ಬೆಂಗಳೂರಿನಲ್ಲಿರುವ ಸ್ವೀಡನ್ ಮೂಲದ ಐಕಿಯ ಪಿಠೋಪಕರಣಗಳ ಮಳಿಗೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಜುಲೈ 15ರೊಳಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಬೆಂಗಳೂರು (ಜೂನ್ 29): ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಓಪನ್ ಆಗಿರುವ ಸ್ವೀಡನ್ ಮೂಲದ ಐಕಿಯ (IKEA Bengaluru) ಪಿಠೋಪಕರಣಗಳ ಮಳಿಗೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ನೇಮಕಾತಿ ಕುರಿತು ಕಂಪನಿ ಅಧಿಸೂಚನೆ ಹೊರಡಿಸಿದೆ. ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದಾಗಿರುವ ಐಕಿಯ ಈ ಹಿನ್ನೆಲೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಕಂಪೆನಿ ಶೇ.72 ಸ್ಥಳೀಯ ಉದ್ಯೋಗಿಗಳೊಂದಿಗೆ 1000 ನೌಕರರನ್ನು ನೇಮಕ ಮಾಡಿದೆ. ಇದೀಗ ಮತ್ತಷ್ಟು ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ಸಂಬಂಧ ಕಂಪೆನಿಯು ತನ್ನ ಅಧಿಕೃತ ವೆಬ್‌ಸೈಟ್ ikea.com ನಲ್ಲಿ ಮಾಹಿತಿ ಪ್ರಕಟಿಸಿದೆ. ಆಸಕ್ತ ಮತ್ತು ಸ್ಥಳೀಯ ಅಭ್ಯರ್ಥಿಗಳು ಜುಲೈ 15ರೊಳಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳು: ಬೆಂಗಳೂರಿನಲ್ಲಿರುವ ಸ್ವೀಡನ್ ಮೂಲದ ಐಕಿಯ ಪಿಠೋಪಕರಣಗಳ ಮಳಿಗೆಯಲ್ಲಿ ಎಷ್ಟು ಹುದ್ದೆಗಳಿವೆ ಎಂದು ಕಂಪೆನಿ ಬಹಿರಂಗ ಪಡಿಸಿಲ್ಲ ಆದ್ರೆ ಯಾವ ವಿಭಾಗದಲ್ಲಿ ಕೆಲಸವಿದೆ ಎಂದು ಮಾಹಿತಿ ನೀಡಿದೆ. ಹುದ್ದೆಗಳ ಮಾಹಿತಿ ಹೀಗಿದೆ.
ಸಪ್ಲೈ ಪ್ಲಾನರ್, ಜವಳಿ ಕಾರ್ಪೆಟ್ಗಳು
ಸಪ್ಲೈ ಪ್ಲಾನರ್, ಜವಳಿ ಉತ್ಪನ್ನಗಳು
ಸಪ್ಲೈ ಪ್ಲಾನರ್, ವರ್ಗ ಪ್ರದೇಶ -ಮೆಟಲ್, ಪ್ಲಾಸ್ಟಿಕ್, ಫ್ಲೋಟ್ ಗ್ಲಾಸ್ ಮತ್ತು ಎಲೆಕ್ಟ್ರಾನಿಕ್ಸ್
ಪ್ರಾಜೆಕ್ಟ್ ಲೀಡರ್ (ವಿಸ್ತರಣೆ ಲಾಜಿಸ್ಟಿಕ್ಸ್)
ಉತ್ಪನ್ನ ಅನುಸರಣೆ ತಜ್ಞ
ಮಲ್ಟಿಚಾನಲ್ ನೆಟ್‌ವರ್ಕ್ ಪ್ರಾಜೆಕ್ಟ್ ಮ್ಯಾನೇಜರ್
ಹಿರಿಯ ಸೈಬರ್ ಇಂಜಿನಿಯರ್
ಸೈಬರ್ ಇಂಜಿನಿಯರ್
ಸರ್ವಿಸ್ ಫುಲ್ಫಿಲ್ಮೆಂಟ್ ಆಪರೇಷನ್ ಡೆವಲಪರ್
ಮಾರಾಟ ಸಹೋದ್ಯೋಗಿ (ಮೂಲ ತಂಡ)
ಪಬ್ಲಿಕ್ ರಿಲೇಷನ್ ಲೀಡರ್
ಉತ್ತರಾಧಿಕಾರ ಯೋಜನೆ ತಜ್ಞ
ಸೇವಾ ವ್ಯಾಪಾರ ವಸಾಹತು ಜೂನಿಯರ್ ಸ್ಪೆಷಲಿಸ್ಟ್
ಗೂಡ್ಸ್ ಫ್ಲೋ ಟೀಮ್ ಲೀಡರ್ - ವಿಆರ್ ಮಾಲ್
SSS ತಂಡ-ನಾಯಕ - VR ಮಾಲ್
BANK OF BARODA RECRUITMENT 2022; 325 ಹುದ್ದೆಗಳಿಗೆ ಅರ್ಜಿ ಆಹ್ವಾನ
ಶೈಕ್ಷಣಿಕ ವಿದ್ಯಾರ್ಹತೆ: ಬೆಂಗಳೂರಿನಲ್ಲಿರುವ ಸ್ವೀಡನ್ ಮೂಲದ ಐಕಿಯ ಪಿಠೋಪಕರಣಗಳ ಮಳಿಗೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ಶೈಕ್ಷಣಿಕ ವಿದ್ಯಾರ್ಹತೆಯನ್ನು ಪಡೆದಿರಬೇಕು. ಸಂಸ್ಥೆಯ ನಿಯಮಾವಳಿ ಅನುಸಾರ ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು.
ಇಂಗ್ಲಿಷ್ನಲ್ಲಿನಲ್ಲಿ ಚೆನ್ನಾಗಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯವನ್ನು ಇರಬೇಕು.
ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಸ್ಪೂರ್ತಿದಾಯಕವಾಗಿ ಕೆಲಸ ಮಾಡಬೇಕು.
ಆಯ್ಕೆ ಪ್ರಕ್ರಿಯೆ: ಬೆಂಗಳೂರಿನಲ್ಲಿರುವ ಸ್ವೀಡನ್ ಮೂಲದ ಐಕಿಯ ಪಿಠೋಪಕರಣಗಳ ಮಳಿಗೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಐಕಿಯ ಮಳಿಗೆಯಲ್ಲಿ ಪ್ರತಿನಿತ್ಯ ಅಭ್ಯರ್ಥಿಗಳ ಆಯ್ಕೆಗೆ ನಿರಂತರವಾಗಿ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನಲೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ, ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಹುದ್ದೆಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
Cochin Shipyard Recruitment 2022: ವಿವಿಧ 106 ಹುದ್ದೆಗಳಿಗೆ ನೇಮಕಾತಿ
ಕೋಲಾರದಲ್ಲಿ ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಆಹ್ವಾನ: ಕೋಲಾರ ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ 27-06-2022 ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 26-07-2022 ರಾತ್ರಿ 11-59 ಗಂಟೆಯ ವರೆಗೆ ಮಾತ್ರ ಹಾಗೂ ಬ್ಯಾಂಕ್ ಮುಖಾಂತರ ಶುಲ್ಕ ಪಾವತಿಸಲು 28-07-2022 ಕೊನೆಯ ದಿನಾಂಕವಾಗಿದೆ. ವಿದ್ಯಾರ್ಹತೆ, ವಯೋಮಿತಿ, ಹುದ್ದೆಗಳ ವರ್ಗೀಕರಣ ಹಾಗೂ ಹೆಚ್ಚಿನ ವಿವರಗಳಿಗೆ ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವೆಬ್‌ಸೈಟ್ ವಿಳಾಸದ ಮೂಲಕ ತಿಳಿದುಕೊಳ್ಳಬಹುದು ಎಂದು ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿಳಿಸಿದ್ದಾರೆ.