ಟಾಟಾ ಕನ್ಸಲ್ಟೆನ್ಸಿ ಮಹತ್ವದ ಘೋಷಣೆ: ಆಂಧ್ರದಲ್ಲಿ ಐಟಿ ಕೇಂದ್ರ ಸ್ಥಾಪನೆ, 10 ಸಾವಿರ ಉದ್ಯೋಗವಕಾಶ!

Published : Oct 10, 2024, 12:58 PM IST
ಟಾಟಾ ಕನ್ಸಲ್ಟೆನ್ಸಿ ಮಹತ್ವದ ಘೋಷಣೆ: ಆಂಧ್ರದಲ್ಲಿ ಐಟಿ ಕೇಂದ್ರ ಸ್ಥಾಪನೆ, 10 ಸಾವಿರ ಉದ್ಯೋಗವಕಾಶ!

ಸಾರಾಂಶ

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಇದೀಗ ಆಂಧ್ರ ಪ್ರದೇಶದಲ್ಲಿ ಐಟಿ ಕೇಂದ್ರ ಸ್ಥಾಪನೆಗೆ ಮುಂದಾಗಿದೆ. ಇದರಿಂದ ಬರೋಬ್ಬರಿ 10,000 ಉದ್ಯೋಗವಕಾಶ ಸೃಷ್ಟಿಯಾಗುತ್ತಿದೆ.

ವೈಝಾಗ್(ಅ.10)  ರತನ್ ಟಾಟಾ ಕಟ್ಟಿದ ಉದ್ಯಮ ಸಾಮ್ರಾಜ್ಯದಲ್ಲಿ ಟಿಸಿಎಸ್(ಟಾಟಾ ಕನ್ಸಲ್ಟೆನ್ಸಿ ಸರ್ವೀಸ್) ಕೂಡ ಒಂದು. ಇದೀಗ ಟಿಸಿಎಸ್ ಹಾಗೂ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಆಂಧ್ರ ಪ್ರದೇಶದ ವೈಝಾಗ್‌ನಲ್ಲಿ ಐಟಿ ಕೇಂದ್ರ ಸ್ಥಾಪನೆ ಮಾಡಲು ಟಿಸಿಎಸ್ ಮುಂದಾಗಿದೆ. ಈ ಐಟಿ ಕೇಂದ್ರದಿಂದ ಬರೋಬ್ಬರಿ 10,000 ಮಂದಿಗೆ ಉದ್ಯೋಗವಕಾಶ ಸಿಗಲಿದೆ. ಈ ಕುರಿತು ಆಂಧ್ರ ಪ್ರದೇಶ ಸಂಪುಟ ಸಚಿವ ನಾರಾ ಲೋಕೇಶ್ ಹೇಳಿದ್ದಾರೆ. 

ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಾರ್ಯನಿರ್ವಹಿಸುತ್ತಿದೆ. ಇದೀಗ ಹೊಸ ಕೇಂದ್ರವನ್ನು ವೈಝಾಗ್‌ನಲ್ಲಿ ಆರಂಭಿಸುತ್ತಿದೆ. ಈ ಘಟಕದಿಂದ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ಹಲವು ರಾಜ್ಯದ ಪ್ರತಿಭಾನ್ವಿತರಿಗೆ ಉದ್ಯೋಗವಕಾಶ ಸಿಗಲಿದೆ.  

ಇಂಗ್ಲೆಂಡ್ ಆಯೋಜಿಸಿದ ಜೀವಮಾನ ಶ್ರೇಷ್ಠ ಪ್ರಶಸ್ತಿ ಸ್ವೀಕಾರಕ್ಕೆ ಗೈರಾಗಿದ್ದ ಟಾಟಾ, ಕಾರಣ ಮುದ್ದಿನ ನಾಯಿ!

ಟಿಸಿಎಸ್ ಐಟಿ ಘಟಕ ಸ್ಥಾಪನೆ ಕುರಿತು ಸುದ್ದಿಗೋಷ್ಠಿ ನಡೆಸಿದ ಸಚಿವ ನಾರಾ ಲೋಕೇಶ್, ಸಂತಸ ಹಂಚಿಕೊಂಡಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿಗೆ ಹೂಡಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದೇವೆ. ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ. ಆಂಧ್ರ ಪ್ರದೇಶ ಇದೀಗ ಹಲವು ಕಂಪನಿಗಳ ಐಟಿ ಹಬ್ ಆಗಿ ಮಾರ್ಪಟ್ಟಿದೆ. ವಿಶ್ವ ಮಟ್ಟದ ಅನುಕೂಲಕತೆಗಳು, ವಿಶ್ವದರ್ಜೆ ವ್ಯವಸ್ಥೆಗಳು ಸರ್ಕಾರ ಮಾಡಿಕೊಡಲಿದೆ ಎಂದು ನಾರಾ ಲೋಕೇಶ್ ಹೇಳಿದ್ದಾರೆ. ಟಿಸಿಎಸ್ ಹೊಸ ಘಟಕ ಶೀಘ್ರದಲ್ಲಿ ಕಾರ್ಯಾರಂಭ ಮಾಡುವಂತೆ ಎಲ್ಲಾ ನೆರವು ಸರ್ಕಾರ ನೀಡಲಿದೆ ಎಂದಿದ್ದಾರೆ.

ಈ ಕುರಿತು ಸಚಿವ ನಾರಾ ಲೋಕೇಶ್ ಟಾಟಾ ಸನ್ಸ್ ಚೇರ್ಮೆನ್ ಎನ್ ಚಂದ್ರಶೇಖರನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿರುವ ಟಿಸಿಎಸ್, ಶೀಘ್ರದಲ್ಲೇ ಹೊಸ ಘಟಕ ಸ್ಥಾಪನೆ ಮಾಡಲಿದೆ. ಆಂಧ್ರ ಪ್ರದೇಶ ವೈಝಾಗ್ ಹೊಸ ಐಟಿ ಹಬ್ ಆಗಿ ಮಾರ್ಪಡಿಸಲು ಸರ್ಕಾರ ಹೆಚ್ಚು ಹೂಡಿಕೆ ಮಾಡುತ್ತಿದೆ. ಹಲವು ಕಂಪನಿಗಳಿಗೆ ಅತೀ ಕಡಿಮೆ ದರದಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ಇದರಿಂದ ಈಗಾಗಲೇ ಐಟಿ ಕ್ಷೇತ್ರದ ದಿಗ್ಗಜ ಕಂಪನಿಗಳು ಇದೀಗ ವಿಶಾಖಪಟ್ಟಣಂನತ್ತ ಮುಖ ಮಾಡುತ್ತಿದೆ. ಇತ್ತೀಚೆಗೆ ಹೆಚ್‌ಸಿಎಲ್ ಕಂಪನಿ ಕೂಡ ವೈಝಾಗ್‌ನಲ್ಲಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿದೆ.

ಭಾರತದ ಕೊಡುಗೈ ದಾನಿ ಯಾರು? 8 ಲಕ್ಷ ಕೋಟಿ ವಿತರಿಸಿದ ಉದ್ಯಮಿ ಅಂಬಾನಿ ಅದಾನಿ ಅಲ್ಲ!

ಟಿಸಿಎಸ್ ಹೊಸ ಐಟಿ ಘಟಕ ಸ್ಥಾಪನೆ ನಿರ್ಧಾರ ಅಧಿಕೃತಗೊಳ್ಳುತ್ತಿದ್ದಂತೆ ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ವೇಳೆ ರತನ್ ಟಾಟಾ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗಣ್ಯರು ಸೇರಿದಂತೆ ಇಡೀ ದೇಶವೇ ರತನ್ ಟಾಟಾ ಅಗಲಿಕೆಗೆ ಸಂತಾಪ ಸೂಚಿಸಿದೆ. 
 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?