
ಬಳ್ಳಾರಿ (ಏ.18) : ಕಲ್ಯಾಣರಾಜ್ಯ ಪ್ರಗತಿ ಪಕ್ಷದ ನಗರ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಿ ಅರುಣಾ ಅವರು ಒಟ್ಟು .₹96.23 ಕೋಟಿ ಚರಾಸ್ತಿ ಹಾಗೂ .104.38 ಕೋಟಿ ಸ್ಥಿರಾಸ್ತಿ ಹೊಂದಿದ್ದು, .200 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯ ಒಡತಿ ಎನಿಸಿದ್ದಾರೆ.
ಇವರ ಬಳಿ .₹1.76 ಲಕ್ಷ ನಗದು ಇದ್ದು, .₹16.44 ಕೋಟಿ ಮೌಲ್ಯದ ₹38486.392 ಗ್ರಾಂ.ಚಿನ್ನಾಭರಣ, ಡೈಮಂಡ್‌್ಸ ಹಾಗೂ .₹77.20 ಲಕ್ಷ ಮೌಲ್ಯದ ಬೆಳ್ಳಿ ಇದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಬಳಿ ಒಟ್ಟು 44 ಕೋಟಿ ಆಸ್ತಿ ಇದೆ. ಇದರಲ್ಲಿ .₹1.33 ಲಕ್ಷ ನಗದು ಇದ್ದು, ಚರಾಸ್ತಿ ₹.29.20 ಕೋಟಿ, ಸ್ಥಿರಾಸ್ತಿ .8 ಕೋಟಿ ಇದೆ. ಅವರ ಬಳಿ .₹7.39 ಕೋಟಿ ಮೌಲ್ಯದ 46.258 ಗ್ರಾಂ. ಚಿನ್ನಾಭರಣ, .₹32.18 ಲಕ್ಷ ಮೌಲ್ಯದ ಬೆಳ್ಳಿ ಇದೆ. ಇವರ ಪುತ್ರ ಕಿರೀಟಿ ರೆಡ್ಡಿ ಅವರು .₹7.24 ಕೋಟಿ ಚರಾಸ್ತಿ, .₹1.24 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ನಾಮಪತ್ರ ಸಲ್ಲಿಸಿ ಕಣ್ಣೀರಿಟ್ಟ ಅರುಣಾ ಲಕ್ಷ್ಮೀ, ಸಮಾಧಾನಪಡಿಸಿದ ಪುತ್ರಿ ಬ್ರಾಹ್ಮಣಿ ರೆಡ್ಡಿ
ಲಕ್ಷ್ಮಿ ಅರುಣಾ ಹೆಸರಿನಲ್ಲಿ ಬಳ್ಳಾರಿ, ಬೆಂಗಳೂರು, ಆಂಧ್ರಪ್ರದೇಶದಲ್ಲಿ ಅಪಾರ ಪ್ರಮಾಣದ ಆಸ್ತಿಯಿದೆ. 14 ಭಾಗಗಳಲ್ಲಿ ಕೃಷಿ ಭೂಮಿಯೊಂದಿಗೆ, 94 ಕೃಷಿಯೇತರ ಸ್ಥಳ(ನಿವೇಶನ) ಇದೆ. ಇದರಲ್ಲಿ ಕೆಲವು ನಿವೇಶನಗಳು ಉಡುಗೊರೆಯಾಗಿ ಬಂದಿರುವ ಬಗ್ಗೆ ಅಫಿಡೆವಿಟ್‌ನಲ್ಲಿ ತಿಳಿಸಿದ್ದಾರೆ. ಆಂಧ್ರದ ಶ್ರೀಕಾಳಹಸ್ತಿ, ಬೆಂಗಳೂರಿನ ದೊಡ್ಡಬಳ್ಳಾಪುರ, ಜಾಲಹಳ್ಳಿ, ದೇವನಹಳ್ಳಿಯಲ್ಲಿ ಕೃಷಿಯೇತರ ಹಾಗೂ ಬೆಂಗಳೂರು ಆಂಧ್ರದ ನಂದ್ಯಾಲ್‌ನಲ್ಲಿ ಮನೆಗಳಿವೆ. ಪುತ್ರ ಕಿರಿಟಿ ರೆಡ್ಡಿ ಅವರಿಗೆ ತಾಯಿ ಅರುಣಾ ಲಕ್ಷ್ಮಿ ಅವರು 21 ಎಕರೆ ಕೃಷಿಯೇತರ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Janardanareddy) ಅವರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿರುವ ಬಗ್ಗೆ ಅವರು ಅಫಿಡೆವಿಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಬಳ್ಳಾರಿ ಗ್ರಾಮೀಣದಲ್ಲಿ ದೋಸ್ತಿಗಳ ನಡುವೆ ಕುಸ್ತಿ: ಕಾಂಗ್ರೆಸ್‌ನಿಂದ ಶಾಸಕ ನಾಗೇಂದ್ರಗೆ ಟಿಕೆಟ್
ರೆಡ್ಡಿ ಪತ್ನಿ ಬಳಿ ವಾಹನಗಳಿಲ್ಲ
ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಹಾಗೂ ಪುತ್ರ ಕಿರೀಟಿ ರೆಡ್ಡಿ ಅವರು ಕೋಟ್ಯಂತರ ರು. ಮೌಲ್ಯದ ಆಸ್ತಿಗಳನ್ನು ಹೊಂದಿದ್ದರೂ ಜನಾರ್ದನ ರೆಡ್ಡಿ ಸೇರಿ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲೂ ಕಾರುಗಳಿಲ್ಲ. ಲಕ್ಷ್ಮಿ ಅರುಣಾ ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಅಫಿಡೆವಿಟ್‌ನಲ್ಲಿ ತಮ್ಮ ಬಳಿ ಹಾಗೂ ಪತಿ, ಪುತ್ರನ ಬಳಿ ಯಾವುದೇ ವಾಹನಗಳಿಲ್ಲ ಎಂದು ತೋರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.