ಒಂದೇ ಸಮಯದಲ್ಲಿ 2 ಕಡೆ ಕೆಲಸ: Wipro 300 ಸಿಬ್ಬಂದಿ ವಜಾ

By BK Ashwin  |  First Published Sep 22, 2022, 9:23 AM IST

ಟೆಕ್‌ ವೃತ್ತಿಪರರಿಂದ ಮೂನ್‌ಲೈಟಿಂಗ್‌ ಸಮಸ್ಯೆ ಉದ್ಯಮದೊಳಗೆ ಅಭಿಪ್ರಾಯಗಳನ್ನು ಹುಟ್ಟಿಹಾಕಿದ್ದು, ಕಂಪನಿ ಇತರ ಉದ್ಯೋಗಿಗಳ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ ಎಂದು ವಿಪ್ರೋ ಸಂಸ್ಥೆಯ ಅಧ್ಯಕ್ಷ ಹೇಳಿದ್ದಾರೆ. 


ಕೋವಿಡ್‌ ಸಾಂಕ್ರಾಮಿಕ (Covid Pandemic) ಸಮಯದಲ್ಲಿ ಮೂನ್‌ಲೈಟಿಂಗ್‌ (Moonlighting) (ಒಂದೇ ಸಮಯದಲ್ಲಿ 2 ಕಂಪನಿಗಳಲ್ಲಿ ಕಾರ್ಯನಿರ್ವಹಿಸುವುದು) ಮಾಡಿದ್ದ ತನ್ನ 300 ಸಿಬ್ಬಂದಿಗಳನ್ನು ವಿಪ್ರೋ (Wipro) ಕಂಪನಿ ಕೆಲಸದಿಂದ ವಜಾ ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ರಿಶದ್‌ ಪ್ರೇಮ್‌ಜೀ ಹೇಳಿದ್ದಾರೆ. ಕೋವಿಡ್‌ ವೇಳೆ ನಮ್ಮ ಕಂಪನಿಯ 300 ಸಿಬ್ಬಂದಿಗಳು, ನಮ್ಮ ಪ್ರತಿಸ್ಪರ್ಧಿ ಕಂಪನಿಗಳಲ್ಲೂ ಕೆಲಸ ಮಾಡುತ್ತಿದ್ದರು. ಇಂಥ ನಡತೆ ಕಾನೂನಿಗೆ ವಿರುದ್ಧವಾಗಿದ್ದು, ಅದರಂತೆ ನಾವು ಅಂಥ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದೇವೆ. ಮೂನ್‌ಲೈಟಿಂಗ್‌ ಕುರಿತು ಇತ್ತೀಚೆಗೆ ತಾವು ನೀಡಿದ್ದ ಹೇಳಿಕೆಗೆ ಬದ್ಧ ಎಂದು ಕಾರ್ಯಕ್ರಮವೊಂದರಲ್ಲಿ ರಿಶದ್‌ ಪ್ರೇಮ್‌ಜೀ ಹೇಳಿದ್ದಾರೆ. 

ಉದ್ಯೋಗಿಗಳು (Employees) ವಾರಾಂತ್ಯದಲ್ಲಿ (Weekend) ಮಾಡುವ ಕೆಲಸದ ಕುರಿತು ಕಂಪನಿ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಬಹುದು. ಟೆಕ್‌ ವೃತ್ತಿಪರರಿಂದ ಮೂನ್‌ಲೈಟಿಂಗ್‌ ಸಮಸ್ಯೆ ಉದ್ಯಮದೊಳಗೆ ಅಭಿಪ್ರಾಯಗಳನ್ನು ಹುಟ್ಟಿಹಾಕಿದ್ದು, ಕಂಪನಿ ಇತರ ಉದ್ಯೋಗಿಗಳ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ವಾಸ್ತವವೆಂದರೆ ಇಂದು ವಿಪ್ರೋಗಾಗಿ ಕೆಲಸ ಮಾಡುವವರು ಮತ್ತು ನಮ್ಮ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಿಗಾಗಿ ನೇರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ನಿಖರವಾಗಿ ಇಂತಹ 300 ಜನರನ್ನು ನಾವು ಕಂಡುಹಿಡಿದಿದ್ದೇವೆ. ಇದು ಸಮಗ್ರತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ರಿಶದ್‌ ಪ್ರೇಮ್‌ಜೀ ಅಭಿಪ್ರಾಯ ಪಟ್ಟಿದ್ದಾರೆ. 

Tap to resize

Latest Videos

ಇದನ್ನು ಓದಿ: ಏಕಕಾಲದಲ್ಲಿ ಎರಡೆರಡು ಕೆಲಸ, ಉದ್ಯೋಗಿಗಳಿಗೆ ಇನ್ಫೋಸಿಸ್ ಖಡಕ್ ವಾರ್ನಿಂಗ್!

ಈ ಸಮಸ್ಯೆಯನ್ನು "ಮೋಸ" ಎಂದು ಪ್ರೇಮ್‌ಜೀ ತಮ್ಮ ಟ್ವಿಟ್ಟರ್‌ನಲ್ಲಿ ಸಮೀಕರಿಸಿದಾಗಿನಿಂದ 'ಮೂನ್‌ಲೈಟಿಂಗ್' ವಿಷಯವು ಐಟಿ ಉದ್ಯಮದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ಟೆಕ್ ಉದ್ಯಮದಲ್ಲಿ ಜನರು ಮೂನ್‌ಲೈಟ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಇದೆ. ಇದು ಮೋಸವಾಗಿದೆ ಎಂದು ರಿಶದ್‌ ಪ್ರೇಮ್‌ಜೀ ಟ್ವೀಟ್‌ ಮಾಡಿದ್ದರು. ಪ್ರೇಮ್‌ಜೀ ಅವರ ಟ್ವೀಟ್ ಉದ್ಯಮದೊಳಗೆ ಬಲವಾದ ಪ್ರತಿಕ್ರಿಯೆಯನ್ನು ಹುಟ್ಟುಹಾಕಿತು.

ನಂತರ, ಅನೇಕ ಐಟಿ ಕಂಪನಿಗಳು ಇಂತಹ ಅಭ್ಯಾಸಗಳ ಬಗ್ಗೆ  ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿವೆ. ಕಳೆದ ವಾರ, ಇನ್ಫೋಸಿಸ್‌ ಸಹ ತನ್ನ ಉದ್ಯೋಗಿಗಳಿಗೆ ದ್ವಂದ್ವ ಉದ್ಯೋಗ ಅಥವಾ 'ಮೂನ್‌ಲೈಟಿಂಗ್' ಅನ್ನು ಅನುಮತಿಸುವುದಿಲ್ಲ ಎಂದು ತಿಹೇಳಿತು ಮತ್ತು ಒಪ್ಪಂದದ ಷರತ್ತುಗಳ ಯಾವುದೇ ಉಲ್ಲಂಘನೆಯು ಉದ್ಯೋಗದ ಮುಕ್ತಾಯಕ್ಕೆ ಕಾರಣವಾಗಬಹುದು. ಇದು  ಶಿಸ್ತು ಕ್ರಮವನ್ನು ಪ್ರಚೋದಿಸುತ್ತದೆ ಎಂದು ಎಚ್ಚರಿಸಿತ್ತು. ಎರಡು ಸಮಯದ ಕೆಲಸ ಇಲ್ಲ, ಮೂನ್‌ಲೈಟಿಂಗ್ ಇಲ್ಲ ಎಂದು  ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾದ ಇನ್ಫೋಸಿಸ್ ಕಳೆದ ವಾರ ಉದ್ಯೋಗಿಗಳಿಗೆ ಬಲವಾದ ಮತ್ತು ದೃಢವಾದ ಸಂದೇಶವನ್ನು ನೀಡಿತ್ತು.

"ನೋ ಡಬಲ್ ಲೈಫ್" ಎಂಬ ಶೀರ್ಷಿಕೆಯ ಇನ್ಫೋಸಿಸ್‌ನ ಆಂತರಿಕ ಸಂವಹನವು "ಉದ್ಯೋಗಿಗಳ ಕೈಪಿಡಿ ಮತ್ತು ನೀತಿ ಸಂಹಿತೆಯ ಪ್ರಕಾರ ಎರಡು ಕಡೆ ಉದ್ಯೋಗವನ್ನು ಅನುಮತಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದೆ. ಆಫರ್ ಲೆಟರ್‌ನಲ್ಲಿರುವ ಸಂಬಂಧಿತ ಷರತ್ತನ್ನು ಸಹ ಈ ವೇಳೆ ಉಲ್ಲೇಖಿಸಿದೆ. "ಈ ಷರತ್ತುಗಳ ಯಾವುದೇ ಉಲ್ಲಂಘನೆಯು ಶಿಸ್ತು ಕ್ರಮಕ್ಕೆ ಕಾರಣವಾಗುತ್ತದೆ, ಇದು ಉದ್ಯೋಗವನ್ನು ವಜಾಗೊಳಿಸುವುದಕ್ಕೆ ಕಾರಣವಾಗಬಹುದು" ಎಂದು ಇನ್ಫೋಸಿಸ್ ಇ - ಮೇಲ್‌ ಮೂಲಕ ಎಚ್ಚರಿಸಿದೆ.

ಇದನ್ನೂ ಓದಿ: ವಿಪ್ರೋ ಸಿಇಒಗೆ .79.8 ಕೋಟಿ ಭರ್ಜರಿ ವೇತನ: ಐಟಿ ವಲಯದಲ್ಲೇ ಹೆಚ್ಚು ಸಂಬಳ

ಈ ಮಧ್ಯೆ, IBM ಇಂಡಿಯಾ ಕೂಡ ಮೂನ್‌ಲೈಟಿಂಗ್‌ ಅನೈತಿಕ ಅಭ್ಯಾಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. 
 

click me!