ಬರೀ 85 ಸಾವಿರ ಸ್ಟೈಫಂಡ್‌ನ ಆರು ತಿಂಗಳ ಇಂಟರ್ನ್‌ಶಿಪ್ ಮಾಡುವ ಸಲುವಾಗಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಬರೋಬ್ಬರಿ 13 ಜಾಬ್ ಆಫರ್‌ಅನ್ನು ತಿರಸ್ಕರಿಸಿದ್ದರು.
ಬೆಂಗಳೂರು (ಆ.14): ಒಂದು ವರ್ಷಕ್ಕೆ 17 ಲಕ್ಷ ರೂಪಾಯಿ ಸ್ಯಾಲರಿ, ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋದಂಥ ಘಟಾನುಘಟಿ ಕಂಪನಿಗಳೂ ಸೇರಿದಂತೆ 21 ವರ್ಷದ ರಿತಿ ಕುಮಾರಿಗೆ 13 ಕಂಪನಿಗಳು ಜಾಬ್ ಆಫರ್ ಮಾಡಿದ್ದವು. ಆದರೆ, ರಿತಿ ಕುಮಾರಿ ಮಾತ್ರ ತಮ್ಮ ನಿರ್ಧಾರದಲ್ಲಿ ಸ್ಪಷ್ಟವಾಗಿದ್ದರು. ಈ ಎಲ್ಲಾ ಕಂಪನಿಯ ಆಫರ್‌ಅನ್ನು ತಿರಸ್ಕರಿಸಿದ್ದ ಈಕೆ, ವಾಲ್‌ಮಾರ್ಟ್ ಕಂಪನಿಯಲ್ಲಿ ಆರು ತಿಗಳ ಇಂಟರ್ನ್‌ಶಿಪ್‌ಗೆ ಸೇರುವ ತೀರ್ಮಾನ ಮಾಡಿದ್ದರು. ಈಗ ಅದೇ ಕಂಪನಿಯಲ್ಲಿ ಆಕೆ ಕೆಲಸ ಮಾಡಲು ಆರಂಭಿಸಿ ಹತ್ತಿರ ಹತ್ತಿರ ಒಂದು ವರ್ಷವಾಗಿದೆ. ಇಂದು ಈಕೆಯ ವೇತನ ವಾರ್ಷಿಕ 20 ಲಕ್ಷ ರೂಪಾಯಿ. ಈ ಕುರಿತಾಗಿ ಮಾತನಾಡಿರುವ ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್, ಬೇರೆ ಕಂಪನಿಗಳು ನೀಡಿದ ಜಾಬ್ ಆಫರ್‌ಗಳು ಉತ್ತಮವಾಗಿಯೇ ಇತ್ತು. ನನ್ನ ಕುಟುಂಬದವರೂ ಕೂಡ ಇದಕ್ಕಿಂತ ಒಳ್ಳೆಯ ಜಾಬ್ ಸಿಗೋದು ಸಾಧ್ಯವೇ ಇಲ್ಲ ಎಂದಿದ್ದರು. ಆದರೆ, ನನ್ನ ಹೃದಯದ ಮಾತನ್ನು ಕೇಳಲು ನನಗೆ ಸ್ಫೂರ್ತಿ ನೀಡಿದ್ದು ಸಹೋದರಿ. ಅದಕ್ಕಾಗಿಯೇ ಕೊನೆಗೆ ನಾನು ವಾಲ್‌ಮಾರ್ಟ್‌ಗೆ ಇಂಟರ್ನ್‌ಶಿಪ್ ಸೇರುವುದನ್ನು ಆಯ್ಕೆ ಮಾಡಿಕೊಂಡಿದ್ದೆ. ಇಂಟರ್ನ್‌ಶಿಪ್ ಅವಧಿ ಆರು ತಿಂಗಳಾಗಿತ್ತು. ಕಂಪನಿ ನನಗೆ 85 ಸಾವಿರ ಸ್ಟೈಫಂಡ್ ನೀಡುವುದಾಗಿ ಭರವಸೆ ನೀಡಿತ್ತು' ಎನ್ನುತ್ತಾರೆ.
"ನನಗೆ ವಾಲ್‌ಮಾರ್ಟ್ ಇಂಟರ್ನ್‌ಶಿಪ್ ಆಫರ್ ಸ್ವೀಕರಿಸಿದಾಗ ಬಹಳ ಸಂತೋಷವಾಗಿತ್ತು. ನಾನು ಅದಕ್ಕೆ ಸೇರಲು ದೃಢ ನಿರ್ಧಾರ ಮಾಡಿದ್ದೆ" ಎಂದು ರಿತು ಕುಮಾರಿ ಹೇಳಿದ್ದಾರೆ. ಆದರೆ, ನನ್ನ ನಿರ್ಧಾರದಿಂದ ಪೋಷಕರಿಗೆ ಖುಷಿಯಾಗಿರಲಿಲ್ಲ. ಯಾಕೆಂದರೆ, ಬೇರೆ ಕಂಪನಿಗಳು ಉತ್ತಮ ವೇತನ ನೀಡುತ್ತಿದ್ದರೂ ಅದನ್ನು ಬಿಟ್ಟು ವಾಲ್‌ಮಾರ್ಟ್ ಕೆಲಸ ಆರಿಸಿಕೊಂಡಿದ್ದಕ್ಕೆ ಬೇಸರವಾಗಿತ್ತು. ಅದಲ್ಲದೆ, ಬೇರೆ ಕಂಪನಿಗಳಲ್ಲಿ ರೆಗ್ಯಲರ್ ಜಾಬ್ ಆಗಿದ್ದರೆ, ವಾಲ್‌ಮಾರ್ಟ್‌ನಲ್ಲಿ ಕೇವಲ 6 ತಿಂಗಳ ಇಂಟರ್ನ್‌ಶಿಪ್ ಆಗಿತ್ತು ಅನ್ನೋದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ರಿತು ಹೇಳಿದ್ದಾರೆ.
"ಸ್ಥಿರತೆ ಅಥವಾ ಅಪಾಯದ ನಡುವೆ ಆಯ್ಕೆ ಮಾಡುವುದು ಕಠಿಣ ನಿರ್ಧಾರ" ಎಂದು ಹೇಳುವ ರಿತು, "ಆದರೆ ಆ ಸಮಯದಲ್ಲಿ ಯಾರೂ ನನ್ನ ಅಪಾಯವನ್ನು ಬೆಂಬಲಿಸದಿದ್ದಾಗ ನನ್ನ ಸಹೋದರಿ ನನ್ನ ಹೃದಯವನ್ನು ಅನುಸರಿಸಲು ಸಲಹೆ ನೀಡಿದರು' ಎನ್ನುತ್ತಾರೆ. ಪ್ರಸ್ತುತ ಐಐಟಿ ಧನಬಾದ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ನನ್ನ ಸಹೋದರಿ ಪ್ರೀತಿ ಕುಮಾರಿ, ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಎಂಜಿನಿಯರಿಂಗ್‌ನಲ್ಲಿ (ಗೇಟ್) ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆಯನ್ನು ತೆಗೆದುಕೊಳ್ಳುವ ಸಲುವಾಗಿ ಎಲ್ಲಾ ಉದ್ಯೋಗದ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದಳು ಎಂದು ನೆನಪಿಸಿಕೊಂಡಿದ್ದಾರೆ.
ಮಗಳ ಪೈಲಟ್ ಮಾಡಲು ಜಮೀನು ಮಾರಿದ ಅಪ್ಪ, ವಿಮಾನ ಹಾರಿಸೋ ಟೀನಾ 2 ಮಕ್ಕಳ ತಾಯಿ!
"ಆ ಸಮಯದಲ್ಲೂ ಎಲ್ಲರೂ ಅವಳ ಪರವಾಗಿರಲಿಲ್ಲ ಆದರೆ ಆಕೆ ನಿರ್ಧಾರವನ್ನು ತೆಗೆದುಕೊಂಡಳು ಮತ್ತು ಉಳಿದವರ ನಿರ್ಧಾರ ತಪ್ಪು ಎಂದು ಸಾಬೀತುಪಡಿಸಿದಳು. ಹಾಗಾಗಿ, ನಾನು ವಾಲ್‌ಮಾರ್ಟ್‌ನಲ್ಲಿ ಇಂಟರ್ನ್‌ಷಿಪ್ ಪ್ರಸ್ತಾಪವನ್ನು ತೆಗೆದುಕೊಂಡೆ, ನನ್ನ ಹೃದಯವನ್ನು ಕೇಳಿದೆ, ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡಿದೆ, ನನ್ನ ಪೂರ್ವ-ಪ್ಲೇಸ್ಮೆಂಟ್ ಆಫರ್ ಸಂದರ್ಶನಗಳನ್ನು ನೀಡಿದೆ, ಮತ್ತು ಅಂತಿಮವಾಗಿ ವಾಲ್‌ಮಾರ್ಟ್‌ನಿಂದ ಉದ್ಯೋಗ ಆಫರ್ ಸಿಕ್ಕಿತು' ಎಂದು ಹೇಳಿದ್ದಾರೆ.
ಆಫ್ರಿಕಾ ಜನರ ಆರೋಗ್ಯದ ಗುಟ್ಟು ಭಾರತಕ್ಕೆ ಪರಿಚಯಿಸಿದ ಅನಿಲ್: Baobab Tree ವೈಶಿಷ್ಟ್ಯತೆ ಗೊತ್ತಾ?
ಈಗಿರುವ ವೃತ್ತಿಯ ಬಗ್ಗೆ ಪೋಷಕರ ಪ್ರತಿಕ್ರಿಯೆ ಹೇಗಿದೆ ಎನ್ನುವ ಪ್ರಶ್ನೆಗೆ, "ಈಗ ಅವರು ನನ್ನ ಯಶಸ್ಸಿನಿಂದ ಅತ್ಯಂತ ಸಂತೋಷವಾಗಿದ್ದಾರೆ. ನನ್ನ ಶಾಲಾ ಮತ್ತು ಕಾಲೇಜು ಇತಿಹಾಸದಲ್ಲಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿರುವುದು ಅವರಿಗೆ ಹೆಮ್ಮೆ ತಂದಿದೆ. ನಾನು ಓದಿದ ಶಾಲೆಯಲ್ಲಿಯೇ ನನ್ನ ತಂದೆ ಕಲಿಸುತ್ತಿದ್ದರು. ನನ್ನ ಸಾಧನೆಗೆ ನನ್ನ ತಂದೆಗೆ ಸಹ ಶಿಕ್ಷಕರು ಹೊಗಳಿದಾಗ ಅವರ ಖುಷಿಯನ್ನು ನೋಡಲು ಸಂತೋಷವಾಗುತ್ತದೆ' ಎನ್ನುತ್ತಾರೆ.