ಟ್ವಿಟ್ಟರ್‌ ಆಯ್ತು ಈಗ Meta ಕಂಪನಿಯಿಂದ ಸಾವಿರಾರು ಉದ್ಯೋಗಿಗಳ ವಜಾ..!

By BK Ashwin  |  First Published Nov 7, 2022, 1:29 PM IST

ಸೆಪ್ಟೆಂಬರ್ 30 ರವರೆಗೆ ಮೆಟಾ ಸಂಸ್ಥೆಯಲ್ಲಿ ವಿಶ್ವಾದ್ಯಂತ 87 ಸಾವಿರ ಉದ್ಯೋಗಿಗಳಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ ಹಾಗೂ ವಾಟ್ಸಾಪ್ ಸೇರಿ ಜಗತ್ತಿನಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಮಂದಿಯನ್ನು ಕೆಲಸದಿಂದ ಕಿತ್ತುಹಾಕಲಾಗುತ್ತದೆ ಎಂದು ತಿಳಿದುಬಂದಿದೆ.


ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ (Elon Musk) ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್ (Twitter) ಸ್ವಾಧೀನಪಡಿಸಿಕೊಂಡ ಬಳಿಕ ನಾನಾ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಟ್ವಿಟ್ಟರ್‌ನ ಸುಮಾರು ಅರ್ಧದಷ್ಟು ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಈಗ ಫೇಸ್‌ಬುಕ್‌ (Facebook), ಇನ್ಸ್ಟಾಗ್ರಾಮ್‌ (Instagram) ಹಾಗೂ ವಾಟ್ಸಾಪ್‌ನ (Whats App) ಮಾತೃ ಸಂಸ್ಥೆ ಎನಿಸಿಕೊಂಡಿರುವ ಮೆಟಾ (Meta) ಸಹ ಅದೇ ಹಾದಿ ಹಿಡಿದಿದೆ ಎಂದು ಹೇಳಲಾಗುತ್ತಿದೆ. ಮೆಟಾ ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ ಎಂದು ಅಮೆರಿಕ ಮಾಧ್ಯಮ ವರದಿ ಮಾಡಿದೆ. ಮೂಲಗಳು ಈ ಮಾಹಿತಿ ನೀಡಿವೆ ಎಂದು ದಿ ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ನವೆಂಬರ್‌ 9 ರಿಂದಲೂ ಮೆಟಾದ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದೂ ಮಾಧ್ಯಮದ ವರದಿ ಹೇಳುತ್ತದೆ.
 
ಸೆಪ್ಟೆಂಬರ್ 30 ರವರೆಗೆ ಮೆಟಾ ಸಂಸ್ಥೆಯಲ್ಲಿ ವಿಶ್ವಾದ್ಯಂತ 87 ಸಾವಿರ ಉದ್ಯೋಗಿಗಳಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ ಹಾಗೂ ವಾಟ್ಸಾಪ್ ಸೇರಿ ಜಗತ್ತಿನಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಮಂದಿಯನ್ನು ಕೆಲಸದಿಂದ ಕಿತ್ತುಹಾಕಲಾಗುತ್ತದೆ ಎಂದು ತಿಳಿದುಬಂದಿದೆ. ಮೆಟಾದ ಮೂರನೇ ತ್ರೈಮಾಸಿಕ ವರದಿ ನೀಡಿದ್ದ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ (Mark Zuckerberg), 2023ರ ಅಂತ್ಯದೊಳಗೆ ಸಂಸ್ಥೆಯ ಸಿಬ್ಬಂದಿ ಸಂಖ್ಯೆ ಹೆಚ್ಚಾಗಲ್ಲ, ಬದಲಿಗೆ ಸ್ವಲ್ಪ ಕಡಿಮೆಯಾಗಬಹುದು ಎಂದೂ ಹೇಳಿದ್ದರು. 

ಇದನ್ನು ಓದಿ: Twitterನ ಶೇ. 50 ರಷ್ಟು ಸಿಬ್ಬಂದಿ ಕಿತ್ತೊಗೆಯಲು ಎಲಾನ್‌ ಮಸ್ಕ್‌ ಪ್ಲ್ಯಾನ್‌..!

Tap to resize

Latest Videos

ಟ್ವಿಟ್ಟರ್‌ ಸೇರಿ ಕೆಲ ಟೆಕ್‌ ಸಂಸ್ಥೆಗಳು ತಮ್ಮ ಹಲವು ಸಿಬ್ಬಂದಿಯನ್ನು ಕಿತ್ತು ಹಾಕುತ್ತಿದ್ದು ಅಥವಾ ನೇಮಕಾತಿಯನ್ನು ಸ್ಥಗಿತಗೊಳಿಸುತ್ತಿರುವ ಬೆನ್ನಲ್ಲೇ ಮೆಟಾ ಸಹ ಈಗ ಸಾವಿರಾರು ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಲು ಮುಂದಾಗಿದೆ. ಟ್ವಿಟ್ಟರ್‌ ಸಹ ಈಗಾಗಲೇ ಸಾವಿರಾರು ಮಂದಿಯನ್ನು ಕಿತ್ತುಹಾಕಿದೆ.  

ಕಳೆದ ಗುರುವಾರ ಅಮೆರಿಕದ ಸಿಲಿಕಾಣ್‌ ವ್ಯಾಲಿಯ ಕಂಪನಿಗಳಾದ ಸ್ಟ್ರೈಪ್‌ ಹಾಗೂ ಲಿಫ್ಟ್‌ ಸಹ ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿದ್ದು, ಇನ್ನೊಂದೆಡೆ ಅಮೆಜಾನ್‌ ಸಹ ಕಾರ್ಪೊರೇಟ್‌ ಅಧಿಕಾರಿಗಳ ನೇಮಕಾತಿ ತಡೆ ಹಿಡಿಯುವುದಾಗಿ ಮಾಹಿತಿ ನೀಡಿತ್ತು. ಕಳೆದ ಟ್ವಿಟ್ಟರ್‌ ಸಹ ತನ್ನ 7,500 ಉದ್ಯೋಗಳ ಪೈಕಿ ಸುಮಾರು ಅರ್ಧದಷ್ಟು ಉದ್ಯೋಗಿಗಳನ್ನು ಎಲಾನ್‌ ಮಸ್ಕ್‌ ಸ್ವಾಧೀನಪಡಿಸಿಕೊಂಡ ನಂತರ ಇದ್ದಕ್ಕಿದ್ದಂತೆ ಕಿತ್ತೊಗೆಯಲಾಗಿತ್ತು. 

ಇದನ್ನು ಓದಿ: Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?

ಹಣದುಬ್ಬರ ಹಾಗೂ ಬಡ್ಡಿ ದರ ಏರಿಕೆಯಿಂದಾಗಿ ಮೆಟಾ ಹಾಗೂ ಗೂಗಲ್‌ನ ಆಲ್ಫಬೆಟ್‌ ಸಂಸ್ಥೆಗಳಿಗೆ ಜಾಹೀರಾತಿನ ಆದಾಯದ ಮೇಲೆ ಹೊಡೆತ ಬಿದ್ದಿದೆ . ಇದೇ ಕಾರಣಕ್ಕೆ, ಮೆಟಾದ ತ್ರೈಮಾಸಿಕದ ಲಾಭ ಶೇ. 4.4 ಬಿಲಿಯನ್‌ ಡಾಲರ್‌ಗೆ ಕುಸಿತ ಕಂಡಿತ್ತು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 52 ರಷ್ಟು ಆದಾಯ ಕುಸಿತ ಎಂದು ಪರಿಗಣಿಸಲಾಗಿದೆ. ಈ ವರದಿ ಬಹಿರಂಗವಾದ ಬಳಿಕ ಒಂದೇ ದಿನದಲ್ಲಿ ಮೆಟಾ ಷೇರುಗಳ ಮೌಲ್ಯ ಶೇ. 25 ರಷ್ಟು ಕಡಿಮೆಯಾಗಿತ್ತು. ಅಲ್ಲದೆ, ಕಂಪನಿಯ ಮಾರುಕಟ್ಟೆ ಮೌಲ್ಯ ಸಹ ಒಂದು ವರ್ಷದಿಂದ ಕಡಿಮೆಯಾಗಿದ್ದು, 600 ಬಿಲಿಯನ್‌ ಡಾಲರ್‌ಗೆ ಕುಸಿದಿದೆ. 

ಜಾಹೀರಾತು, ಆದಾಯ ಕುಸಿತ ಮಾತ್ರವಲ್ಲದೆ, ಮೆಟಾವರ್ಸ್‌ ಅಬಿವೃದ್ಧಿಗೆ ಸಂಸ್ಥೆಯ ಪ್ರಮುಖ ಫಂಡ್‌ಗಳನ್ನು ಮೀಸಲಿಟ್ಟಿರುವ ಜುಕರ್‌ಬರ್ಗ್‌ ನಿರ್ಧಾರದ ಬಗ್ಗೆ ಹೂಡಿಕೆದಾರರು ತಲೆಕೆಡಿಸಿಕೊಂಡಿದ್ದಾರೆ.  

ಇದನ್ನೂ ಓದಿ: Meta ಕಂಪನಿಯ Q3 ಲಾಭ ಶೇ. 52 ರಷ್ಟು ಕುಸಿತ, ಆದಾಯವೂ ಡೌನ್..!

click me!