ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಹಲವು ಕೆಲಸ ಸುಲಭವಾಗಿದೆ. ಓಪನ್ ಎಐ ಸೇರಿದಂತೆ ಹಲವು ಪ್ರತಿಸ್ಪರ್ಧಿಗಳಿಗೆ ಗೂಗಲ್ ತನ್ನದೇ ಆದ ಎಐ ಅಭಿವೃದ್ಧಿಪಡಿಸಿದೆ. ಆದರೆ ಹೊಸ ಎಐ ಗೂಗಲ್ ನೌಕರರ ಉದ್ಯೋಗಕ್ಕೆ ಕುತ್ತು ನೀಡಿತಾ? ಗೂಗಲ್ ಇದೀಗ ಶೇಕಡಾ 10 ರಷ್ಟು ಉದ್ಯೋಗ ಕಡಿತ ಮಾಡಿದೆ.
ನವದೆಹಲಿ(ಡಿ.20) ಟೆಕ್ ದೈತ್ಯ ಗೂಗಲ್ ಸೇರಿದಂತೆ ಹಲವು ಟೆಕ್ ಕಂಪನಿಗಳು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಕ್ರಾಂತಿ ಮಾಡಿದೆ. ಓಪನ್ ಎಐ ಸೇರಿದಂತೆ ಹಲವು ಎಐ ಸೌಲಭ್ಯಗಳು ಲಭ್ಯವಿರುವ ಕಾರಣ ಇದೀಗ ಎಲ್ಲಾ ವಿಭಾಗದಲ್ಲಿ ಮಾನವ ಸಂಪನ್ಮೂಲ ಬಳಕೆ ಕಡಿಮೆಯಾಗಿದೆ. ಹೀಗೆ ಗೂಗಲ್‌ಗೆ ಎಐ ಅಭಿವೃದ್ಧಿಪಡಿಸಿದ ನೌಕರರೇ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರ? ಕಾರಣ ಗೂಗಲ್ ಇದೀಗ ಶೇಕಡಾ 10ರಷ್ಟು ಉದ್ಯೋಗ ಕಡಿತ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಮ್ಯಾನೇಜರ್, ಡೈರೆಕ್ಟರ್, ಉಪಾಧ್ಯಕ್ಷ ಸೇರಿದಂತೆ ಪ್ರಮುಖ ಹುದ್ದೆಗಳ ನೌಕರರ ಕೆಲಸ ಕಡಿತಗೊಂಡಿದೆ. ಇದಕ್ಕೆ ಎಐ ಕಾರಣವೇ?
ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಪ್ರಮುಖ ಬೋರ್ಡ್ ಸದಸ್ಯರು ಬುಧವಾರ ಸಭೆ ಸೇರಿದ್ದರೆ. ಈ ಕುರಿತು ಮಹತ್ವದ ಚರ್ಚೆ ನಡೆಸಿ ಶೇಕಡಾ 10 ರಷ್ಟು ಉದ್ಯೋಗ ಕಡಿತ ಘೋಷಿಸಿದ್ದಾರೆ. ಈ ಪೈಕಿ ಕೆಲ ನೌಕರರ ಜವಾಬ್ದಾರಿಯನ್ನು ಹಂಚಲಾಗುತ್ತಿದೆ. ಆದರೆ ಬಹುತೇಕ ಹುದ್ದೆಗಳ ಸಂಪೂರ್ಣ ಕಡಿತಗೊಂಡಿದೆ. ಪರೋಕ್ಷವಾಗಿ ಕೆಲ ಹುದ್ದೆಗಳ ಅವಶ್ಯಕತೆ ಸದ್ಯ ಗೂಗಲ್‌ನಲ್ಲಿ ಇಲ್ಲ ಎಂದು ಸ್ಪಷ್ಟವಾಗಿದೆ. ಇದು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ನಿರ್ವಹಿಸಲಾಗುತ್ತದೆ ಅನ್ನೋ ಸತ್ಯ ಮರೆಮಾಚುವಂತಿಲ್ಲ.
undefined
ಬರುತ್ತಿದೆ OpenAI ಬ್ರೌಸರ್, ಗೂಗಲ್ ಕ್ರೋಮ್ ಪ್ರಾಬಲ್ಯ ಮುಗಿಸುತ್ತಾ ಆರ್ಟಿಫೀಶಿಯಲ್ ಇಂಟಲಿಜೆನ್ಸ್?
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉದ್ಯೋಗ ಕಡಿತಕ್ಕೆ ನೇರ ಕಾರಣವಲ್ಲ. ಪ್ರಮುಖವಾಗಿ ಕಳೆದ ವರ್ಷ ಗೂಗಲ್ ಆದಾಯದಲ್ಲಿ ಶೇಕಡಾ 57 ರಷ್ಟು ಸರ್ಚ್ ಎಂಜಿನ್ ಮೂಲಕ ಬಂದಿದೆ. ಆದರೆ ಪ್ರತಿ ದಿನ ಗೂಗಲ್ ಪೈಪೋಟಿ ಹೆಚ್ಚಾಗುತ್ತಿದೆ. ಆದಾಯ ಇತರ ಪ್ರತಿಸ್ಪರ್ಧಿಗಳ ಜೊತೆ ಹಂಚಿಕೆಯಾಗುತ್ತಿದೆ. ಇದನ್ನು ಸರಿದೂಗಿಸುವ ಜವಾಬ್ದಾರಿಯೂ ಗೂಗಲ್ ಮೇಲಿದೆ. ಇವೆಲ್ಲವೂ ಉದ್ಯೋಗ ಕಡಿತದ ಭಾಗವಾಗಿದೆ. ಗೂಗಲ್ ಉದ್ಯೋಗ ಕಡಿತ ಡ್ರೈವ್ ಆರಂಭಿಸಿ ಕೆಲ ವರ್ಷಗಳೇ ಉರುಳಿಸಿದೆ. ಸೆಪ್ಟೆಂಬರ್ 2022ರಲ್ಲಿ ಗೂಗಲ್ ಉದ್ಯೋಗ ಕಡಿತ ಆರಂಭಿಸಿದೆ. ಹಂತ ಹಂತವಾಗಿ ಗೂಗಲ್ ಉದ್ಯೋಗ ಕಡಿತ ಮಾಡುತ್ತಿದೆ. ಇದೀಗ ಮಾಡಿದ ಶೇಕಡಾ 10 ರಷ್ಟು ಉದ್ಯೋಗ ಕಡಿತ ಇದರ ಭಾಗವಾಗಿದೆ.
2024ರಲ್ಲಿ ಗೂಗಲ್ ನಡೆಸಿದ 4ನೇ ಹಂತದ ಉದ್ಯೋಗ ಕಡಿತ ಇದಾಗಿದೆ. 2024ರ ಆರಂಭದಲ್ಲೇ ಅಂದರೆ ಜನವರಿ ತಿಂಗಳಲ್ಲಿ ಗೂಗಲ್ ಜಾಗತಿಕ ಜಾಹೀರಾತು ತಂಡದಿಂದ 100ಕ್ಕೂ ಹೆಚ್ಚು ಉದ್ಯೋಗ ಕಡಿತ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ ಕ್ಲೌಡ್ ತಂಡದಿಂದ 100ಕ್ಕೂ ಹೆಚ್ಚು ಉದ್ಯೋಗ ಕಡಿತ ಮಾಡಲಾಗಿತ್ತು. ಹೀಗೆ 2024ರಲ್ಲಿ ಇದುವರೆಗೆ 4 ಬಾರಿ ಉದ್ಯೋಗ ಕಡಿತ ಮಾಡಲಾಗಿದೆ.
2025ರ ಜನವರಿ ವೇಳೆಗೆ ಗೂಗೂಲ್ ಬಹುದೊಡ್ಡ ಉದ್ಯೋಗ ಕಡಿತದ ಒಟ್ಟು ಸಂಖ್ಯೆ ಬರೋಬ್ಬರಿ 12,000ಕ್ಕೆ ತಲುಪಲಿದೆ. ಅಂದರೆ ಜಾಗತಿಕ ಮಟ್ಟದಲ್ಲಿ ಗೂಗಲ್ ಉದ್ಯೋಗಿಗಳ ಪೈಕಿ ಶೇಕಡಾ 6.4 ರಷ್ಟು ಉದ್ಯೋಗ ಕಡಿತ ಪೂರ್ಣಗೊಳ್ಳಲಿದೆ. ಗೂಗಲ್ ಉದ್ಯೋಗ ಕಡಿತದಲ್ಲಿ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ. ಉದ್ಯೋಗಿಗಳ ಪರ್ಫಾಮೆನ್ಸ್, ಆದಾಯ, ಅವಶ್ಯಕತೆ, ಅನಿವಾರ್ಯತೆ, ಕಾರ್ಯಸ್ಥರ, ಜವಾಬ್ದಾರಿ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಲಾಗುತ್ತಿದೆ.
ಗೂಗಲ್ ಜೆಮಿನಿ ಎಐ ಡಾಕ್ಸ್ ಮೂಲಕ ಅದ್ಭುತ ಇಮೇಜ್ ಸೃಷ್ಟಿಸುವುದು ಹೇಗೆ?
ಕಳೆದ 25 ವರ್ಷದಲ್ಲಿ ಗೂಗಲ್ ಈ ರೀತಿಯ ಉದ್ಯೋಗ ಕಡಿತ ಮಾಡಿಲ್ಲ. ಆದರೆ ಇದು ಅನಿವಾರ್ಯವಾಗಿತ್ತು. ಈಗಲೂ ನಾವು ಕಾರ್ಯಪ್ರವೃತ್ತರಾಗದಿದ್ದರೆ ಮುಂದಿನ ದಿನಗಳಲ್ಲಿ ಗೂಗಲ್ ಸಂಕಷ್ಟಕ್ಕೆ ಹೆಚ್ಚಾಗುತ್ತಿತ್ತು ಎಂದು ಬ್ಯೂಸಿನೆಸ್ ಟೀಮ್ ಹೆಡ್ ಹೇಳಿದ್ದಾರೆ. ಗೂಗಲ್ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡಿದೆ. ಇತ್ತ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆ್ಯಪ್ ಗೂಗಲ್ ಜೆಮಿನಿ ಹೊಸ ಅವತಾರವನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ಮೂಲಕ ಗೂಗಲ್ ತನ್ನ ವರ್ಕ್‌ಫೋರ್ಸ್‌ನಲ್ಲೂ ಎಐ ಬಳಕೆ ಮಾಡುತ್ತಿದೆ.