ಪೂನಂ ಪಾಂಡೆ ಮೀರಿಸಿದ ಯೆಸ್ ಮೇಡಂ, 100 ಉದ್ಯೋಗಿಗಳ ವಜಾ ಪ್ರಚಾರದ ಸ್ಟಂಟ್!

By Chethan Kumar  |  First Published Dec 10, 2024, 4:38 PM IST

ಪೂನಂ ಪಾಂಡೆ ಕ್ಯಾನ್ಸರ್ ಪ್ರಚಾರ ಸ್ಟಂಟ್ ಮಾಡಿದ್ದು ಯಾರು ಮೆರೆತಿಲ್ಲ. ಆದರೆ ಪೂನಂ ಪಾಂಡೆಯನ್ನೇ ಮೀರಿಸುವ ಪ್ರಚಾರ ಸ್ಟಂಟ್‌ನ್ನು ಯೆಸ್ ಮೇಡಂ ಮಾಡಿದೆ. ಏನಿದು ಘಟನೆ? ಯಾರಿದು ಯೆಸ್ ಮೇಡಂ?


ನೋಯ್ಡಾ(ಡಿ.10) ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಸತ್ತ ನಾಟಕವಾಡಿ ಭಾರಿ ಟೀಕೆಗೆ ಗುರಿಯಾದ ಘಟನೆ ಯಾರು ಮರೆತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಡಿದ ನಾಟಕಕ್ಕೆ ಆಕ್ರೋಶ ಮಾತ್ರವಲ್ಲ, ಕೆಲ ದೂರುಗಳು ದಾಖಲಾಗಿತ್ತು. ಇದೇ ರೀತಿಯ ಪ್ರಚಾರದ ಸ್ಟಂಟ್ ಒಂದನ್ನು ಯೆಸ್ ಮೇಡಂ ಕೂಡ ಮಾಡಿದೆ. ಹೌದು, ನೋಯ್ಡಾ ಮೂಲದ ಸಲೂನ್ ಸರ್ವೀಸ್ ಕಂಪನಿ ಯೆಸ್ ಮೇಡಂ ಇತ್ತೀಚೆಗೆ 100 ಉದ್ಯೋಗಿಗಳನ್ನು ವಜಾ ಮಾಡಿದೆ ಅನ್ನೋ ಸುದ್ದಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಇದು ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಅನ್ನೋದು ಬಯಲಾಗಿದೆ.

ಯೆಸ್ ಮೇಡಂ ಕಂಪನಿ ಇತ್ತೀಚೆಗೆ ಉದ್ಯೋಗಿಗಳ ಮಾನಸಿಕ ಆರೋಗ್ಯ ಸಮೀಕ್ಷೆ ನಡೆಸಿತ್ತು ಎಂದು ವರದಿಯಾಗಿತ್ತು. ಈ ಸಮೀಕ್ಷೆಯಲ್ಲಿ ಮಾನಸಿಕವಾಗಿ ಒತ್ತಡದಲ್ಲಿರುವ 100 ಉದ್ಯೋಗಿಗಳನ್ನು ವಜಾ ಮಾಡಿದೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.ಯೆಸ್ ಮೇಡಂ ನಿರ್ಧಾರಕ್ಕೆ ಪರ ವಿರೋಧಗಳು ವ್ಯಕ್ತವಾಗಿತ್ತು. ಈ ಕುರಿತು ಕೆಲ ಉದ್ಯೋಗಿಗಳು ನೀಡಿದ ಪ್ರತಿಕ್ರಿಯೆ ಕೂಡ ಸದ್ದು ಮಾಡಿತ್ತು. ಇದ್ದಕ್ಕಿದ್ದಂತೆ ಯೆಸ್ ಮೇಡಂ ಕಂಪನಿ ಸರ್ವೆ ಮಾಡಿತ್ತು. ಈ ಸರ್ವೆ ಬಳಿಕ ಕೆಲ ಉದ್ಯೋಗಿಗಳನ್ನು ಗುರುತಿಸಿ ನೀವು ಒತ್ತಡದಲ್ಲಿದ್ದೀರಿ ಎಂದು ಕೆಲಸದಿಂದ ವಜಾ ಮಾಡಿದೆ. ಇದು ಯಾವ ನ್ಯಾಯ ಎಂದು ಕೆಲ ಉದ್ಯೋಗಿಗಳು ಪ್ರತಿಕ್ರಿಯೆ ನೀಡಿದ್ದರು. ಈ ಕುರಿತು ಯೆಸ್ ಮೇಡಂ ಕಂಪನಿ ಹೆಚ್‌ಆರ್ ಕಳುಹಿಸಿದ ಇಮೇಲ್ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು. 

Tap to resize

Latest Videos

ಮೀಟಿಂಗ್‌ನಲ್ಲಿ ಪಾಲ್ಗೊಳ್ಳದ 99 ಉದ್ಯೋಗಿಗಳು ವಜಾ, ಕಂಪನಿಯಲ್ಲೀಗ 11 ಮಂದಿ ಮಾತ್ರ!

ಈ ತಕ್ಷಣದಿಂದ ಕೆಲಸದಿಂದ ವಜಾ ಮಾಡುತ್ತಿರುವ ಇಮೇಲ್ ಸಂದೇಶ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಕುರಿತು ವಿವಾದ ಹೆಚ್ಚಾಗುತ್ತಿದ್ದಂತೆ ಇದೀಗ ಯೆಸ್ ಮೇಡಂ ಕಂಪನಿ ಕ್ಷಮೆ ಯಾಚಿಸಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಉದ್ಯೋಗಿಗಳ ವಜಾ ಕುರಿತು ಹಾಕಿದ ಪೋಸ್ಟ್ ಹಲವರ ಆತಂಕ, ದುಗುಡಕ್ಕೆ ಕಾರಣವಾಗಿದೆ. ಇದಕ್ಕಾಗೆ ಕ್ಷಮೆ ಕೇಳುತ್ತೇವೆ. ಉದ್ಯೋಗಿಗಳು ಒತ್ತಡಲ್ಲಿದ್ದಾರೆ ಅನ್ನೋ ಪೋಸ್ಟ್ ಕುರಿತು ಸ್ಪಷ್ಟೆ ನೀಡುತ್ತಿದ್ದೇವೆ. ಈ ರೀತಿಯ ಅಮಾನವೀಯ ನಡೆಯನ್ನು ಕಂಪನಿ ತೆಗೆದುಕೊಳ್ಳುವುದಿಲ್ಲ ಎಂದಿದೆ.

 ಇದು ಕಂಪನಿಯ ಹೊಸ ಪಾಲಿಸಿಯಾಗಿದೆ. ಯಾವ ಉದ್ಯೋಗಿ ಕೆಲದಿಂದ ಅಥವಾ ಇನ್ಯಾವುದೇ ಕಾರಣದಿಂದ ಒತ್ತಡಕ್ಕೆ ಒಳಗಾದರೆ 6 ದಿನಗಳ ರಜೆ ಪಡೆದುಕೊಳ್ಳಬುದು. ಈ ರಜೆಗೆ ಕಂಪನಿ ವೇತನ ಪಾವತಿಸಲಿದೆ. ಜೊತೆಗೆ ಕಂಪನಿ ಕಡೆಯಿಂದ ಆ ಉದ್ಯೋಗಿಗ ಸ್ಪಾ ಸೌಲಭ್ಯ ನೀಡಲಾಗುತ್ತದೆ. ಅವರ ಮನೆಗೆ ತೆರಳಿ ಸ್ಪಾ ಸೌಲಭ್ಯ ನೀಡಲಾಗುತ್ತದೆ. ಈ ಮೂಲಕ ಉದ್ಯೋಗಿಗಳ ಒತ್ತಡ ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ. ಇದರ ಭಾಗವಾಗಿ ಈ ಒತ್ತಡ ಹಾಗೂ ವಜಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ಯೆಸ್ ಮೇಡಂ ಕಂಪನಿ ಹೇಳಿದೆ. 
 

click me!