TCS BPS Hiring: 2022ರಲ್ಲಿ ಪದವಿ ಪೂರೈಸುವವರನ್ನು ನೇಮಕ ಮಾಡಿಕೊಳ್ಳುತ್ತಿರುವ ಟಿಸಿಎಸ್

By Suvarna News  |  First Published Dec 15, 2021, 12:34 PM IST

* ಬಿಪಿಎಸ್ ಸೇವೆಗಾಗಿ ಹೊಸಬರನ್ನು ನೇಮಕ ಮಾಡಿಕೊಳ್ಳುತ್ತಿರುವ TCS
* ನೇಮಕಾತಿಗೆ ಅರ್ಜಿ ಸಲ್ಲಿಸಲು 2022ರ ಜನವರಿ 7 ಕೊನೆ ದಿನ
* ರಾಷ್ಟ್ರೀಯ ಅರ್ಹತಾ ಪರೀಕ್ಷೆ(NQT) ಮೂಲಕ ಟಿಸಿಎಸ್‌‌ಕ್ಕೆ ನೇಮಕಾತಿ


ಬೆಂಗಳೂರು(ಡಿ.15): ಭಾರತದ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services-TCS), ಫ್ರೆಶರ್ಸ್ಗೆ ಬಂಪರ್ ಆಫರ್ ಕೊಡಲು ರೆಡಿಯಾಗಿದೆ. ಐಟಿ ಉದ್ಯಮದಲ್ಲಿ ಫ್ರೆಶರ್ಸ್ ಉದ್ಯೋಗಗಳನ್ನ ನೇಮಕ ಮಾಡಿಕೊಳ್ಳಲು ಟಿಸಿಎಸ್ ಸಿದ್ಧತೆ ನಡೆಸಿದೆ. ಪದವೀಧರರ ಸಿದ್ಧತೆಯನ್ನು ಪರಿಶೀಲಿಸುವ ರಾಷ್ಟ್ರವ್ಯಾಪಿ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NQT) ಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ.  BPS ನೇಮಕಾತಿಗಾಗಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.  TCS BPS ಫ್ರೆಷರ್ ನೇಮಕಾತಿಗಾಗಿ ಅರ್ಜಿಗಳ ನೋಂದಣಿಗೆ ಜನವರಿ 7 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services-TCS) ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

B.Com, BA, BAF, BBI, BBA, BBM, BMS, BSc – IT/CS/General, BCA, BCS, B.Pharm, M.Pharm ಪೂರೈಸಿರುವ ಪದವೀಧರರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಅಂದಹಾಗೇ ಈ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪೂರ್ಣ ಸಮಯ ತರಗತಿಗೆ ಹಾಜರಾಗಿ ಡಿಗ್ರಿ ಪೂರೈಸಿದವರು ಮಾತ್ರ ಅರ್ಜಿ ಸಲ್ಲಿಸಬೇಕು. 2022 ರಲ್ಲಿ ವಿವಿಧ ಕೋರ್ಸ್ಗಳಲ್ಲಿ ಉತ್ತೀರ್ಣರಾದ ಪದವೀಧರರು ಟಿಸಿಎಸ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. TCS NQT ಗಾಗಿ ಶೀಘ್ರದಲ್ಲೇ ನೋಂದಣಿ  ಪ್ರಕ್ರಿಯೆ ಶುರುವಾಗಲಿದೆ. ಟೆಕ್ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಕಿಕ್‌ಸ್ಟಾರ್ಟ್ ಮಾಡಲು ಬಯಸುವ ಅಭ್ಯರ್ಥಿಗಳು TCS ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Latest Videos

undefined

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services-TCS), ಹುದ್ದೆಗಳ ನೇಮಕಾತಿಗಾಗಿಯೇ  ರಾಷ್ಟ್ರೀಯ ಅರ್ಹತಾ ಪರೀಕ್ಷೆ (NQT)  ನಡೆಸಲಿದೆ. ಫ್ರೆಶರ್ಸ್ ಅಭ್ಯರ್ಥಿಗಳು ಈ ಪರೀಕ್ಷೆ ಎದುರಿಸಲು ಕೂಡಲೇ ನೋಂದಣಿ ಮಾಡಿಕೊಳ್ಳಿ. ಅಂದಹಾಗೇ TCS iON (NQT)ಪರೀಕ್ಷೆಗೆ ಹಾಜರಾಗುವ ಸಮಯದಲ್ಲಿ ಅಭ್ಯರ್ಥಿಗಳು ಯಾವುದೇ ಬ್ಯಾಕ್‌ಲಾಗ್ ಹೊಂದಿರಬಾರದು. ಜೊತೆಗೆ ಶಿಕ್ಷಣದ ಅಂತರವು ಎರಡು ವರ್ಷಗಳನ್ನು ಮೀರಬಾರದು. ಜನವರಿ 26, 2022 ರಂದು TCS iON (NQT) ಪರೀಕ್ಷೆ ನಡೆಯಲಿದೆ.  ಮೂರು ವಿಭಾಗಗಳಲ್ಲಿ ಈ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಸಂಖ್ಯಾತ್ಮಕ ಸಾಮರ್ಥ್ಯ, ಮೌಖಿಕ ಸಾಮರ್ಥ್ಯ ಮತ್ತು ತಾರ್ಕಿಕ ಸಾಮರ್ಥ್ಯ- ಈ ಮೂರು ವಿಭಾಗಗಳಲ್ಲಿ TCS iON (NQT) ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಅವಧಿ 60 ನಿಮಿಷಗಳಾಗಿದ್ದು, ಆನ್ಲೈನ್ ಮೂಲಕವೇ ಅಭ್ಯರ್ಥಿಗಳು ಉತ್ತರಿಸಬೇಕು. 

BRO Recruitment: ಗಡಿ ರಸ್ತೆಗಳ ಸಂಸ್ಥೆಯಲ್ಲಿ 354 ಹುದ್ದೆಗಳಿಗೆ ನೇಮಕಾತಿ 

ಪ್ರಾಜೆಕ್ಟ್ ಅವಶ್ಯಕತೆಗಳಿಗೆ ಅನುಗುಣವಾಗಿ ಶಿಫ್ಟ್ ವೈಸ್ ಡ್ಯೂಟಿಗೂ ಅಭ್ಯರ್ಥಿಗಳು  ಸರಿಯಾಗಿ ಹೊಂದಿಕೊಳ್ಳಬೇಕಾಗುತ್ತದೆ. ಆದರೆ, ರಾತ್ರಿ ಕೆಲಸ ಮಾಡುವವರಿಗೆ ಹೋಮ್ ಪಿಕ್ ಅಪ್ ಮತ್ತು ಡ್ರಾಪ್ ವ್ಯವಸ್ಥೆ ಮಾಡಲಾಗುವುದು. ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳೊಂದಿಗೆ ಯಾವ ಶಾಖೆಯಲ್ಲಿ ಕೆಲಸಕ್ಕೆ ಸೇರುತ್ತಾರೆ ಎಂಬ ಬಗ್ಗೆ  ಚರ್ಚಿಸಲಾಗುವುದು. ಅಭ್ಯರ್ಥಿಗಳ ಸ್ಥಳದ ಆದ್ಯತೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದರೂ, ಅಂತಿಮ ನಿರ್ಧಾರವನ್ನು TCS ತೆಗೆದುಕೊಳ್ಳುತ್ತದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services-TCS), ಹುದ್ದೆಗಳ ನೇಮಕಾತಿಗಾಗಿಯೇ  ರಾಷ್ಟ್ರೀಯ ಅರ್ಹತಾ ಪರೀಕ್ಷೆ (NQT)  ನಡೆಸಲಿದೆ. TCS ಅಂಗಸಂಸ್ಥೆಯಾದ TCS iON ನಡೆಸುವ NQT ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಫ್ರೆಶರ್‌ಗಳನ್ನು ಸಂಸ್ಥೆ ನೇಮಿಸಿಕೊಳ್ಳುತ್ತದೆ. ಪರೀಕ್ಷೆಗೆ ಸಂಬಂಧಿಸಿದಂತೆ, TCS NQT ಮೂಲತಃ ಅಭ್ಯರ್ಥಿಗಳ ಅರಿವಿನ ಮತ್ತು ಇತರ ಕೌಶಲ್ಯಗಳನ್ನು ಪರೀಕ್ಷಿಸುತ್ತದೆ. ಅಭ್ಯರ್ಥಿಗಳು ತಮ್ಮ ಮನೆಗಳಲ್ಲಿ ಆನ್‌ಲೈನ್‌ನಲ್ಲಿ ಅಥವಾ TCS iON ಅಧಿಕೃತ ಪರೀಕ್ಷಾ ಕೇಂದ್ರಗಳಲ್ಲಿ ಆಫ್‌ಲೈನ್‌ನಲ್ಲಿ ಪರೀಕ್ಷೆಗೆ ಹಾಜರಾಗಬಹುದು.

TCS NQT ನಲ್ಲಿ ಪಡೆದ ಅಂಕಗಳು ಎರಡು ವರ್ಷಗಳವರೆಗೆ ಮಾನ್ಯವಾಗಿರುತ್ತವೆ. ಪರೀಕ್ಷೆಯನ್ನು TCS iON ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುತ್ತದೆ. ಒಟ್ಟಾರೆಯಾಗಿ ವರ್ಷಕ್ಕೆ ನಾಲ್ಕು ಬಾರಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ NQT ಸ್ಕೋರ್‌ಗಳನ್ನು ಸುಧಾರಿಸಲು ವರ್ಷಕ್ಕೆ ನಾಲ್ಕು ಬಾರಿ ಈ ಪರೀಕ್ಷೆ ಎದುರಿಸಬಹುದು. 

Technical graduate course: ಭಾರತೀಯ ಸೇನೆಯಲ್ಲಿ ಟೆಕ್ನಿಕಲ್ ಗ್ರ್ಯಾಜುಯೆಟ್ ಕೋರ್ಸ್‌ಗೆ ಅರ್ಜಿ ಆಹ್ವಾನ 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು TCS ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.   TCS BPS ಫ್ರೆಶರ್ ನೇಮಕಾತಿಗಾಗಿ ಅರ್ಜಿಗಳ ನೋಂದಣಿಗೆ ಜನವರಿ 7 ಕೊನೆಯ ದಿನಾಂಕವಾಗಿದೆ.  ಯಾವುದೇ ಸಹಾಯಕ್ಕಾಗಿ, TCS ತಂಡವನ್ನು  ilp.support@tcs.com ಇಮೇಲ್ ಮೂಲಕ ಸಂಪರ್ಕಿಸಬಹುದು ಅಥವಾ ಹೆಲ್ಪ್‌ಡೆಸ್ಕ್  ಸಹಾಯವಾಣಿ ಸಂಖ್ಯೆ 18002093111 ಕರೆ ಮಾಡಬಹುದು.

click me!