Apple Delays Office Reopening: ಆಪಲ್ ಉದ್ಯೋಗಿಗಳಿಗೆ ಮುಂದುವರೆದ WFH, ಪ್ರತೀ ಉದ್ಯೋಗಿಗಳಿಗೆ 1 ಸಾವಿರ ಡಾಲರ್ ಬೋನಸ್ ಘೋಷಣೆ

By Suvarna News  |  First Published Dec 16, 2021, 3:27 PM IST
  • ಉದ್ಯೋಗಿಗಳು ಕಚೇರಿಗೆ ಬರುವುದು ಬೇಡ ಎಂದ ಆಪಲ್
  • ಮುಂದಿನ ಆದೇಶದವೆರೆಗೆ ಮನೆಯಿಂದಲೇ ಕೆಲಸ
  • ಕೆಲಸ ಮಾಡಲು ಬೇಕಾದ ಸಲಕರಣೆ ತೆಗೆದುಕೊಳ್ಳಲು 1 ಸಾವಿರ ಡಾಲರ್ ಘೋಷಣೆ

ಯುಕೆ(ಡಿ16): ಕೋವಿಡ್ -19 (Covid-19) ರೂಪಾಂತರಿ ಒಮಿಕ್ರಾನ್ (Omicron) ಪ್ರಕರಣಗಳು ಜಾಗತಿಕವಾಗಿ ಹೆಚ್ಚಾಗುತ್ತಿದ್ದಂತೆ, ಆಪಲ್ (Apple) ಕಂಪೆನಿಯು ತನ್ನ ಉದ್ಯೋಗಿಗಳು (Employees) ಕಚೇರಿಗೆ ಬರುವುದು ಬೇಡ ಎಂದಿದ್ದು, ಅನಿರ್ದಿಷ್ಟಾವಧಿಯವರೆಗೆ ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಜೊತೆಗೆ ಮನೆಯಿಂದ ಕೆಲಸ ಮಾಡಲು ಬೇಕಾದ ಸಲಕರಣೆಯನ್ನು ತೆಗೆದುಕೊಳ್ಳಲು 1000 ಡಾಲರ್ ಹಣವನ್ನು ಕೂಡ ನೀಡುತ್ತಿದೆ. ಈ ಬೋನಸ್ (bonus ) ಹಣ ಕಂಪೆನಿಯ  ಪ್ರತಿಯೊಬ್ಬ ವ್ಯಕ್ತಿಗೂ ದೊರಕಲಿದೆ.  ಈ ಸಂಬಂಧ ಆಪಲ್ ಕಂಪೆನಿಯ ಸಿಇಒ ಟಿಮ್ ಕುಕ್ ( Apple CEO Tim Cook) ಅವರು ಸಹೋದ್ಯೋಗಿಗಳಿಗೆ ಡಿ.15 ರಂದು ಮೇಲ್ ಮಾಡಿ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಮತ್ತೆ ಕಂಪೆನಿಯಿಂದ ಕೆಲಸ  ಯಾವಾಗ ಆರಂಭವಾಗುತ್ತದೆ ಎಂದು ಅವರು ತಿಳಿಸಿಲ್ಲ ಎಂದು ತಿಳಿದುಬಂದಿದೆ. 

ಈ ಹಿಂದೆ ಜನವರಿ 2022 ರೊಳಗೆ ಕಂಪೆನಿಯನ್ನು ಮತ್ತೆ ತೆಗೆಯುವ ಬಗ್ಗೆ ಯೋಚಿಸಿತ್ತು. ಟೆಕ್ (Tech) ಕ್ಷೇತ್ರದಲ್ಲಿ ದೈತ್ಯಾಕಾರವಾಗಿ ಬೆಳೆಯುತ್ತಿರುವ ಆಪಲ್ 2022 ನೇ ಇಸವಿಯಲ್ಲಿ ಹೈಬ್ರಿಡ್ ಕೆಲಸ (hybrid workplace) ಮಾಡಲು ಬೇಕಾದ ಸ್ಥಳಕ್ಕೆ ತಯಾರಿ ನಡೆಸುತ್ತಿದೆ.

Tap to resize

Latest Videos

undefined

ಹೀಗಾಗಿ ಫೆಬ್ರವರಿ 1, 2022ಕ್ಕೆ ವಿಶ್ವದಾದ್ಯಂತ ಇರುವ ಆಪಲ್ ಉದ್ಯೋಗಿಗಳು ಕಚೇರಿಗೆ ಹಿಂತಿರುಗುವ ದಿನವನ್ನು ನಿಗದಿಪಡಿಸಿತ್ತು. ಆದರೆ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇದು ವಿಳಂಬವಾಗಿದೆ.  ಮಾತ್ರವಲ್ಲ ಆಪಲ್ ಕಳೆದೊಂದು ವಾರದಲ್ಲಿ ತನ್ನ ಮೂರು ಅಂಗಡಿಗಳನ್ನು ಮುಚ್ಚಿದೆ ಎಂದು ತಿಳಿದುಬಂದಿದೆ.

Google:ಅಮೆರಿಕದಲ್ಲಿ ಉದ್ಯೋಗಿಗಳ ವೇತನ ಹೊಂದಾಣಿಕೆಗೆ ಮುಂದಾದ ಗೂಗಲ್!

ಕನಿಷ್ಠ ನಾಲ್ಕು ಸಿಬ್ಬಂದಿಗಳಿಗೆ ಕೊರೋನಾ (corona) ಪಾಸಿಟಿವ್ ಬಂದ ಹಿನ್ನಲ್ಲೆಯಲ್ಲಿ ಟೆಕ್ಸಾಸ್‌ನಲ್ಲಿ (Texas) ತನ್ನ ಸಗಟು ವ್ಯಾಪಾರದ (Retail Stores) ಅಂಗಡಿಗಳನ್ನು ಕಳೆದ ವಾರ ಆಪಲ್ ಮುಚ್ಚಿತು.

WFH Employees: ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ಗುಡ್ ನ್ಯೂಸ್, ಕೇಂದ್ರದಿಂದ ಹೊಸ ಕಾನೂನು

ಈ ಸಾಂಕ್ರಾಮಿಕ ರೋಗವು ಆರಂಭವಾಗಿದ್ದ ದಿನದಿಂದಲೂ ಆಪಲ್ ಕಂಪೆನಿಯು (Apple comapny) ತನ್ನ ಉದ್ಯೋಗಿಗಳ ಮತ್ತು ಗ್ರಾಹಕರ  ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಆದ್ಯತೆ ನೀಡಿದೆ ಎಂದು ಕಂಪೆನಿಯ ವಕ್ತಾರರು ಹೇಳಿದ್ದಾರೆ.

ESIC Recruitment 2021: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿ

ಏನಿದು ಹೈಬ್ರಿಡ್ ಕೆಲಸ: ಕೆಲವು ಕಂಪನಿಗಳು ನೌಕರರಿಗೆ ಎರಡೂ ಆಯ್ಕೆಯನ್ನು ನೀಡಲು ಮುಂದಾಗಿವೆ. ಮನೆಯಿಂದ ಕೆಲಸ, ಕಚೇರಿಯಿಂದ ಕೆಲಸ  ಈ ಎರಡೂ ಮಾದರಿಗಳ ಮಿಶ್ರಣವನ್ನು ಕೆಲವು ಕಂಪನಿಗಳು ಅನುಸರಿಸುತ್ತಿವೆ. ವಾರದಲ್ಲಿ 2-3 ದಿನ ಕಚೇರಿಯಲ್ಲಿ ಕೆಲಸವಾದರೆ, ಉಳಿದ ದಿನ ಮನೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡುತ್ತಿವೆ. ಬಹುಪಾಲು ಸಂಸ್ಥೆಗಳು ಕಚೇರಿಯನ್ನು ತೆರೆದಿವೆ. ಆದರೆ ನೌಕರರಿಗೂ ಅನುಕೂಲವಾಗುವಂತೆ ಕೆಲವು ದಿನ ಕಚೇರಿಯಿಂದ ಹಾಗೂ ಕೆಲವು ದಿನ ಮನೆಯಿಂದ ಕೆಲಸ ಮಾಡುವ ಸೌಲಭ್ಯ ನೀಡಲಾಗುತ್ತಿದೆ. ಇದನ್ನೇ ಹೈಬ್ರಿಡ್ ವರ್ಕ್ ಮೋಡೆಲ್ (hybrid work model) ಎಂದು ಕರೆಯಲಾಗುತ್ತಿದೆ.

HAL RECRUITMENT 2021: ಹೆಚ್‌ಎಎಲ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಡಿ.18 ಕೊನೆ ದಿನ

ಕಂಪನಿಗೆ ಸಂಬಂಧಿಸಿದ ಸಭೆಗಳಿದ್ದರೆ ಕಚೇರಿಗಳಿಗೆ ಬರುವುದು ಸೂಕ್ತ. ಇದರಿಂದ ಸಂವಹನ ಸುಲಭ ಸಾಧ್ಯ ಎನ್ನುವುದು ಕಂಪನಿಗಳ ಉದ್ದೇಶ. ಜೊತೆಗೆ ಬಹುದೂರ ಪ್ರಯಾಣ ಮಾಡಬೇಕಾದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಬಹುದಾದ ಅವಕಾಶಗಳನ್ನು ನೀಡಲಾಗುತ್ತಿದೆ.

click me!