವಾದ ನಿರ್ಧಾರ. ಆದರೆ ಅದನ್ನು ನಾವು ಸರಿಯಾದ ವಿಧಾನದಲ್ಲಿ ಮಾಡಿದೆವು” ಎಂದು ಅವರು ಲಿಂಕಡ್‌ಇನ್‌ ಅಲ್ಲಿ ಬರೆದುಕೊಂಡಿದ್ದಾರೆ. 

ಮೂವರಿಗೆ ಕೆಲಸ ಸಿಕ್ಕಿಲ್ಲ! 
ಹರ್ಷ್‌ ಅವರು, “ನಾವು ಎಪ್ಪತ್ತು ಜನರನ್ನು ತೆಗೆಯುವಾಗ ಎಲ್ಲರ ಬಳಿಯೂ, ಯಾಕೆ ತೆಗೆದಿದ್ದೇವೆ ಎಂದು ಸರಿಯಾದ ಕಾರಣವನ್ನು ಹೇಳಿದ್ದೆವು. ಅಷ್ಟೇ ಅಲ್ಲದೆ ಮೂರು ತಿಂಗಳ ನೋಟಿಸ್‌ ಪೀರಿಯಡ್‌ ನೀಡಿದ್ದೆವು. ರೆಫರ್‌ ಮಾಡೋದಲ್ಲದೆ ಅವರಿಗೆ ಕೆಲಸ ಹುಡುಕಿಕೊಡಲು, ನಮ್ಮ ಬಳಿ ಏನೆಲ್ಲ ಆಗುವುದೋ ಅಷ್ಟು ಸಹಾಯ ಮಾಡಿದೆವು. ಅದರಲ್ಲಿ 67 ಉದ್ಯೋಗಿಗಳಿಗೆ ಕೆಲಸ ಸಿಕ್ಕಿತು. ಇನ್ನುಳಿದ ಮೂವರಿಗೆ ಕೆಲಸ ಸಿಕ್ಕಿಲ್ಲ ಎಂದು ಇನ್ನೂ ಎರಡು ತಿಂಗಳ ಎಕ್ಸ್ಟ್ರಾ ಸಂಬಳ ನೀಡಿದೆವು” ಎಂದು ಅವರು ಹೇಳಿದ್ದಾರೆ.

ಸ್ವಯಂಘೋಷಿದ ಕ್ರೈಸ್ತ ಪಾದ್ರಿ ಅಸಲಿ ಮುಖ ಬಯಲು, ಮಹಿಳೆ ಸೇರಿ ಉದ್ಯೋಗಿ ಮೇಲೆ ಹಲ್ಲೆ ದೃಶ್ಯ ಸೆರೆ

ಈ ವರ್ಷ ಎಷ್ಟು ಲೇಆಫ್‌ ಆಯ್ತು? 
“ಒಟ್ಟಾರೆಯಾಗಿ ಈ ವರ್ಷ 120000 ಜನರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಅದರಲ್ಲಿ ಕೆಲವರು ಇನ್ನೂ ಯಾವುದೇ ಅವಕಾಶ ಪಡೆದಿಲ್ಲ. ಕೆಲವರಿಗೆ ಬ್ಲಾಕ್‌ ಮಾಡಿದ ಮೇಲ್‌ನಿಂದ ವಿಷಯ ತಿಳಿದಿದೆ. ಕೆಲವನ್ನು ಮಧ್ಯಾಹ್ನ ಸ್ಲಾಕ್‌ನಿಂದ ತೆಗೆದುಹಾಕಲಾಯಿತು. ಇದು ನಿಜಕ್ಕೂ ಮಾನವೀಯತೆ ಅಲ್ಲ. ಆದರೆ ಲೇಆಫ್‌ ನಡೆಯುತ್ತದೆ. ಆದರೆ ನೀವು ಅವುಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ನಿಮ್ಮ ಸಂಸ್ಕೃತಿಯ ಬಗ್ಗೆ ಹೇಳುತ್ತದೆ. ಈ ರೀತಿಯ ಸಂಭಾಷಣೆಗಳನ್ನು ನಡೆಸುವುದು ಕಷ್ಟ ಎಂದು ನನಗೆ ತಿಳಿದಿದೆ, ಆದರೆ ನೀವು ಸಂಸ್ಥಾಪಕರಾದಾಗ ನೀವು ಸೈನ್ ಅಪ್ ಮಾಡಿದ್ದು ಇದನ್ನೇ. ನೀವು ಯಾರನ್ನಾದರೂ ಉದ್ಯೋಗಿ ಎಂದು ನೇಮಿಸಿಕೊಳ್ಳುವಾಗ ಕುಟುಂಬ ಎಂದು ಕರೆದರೆ, ಅವರನ್ನು ಹೋಗಲು ಬಿಡುವಾಗಲೂ ಕುಟುಂಬದವರಂತೆ ನೋಡಿಕೊಳ್ಳಿ” ಎಂದು ಹರ್ಷ್‌ ಹೇಳಿದ್ದಾರೆ. 


 

click me!