ರಾಯಚೂರು: ಮಾನ್ವಿ ಕ್ಷೇತ್ರದಿಂದ ಕಿಚ್ಚ ಸುದೀಪ್‌ರನ್ನ ಚುನಾವಣಾ ಕಣಕ್ಕಿಳಿಸಲು ಬಿಜೆಪಿ ಪ್ಲಾನ್?!

Published : Apr 18, 2023, 11:46 AM ISTUpdated : Apr 18, 2023, 12:13 PM IST
ರಾಯಚೂರು: ಮಾನ್ವಿ ಕ್ಷೇತ್ರದಿಂದ ಕಿಚ್ಚ ಸುದೀಪ್‌ರನ್ನ ಚುನಾವಣಾ ಕಣಕ್ಕಿಳಿಸಲು ಬಿಜೆಪಿ ಪ್ಲಾನ್?!

ಸಾರಾಂಶ

ಬಿಜೆಪಿ ಅಭ್ಯರ್ಥಿಗಳ ಮೂರು ಪಟ್ಟಿ ಬಿಡುಗಡೆಯಾದ್ರೂ ಮಾನ್ವಿ, ಶಿವಮೊಗ್ಗ ಕ್ಷೇತ್ರಗಳನ್ನ ಮಾತ್ರ ಬಾಕಿ ಉಳಿಸಿಕೊಂಡಿದೆ. ಈ ಕ್ಷೇತ್ರಗಳಿಗೆ ಒಂದರಲ್ಲಿ ನಟ ಕಿಚ್ಚ ಸುದೀಪ್ ರನ್ನ ಚುನಾವಣಾ ಕಣಕ್ಕಿಳಿಸಲು ಬಿಜೆಪಿ ಕಸರತ್ತು ನಡೆಸಿದೆ ಅಂತ ಹೇಳಲಾಗುತ್ತಿದೆ.

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಏ.18) : ಬಿಜೆಪಿ ಅಭ್ಯರ್ಥಿಗಳ ಮೂರು ಪಟ್ಟಿ ಬಿಡುಗಡೆಯಾದ್ರೂ ಮಾನ್ವಿ, ಶಿವಮೊಗ್ಗ ಕ್ಷೇತ್ರಗಳನ್ನ ಮಾತ್ರ ಬಾಕಿ ಉಳಿಸಿಕೊಂಡಿದೆ. ಈ ಕ್ಷೇತ್ರಗಳಿಗೆ ಒಂದರಲ್ಲಿ ನಟ ಕಿಚ್ಚ ಸುದೀಪ್ ರನ್ನ ಚುನಾವಣಾ ಕಣಕ್ಕಿಳಿಸಲು ಬಿಜೆಪಿ ಕಸರತ್ತು ನಡೆಸಿದೆ ಅಂತ ಹೇಳಲಾಗುತ್ತಿದೆ.

 ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮಾನ್ವಿ ಕ್ಷೇತ್ರ(Manvi assembly constituency)ಕ್ಕೆ ನಟ‌ ಸುದೀಪ್‌(Kichha sudeep)ರನ್ನ ಕರೆ ತರೋ ಪ್ಲಾನ್ ನಡೆದಿದೆ. ನಟ ಸುದೀಪ್ ಒಪ್ಪಿದರೆ ಎರಡು ಕ್ಷೇತ್ರದಲ್ಲಿ ಒಂದಕ್ಕೆ ಟಿಕೆಟ್ ಸಾಧ್ಯತೆಯಿದೆ ಎನ್ನಲಾಗುತ್ತಿದೆ.  ಬಿಜೆಪಿ ಹೈಕಮಾಂಡ್ ‌ನಲ್ಲಿ ಸುದೀಪ್‌ಗೆ ಟಿಕೆಟ್ ನೀಡಲು ಚರ್ಚೆ ನಡೆದಿದ್ದು, ಸುದೀಪ್ ಮಾತ್ರ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಒಂದು ವೇಳೆ ಒಪ್ಪಿದರೆ ಮಾನ್ವಿ ಅಥವಾ ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ರಾಯಚೂರು: ಚುನಾವಣೆ ಪ್ರಚಾರದ ವೇಳೆ ಡಾಬಾಕ್ಕೆ ಹೋಗುವ ಮದ್ಯ ಪ್ರಿಯರೇ ಎಚ್ಚರ..!

ಮಾನ್ವಿ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದವರ ಸಂಖ್ಯೆ ಅಧಿಕವಾಗಿರುವ ಕಾರಣ ಹಾಗೂ ಸುದೀಪ್‌ರನ್ನ ದೇವರಂತೆ ಪೂಜಿಸುವ ಅಭಿಮಾನಿಗಳು ಸಹ ಇರುವುದರಿಂದ ಸುದೀಪ್‌ಗೆ ಟಿಕೆಟ್ ನೀಡಿದ್ರೆ ಮಾನ್ವಿಯಲ್ಲಿ ಕಮಲ ಅರಳಿಸಬಹುದು ಎಂಬ ಲೆಕ್ಕಾಚಾರ ಇದೆ. ಇನ್ನೂ ಶಿವಮೊಗ್ಗ ಕ್ಷೇತ್ರದಲ್ಲಿ ಟಿಕೆಟ್ ಫೈಟ್(Ticket fight) ಇದ್ದರೂ ಸುದೀಪ್‌ಗೆ ಶಿವಮೊಗ್ಗ ಜೊತೆ ನಂಟು ಇರುವುದರಿಂದ ಕ್ಷೇತ್ರದಲ್ಲಿ ವರ್ಕೌಟ್ ಆಗಬಹುದು ಅನ್ನೋ ಲೆಕ್ಕಾಚಾರ.

 ಇದರ ಜೊತೆಗೆ ಕಾಂಗ್ರೆಸ್ ಮಾಜಿ ಸಂಸದ ಬಿ.ವಿ.ನಾಯಕ್‌(BV Nayak)ಗೂ ಮಾನ್ವಿ ಕ್ಷೇತ್ರ(Manvi assembly constituency)ಕ್ಕೆ ಗಾಳ  ಹಾಕಿರುವ ಕಮಲ ನಾಯಕರು ಇಂದು ಮಧ್ಯಾಹ್ನ ಬಾಕಿ ಎರಡು ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆಯಿದೆ. ಆದ್ರೆ ಕಾಂಗ್ರೆಸ್ ಪಕ್ಷ ಬಿಟ್ಟುಬರಲು ಬಿ.ವಿ.ನಾಯಕ್ ಮೀನಾಮೇಷ ಎಣಿಸುತ್ತಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.  ಕ್ಷೇತ್ರದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಸ್ಥಳೀಯರಿಗೆ ಬಿಜೆಪಿ ಟಿಕೆಟ್ ‌ನೀಡಬೇಕೆಂದು ಆಗ್ರಹಿಸಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡ್ ಮಾತ್ರ ಯಾವ ನಾಯಕರಿಗೆ ಮಾನ್ವಿ ಟಿಕೆಟ್ ನೀಡುತ್ತೆ ಎಂಬುವುದು ಕಾದುನೋಡಬೇಕಾಗಿದೆ.

ರಾಯ​ಚೂರು ಕದನ: ಬಿಜೆ​ಪಿ ಹ್ಯಾಟ್ರಿ​ಕ್‌ ಗೆಲುವಿಗೆ ಬ್ರೇಕ್‌ ಹಾಕು​ತ್ತಾ ಕಾಂಗ್ರೆಸ್‌?

ಇನ್ನು ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 10ರಂದು ಮತದಾನ ,, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ