ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಕೆಲಸ ಎಂದು ಹೇಳಿ ಮ್ಯಾನ್ಮಾರ್‌ಗೆ ಕರೆದುಕೊಂಡು ಹೋಗಿ ಬಲವಂತವಾಗಿ ಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಭಾರತೀಯ ಐಟಿ ವೃತ್ತಪರರೇ.. ನಿಮಗೆ ಥಾಯ್ಲೆಂಡ್ ಮತ್ತು ಮ್ಯಾನ್ಮಾರ್‌ನಿಂದ ಕೆಲಸ ಕೊಡೋದಾಗಿ ಹಾಗೂ ಉತ್ತಮ ಸಂಬಳ ನೀಡೋದಾಗಿ ಆಫರ್ ಬರುತ್ತಿದೆಯಾ..? ಹಾಗಾದ್ರೆ, ಇಲ್ನೋಡಿ.. ಭಾರತೀಯ ಐಟಿ ವೃತ್ತಿಪರರನ್ನು ಥಾಯ್ಲೆಂಡ್ ಮತ್ತು ಮ್ಯಾನ್ಮಾರ್‌ಗೆ ಆಮಿಷವೊಡ್ಡುತ್ತಿರುವ ಇಂತಹ ನಕಲಿ ಕಂಪನಿಗಳ ಬಗ್ಗೆ ಎಚ್ಚರಿಕೆ ಇರಲಿ ಎಂದು ಕೆಂದ್ರ ಸರ್ಕರ ಎಚ್ಚರಿಕೆ ನೀಡಿದೆ. ಭಾರತೀಯ ಐಟಿ ವೃತ್ತಿಪರರನ್ನು ಥಾಯ್ಲೆಂಡ್ ಮತ್ತು ಮ್ಯಾನ್ಮಾರ್‌ಗೆ ಆಮಿಷವೊಡ್ಡುತ್ತಿರುವ ನಕಲಿ ಜಾಬ್‌ಗಳ ವರದಿಗಳು ಬರುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಈ ಎಚ್ಚರಿಕೆ ನೀಡಿದೆ. 'ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್' ಹುದ್ದೆಗಳಿಗೆ ಪ್ರಲೋಭಿಸಲು ಲಾಭದಾಯಕ ಉದ್ಯೋಗ ಆಫರ್‌ಗಳ ಕುರಿತು ಈ ಎಚ್ಚರಿಕೆ ನೀಡಿದೆ. ಕಾಲ್ ಸೆಂಟರ್ ಹಗರಣ ಮತ್ತು ಕ್ರಿಪ್ಟೋಕರೆನ್ಸಿ ವಂಚನೆ ಮಾಡುತ್ತಿರುವ ಅನುಮಾನಾಸ್ಪದ ಐಟಿ ಸಂಸ್ಥೆಗಳು ಈ ರೀತಿ ಆಫರ್ ಕಳಿಸುತ್ತಿರುವ ಬಗ್ಗೆ ಮೋದಿ ಸರ್ಕಾರ ಎಚ್ಚರಿಕೆ ನೀಡಿದೆ.
2 ದಿನಗಳ ಹಿಂದೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ಅರಿಂದಮ್ ಬಾಗ್ಚಿ ಅವರು ಸಹ ಉದ್ಯೋಗ ದಂಧೆಯ ಭಾಗವಾಗಿ ಡಜನ್ ಗಟ್ಟಲೆ ಭಾರತೀಯರನ್ನು ಅಕ್ರಮವಾಗಿ ಮ್ಯಾನ್ಮಾರ್‌ಗೆ ಕರೆತಂದ ನಂತರ ಥಾಯ್ಲೆಂಡ್‌ನಲ್ಲಿ ಉದ್ಯೋಗಗಳನ್ನು ತೆಗೆದುಕೊಳ್ಳುವ ಮೊದಲು ತೀವ್ರ ಎಚ್ಚರಿಕೆ ವಹಿಸುವಂತೆ ಭಾರತೀಯ ಪ್ರಜೆಗಳಿಗೆ ಸೂಚಿಸಿದ್ದರು. "ಮತ್ತು ನಿಮಗೆ ತಿಳಿದಿರುವ ಆ ಪ್ರದೇಶವು ಸ್ಥಳೀಯ ಭದ್ರತಾ ಪರಿಸ್ಥಿತಿಯಿಂದಾಗಿ ಪ್ರವೇಶಿಸಲು ಕಷ್ಟಕರವಾಗಿದೆ. ಅದೇನೇ ಇದ್ದರೂ, ಮ್ಯಾನ್ಮಾರ್‌ನಲ್ಲಿ ನಾವು ಕಾರ್ಯಾಚರಣೆ ನಡೆಸಿ ಕೆಲವು ಬಲಿಪಶುಗಳನ್ನು ರಕ್ಷಿಸಿದ್ದೇವೆ. ಇದೇ ರೀತಿ ಬಲಂತವಾಗಿ ಕಾರ್ಮಿಕರಾಗಿ ಸಿಲುಕಿರುವ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ’’ ಎಂದು ಹೇಳಿದರು.
ಇದನ್ನು ಓದಿ: Job Scam Bengaluru: IBM ನೌಕರಿ ಹೆಸರಲ್ಲಿ 45 ಮಂದಿಗೆ ಧೋಖಾ!
undefined
ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಕೆಲಸ ಎಂದು ಹೇಳಿ ಮ್ಯಾನ್ಮಾರ್‌ಗೆ ಕರೆದುಕೊಂಡು ಹೋಗಿ ಬಲವಂತವಾಗಿ ಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಭಾರತದಿಂದ ಮ್ಯಾನ್ಮಾರ್ ಗಡಿಗೆ ಅಕ್ರಮವಾಗಿ ದಾಟಿಸಲಾಗುತ್ತಿದೆ ಎಂಬುದು ಸಹ ಬಯಲಾಗಿದೆ. ಸಾಮಾಜಿಕ ಮಾಧ್ಯಮ ಜಾಹೀರಾತುಗಳ ಮೂಲಕ ಮತ್ತು ದುಬೈ ಹಾಗೂ ಭಾರತ ಮೂಲದ ಏಜೆಂಟ್‌ಗಳ ಮೂಲಕ ಥೈಲ್ಯಾಂಡ್‌ನಲ್ಲಿ ಲಾಭದಾಯಕ ಡೇಟಾ ಎಂಟ್ರಿ ಉದ್ಯೋಗಗಳ ಹೆಸರಿನಲ್ಲಿ ವಂಚನೆಗೊಳಗಾದ ಐಟಿ ನುರಿತ ಯುವಕರನ್ನು ಗುರಿಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕೃತ ಸಲಹೆ ಶನಿವಾರ ಎಚ್ಚರಿಕೆ ನೀಡಿದೆ.
ಬಲಿಪಶುಗಳನ್ನು ಅಕ್ರಮವಾಗಿ ಗಡಿ ದಾಟಿಸಲಾಗುತ್ತಿದೆ, ಹೆಚ್ಚಾಗಿ ಮ್ಯಾನ್ಮಾರ್‌ಗೆ ಕರೆದೊಯ್ಯಲಾಗುತ್ತದೆ ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಬಂಧಿತರಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಅಡ್ವೈಸರಿ ತಿಳಿಸಿದೆ. ಈ ಹಿನ್ನೆಲೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಅಥವಾ ಇತರ ಮೂಲಗಳ ಮೂಲಕ ಫಾರ್ವಡ್ ಆಗುವ ಅಥವಾ ವೈರಲ್ ಆಗುವ ಇಂತಹ ನಕಲಿ ಉದ್ಯೋಗ ಆಫರ್‌ಗಳಲ್ಲಿ ಸಿಲುಕಿಕೊಳ್ಳಬೇಡಿ ಎಂದು ಮೋದಿ ಸರ್ಕಾರ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದೆ.
"ಉದ್ಯೋಗ ಉದ್ದೇಶಗಳಿಗಾಗಿ ಪ್ರವಾಸಿ/ಭೇಟಿ ವೀಸಾದಲ್ಲಿ ಪ್ರಯಾಣಿಸುವ ಮೊದಲು, ಭಾರತೀಯ ಪ್ರಜೆಗಳು ವಿದೇಶದಲ್ಲಿ ಸಂಬಂಧಪಟ್ಟ ಮಿಷನ್‌ಗಳ ಮೂಲಕ ವಿದೇಶಿ ಉದ್ಯೋಗದಾತರ ರುಜುವಾತುಗಳನ್ನು ಮತ್ತು ನೇಮಕಾತಿ ಏಜೆಂಟ್‌ಗಳು ಹಾಗೂ ಯಾವುದೇ ಕಂಪನಿಯ ಪೂರ್ವವರ್ತನೆಗಳನ್ನು ಪರಿಶೀಲಿಸಲು ಸಲಹೆ ನೀಡಲಾಗುತ್ತದೆ" ಎಂದೂ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಇದಕ್ಕೂ ಮುನ್ನ ಮ್ಯಾನ್ಮಾರ್‌ನ ಯಾಂಗೂನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹ ಸಲಹೆಯೊಂದನ್ನು ಬಿಡುಗಡೆ ಮಾಡಿತ್ತು. ಮ್ಯಾನ್ಮಾರ್‌ನ ದೂರದ ಪೂರ್ವ ಗಡಿ ಪ್ರದೇಶಗಳಲ್ಲಿ ಡಿಜಿಟಲ್ ಸ್ಕ್ಯಾಮಿಂಗ್ ಚಟುವಟಿಕೆಗಳಲ್ಲಿ ತೊಡಗಿರುವ ಕಂಪನಿಗಳ ಬಗ್ಗೆ ಕೆಲ ದಿನಗಳ ಮುನ್ನವೇ ಎಚ್ಚರಿಸಿತ್ತು.
ಇದನ್ನೂ ಓದಿ: Cyber Crime Bengaluru: ಇನ್ಫೋಸಿಸ್‌ನಲ್ಲಿ ಉದ್ಯೋಗದ ಆಸೆ ತೋರಿಸಿ ರೂ. 4.32 ಲಕ್ಷ ವಂಚನೆ!
ಮ್ಯಾನ್ಮಾರ್‌ನಲ್ಲಿ ಸಿಲುಕಿದ್ದಾರೆ 80 - 90 ಭಾರತೀಯರು..!
ಮ್ಯಾನ್ಮಾರ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ನಿರ್ದಿಷ್ಟ ಸಂಖ್ಯೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ವಿದೆಶಾಂಗ ಸಚಿವಾಲಯದ ವಕ್ತಾರರು, "ಇದು ಹೇಳುವುದು ಕಷ್ಟ. 32 ಜನರನ್ನು ರಕ್ಷಿಸಲಾಗಿದೆ ಮತ್ತು ಅವರಿದ್ದ ಸ್ಥಳದಿಂದ ಸಹಾಯ ಮಾಡಲಾಗಿದೆ. ಸಿಲುಕಿರುವವರ ಬಗ್ಗೆ ನನ್ನ ಬಳಿ ನಿಖರವಾದ ಸಂಖ್ಯೆ ಇಲ್ಲ. ಬಹುಶಃ 80 90 ಜನರು ಅಲ್ಲಿದ್ದಾರೆ’’ ಎಂದು ಕೇಂದ್ರ ಸರ್ಕಾರ ಹೇಳಿದೆ.