ಕೋಟಿ ಯುವಕರಿಗೆ ಉದ್ಯೋಗಕ್ಕೆ ದಾರಿ: ಪ್ರಧಾನಿ ಇಂಟರ್ನ್‌ಷಿಪ್ ಯೋಜನೆಗೆ ಸಿಕ್ಕಿತು ಚಾಲನೆ- ಯಾರೆಲ್ಲಾ ಅರ್ಹರು? ಡಿಟೇಲ್ಸ್‌ ಇಲ್ಲಿದೆ

By Suchethana D  |  First Published Oct 3, 2024, 5:41 PM IST

ನಿರುದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಿದೆ. ಒಂದು ಕೋಟಿ ಮಂದಿಗೆ ಉದ್ಯೋಗಾವಕಾಶಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಶುರುವಾಗಿದೆ ಕೇಂದ್ರದ ಯೋಜನೆ. ಫುಟ್‌ ಡಿಟೇಲ್ಸ್ ಇಲ್ಲಿದೆ. 
 


ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಭಾರತ ಸರ್ಕಾರವು ಪ್ರಧಾನ ಮಂತ್ರಿ ಇಂಟರ್ನ್‌ಷಿಪ್ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಯುವ ಸಮುದಾಯದ ನಿರುದ್ಯೋಗವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಸುಮಾರು 800 ಕೋಟಿ ರೂಪಾಯಿಗಳ ಈ ಯೋಜನೆ ಕುರಿತು ಈ ಬಾರಿಯ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಬಗ್ಗೆ ಘೋಷಿಸಿದ್ದರು. ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ತರಬೇತಿ ನೀಡುವ ಯೋಜನೆ ಇದಾಗಿದ್ದು, ಆರಂಭದಲ್ಲಿ ಒಂದು ಲಕ್ಷ ಯುವಕರಿಗೆ ತರಬೇತಿ ನೀಡಲಾಗುವುದು. ತರಬೇತಿ ಸಮಯದಲ್ಲಿ ಸ್ಟೈಪೆಂಡ್‌ ನೀಡಲಾಗುವುದು. 

ಒಂದು ವರ್ಷದ ತರಬೇತಿ ಇದಾಗಿದೆ. ಸುಮಾರು 500 ಕಂಪೆನಿಗಳಲ್ಲಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಧ್ಯೇಯ ಈ ಯೋಜನೆಯದ್ದಾಗಿದ್ದು, ಇದಾಗಲೇ  111 ಕಂಪೆನಿಗಳು ಉದ್ಯೋಗ ನೀಡಲು ಪ್ರಸ್ತಾವ ಕಳುಹಿಸಿದೆ. ತರಬೇತಿ ಸಮಯದಲ್ಲಿ ಉತ್ತಮ ಸಾಧನೆ ತೋರಿದರೆ ಮುಂದೆ ಅವರಿಗೆ ವಿವಿಧ ಕಂಪೆನಿಗಳಲ್ಲಿ ಅವಕಾಶ ಸಿಗಲಿದೆ. 10 ಮತ್ತು 12ನೇ ತರಗತಿ ಉತ್ತೀರ್ಣರಾದವರಿಗೂ ಉದ್ಯೋಗ ಕಲ್ಪಿಸುವ ಈ ಯೋಜನೆಯ ಲಾಭವನ್ನು ವಾರ್ಷಿಕ ಎಂಟು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಇರುವ ಯುವಸಮೂಹ ಪಡೆದುಕೊಳ್ಳಬಹುದಾಗಿದೆ. ಐಐಟಿ ಅಥವಾ ಐಐಎಂಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದವರನ್ನು ಹೊರಗಿಡಲಾಗಿದೆ, ಆದರೆ ಕೈಗಾರಿಕಾ ತರಬೇತಿ ಸಂಸ್ಥೆಗಳು ITI ಮತ್ತು ಕೌಶಲ ಕೇಂದ್ರಗಳ ಯುವಕರು ಭಾಗವಹಿಸಬಹುದು. 

Tap to resize

Latest Videos

ಗಗನಸಖಿಯಂತೆ ಇನ್ಮುಂದೆ ಬಸ್ಸಲ್ಲೂ ಬರ್ತಿದ್ದಾಳೆ ‘ಶಿವನೇರಿ ಸುಂದರಿ': ಪ್ರಯಾಣಿಕರಿಗೆ ಬಸ್‌ ಸಖಿ ಭಾಗ್ಯ!

ಅಂದಹಾಗೆ, ಇದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ಅಭಿವೃದ್ಧಿಪಡಿಸಿದ ಆನ್‌ಲೈನ್ ಪೋರ್ಟಲ್ ಆಗಿದೆ.  ಇಂದಿನಿಂದ ಅಂದ್ರೆ ಅಕ್ಟೋಬರ್ 3 ರಿಂದ ಅಕ್ಟೋಬರ್ 10 ರವರೆಗೆ ಕಂಪನಿಗಳು ಇಂಟರ್ನ್‌ಶಿಪ್ ಯೋಜನೆಯಲ್ಲಿ ಭಾಗವಹಿಸುತ್ತವೆ. ಇಂಟರ್ನ್‌ಶಿಪ್ ಯೋಜನೆಯ ಎಂಸಿಎ ಪೋರ್ಟಲ್ ಅಕ್ಟೋಬರ್ 12 ರಂದು ವಿಜಯದಶಮಿ ದಿನದಂದು ಸಕ್ರಿಯವಾಗಿರುತ್ತದೆ. ಆಸಕ್ತ ವ್ಯಕ್ತಿಗಳು ಅಕ್ಟೋಬರ್ 12 ರ ಮಧ್ಯರಾತ್ರಿಯೊಳಗೆ ಪೋರ್ಟಲ್‌ನಲ್ಲಿ ನೋಂದಾಯಿಸಲು ಸಾಧ್ಯವಾಗುತ್ತದೆ. ಷಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ 26 ರೊಳಗೆ ಕಂಪೆನಿಗಳಿಗೆ ಲಭ್ಯವಿರುತ್ತದೆ. ಕಂಪನಿಗಳು ನವೆಂಬರ್ 27 ರೊಳಗೆ ಅಂತಿಮ ಆಯ್ಕೆಯನ್ನು ಮಾಡುತ್ತವೆ ಮತ್ತು ಇಂಟರ್ನ್‌ಶಿಪ್‌ಗಳು ಡಿಸೆಂಬರ್ 2 ರಿಂದ 12 ತಿಂಗಳವರೆಗೆ ಪ್ರಾರಂಭವಾಗುತ್ತವೆ.
 
 12-ತಿಂಗಳ ಇಂಟರ್ನ್‌ಶಿಪ್‌ಗಳಲ್ಲಿ,  ಇಂಟರ್ನ್‌ಗಳು ರೂ 5,000 ಮಾಸಿಕ ಸ್ಟೈಫಂಡ್ ಸೇರಿದಂತೆ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ, ಸರ್ಕಾರದಿಂದ ರೂ 4,500 ಮತ್ತು ಕಂಪನಿಯ ಸಿಎಸ್‌ಆರ್ ನಿಧಿಯಿಂದ ರೂ 500. ಹೆಚ್ಚುವರಿಯಾಗಿ ನೀಡಲಾಗುತ್ತದೆ. ಇಂಟರ್ನ್‌ಗಳಿಗೆ  ರೂ 6,000 ಒಂದು ಬಾರಿಯ ಅನುದಾನವನ್ನು ಕೂಡ ನೀಡಲಾಗುತ್ತದೆ.  ಈ ಯೋಜನೆಯು ಸರ್ಕಾರಿ ಯೋಜನೆಗಳ ಮೂಲಕ ವಿಮಾ ರಕ್ಷಣೆಯನ್ನು ಒದಗಿಸುತ್ತದೆ, ಇಂಟರ್ನ್‌ಗಳಿಗೆ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುತ್ತದೆ. 21-24 ವರ್ಷದೊಳಗಿನ ಅರ್ಹ ಯುವಕರು, ಕೆಲವು ಶೈಕ್ಷಣಿಕ ಮತ್ತು ಉದ್ಯೋಗದ ಮಾನದಂಡಗಳನ್ನು ಪೂರೈಸುವವರು ಅರ್ಜಿ ಸಲ್ಲಿಸಬಹುದು. https://www.pminternship.mca.gov.in ಇಲ್ಲಿ ಅಕ್ಟೋಬರ್ 12ರಿಂದ ನೋಂದಣಿಗೆ ಅವಕಾಶವಿದೆ.

'2 ಗಂಟೆಗಳಲ್ಲಿ ನಿಮ್ಮ ಫೋನ್​ ನಂಬರ್‌ ಬ್ಲಾ‌ಕ್‌ ಆಗತ್ತೆ, 9 ಒತ್ತಿ' ಎನ್ನೋ ಕರೆ ಬರ್ಬೋದು ಹುಷಾರ್‌! ಏನಿದು?
 

click me!