Chitradurga: 15ಕ್ಕಿಂತ ಅಧಿಕ ಕಾರ್ಮಿಕರನ್ನು ದಿಢೀರ್ ಕೆಲಸದಿಂದ ತೆಗೆದು ಹಾಕಿದ ಫ್ಲಿಪ್​​ಕಾರ್ಟ್ ಕಂಪನಿ

By Govindaraj SFirst Published Jun 10, 2022, 7:34 PM IST
Highlights

ಅವರೆಲ್ಲಾ ಫ್ಲಿಪ್​​ಕಾರ್ಟ್ ಕಂಪನಿಯ‌ ಉದ್ಯೋಗಿಗಳು. ಜೀವದ ಹಂಗು ತೊರೆದು ಕಾಯಕ ಮಾಡ್ತಾ, ಆ ಕೆಲಸವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ರು. ಆದ್ರೆ ದಿಢೀರ್ ಅಂತ ಅವರನ್ನ ಕಂಪನಿಯು ಕೆಲಸದಿಂದ ವಜಾಗೊಳಿಸಿದ್ದು, 15ಕ್ಕೂ ಅಧಿಕ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. 

ಚಿತ್ರದುರ್ಗ (ಜೂ.10): ಅವರೆಲ್ಲಾಫ್ಲಿಪ್​​ಕಾರ್ಟ್ ಕಂಪನಿಯ‌ ಉದ್ಯೋಗಿಗಳು. ಜೀವದ ಹಂಗು ತೊರೆದು ಕಾಯಕ ಮಾಡ್ತಾ, ಆ ಕೆಲಸವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ರು. ಆದ್ರೆ ದಿಢೀರ್ ಅಂತ ಅವರನ್ನ ಕಂಪನಿಯು ಕೆಲಸದಿಂದ ವಜಾಗೊಳಿಸಿದ್ದು, 15ಕ್ಕೂ ಅಧಿಕ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಈ ಕುರಿತು ಒಂದು ವರದಿ ಇಲ್ಲಿದೆ. ಫ್ಲಿಪ್​​ಕಾರ್ಟ್ ಏಜನ್ಸಿ ಮುಂದೆ ನಿಂತು ನ್ಯಾಯ ಬೇಕು ಎಂದು ಆಕ್ರೋಶ ಹೊರ ಹಾಕ್ತಿರೋ ಯುವಕರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗದ ಹೊರಭಾಗದಲ್ಲಿರುವ ವಿದ್ಯಾನಗರ. 

ಹೌದು! ಸತತ ಮೂರ್ನಾಲ್ಕು ವರ್ಷಗಳಿಂದ  ಫ್ಲಿಪ್ ಕಾರ್ಟ್ ಕಂಪನಿಯಲ್ಲಿ‌ ಪಾರ್ಸಲ್ ಡೆಲಿವರಿ ಬಾಯ್ಸ್‌ಗಳಾಗಿ ಕೆಲಸ ಮಾಡ್ತಿದ್ದ 18 ಜನ ಕಾರ್ಮಿಕರನ್ನು ದಿಢೀರ್ ಅಂತ ಕಂಪನಿ ಕೆಲಸದಿಂದ ವಜಾಗೊಳಿಸಿದೆ. ಹೀಗಾಗಿ ಈ ಕೆಲಸವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಯುವಕರು, ಮುಂದಿನ ಜೀವನ ಸಾಗಿಸೋದು ಹೇಗೆಂಬ ಆತಂಕದಲ್ಲಿದ್ದಾರೆ. ಅಲ್ಲದೇ ಕಾರಣವಿಲ್ಲದೇ ದಿಢೀರ್ ಅಂತ ಕೆಲಸದಿಂದ ತೆಗೆದಿರೋ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರೋ ಕಾರ್ಮಿಕರು‌, ನಮಗೆ ಉದ್ಯೋಗ ಕೊಡಬೇಕು ಇಲ್ಲವಾದ್ರೆ, ನಮ್ಮ ಜೀವದ ಹಂಗು ತೊರೆದು ಕೋವಿಡ್ ವೇಳೆ ಮಾಡಿರುವ ಕಾಯಕ ಪರಿಗಣಿಸಿ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. 

ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಿಂದ ಕಣಕ್ಕೆ; BT Lalitha Naik

ಇನ್ನು ಈ ರೀತಿ ದಿಢೀರ್ ಅಂತ ಕಾರ್ಮಿಕರನ್ನು ಕೆಲಸದಿಂದ ತೆಗೆದಿರೋ ಬಗ್ಗೆ ಅಲ್ಲಿನ ವ್ಯವಸ್ಥಾಪಕರನ್ನು ಕೇಳಿದ್ರೆ, ಈ 17 ಜನರ ಮೇಲೆ ಬ್ಲಾಕ್ ಲೀಸ್ಟ್ ಆರೋಪವಿದೆ. ಹೀಗಾಗಿ ನಾವು ಕಂಪನಿಯ ಆದೇಶವನ್ನು ಪಾಲಿಸಿದ್ದೇವೆ ಅಂತ ಜಾರ್ಕೋತಾರೆ. ಅಲ್ಲದೇ ಇವರನ್ನೆಲ್ಲ ವೆಂಡರ್ ಆಗಿ ಕೆಲಸಕ್ಕೆ‌ ಸೇರಿಸಿಕೊಳ್ಳಲಾಗಿತ್ತು. ನಾನು ಕೇವಲ ಇಲ್ಲ‌ ಕೆಲಸಗಾರ ಅಷ್ಟೆ. ಅವರು ಹೇಳಿದ ಹಾಗೆ ನಡೆದುಕೊಳ್ಳಬೇಕು. ಅವರನ್ನು ತೆಗೆಯಲು ಸೂಕ್ತ ಕಾರಣ ನೀಡಿ ಎಂದ ಮಾಧ್ಯಮಕ್ಕೂ ಸರಿಯಾಗಿ ಉತ್ತರಿಸದೇ ಕಾಲ್ಕಿತ್ತರು. ಒಟ್ಟಾರೆ ಕೋಟೆನಾಡಲ್ಲಿ ಫ್ಲಿಪ್​​ಕಾರ್ಟ್ ಏಜನ್ಸಿಯ ಡೆಲಿವರಿ ಬಾಯ್ಸ್‌ಗಳನ್ನು ದಿಢೀರ್ ಅಂತ ಕೆಲಸದಿಂದ ವಜಾಗೊಳಿಸಲಾಗಿದೆ‌. ಹೀಗಾಗಿ ಅವರ ರೋದನೆ ಕೇಳುವವರಿಲ್ಲದಂತಾಗಿದೆ. ಸಂಬಂಧಪಟ್ಟ ಕಾರ್ಮಿಕರ ಇಲಾಖೆ ಇವರ ಸಂಕಷ್ಟಕ್ಕೊಂದು ನ್ಯಾಯ ಒದಗಿಸಬೇಕಿದೆ.

ಶಾಲೆಯ ಅಭಿವೃದ್ಧಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಂದ್ರೆ ಸಾಕು ಮೂಗು ಮುರಿಯುವ ಪೋಷಕರೇ ಹೆಚ್ಚು. ಯಾಕಪ್ಪ ಅಂದ್ರೆ ಅಲ್ಲಿ ಸರಿಯಾಗಿ ಶಿಕ್ಷಣ ಸಿಗುವುದಿಲ್ಲ ಎಂಬ ಭ್ರಮೆಯಲ್ಲಿ ಎಲ್ಲರೂ ಖಾಸಗಿ ಶಾಲೆಗಳತ್ತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದಾಗ್ತಾರೆ. ಆದರೆ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳು ನಿತ್ಯ ಬಂದು ನಮಗೆ ಪಾಠ ಮಾಡಿ ಎಂದು ಕೇಳಿದ್ರು ಸೂಕ್ತ ಶಿಕ್ಷಕರಿಲ್ಲದ ಕೊರತೆಯಿಂದ ಅದು ಸಾಧ್ಯವಾಗ್ತಿಲ್ಲ. ಧಿಕ್ಕಾರ, ಧಿಕ್ಕಾರ, ಸರ್ಕಾರಕ್ಕೆ ಧಿಕ್ಕಾರ.. ಕೊಠಡಿ ಕೊಡಿ, ಇಲ್ಲ ಟಿಸಿ ಕೊಡಿ ಎಂದು ಪ್ರತಿಭಟನೆ ಮಾಡ್ತಿರೋ ಮಕ್ಕಳು. 

ಚಿತ್ರದುರ್ಗದಿಂದ ಸ್ಪರ್ಧಿಸಲು ಸಕಲ ಪ್ಲಾನ್ ಮಾಡಿರೋ ರಘು ಅಚಾರ್

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹಾಲ್ ಮಾದೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳು, ಪೋಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಇಂದು ಹಿರಿಯೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಶಾಲಾ ಕೊಠಡಿ ಮಂಜೂರು ಮಾಡಿ ಇಲ್ಲವೇ ಟಿ ಸಿ ಕೊಡಿ ಎಂದು ಪ್ರತಿಭಟಿಸಿದರು. ಹಾಲ್ ಮಾದೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ರವರೆಗೆ ತರಗತಿಗಳಿದ್ದು ಸುಮಾರು 56 ಮಕ್ಕಳು ವ್ಯಾಸಂಗ ಮಾಡುತ್ತವೆ.1957ರಲ್ಲಿ ಪ್ರಾರಂಭವಾದ ಶಾಲೆಗೆ 1958-59 ರಲ್ಲಿ ಹೆಂಚಿನ ಕೊಠಡಿಗಳು ನಿರ್ಮಾಣವಾಗಿದ್ದು ಅವೇ ಕೊಠಡಿಗಳು ಮುಂದುವರೆದುಕೊಂಡು ಬಂದು 2015 ರಲ್ಲಿ ತರಗತಿಯ ಬೋಧನೆಯ ವೇಳೆ ಮರದ ತೀರು ಬಿದ್ದು ಶಿಕ್ಷಕರು ಮತ್ತು ಮಕ್ಕಳು ಗಾಯಗೊಂಡ ಘಟನೆ ಕೂಡ ನಡೆದಿತ್ತು. 

click me!