ಕುಡಿದು ಟೈಟಾಗಿ ಉದ್ಯೋಗಿಯೊಬ್ಬರು ಬಾಸ್ಗೆ ಸಂದೇಶ ಕಳಿಸಿದ್ದು, ಅಂತಹ ಉತ್ತಮ ವ್ಯವಸ್ಥಾಪಕರು ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ. ಮತ್ತು ಈಗ ಇಬ್ಬರ ನಡುವಿನ ಹೃದಯಸ್ಪರ್ಶಿ ಸಂವಹನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನವದೆಹಲಿ (ಆಗಸ್ಟ್ 6, 2023): ಉದ್ಯೋಗಿಯೊಬ್ಬರು ತಮ್ಮ ಬಾಸ್ಗೆ ತಡರಾತ್ರಿ ಕುಡಿದು ಸಂದೇಶವನ್ನು ಕಳುಹಿಸಿದ್ದಾರೆ. ಹಾಗೆ, ಈ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕುಡಿದು ಟೈಟಾಗಿ ಬಾಸ್ಗೆ ಏನೇನೆಲ್ಲ ಬೈದಿದ್ದಾರೆ ಅನ್ಕೊಂಡ್ರಾ.. ಇಲ್ಲ.. ಕುಡಿದು ಟೈಟಾಗಿ ಬಾಸ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, ಕುಡಿದು ಟೈಟಾಗಿ ಉದ್ಯೋಗಿಯೊಬ್ಬರು ಬಾಸ್ಗೆ ಸಂದೇಶ ಕಳಿಸಿದ್ದು, ಅಂತಹ ಉತ್ತಮ ವ್ಯವಸ್ಥಾಪಕರು ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ. ಮತ್ತು ಈಗ ಇಬ್ಬರ ನಡುವಿನ ಹೃದಯಸ್ಪರ್ಶಿ ಸಂವಹನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ಈ ಬಗ್ಗೆ ಸಿದ್ದಾಂತ್ ಎಂಬ ಬಾಸ್ ಅನಿರೀಕ್ಷಿತ ಸಂದೇಶ ವಿನಿಮಯದ ಸ್ಕ್ರೀನ್ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
Drunk text from ex is okay but have you ever received drunk texts like these? pic.twitter.com/rvkaGMYqLl
— Siddhant (@siddhantmin)
undefined
ಇದನ್ನು ಓದಿ: UPSC success story: ಟೀ ಮಾರಿದ ಯುವಕ ಮಂಗೇಶ್ ಖಿಲಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್; ಹೋರಾಟದ ಹಾದಿ ಹೀಗಿದೆ..
ಕುಡಿದ ಉದ್ಯೋಗಿ ತಮ್ಮ ಬಾಸ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿದ್ದಾರೆ. "ಬಾಸ್ ನಾನು ಕುಡಿದಿದ್ದೇನೆ, ಆದರೆ ನಾನು ನಿಮಗೆ ಇದನ್ನು ಹೇಳುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ನನ್ನನ್ನು ಯಾವಾಗಲೂ ಕಠಿಣವಾಗಿ ಪುಶ್ ಮಾಡಿದ್ದಕ್ಕೆ ಧನ್ಯವಾದಗಳು. ಒಳ್ಳೆಯ ಮ್ಯಾನೇಜರ್ ಉತ್ತಮ ಕಂಪನಿಯನ್ನು ಪಡೆಯುವುದು ಹೆಚ್ಚು ಕಷ್ಟ. ಹಾಗಾಗಿ ನಾನು ಅದೃಷ್ಟಶಾಲಿ. ಆದ್ದರಿಂದ ನಿಮ್ಮನ್ನು ಪ್ರಶಂಸಿಸುತ್ತೇನೆ. ಬೈ :P (sic)," ಎಂದು ಉದ್ಯೋಗಿ ಬರೆದಿದ್ದಾರೆ.
ಈ ಸಂದೇಶದಿಂದ ಪ್ರೇರಿತರಾದ ಸಿದ್ದಾಂತ್ ಅವರು ಅದನ್ನು ತಮ್ಮ ಫಾಲೋವರ್ಗಳೊಂದಿಗೆ ಹಂಚಿಕೊಂಡಿದ್ದಾರೆ. "ಮಾಜಿಯವರಿಂದ ಡ್ರಂಕ್ ಟೆಕ್ಸ್ಟ್ ಪರವಾಗಿಲ್ಲ. ಆದರೆ ನೀವು ಎಂದಾದರೂ ಈ ರೀತಿಯ ಡ್ರಂಕ್ ಟೆಕ್ಸ್ಟ್ಗಳನ್ನು ಸ್ವೀಕರಿಸಿದ್ದೀರಾ?" ಎಂದು ಈ ಪೋಸ್ಟ್ನ ಶೀರ್ಷಿಕೆಯಲ್ಲಿ ಅವರು ತಮಾಷೆಯಾಗಿ ಬರೆದಿದ್ದಾರೆ. ಕೆಳಗೆ ನೋಡಿ:
ಇದನ್ನೂ ಓದಿ: ಹೋಟೆಲ್ ಮಾಣಿಯಾಗಿದ್ದೋರು IAS ಅಧಿಕಾರಿಯಾದ್ರು: 7ನೇ ಪ್ರಯತ್ನದಲ್ಲಿ ನನಸಾಯ್ತು UPSC ಕನಸು!
ಈಗ ವೈರಲ್ ಆಗಿರುವ ಟ್ವೀಟ್ಗೆ ಇಂಟರ್ನೆಟ್ ಬಳಕೆದಾರರು ಉತ್ಸಾಹ ಮತ್ತು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.. ಹಲವಾರು ಬಳಕೆದಾರರು ತಮ್ಮ ಧನಾತ್ಮಕ ಪ್ರಭಾವಕ್ಕಾಗಿ ಬಾಸ್ ಅನ್ನು ಹೊಗಳಿದರು.
"ಯಾವಾಗಲೂ ಕೇವಲ ಮತ್ತು ಕೆಟ್ಟ / ಮುಜುಗರಕ್ಕೆ ಒಳಗಾಗುವ ಅಸಮರ್ಥ ಬಾಸ್ಗಳನ್ನು ಹೊಂದಿರುವ ವ್ಯಕ್ತಿಯಾಗಿ, ಒಳ್ಳೆಯ ವ್ಯಕ್ತಿಯಾಗಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ವ್ಯಕ್ತಿ ತುಂಬಾ ಅದೃಷ್ಟಶಾಲಿ ಮತ್ತು ನಾನು ಸೆಕೆಂಡ್ ಹ್ಯಾಂಡ್ ಸಂತೋಷವನ್ನು ಅನುಭವಿಸುತ್ತೇನೆ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಹಾಗೆ, "ಇದರಿಂದ ನೀವು ನನ್ನ ಬಾಸ್ ಆಗಲಿ ಎಂದು ನಾನು ಬಯಸುತ್ತೇನೆ. ಅವರು ನಿಮ್ಮನ್ನು ಹೊಂದಲು ಅದೃಷ್ಟವಂತರು! ನೀವು ಏನನ್ನಾದರೂ ಸರಿಯಾಗಿ ಮಾಡುತ್ತಿದ್ದೀರಿ," ಎಂದು ಇನ್ನೊಬ್ಬರು ಹೇಳಿದರು.
ಇದನ್ನೂ ಓದಿ: IAS ಅಧಿಕಾರಿಯಾದ ರಿಕ್ಷಾ ಎಳೆಯುವವರ ಮಗ ಗೋವಿಂದ್ ಜೈಸ್ವಾಲ್: ಹೋರಾಟದ ಹಾದಿ ಹೀಗಿದೆ..
ಮತ್ತೊಬ್ಬರು, "ನೀವು ಹೊಸ ಉದ್ಯೋಗವನ್ನು ಹುಡುಕಿದಾಗ ಮತ್ತು ನಿಮ್ಮ CV ಯಲ್ಲಿ ಇದನ್ನು ಮುದ್ರಿಸಬೇಕು ಮತ್ತು ಸೇರಿಸಬೇಕು" ಎಂದು ಮತ್ತೊಬ್ಬರು ಬರೆದಿದ್ದಾರೆ. ಅಲ್ಲದೆ, ಮದ್ಯಪಾನ ಮಾಡಿದಾಗ ಸತ್ಯ ಹೊರಗೆ ಬರುತ್ತದೆ ಎಂಬುದು ನಿಮಗೆ ತಿಳಿದಿದೆ! ನಿಮ್ಮ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ @siddhantmin. ಉತ್ತಮ ವಿಷಯ! ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು..." ಎಂದಿದ್ದಾರೆ.
ಈ ಮಧ್ಯೆ, ಮುಂದಿನ ಪೋಸ್ಟ್ನಲ್ಲಿ, ಸಿದ್ದಾಂತ್ ಅವರು ತಮ್ಮ ತಂಡದ ಬಗ್ಗೆ ವಿವರಗಳನ್ನು ಹಂಚಿಕೊಂಡರು ಮತ್ತು ಅದನ್ನು ಮೊದಲಿನಿಂದ ಹೇಗೆ ನಿರ್ಮಿಸಿದೆ ಎಂದು ಹೇಳಿದ್ದಾರೆ. "ನಾನು ಕೆಲಸ ಮಾಡಿದ ಅತ್ಯುತ್ತಮ ಫ್ರಂಟೆಂಡ್ ಎಂಜಿನಿಯರ್ಗಳಲ್ಲಿ ಒಬ್ಬರು" ಎಂದು ಉಲ್ಲೇಖಿಸುವ ಮೂಲಕ ತನಗೆ ಸಂದೇಶ ಕಳುಹಿಸಿದ ತನ್ನ ಉದ್ಯೋಗಿಯನ್ನು ಅವರು ಹೊಗಳಿದರು.
ಇದನ್ನೂ ಓದಿ: ಯುಪಿಎಸ್ಸಿಯಲ್ಲಿ ರಾಜ್ಯದ 35 ಮಂದಿ ಪಾಸ್: ದೇಶಕ್ಕೆ 55ನೇ ರ್ಯಾಂಕ್ ಪಡೆದ ಭಾವನಾ ರಾಜ್ಯಕ್ಕೆ ನಂ. 1
ಈ ಬಾಸ್ ಪೋಸ್ಟ್ಗೆ 3,500 ಕ್ಕೂ ಹೆಚ್ಚು ಲೈಕ್ಸ್ ಅನ್ನು ಮತ್ತು 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.