ಮತದಾರರ ಬಳಿ ಭಿಕ್ಷೆ ಬೇಡಿ 10 ಸಾವಿರ ಠೇವಣಿ ಮೊತ್ತವನ್ನು ನಾಣ್ಯದಲ್ಲಿ ನೀಡಿದ ಅಭ್ಯರ್ಥಿ!

Published : Apr 19, 2023, 03:42 PM IST
ಮತದಾರರ  ಬಳಿ ಭಿಕ್ಷೆ ಬೇಡಿ 10 ಸಾವಿರ ಠೇವಣಿ ಮೊತ್ತವನ್ನು ನಾಣ್ಯದಲ್ಲಿ ನೀಡಿದ ಅಭ್ಯರ್ಥಿ!

ಸಾರಾಂಶ

ಕರ್ನಾಟಕ ವಿಧಾನಸಭೆಯ ಯಾದಗಿರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ನಾಮಪತ್ರ ಸಲ್ಲಿಕೆಯ ವೇಳೆ ಇಡೀ ಠೇವಣಿ ಮೊತ್ತವಾದ 10 ಸಾವಿರ ರೂಪಾಯಿಯನ್ನು ಸಂಪೂರ್ಣವಾಗ ನಾಣ್ಯದಲ್ಲಿಯೇ ನೀಡಿದ್ದಾರೆ. ಅವರು ಇಡೀ ಮೊತ್ತವನ್ನು ಮತದಾರರಿಂದ ಭಿಕ್ಷೆ ಬೇಡೆ ಸಂಗ್ರಹಿಸಿದ್ದಾರೆ.

ಯಾದಗಿರಿ (ಏ.19): ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೂರು ಪ್ರಬಲ ಪಕ್ಷಗಳ ಅಭ್ಯರ್ಥಿಗಳು ಮಾತ್ರವಲ್ಲ, ಕೆಲವೊಂದು ಕಡೆ ಪಕ್ಷೇತರ ಅಭ್ಯರ್ಥಿಗಳು ಗಮನಸೆಳೆಯುತ್ತಿದ್ದಾರೆ. ಈ ನಡುವೆ ಯಾದಗಿರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಲುವಾಗಿ 10 ಸಾವಿರ ರೂಪಾಯಿ ಠೇವಣಿ ಮೊತ್ತವನ್ನು ಸಂಪೂರ್ಣವಾಗಿ ನಾಣ್ಯದಲ್ಲಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಇಡೀ ಕ್ಷೇತ್ರದಲ್ಲಿ ಮತದಾರರ ಬಳಿಕ ಭಿಕ್ಷೆ ಬೇಡುವ ಮೂಲಕ ಈ ಹಣವನ್ನು ಅವರು ಸಂಗ್ರಹ ಮಾಡಿದ್ದು, ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಯಂಕಪ್ಪ, ತನ್ನ ಇಡೀ ಜೀವನವನ್ನು ಊರಿನ ರೈತರಿಗಾಗಿ ಮುಡಿಪಾಗಿಡುವ ವಾಗ್ದಾನ ಮಾಡಿದ್ದು, ಚುನಾವಣೆಯಲ್ಲಿ ಜನ ನನ್ನನ್ನು ಗೆದ್ದೇ ಗೆಲ್ಲಿಸುತ್ತಾರೆ ಎಂದು ಹೇಳಿದ್ದಾರೆ. 'ನನ್ನ ಸಮುದಾಯದ ಜನರ ಹಾಗೂ ನನ್ನೂರಿನ ರೈತರ ಹಿತಕ್ಕಾಗಿ ನನ್ನಿಡೀ ಜೀವನವನ್ನು ಮುಡಿಪಾಗಿಡಲಿದ್ದೇನೆ. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಭಿತ್ತಿಪತ್ರಗಳನ್ನು ಬರೆದುಕೊಂಡು ಚುನಾವಣಾಧಿಕಾರಿಯ ಬಳಿ ಬಂದಿದ್ದೆ; ಎಂದು ಯಂಕಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬುಧವಾರ ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ಶಾಸಕ ಅರವಿಂದ್ ಬೆಲ್ಲದ್ ಅವರ ಮನೆಯಲ್ಲಿ ಪಕ್ಷದ ಹಿರಿಯ ಮುಖಂಡರೊಂದಿಗೆ ಉಪಹಾರ ಸಭೆ ನಡೆಸಿದರು. ಹಾವೇರಿ ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಬೊಮ್ಮಾಯಿ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಅವರು 2008 ರಿಂದ ಇಲ್ಲಿನ ಶಾಸಕರಾಗಿದ್ದು, ನಾಮಪತ್ರ ಸಲ್ಲಿಕೆಯ ವೇಳೆ ಅಭಿನಯ ಚಕ್ರವರ್ತಿ ನಟ ಸುದೀಪ್‌ ಕೂಡ ಉಪಸ್ಥಿತರಿದ್ದರು.

 

ಯಾದಗಿರಿಯಲ್ಲಿ ಜೋರಾದ ನಾಮಿನೇಷನ್ ಭರಾಟೆ, ಒಟ್ಟು 22 ನಾಮಪತ್ರ ಸಲ್ಲಿಕೆ!

ಜೆಪಿ ನಡ್ಡಾ ಅವರೊಂದಿಗೆ ರಾಜ್ಯ ರಾಜಕೀಯದ ಇತರ ಗಣ್ಯರು ಕೂಡ ನಾಮಪತ್ರ ಸಲ್ಲಿಕೆಯ ವೇಳೆ ಆಗಮಿಸಿದ್ದರು. ನಟ ಕಿಚ್ಚ ಸುದೀಪ್‌ ಕೂಡ ತೆರೆದ ವಾಹನದ ಮೆರವಣಿಗೆಯಲ್ಲಿ ಮುಖ್ಯಮಂತ್ರಿಯ ಜೊತೆ ಆಗಮಿಸಿದರು. ಸುದೀಪ್‌, ಮುಖ್ಯಮಂತ್ರಿಗೆ ತಮ್ಮ ಬೆಂಬಲವನ್ನು ನೀಡಿದ್ದನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕೆ ಮಾಡಿದ್ದವು.

ಯಾದಗಿರಿ: ಮಾಲಕರೆಡ್ಡಿಗೆ ಕೈ ಕೊಟ್ಟ ಕಾಂಗ್ರೆಸ್‌..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ