ಸಾವಿರಾರು ಐಟಿ ಉದ್ಯೋಗಿಗಳನ್ನು ವಜಾಗೊಳಿಸಿದ Accenture: ಕಾರಣ ಹೀಗಿದೆ..

By BK Ashwin  |  First Published Nov 6, 2022, 9:23 PM IST

ಭಾರತದಲ್ಲಿ ಆಕ್ಸೆಂಚರ್‌ನಿಂದ ಉದ್ಯೋಗದ ಆಫರ್‌ಗಳನ್ನು ಪಡೆಯಲು ಮೋಸದ ಕಂಪನಿಗಳಿಂದ ದಾಖಲಾತಿ ಮತ್ತು ಅನುಭವ ಪತ್ರಗಳನ್ನು ಬಳಸುವ ಪ್ರಯತ್ನವನ್ನು ನಾವು ಕಂಡುಕೊಂಡಿದ್ದೇವೆ. ಈ ಯೋಜನೆಯ ಪ್ರಯೋಜನ ಪಡೆದಿರುವ ದೃಢಪಟ್ಟ ಜನರನ್ನು ನಾವು ಕಂಪನಿಯಿಂದ ಹೊರಹಾಕಿದ್ದೇವೆ ಎಂದು ಅಕ್ಸೆಂಚರ್‌ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.


ಕೋವಿಡ್‌ (Covid) ನಂತರ ಐಟಿ ಕ್ಷೇತ್ರದಲ್ಲಿ (IT Sector) ಸಾಕಷ್ಟು ಉದ್ಯೋಗಿಗಳು (Employees) ಉದ್ಯೋಗ (Employment) ಹಾಗೂ ಅನೇಕ ಪ್ರಯೋಜನಗಳನ್ನು (Benefits) ಪಡೆಯುತ್ತಿದ್ದರೂ, ಇನ್ನು ಹಲವರು ಕೆಲಸ ಕಳೆದುಕೊಳ್ಳುತ್ತಿದ್ದಾರೆ (Lay off). ಮೂನ್‌ಲೈಟಿಂಗ್ (Monlighting) ಕಾರಣದಿಂದ ಹಲವರು ಕೆಲಸದಿಂದ ವಜಾ ಆಗಿದ್ದರೆ, ಇನ್ನು ಹಲವು ಫ್ರೆಷರ್‌ಗಳಿಗೆ (Freshers) ಕಂಪನಿಯೊಂದು ನೇಮಕಾತಿ ಪತ್ರವನ್ನೇ ರದ್ದುಗೊಳಿಸಲಾಗಿತ್ತು.  ಇದೀಗ ಅಕ್ಸೆಂಚರ್‌ (Accenture) ಕಂಪನಿ ಐಟಿ ವಲಯದಲ್ಲಿ ಮತ್ತೊಂದು ಹಗರಣವನ್ನು (Scam) ಬಯಲಿಗೆಳೆದಿದ್ದು, ಉದ್ಯೋಗ ಪಡೆಯಲು ನಕಲಿ ದಾಖಲೆಗಳು ಮತ್ತು ಅನುಭವ ಪತ್ರಗಳನ್ನು (Fake Experience Certificates) ಬಳಸಿರುವ ನೌಕರರನ್ನು ಅಕ್ಸೆಂಚರ್‌ ವಜಾಗೊಳಿಸಿದೆ. 

ಎಷ್ಟು ನೌಕರರನ್ನು ಕಿತ್ತು ಹಾಕಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಟ್ವಿಟ್ಟರ್‌  ಸಂಭಾಷಣೆಗಳ ಪ್ರಕಾರ, ಸಾವಿರಾರು ಉದ್ಯೋಗಿಗಳನ್ನು ಕೈಬಿಟ್ಟಿದೆ ಎಂದು ತಿಳಿದುಬಂದಿದೆ.  “ಭಾರತದಲ್ಲಿ ಆಕ್ಸೆಂಚರ್‌ನಿಂದ ಉದ್ಯೋಗದ ಆಫರ್‌ಗಳನ್ನು ಪಡೆಯಲು ಮೋಸದ ಕಂಪನಿಗಳಿಂದ ದಾಖಲಾತಿ ಮತ್ತು ಅನುಭವ ಪತ್ರಗಳನ್ನು ಬಳಸುವ ಪ್ರಯತ್ನವನ್ನು ನಾವು ಕಂಡುಕೊಂಡಿದ್ದೇವೆ. ಈ ಯೋಜನೆಯ ಪ್ರಯೋಜನ ಪಡೆದಿರುವ ದೃಢಪಟ್ಟ ಜನರನ್ನು ನಾವು ಕಂಪನಿಯಿಂದ ಹೊರಹಾಕಿದ್ದೇವೆ. ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುವ ನಮ್ಮ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಈ ಕ್ರಮ ಕೈಗೊಂಡಿದ್ದೇವೆ’’ ಎಂದು ಅಕ್ಸೆಂಚರ್‌ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. 

Tap to resize

Latest Videos

ಇದನ್ನು ಓದಿ: ಆ್ಯಕ್ಸೆಂಚರ್ ಹೆಸರಲ್ಲಿ ನಕಲಿ ಕ್ಯಾಂಪಸ್ ಸೆಲೆಕ್ಷನ್: ಆರೋಪಿಗಳ ಬಂಧನ

ಅಲ್ಲದೆ, ನಮ್ಮ ಕಂಪನಿ 'ಕಟ್ಟುನಿಟ್ಟಾದ ವ್ಯವಹಾರ ನೀತಿ ಸಂಹಿತೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಅನುಸರಣೆಗೆ ಶೂನ್ಯ ಸಹಿಷ್ಣುತೆಯನ್ನು ಕಾಯ್ದುಕೊಳ್ಳುತ್ತದೆ'. "ನಾವು ನೇಮಕವನ್ನು ಮುಂದುವರೆಸುತ್ತಿದ್ದೇವೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ಅಸ್ತಿತ್ವದಲ್ಲಿರುವ ಉದ್ಯೋಗ ಆಫರ್‌ಗಳನ್ನು ಗೌರವಿಸುತ್ತೇವೆ" ಎಂದೂ ಅಕ್ಸೆಂಚರ್‌ ಹೇಳಿಕೆ ನೀಡಿದೆ. 

ಒಂದು ಕಡೆ ಸಾಂಕ್ರಾಮಿಕ ರೋಗವು ಟೆಕ್ ಸಂಸ್ಥೆಗಳಿಗೆ ಹೆಚ್ಚು ಅವಕಾಶವನ್ನು ತಂದಿದ್ದು, ಹೆಚ್ಚು ನೇಮಕಾತಿಗಳನ್ನು ಮಾಡಿಕೊಳ್ಳಲಾಯಿತಾದರೂ ಮೂನ್‌ಲೈಟಿಂಗ್ ಹಾಗೂ ಇನ್ನಿತರೆ ಕ್ರಮಗಳನ್ನು ಹಲವರನ್ನು ಹಲವು ಕಂಪನಿಗಳು ಉದ್ಯೋಗದಿಂದ ಕಿತ್ತುಹಾಕಲಾಗಿದೆ. ಹಾಗೂ, ಹಲವರಿಗೆ ನೇಮಕಾತಿ ಪತ್ರವನ್ನೇ ರದ್ದುಗೊಳಿಸಿದೆ. ಆದರೂ, ಕೋವಿಡ್‌ ಕಾಲದ ನೇಮಕಾತಿಗಳನ್ನು ಈಗ ನೇಮಕ ಮಾಡಲು ಕಂಪನಿಯ ಎಚ್‌ಆರ್‌ಗಳು ಕಾರ್ಯ ನಿರತರಾಗಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಒಂದೇ ಸಮಯದಲ್ಲಿ 2 ಕಡೆ ಕೆಲಸ: Wipro 300 ಸಿಬ್ಬಂದಿ ವಜಾ

ಐಟಿ ವಲಯವು ಭಾರತದ ಕಾರ್ಪೊರೇಟ್ ಪರಿಸರ ವ್ಯವಸ್ಥೆಯಲ್ಲಿ ಉನ್ನತ ಉದ್ಯೋಗ ಸೃಷ್ಟಿ ಯಂತ್ರವಾಗಿದ್ದು, ದೇಶದಲ್ಲಿ 61 ಪ್ರತಿಶತದಷ್ಟು ಹೆಚ್ಚುತ್ತಿರುವ ಸ್ಥಾನಗಳನ್ನು ಟೆಕ್ಕಿಗಳಿಗಾಗಿ ನೀಡಲಾಗುತ್ತಿದೆ. ಭಾರತದ ಪ್ರಮುಖ ಐಟಿ ಸಂಸ್ಥೆಗಳು ಆರ್ಥಿಕ ವರ್ಷ 2022 ರಲ್ಲಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸಮರ್ಥವಾಗಿವೆ. 

ಆದರೂ ಅಟ್ರಿಷನ್‌ ಅಥವಾ ಹೆಚ್ಚು ಜನರ ರಾಜೀನಾಮೆಯ ಪರಿಣಾಮವಾಗಿ ಹೆಚ್ಚುತ್ತಿರುವ ಕ್ಷೀಣತೆಯನ್ನು ಸಹ ಟೆಕ್‌ ಕಂಪನಿಗಳು ಎದುರಿಸುತ್ತಿವೆ. ಟೆಕ್ ಸಂಸ್ಥೆಗಳು ಮೂನ್‌ಲೈಟಿಂಗ್ ಅಥವಾ ಇತರೆ ಸೈಡ್ ಜಾಬ್‌ಗಳನ್ನು ಮಾಡುತ್ತಿರುವ ಉದ್ಯೋಗಿಗಳಂತಹ ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿರುವಾಗ, ಆಕ್ಸೆಂಚರ್ ಇಂಡಿಯಾ ಮತ್ತೊಂದು ಹಗರಣವನ್ನು ಬಹಿರಂಗಪಡಿಸಿರುವುದು ಪ್ರಮುಖ ಅಂಶವಾಗಿದೆ. 

ಇದನ್ನೂ ಓದಿ: ಏಕಕಾಲದಲ್ಲಿ ಎರಡೆರಡು ಕೆಲಸ, ಉದ್ಯೋಗಿಗಳಿಗೆ ಇನ್ಫೋಸಿಸ್ ಖಡಕ್ ವಾರ್ನಿಂಗ್!

ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೊದಲು ಪರಿಶೀಲನೆಯ ಕೊರತೆಯ ಹೊರತಾಗಿ, ಸಾಂಕ್ರಾಮಿಕ ಸಮಯದಲ್ಲಿ ಅನಿಶ್ಚಿತತೆಯು ಟೆಕ್ಕಿಗಳು ಸೈಡ್ ಉದ್ಯೋಗಗಳನ್ನು ಆಯ್ಕೆ ಮಾಡಲು ಕಾರಣವಾಯಿತು. ಅದು ಐಟಿ ವಲಯಕ್ಕೆ ಮೂನ್‌ಲೈಟಿಂಗ್ ಬಿಕ್ಕಟ್ಟನ್ನು ಉಂಟುಮಾಡಿತು. 

ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಕೆಲಸ ಮಾಡಿದ ಮೇಲೆ ಸಾಮೂಹಿಕ ವಜಾಗೊಳಿಸಿದ ನಂತರ, ವಿಪ್ರೋ ಮತ್ತು ಇನ್ಫೋಸಿಸ್‌ನಂತಹ ಕಂಪನಿಗಳು ತಮ್ಮ ನಿಲುವನ್ನು ಮೃದುಗೊಳಿಸಿದ್ದು, ಅನುಮತಿಗಳನ್ನು ತೆಗೆದುಕೊಂಡ ನಂತರ ಕಾರ್ಮಿಕರಿಗೆ ಸೈಡ್ ಉದ್ಯೋಗಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿವೆ. ಆದರೆ ಇದರ ಹೊರತಾಗಿ ಈ ಸಂಸ್ಥೆಗಳು ಇತ್ತೀಚೆಗೆ ನೇಮಕಾತಿಯನ್ನು ನಿಧಾನಗೊಳಿಸಿವೆ ಮತ್ತು ಫ್ರೆಶರ್‌ಗಳ ಆನ್‌ಬೋರ್ಡಿಂಗ್ ಅನ್ನು ಸಹ ವಿಳಂಬಗೊಳಿಸಿವೆ.

ಇದನ್ನೂ ಓದಿ: ಇನ್ಫೋಸಿಸ್‌ನ 1 ಲಕ್ಷ ರೂ. ಬೆಲೆಯ ಈ ಷೇರಿನ ಮೌಲ್ಯ ಈಗ 9.58 ಕೋಟಿ.!

click me!