ಕೇಂದ್ರದ ಕೊರೋನಾ ಎಲ್ಲಿ? ಹುಡುಕಿದರೂ ಕಾಣಿಸುತ್ತಿಲ್ಲ, ಸಚಿವರ ಪತ್ರಕ್ಕೆ ಕಾಂಗ್ರೆಸ್ ನಾಯಕನ ವ್ಯಂಗ್ಯ!

By Suvarna NewsFirst Published Dec 24, 2022, 6:07 PM IST
Highlights

ಕೇಂದ್ರ ಸರ್ಕಾರದ ಆಪ್ತ ಮಿತ್ರ ಕೊರೋನಾ ಎಲ್ಲಿ? ಎಲ್ಲೂ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ವ್ಯಂಗ್ಯವಾಡಿದ್ದಾರೆ. ಆರೋಗ್ಯ ಸಚಿವರ ಭಾರತ್ ಜೋಡೋ ಯಾತ್ರೆ ಕುರಿತು ಬರದೆ ಪತ್ರಕ್ಕೆ ತಿರುಗೇಟು ನೀಡಿದ ನಾಯಕ, ಕೇಂದ್ರ ಸರ್ಕಾರವನ್ನು ಅಣಿಕಿಸಿದ್ದಾರೆ.
 

ಜೈಪುರ(ಡಿ.24): ಚೀನಾ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಜನಸಂದಣಿಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲು ಸೂಚಿಸಲಾಗಿದೆ. ಇತ್ತ ಆರೋಗ್ಯ ಸಚಿವ ಮನ್ಸುಕ್ ಮಾಂಡಿವಿಯಾ, ಭಾರತ್ ಜೋಡೋ ಯಾತ್ರೆ ಮುದೂಡಿ ಅಥವಾ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಕೋರಿ ಬರೆದ ಪತ್ರ ವಿವಾದಕ್ಕೆ ಕಾರಣವಾಗಿದೆ. ಈ ಪತ್ರವನ್ನು ಅಣಕಿಸಿದ ಕಾಂಗ್ರೆಸ್ ನಾಯಕ, ರಾಜಸ್ಥಾನದ ಸಚಿವ ಪ್ರತಾಪ್ ಸಿಂಗ್ ಕಚಾರಿಯಾ, ಕೇಂದ್ರದ ಕೋವಿಡ್ ಎಲ್ಲಿ? ಇಲ್ಲೆಲ್ಲು ಕಾಣಿಸುತ್ತಿಲ್ಲ ಎಂದು ಅಣಕಿಸಿದ್ದಾರೆ.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಸಿಗುತ್ತಿರುವ ಜನ ಬೆಂಬಲ ಬಿಜೆಪಿಯ ನಿದ್ದೆಗೆಡಿಸಿದೆ. ಹೀಗಾಗಿ ಯಾತ್ರೆ ಆರಂಭದಿಂದಲೇ ಬಿಜೆಪಿ ಆತಂಕಗೊಂಡಿದೆ. ಹೇಗಾದರೂ ಮಾಡಿ ಯಾತ್ರೆ ನಿಲ್ಲಿಸಲು ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ ಜನರ ಬೆಂಬಲದಿಂದ ಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಇದೀಗ ಕೊರೋನಾ ನೆಪ ಹಿಡಿದು ಕೇಂದ್ರ ಸರ್ಕಾರ ಯಾತ್ರೆ ಸ್ಥಗಿತಗೊಳಿಸಲು ಯತ್ನಿಸುತ್ತಿದೆ ಎಂದು ಪ್ರತಾಪ್ ಸಿಂಗ್ ಕಚಾರಿಯಾ ಹೇಳಿದ್ದಾರೆ.

 

ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ನಟ ಕಮಲ್ ಹಸನ್!

ಬಿಜೆಪಿ ಆಯೋಜಿಸುತ್ತಿರುವ ಜನಾಕ್ರೋಶ ಯಾತ್ರೆ ಸಂಪೂರ್ಣ ವಿಪಲಗೊಂಡಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಇಡೀ ಭಾರತ ಒಗ್ಗೂಡಿದೆ. ಇತಿಹಾಸದಲ್ಲಿ ಕಂಡು ಕೇಳರಿಯದ ಯಾತ್ರೆಯಿಂದ ದೇಶದಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ಹೀಗಾಗಿ ಬಿಜೆಪಿ ಕೊರೋನಾ ಮುಂದಿಟ್ಟು ರಾಜಕೀಯ ಮಾಡುತ್ತಿದೆ ಎಂದು ಪ್ರತಾಪ್ ಸಿಂಗ್ ಕಚಾರಿಯಾ ಹೇಳಿದ್ದಾರೆ.

ಕೋವಿಡ್‌ ನಿಯಮ ಪಾಲಿಸ್ತೇವೆ, ಪಾದಯಾತ್ರೆ ನಿಲ್ಲಿಸಲ್ಲ
ಕಾಂಗ್ರೆಸ್‌ ಪಕ್ಷ ಕೋವಿಡ್‌ ಸಂಬಂಧಿತ ಎಲ್ಲಾ ನಿಯಮಾವಳಿಗಳನ್ನು ಪಾಲನೆ ಮಾಡುತ್ತದೆ. ಆದರೆ ಭಾರತ್‌ ಜೋಡೋ ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ. ಕೋವಿಡ್‌ ನಿಯಮ ಪಾಲಿಸಿ, ಇಲ್ಲವೇ ಯಾತ್ರೆ ನಿಲ್ಲಿಸಿ ಎಂಬ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರ ಸೂಚನೆಗೆ ಉತ್ತರಿಸಿದ ಖುರ್ಷಿದ್‌, ಕೋವಿಡ್‌ ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ನಿಯಮಗಳನ್ನು ಕಾಂಗ್ರೆಸ್‌ ಪಾಲಿಸುತ್ತದೆ. ಆದರೆ ಪಾದಯಾತ್ರೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ತಮ್ಮ ಮನಸ್ಸಿನಲ್ಲಿರುವುದನ್ನು ಮಾತಾಡಲು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿ ಹಾಗೂ ಸಂಸ್ಥೆ ಸ್ವತಂತ್ರವಾಗಿವೆ. ಕೋವಿಡ್‌ಗೆ ಹೆದರದ ಸರ್ಕಾರ ಈ ಯಾತ್ರೆಗೆ ಹೆದರಿದೆ. ಹಾಗಾಗಿ ಇದನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ. ನಾವು ಯಾವುದೇ ಪತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಯಾತ್ರೆ ನಿಲ್ಲಿಸಲು ಕೇಂದ್ರ ಸರ್ಕಾರ ಕೋವಿಡ್ ವೈರಸ್ ಬಿಟ್ಟಿದೆ: ಉದ್ಧವ್‌ ಠಾಕ್ರೆ ಬಣ

ಜಾಗತಿಕ ಮಟ್ಟದಲ್ಲಿ ಮತ್ತೆ ಕೋವಿಡ್‌ ಭೀತಿ ಹೆಚ್ಚಿರುವ ಬೆನ್ನಲ್ಲೇ, ‘ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಿ ಭಾರತ್‌ ಜೋಡೋ ಯಾತ್ರೆ ನಡೆಸಿ. ಸಾಧ್ಯವಾಗದೇ ಇದ್ದಲ್ಲಿ ಭಾರತ್‌ ಜೋಡೋ ಯಾತ್ರೆಯನ್ನು ಅಮಾನತು ಮಾಡಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಕೇಂದ್ರ ಆರೋಗ್ಯ ಖಾತೆ ಸಚಿವ ಮನ್ಸುಖ್‌ ಮಾಂಡವೀಯ ಪತ್ರ ಬರೆದಿದ್ದಾರೆ.

ರಾಜಸ್ಥಾನದ ಮೂವರು ಬಿಜೆಪಿ ಸಂಸದರ ಮನವಿ ಮೇರೆಗೆ ಬರೆಯಲಾಗಿರುವ ಈ ಪತ್ರವನ್ನು ಮಾಂಡವೀಯ ಬರೆದಿದ್ದಾರೆ. ಇದಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಕೋವಿಡ್‌ ನಿಯಮ ಪಾಲನೆ ಸಂಬಂಧ ಕೇಂದ್ರ ಸರ್ಕಾರ ಕಾಂಗ್ರೆಸ್‌ ಅನ್ನು ಮಾತ್ರ ಗುರಿಯಾಗಿಸಿಕೊಂಡಿದೆ. ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಕೂಡಾ ವಿವಿಧ ಯಾತ್ರೆಗಳನ್ನು ಹಮ್ಮಿಕೊಂಡಿವೆ. ಅವರಿಗೂ ಇದೇ ರೀತಿಯ ಸೂಚನೆ ನೀಡಲಾಗಿದೆಯೇ?’ ಎಂದು ಪ್ರಶ್ನಿಸಿದೆ.

click me!