ಭಾರತದಲ್ಲಿ ಮುಂದಿನ 6 ತಿಂಗಳಲ್ಲಿ ಶೇ.86ರಷ್ಟು ಉದ್ಯೋಗಿಗಳು ರಾಜೀನಾಮೆ: ವರದಿ

By Suvarna NewsFirst Published Jun 8, 2022, 8:39 PM IST
Highlights

* ಭಾರತದಲ್ಲಿ ಮುಂದಿನ 6 ತಿಂಗಳಲ್ಲಿ ಶೇ.86ರಷ್ಟು ಉದ್ಯೋಗಿಗಳು ರಾಜೀನಾಮೆ
* ನೇಮಕಾತಿ ಏಜೆನ್ಸಿ ಮೈಕೆಲ್ ಪೇಜ್ ವರದಿ
* ಯೋಗಕ್ಷೇಮ ಮತ್ತು ಸಂತೋಷದ ಮೇಲೆ ಗಮನ ಹರಿಸಲು ರಾಜೀನಾಮೆ

ನವದೆಹಲಿ, (ಜೂನ್.08): ಕೊರೋನಾ ವೈರಸ್  ವಿಶ್ವದಾದ್ಯಂತದ ಆರ್ಥಿಕತೆಗಳ ಮೇಲೆ ಪರಿಣಾಮ ಬೀರಿದೆ, ಅಲ್ಲದೇ ಹಲವು ಕ್ಷೇತ್ರಗಳನ್ನು ತಲೆಕೆಳಗಾಗುವಂತೆ ಮಾಡಿದೆ. ಇದರ ಮಧ್ಯೆ ಭಾರತದಲ್ಲಿ 2022ರಲ್ಲಿ ರಾಜೀನಾಮೆ ಪರ್ವ ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿ ಬಂದಿದೆ,

ಹೌದು....ಕೊರೋನಾ ಮುಗಿದ ಬಳಿಕ ಇದೀಗ ಹಂತ-ಹಂತವಾಗಿ ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಲಾಗುತ್ತಿದೆ. ವರ್ಕ್ ಫ್ರಮ್ ಹೋಮ್ ಅಂತ್ಯವಾಗಿದ್ದರಿಂದ ಹಲವು ಕಂಪನಿಯ ಉದ್ಯೋಗಿಗಳು ಕೆಲಸ ಬಿಟ್ಟಿದ್ದಾರೆ.  ಇದೀಗ ಮುಂದಿನ 6 ತಿಂಗಳಲ್ಲಿ ಶೇಕಡಾ 86ರಷ್ಟು ಉದ್ಯೋಗಿಗಳು ರಾಜೀನಾಮೆ ನೀಡಲು ಯೋಚಿಸುತ್ತಿದ್ದಾರೆ ಎಂದು ನೇಮಕಾತಿ ಏಜೆನ್ಸಿ ಮೈಕೆಲ್ ಪೇಜ್ ತನ್ನ ವರದಿಯಲ್ಲಿ ತಿಳಿಸಿದೆ.

ಸಮೀಕ್ಷೆ ಪ್ರಕಾರ, ಭಾರತದಲ್ಲಿ ಸುಮಾರು 61 ಪ್ರತಿಶತದಷ್ಟು ಉದ್ಯೋಗಿಗಳು ಕಡಿಮೆ ವೇತನವನ್ನ ಸ್ವೀಕರಿಸಲು ಅಥವಾ ವೇತನ ಹೆಚ್ಚಳವನ್ನ ತ್ಯಜಿಸಲು ಅಥವಾ ಉತ್ತಮ ಕೆಲಸ-ಜೀವನ ಸಮತೋಲನ, ಒಟ್ಟಾರೆ ಯೋಗಕ್ಷೇಮ ಮತ್ತು ಸಂತೋಷದ ಮೇಲೆ ಗಮನ ಹರಿಸಲು ಬಡ್ತಿಯನ್ನ ತ್ಯಜಿಸಲು ಸಿದ್ಧರಿದ್ದಾರೆ ಎಂದು ವರದಿ ಹೇಳಿದೆ.

Work From Office: ಉದ್ಯೋಗಿಗಳನ್ನು ಕಚೇರಿಗೆ ಮರಳಿ ತರಲು ಕಂಪನಿಗಳ ಹರಸಾಹಸ

ನಮ್ಮ ಅಂಕಿ-ಅಂಶಗಳ ಪ್ರಕಾರ, ಜಾಗತಿಕ ಸಾಂಕ್ರಾಮಿಕ 2022ರಿಂದ ಪ್ರಚೋದಿಸಲ್ಪಟ್ಟು ಕಳೆದ ಎರಡು ವರ್ಷಗಳಿಂದ ರಾಜೀನಾಮೆ ಪರ್ವ ಮುಂದುವರೆದಿದೆ. ಇನ್ಮುಂದೆ ಅದು ತೀವ್ರಗೊಳ್ಳುತ್ತದೆ ತಿಳಿಸಿದೆ.

ವೃತ್ತಿಜೀವನದ ಪ್ರಗತಿ, ಹೆಚ್ಚಿನ ಸಂಬಳ, ಪಾತ್ರ ಬದಲಾವಣೆ ಮತ್ತು ಉದ್ಯೋಗ ತೃಪ್ತಿ ಸೇರಿದಂತೆ ರಾಜೀನಾಮೆಗೆ ಕಾರಣಗಳು ಆಗಿರುಬಹುದು ಎಂದು ವರದಿ ಹೇಳುತ್ತದೆ.

ಉದ್ಯೋಗ ನೇಮಕಾತಿ ಶೇ.40 ಏರಿಕೆ
ಭಾರತದಲ್ಲಿ 2022 ರಲ್ಲಿ ಉದ್ಯೋಗ ನೇಮಕಾತಿ ಚಟುವಟಿಕೆಯಲ್ಲಿ ಶೇಕಡಾ 40 ರಷ್ಟು ಬೆಳವಣಿಗೆ ಕಂಡು ಬಂದಿದೆ. ಅದರಲ್ಲೂ ಮುಖ್ಯವಾಗಿ ಫ್ರೆಶರ್‌ಗಳಿಗೆ (ಹೊಸಬರಿಗೆ) ಅಧಿಕ ಬೇಡಿಕೆ ಇದೆ. ಇತ್ತೀಚಿನ ನೌಕ್ರಿ ಜಾಬ್‌ಸ್ಪೀಕ್ ಪ್ರಕಾರ, ಮೇ 2022 ರ ಸೂಚ್ಯಂಕವು 2863 ಉದ್ಯೋಗಗಳನ್ನು ಹೊಂದಿದೆ.

ಗಮನಾರ್ಹವಾಗಿ ಆತಿಥ್ಯ ಮತ್ತು ಪ್ರಯಾಣ ಉದ್ಯಮದಲ್ಲಿನ ನೇಮಕಾತಿ ದರವು 357 ಪ್ರತಿಶತದಷ್ಟು ಹೆಚ್ಚಳವಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕವೂ ಪ್ರಯಾಣ ಉದ್ಯಮಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡಿದೆ. ಆದರೆ ಈಗ ಈ ವಲಯದಲ್ಲಿ ನೇಮಕಾತಿ ಹೆಚ್ಚಳವಾಗುತ್ತಿದೆ. ಚಿಲ್ಲರೆ ಉದ್ಯಮದಲ್ಲಿ ನೇಮಕಾತಿಯು 175 ಪ್ರತಿಶತದಷ್ಟು ಹೆಚ್ಚಳ ಕಂಡಿದೆ. ರಿಯಲ್ ಎಸ್ಟೇಟ್‌ನಲ್ಲಿ ಶೇಕಡ 141 ಹಾಗೂ ವಿಮೆಯಲ್ಲಿ ಶೇಕಡ 126 ಪ್ರತಿಶತ ಏರಿಕೆ ಕಂಡಿದೆ.

ಮನೆಯಿಂದಲೇ ಕೆಲಸ ಮಾಡಲು ಉತ್ಸುಕ
ಕೋವಿಡ್‌-19 ಪ್ರಕರಣಗಳು ಇಳಿಮುಖವಾದ ಬಳಿಕ ಕಾರ್ಪೊರೇಟ್‌ ಕಂಪನಿಗಳು ಮನೆಯಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಕಚೇರಿಗೆ ಮರಳಲು ಸೂಚಿಸಿವೆ. ಆದರೆ ಇತ್ತೀಚಿನ ಸಮೀಕ್ಷೆಯ ಪ್ರಕಾರ ಶೇ. 62ಕ್ಕೂ ಹೆಚ್ಚು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಉತ್ಸುಕರಾಗಿದ್ದಾರೆಯೇ ವಿನಾ, ಕಚೇರಿಗೆ ಮರಳಲು ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಕಾರಣಗಳು ವಿಶಿಷ್ಟವಾಗಿವೆ.

ಮನೆಯಿಂದ ಕಚೇರಿಗೆ ಪ್ರಯಾಣ ಮಾಡಲು ತಗಲುವ ಸಮಯ, ಹಣದ ವೆಚ್ಚ, ಆರೋಗ್ಯ ಮತ್ತು ಸುರಕ್ಷತೆ ಹಾಗೂ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಕುಟುಂಬದ ಜತೆಗೆ ಕಾಲ ಕಳೆಯಲು ಸಮಯ ಸಿಗುವುದರಿಂದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಹೆಚ್ಚು ಉತ್ಸುಕರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

click me!