ಭಾರತದಲ್ಲಿನ ಟ್ವಿಟ್ಟರ್ ಉದ್ಯೋಗಿಗಳನ್ನು ತೆಗೆದುಹಾಕಿದ್ದಕ್ಕೆ ಕೇಂದ್ರ ಐಟಿ ಸಚಿವ ಟೀಕೆ

By Gowthami K  |  First Published Nov 7, 2022, 4:48 PM IST

ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್  ಭಾರತದಲ್ಲಿ ತನ್ನ ಉದ್ಯೋಗಿಗಳನ್ನು ಹಠಾತ್ ವಜಾಗೊಳಿಸಿರುವ ಬಗ್ಗೆ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಟೀಕಿಸಿದ್ದಾರೆ. ಉದ್ಯೋಗಿಗಳಿಗೆ "ಪರಿವರ್ತನೆಗೆ ನ್ಯಾಯಯುತ ಸಮಯ" ನೀಡಬೇಕಿತ್ತು ಎಂದು ವೈಷ್ಣವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನವದೆಹಲಿ (ನ.7): ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್  ಭಾರತದಲ್ಲಿ ತನ್ನ ಉದ್ಯೋಗಿಗಳನ್ನು ಹಠಾತ್ ವಜಾಗೊಳಿಸಿರುವ ಬಗ್ಗೆ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಟೀಕಿಸಿದ್ದಾರೆ. ಉದ್ಯೋಗಿಗಳಿಗೆ "ಪರಿವರ್ತನೆಗೆ ನ್ಯಾಯಯುತ ಸಮಯ" ನೀಡಬೇಕಿತ್ತು ಎಂದು ವೈಷ್ಣವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಸುಮಾರು 150-180 ಉದ್ಯೋಗಿಗಳನ್ನು ಒಳಗೊಂಡಂತೆ ಜಾಗತಿಕವಾಗಿ ಟ್ವಿಟ್ಟರ್‌ನ ಅರ್ಧದಷ್ಟು ಉದ್ಯೋಗಿಗಳನ್ನು ಮಸ್ಕ್ ವಜಾಗೊಳಿಸಿದ್ದರಿಂದ ವೈಷ್ಣವ್ ಅವರ ಪ್ರತಿಕ್ರಿಯೆಯನ್ನು ಮೊದಲು ಬಿಜಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.   ಭಾರತದಲ್ಲಿ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾ ಮಾಡಿರುವ ವಿಧಾನವನ್ನು ನಾವು ಖಂಡಿಸುತ್ತೇವೆ.  ಉದ್ಯೋಗಿಗಳಿಗೆ ಪರಿವರ್ತನೆಗಾಗಿ ನ್ಯಾಯಯುತ ಸಮಯವನ್ನು ನೀಡಬೇಕಿತ್ತು ಎಂದಿದ್ದಾರೆ. ಟ್ವಿಟ್ಟರ್  ಅನ್ನು ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಹಲವು ಮಹತ್ವದ ಬದಲಾವಣೆಗಳಾಗುತ್ತಿದ್ದು,  ಟ್ವಿಟ್ಟರ್ ಇತಿಹಾಸದಲ್ಲಿ ಇದುವರೆಗೆ ಅತಿದೊಡ್ಡ ವಜಾ ಪ್ರಕ್ರಿಯೆಯಾಗಿದೆ. ಇದಕ್ಕೆ ವಿಶ್ವದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಭಾರತದಲ್ಲಿ ವಜಾಗಳನ್ನು  ಟ್ವಿಟ್ಟರ್ ನ ಎಲ್ಲಾ ವಿಭಾಗಗಳಲ್ಲಿ ಮಾಡಲಾಗಿದೆ ಸೇಲ್ಸ್ ವಿಭಾಗದಿಂದ ಮಾರ್ಕೆಟಿಂಗ್‌ವರೆಗೆ, ವಿಷಯ ಸಂಗ್ರಹಣೆಯಿಂದ ಕಾರ್ಪೊರೇಟ್ ಸಂವಹನಗಳವರೆಗೆ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.

ಇನ್ನೂ ಟ್ವಿಟ್ಟರ್ ಇಂಡಿಯಾ ಹೊಂದಿರುವವರು ಮುಂದಿನ ಸುತ್ತಿನಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ನಿರಂತರ ಭಯದಲ್ಲಿ ಬದುಕುತ್ತಿದ್ದಾರೆ, ಇದು ಮಸ್ಕ್‌ನ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಸಂಭವಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಕಂಪನಿಯ ಪ್ರಕಾರ, ಟ್ವಿಟ್ಟರ್‌ನ ಕಚೇರಿಗಳಿಗೆ ಉದ್ಯೋಗಿ ಬ್ಯಾಡ್ಜ್ ಪ್ರವೇಶವನ್ನು "ತಾತ್ಕಾಲಿಕವಾಗಿ" ಮುಚ್ಚಲಾಗಿದೆ.

Latest Videos

undefined

ಟ್ವಿಟ್ಟರ್‌ನ ಅರ್ಧದಷ್ಟು ಉದ್ಯೋಗಿಗಳನ್ನು ಕ್ರೂರವಾಗಿ ವಜಾ ಮಾಡುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ ಎಂದು ಮಸ್ಕ್ ಹೇಳಿದ್ದರು. ಏಕೆಂದರೆ ಕಂಪನಿಯು ದಿನಕ್ಕೆ  4 ಮಿಲಿಯನ್‌ ಡಾಲರ್ ನಷ್ಟ ಅನುಭವಿಸುತ್ತಿದ್ದೆ ಎಂದಿದ್ದರು. ಕಂಪೆನಿಯಿಂದ ನಿರ್ಗಮಿಸಿದ ಪ್ರತಿಯೊಬ್ಬರಿಗೂ 3 ತಿಂಗಳ ಮುಂಗಡ ವೇತನ , ಇದು ಕಾನೂನುಬದ್ಧವಾಗಿ ಅಗತ್ಯಕ್ಕಿಂತ 50 ಪ್ರತಿಶತ ಹೆಚ್ಚು" ಎಂದು ಮಸ್ಕ್  ಹೇಳಿದರು.  ಜಾಹೀರಾತುದಾರರ ಮೇಲೆ ಅನಗತ್ಯ ಒತ್ತಡವನ್ನು ಹೇರುತ್ತಿರುವುದರಿಂದ ಟ್ವಿಟ್ಟರ್ ಆದಾಯದಲ್ಲಿ ಭಾರಿ ಕುಸಿತವನ್ನು ಕಂಡಿದೆ ಎಂದು ಅವರು ಹೇಳಿದರು. 

ಬ್ಲೂ ಟಿಕ್‌ ಮಾನ್ಯತೆಗೆ  8 ಅಮೆರಿಕನ್‌ ಡಾಲರ್‌:  ಪ್ರಸಿದ್ಧ ಸಾಮಾಜಿಕ ತಾಣ ಟ್ವಿಟ್ಟರ್ನಲ್ಲಿ ‘ಬ್ಲೂಟಿಕ್‌’ ಮಾನ್ಯತೆ ಪಡೆಯಲು ಮಾಸಿಕ 8 ಅಮೆರಿಕನ್‌ ಡಾಲರ್‌ (656 ರು.) ಪಾವತಿಸಬೇಕು ಎಂಬ ನಿಯಮ ತಿಂಗಳೊಳಗೆ ಭಾರತದಲ್ಲೂ ಜಾರಿಗೆ ಬರಲಿದೆ ಎಂದು ಆ ಕಂಪನಿಯ ಹೊಸ ಮಾಲೀಕ ಹಾಗೂ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಘೋಷಿಸಿದ್ದಾರೆ.

ಬ್ಲೂಟಿಕ್‌ ಮನ್ನಣೆ ಪಡೆಯಲು 8 ಡಾಲರ್‌ ಶುಲ್ಕ ಪಾವತಿಸಬೇಕು ಎಂದು ಹೇಳುತ್ತಲೇ ಬಂದಿದ್ದ ಮಸ್‌್ಕ, ಶನಿವಾರದಿಂದ ಅಮೆರಿಕ, ಕೆನಡಾ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ಹಾಗೂ ಬ್ರಿಟನ್‌ ಸೇರಿದಂತೆ ವಿವಿಧ ದೇಶಗಳಲ್ಲಿ ಅದನ್ನು ಜಾರಿಗೆ ತಂದಿದ್ದಾರೆ. ಸದ್ಯ ಆ್ಯಪಲ್‌ ಆಪರೇಟಿಂಗ್‌ ಸಿಸ್ಟಂ (ಐಒಎಸ್‌) ಬಳಸುತ್ತಿರುವ ಗ್ರಾಹಕರಿಗೆ ಇದು ಅನ್ವಯವಾಗಲಿದೆ.

#OneTeam ಹ್ಯಾಷ್‌ಟ್ಯಾಗ್ ಬಳಸಿ ಟ್ವಿಟ್ಟರ್‌ಗೆ ಭಾವುಕ ಗುಡ್‌ಬೈ ಹೇಳಿದ ಉದ್ಯೋಗಿಗಳು

ಈ ನಡುವೆ, ಈ ಶುಲ್ಕ ಭಾರತದಲ್ಲಿ ಎಂದಿನಿಂದ ಜಾರಿಗೆ ಬರಲಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ನೇರವಾಗಿ ಮಸ್‌್ಕ ಅವರನ್ನು ಕೇಳಿದಾಗ, ‘ಪ್ರಾಯಶಃ, ತಿಂಗಳಿಗಿಂತಲೂ ಕಡಿಮೆ ಅವಧಿಯೊಳಗೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಭಾರತದಲ್ಲೂ ಬ್ಲೂಟಿಕ್‌ಗೆ 8 ಡಾಲರ್‌ ಅನ್ನೇ ವಿಧಿಸಲಾಗುತ್ತದೆಯೇ? ಅಥವಾ ಹೆಚ್ಚು ಬಳಕೆದಾರರಿರುವ ಕಾರಣ ಆ ಮೊತ್ತದಲ್ಲಿ ಪರಿಷ್ಕರಣೆಯಾಗುತ್ತದೆಯೇ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.

ಟ್ವಿಟ್ಟರ್‌ ಆಯ್ತು ಈಗ Meta ಕಂಪನಿಯಿಂದ ಸಾವಿರಾರು ಉದ್ಯೋಗಿಗಳ ವಜಾ..!

ಏನಿದು ಬ್ಲೂ ಟಿಕ್‌?
ಟ್ವೀಟ್‌ ಮಾಡುತ್ತಿರುವುದು ದೃಢೀಕರಿಸಲ್ಪಟ್ಟವ್ಯಕ್ತಿ ಎಂದು ಪರಿಶೀಲಿಸಿ ಮನ್ನಣೆ ನೀಡುವ ಸಂಕೇತ. ಇದನ್ನು ಈವರೆಗೂ ಟ್ವಿಟ್ಟರ್ ಕಂಪನಿ ಉಚಿತವಾಗಿ ಕೊಡುತ್ತಿತ್ತು. ಇದಕ್ಕಾಗಿ ಬಳಕೆದಾರರು ಸೂಕ್ತ ದಾಖಲೆಗಳ ಜತೆಗೆ ಅರ್ಜಿ ಸಲ್ಲಿಸಬೇಕಿತ್ತು. ಅದನ್ನು ಟ್ವಿಟ್ಟರ್ನ ತಂಡ ಪರಿಶೀಲಿಸಿ ಬ್ಲೂಟಿಕ್‌ ಅನ್ನು ಬಳಕೆದಾರರಿಗೆ ಮಂಜೂರು ಮಾಡುತ್ತಿತ್ತು. ಬ್ಲೂಟಿಕ್‌ ಸಂಕೇತ ಹೊಂದಿರುವ ಟ್ವಿಟ್ಟರ್ ಖಾತೆಗಳು ವಿಶ್ವಾಸಾರ್ಹವಾಗಿರುತ್ತಿದ್ದವು.

click me!