ಪ್ರೋಗ್ರಾಮಿಂಗ್ ಲಾಂಗ್ವೇಜ್‌ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ ನಂತರ ಸಂದರ್ಶನ ನಡೆಸುವ ವ್ಯಕ್ತಿಗಳು ಸಿಎಸ್‌ಎಸ್ ಬಳಸಿ ಭಾರತದ ಧ್ವಜವನ್ನು ಬಿಡಿಸಿ ಎಂದು ಹೇಳಿದ್ದರಿಂದ ಟೆಕ್ಕಿ ನಿರಾಶೆಗೆ ಒಳಗಾಗಿದ್ದಾರೆ.
ಬೆಂಗಳೂರು (ಅ.14): ರಾಜಧಾನಿಯಲ್ಲಿ ಟೆಕ್ಕಿಯೊಬ್ಬರಿಗೆ ಜಾಬ್ ಇಂಟರ್‌ವ್ಯೂನಲ್ಲಿ ಸಿಎಸ್‌ಎಸ್ ಪ್ರೋಗ್ರಾಮಿಂಗ್ ಭಾಷೆ ಬಳಸಿ ಭಾರತದ ಧ್ವಜ ಹಾಗೂ ಅಶೋಕ ಚಕ್ರವನ್ನು ಬಿಡಿಸಿ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಬೆಂಗಳೂರು ಮೂಲದ ಟೆಕ್ಕಿ ಸೋಶಿಯಲ್ ಮೀಡಿಯಾ ವೇದಿಕೆ ರೆಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ಭಾರತದ ಧ್ವಜ ಹಾಗೂ ಅಶೋಕ ಚಕ್ರ ಬಿಡಿಸಿದ್ದೆ. ಆದರೆ, ಅಶೋಕ ಚಕ್ರದ ಒಳಗಿನ ಗೆರೆಗಳನ್ನು ಹಾಕಲು ಸಾಧ್ಯವಾಗದೇ ಸಂದರ್ಶನದಿಂದ ಹೊರಬಂದೆ ಎಂದು ತಿಳಿಸಿದ್ದಾರೆ. ಕಂಪನಿಯ ಸಂದರ್ಶಕರಿಂದ ನಾನು ಕಲಿತ ಹಾಗೂ ಅನುಭವ ಪಡೆದ ವಿಭಾಗದಲ್ಲಿ ಹೆಚ್ಚು ಸುಧಾರಿತ ಪ್ರಶ್ನೆಗಳನ್ನು ಅವರಿಂದ ನಿರೀಕ್ಷೆ ಮಾಡಿದ್ದೆ. ಆದರೆ, ನನ್ನ ಕೆಲಸಕ್ಕೆ ಯಾವುದೇ ಕಾರಣಕ್ಕೂ ಸಂಬಂಧಪಡದ ವಿಚಾರದ ಪ್ರಶ್ನೆಗಳನ್ನು ಕೇಳಿದ್ದರಿಂದ ನಿರಾಸೆಯಾಗಿದೆ ಎಂದು ಟೆಕ್ಕಿ ಬರೆದುಕೊಂಡಿದ್ದಾರೆ.
"ನಾನು ಕೋನೀಯ, ಜಾವಾಸ್ಕ್ರಿಪ್ಟ್, ಟೈಪ್‌ಸ್ಕ್ರಿಪ್ಟ್, html, CSS ಮುಂತಾದ ಆಧುನಿಕ ತಂತ್ರಜ್ಞಾನಗಳಲ್ಲಿ ಒಟ್ಟು 10 ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಸಾಮಾನ್ಯವಾಗಿ ಈ ಅನುಭವದ ಮಟ್ಟದಲ್ಲಿ, ಜನರು ತಾರ್ಕಿಕ ಚಿಂತನೆಯನ್ನು ಪರೀಕ್ಷಿಸಲು ರಿಯಲ್ ಟೈಮ್ ಸನ್ನಿವೇಶಗಳನ್ನು ಆಧರಿಸಿದ ಪ್ರಶ್ನೆಗಳನ್ನು ಅಥವಾ ಕೋಡಿಂಗ್ ಕೌಶಲ್ಯಗಳನ್ನು ಕೇಳುತ್ತಾರೆ ಅಥವಾ ಕೆಲವು ಮುಂದುವರಿದ ಪರಿಕಲ್ಪನೆಗಳನ್ನು ಕೇಳುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಆದರೆ, ಸಂದರ್ಶಕರು ಪ್ರೋಗ್ರಾಮಿಂಗ್ ಭಾಷೆಯಲ್ಲಿ "ಸೈದ್ಧಾಂತಿಕ ಪ್ರಶ್ನೆಗಳ" ಕೇಳಿದ ನಂತರ ಸಂದರ್ಶಕರು CSS ಬಳಸಿ ಭಾರತೀಯ ಧ್ವಜವನ್ನು ಬಿಡಿಸಲು ಹೇಳಿದಾಗ ನನಗೆ ನಿರಾಸೆಯಾಯಿತು ಎಂದಿದ್ದಾರೆ.ಇಂಥ ಕೆಲಸಗಳನ್ನು ಸಂದರ್ಶನದಲ್ಲಿ ಏಕೆ ಕೇಳುತ್ತಾರೆ ಎಂದು ಅವರಿಗೆ ಪ್ರಶ್ನಿಸಿದೆ. ಅದಕ್ಕೆ ಅವರು ನನ್ನ ಜ್ಞಾನವನ್ನು ಪರೀಕ್ಷಿಸುವ ಮಾರ್ಗ ಎಂದು ಉತ್ತರ ನೀಡಿದ್ದರು' ಎಂದು ಟೆಕ್ಕಿ ತನ್ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
undefined
ನಾನು ಹೇಗೋ ಧ್ವಜವನ್ನು ಚಿತ್ರಿಸಿದೆ. ಆದರೆ, ನನಗೆ ಈ ಪ್ರಶ್ನೆ ಸಂಪೂರ್ಣವಾಗಿ ಅಸಂಬದ್ಧವಾಗಿತ್ತು ಎಂದು ಭಾವಿಸುತ್ತೇನೆ. ಭಾರತದ ಧ್ವಜ ಬಿಡಿಸಿದ ಬಳಿಕ ಸಂದರ್ಶಕರಲ್ಲಿ ಒಬ್ಬರಾಗಿದ್ದ ಮಹಿಳೆ ಅದರಲ್ಲಿ ಅಶೋಕ ಚಕ್ರವನ್ನು ಬಿಡಿಸುವಂತೆ ಹೇಳಿದರು. ಅದನ್ನೂ ಮಾಡಿದೆ. ಕೊನೆಗೆ ಅಶೋಕ ಚಕ್ರದ ಒಳಗೆ ಇರುವ ಗೆರೆಗಳನ್ನು ಎಳೆಯುವಂತೆ ಹೇಳಿದ್ದರು. ಈ ಹಂತದಲ್ಲಿ ನಾನು ವಿಫಲವಾಗಿ ಕೆಲಸವನ್ನು ಕಳೆದುಕೊಂಡೆ ಎಂದು ಹೇಳಿದ್ದಾರೆ.
BBK 11: ಹೆಸರಿಗಷ್ಟೇ ಕನ್ನಡದ ಶೋ, ತಮಿಳು-ಮರಾಠಿಗರ ಹಿಡಿತಕ್ಕೆ ಬೇಸತ್ತ ಕಿಚ್ಚ ಸುದೀಪ್?
ತನ್ನ ಸಂಪೂರ್ಣ ಅನುಭವವನ್ನು ಹಂಚಿಕೊಂಡ ನಂತರ, ಸಂದರ್ಶಕರು ಅನುಭವಿ ವೃತ್ತಿಪರರನ್ನು ನೇಮಿಸಿಕೊಳ್ಳುವ ವಿಧಾನವನ್ನು ಪರಿಷ್ಕರಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಅವರು ರೆಡ್ಡಿಟ್ ಸಮುದಾಯದ ಮುಂದಿಟ್ಟಿದ್ದಾರೆ. ಇದು ಸಾಕಷ್ಟು ರಿಪ್ಲೈಗಳನ್ನು ಪಡೆದುಕೊಂಡಿದೆ. ಬಹುತೇಕ ಎಲ್ಲರೂ, ಸಂದರ್ಶನದಿಂದ ವಾಕ್‌ಔಟ್ ಮಾಡುವ ನಿರ್ಧಾರವನ್ನು ಸರಿ ಎಂದಿದ್ದಾರೆ.
ಬೆಂಗಳೂರು ಕೆರೆಗಳ ಒತ್ತುವರಿ, ರಾಜಕಾಲುವೆ ಬ್ಲಾಕ್; ಬಿಬಿಎಂಪಿಗೆ ನೋಟಿಸ್ ನೀಡಿದ ಎನ್‌ಜಿಟಿ