
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡುತ್ತಿರುವುದು ಸದ್ಗುರು ಅವರನ್ನು ಭೇಟಿಯಾಗಿರುವುದಕ್ಕೆ, ವಿಧಾನಸಭೆಯಲ್ಲಿ RSS ಗೀತೆಯಾಗಿರುವ ನಮಸ್ತೆ ಸದಾ ವತ್ಸಲೇ ಹಾಡುವ ಮೂಲಕ ಇತ್ಯಾದಿಗಳಿಂದ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಂದಲೇ ಹಾಗೂ ಪಕ್ಷದ ಬೆಂಬಲಿಗರಿಂದಲೇ ಭಾರಿ ಅಸಮಾಧಾನಕ್ಕೆ ಗುರಿಯಾದವರು ಡಿ.ಕೆ.ಶಿವಕುಮಾರ್ ಅವರು. ಈಚೆಗೆ ನಡೆದ ಸಮಾರಂಭದಲ್ಲಿ ತಮ್ಮ ಗುರು ಬಂಗಾರಪ್ಪನವರನ್ನು ಅವರು ನೆನಪಿಸಿಕೊಂಡಿದ್ದರು. 1979 ರಿಂದಲೂ ನಾನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ನೆನೆಯಲೇ ಬೇಕು. ನನ್ನ ರಾಜಕಾರಣದ ಬದುಕಿನಲ್ಲಿ ಅವರ ಶಿಷ್ಯನಾಗಿ ಬೆಳೆದೆ. ನನ್ನನ್ನು ಚಿಕ್ಕ ವಯಸ್ಸಿಗೆ ಮಂತ್ರಿ ಮಾಡಿ ಬೆಳೆಸಿದವರು, ಬಂಗಾರಪ್ಪನವರು ಎಂದಿದ್ದರು.
ಇಂತಿಪ್ಪ ಶಿವಕುಮಾರ್ ಅವರು, ಇದೀಗ ಇಂಡಿಯಾ ಟುಡೆಗೆ ನೀಡಿರುವ ಸಂದರ್ಶನದಲ್ಲಿ ಕೆಲವೊಂದು ವಿಷಯಗಳನ್ನು ಮಾತನಾಡಿದ್ದಾರೆ. ನಿಮಗೆ ಕರ್ನಾಟಕದ ದೋಸೆ (Karnataka Dosa) ಮತ್ತು ತಮಿಳುನಾಡಿನ ದೋಸೆ ಎರಡರಲ್ಲಿ ಯಾವುದು ಇಷ್ಟ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ಡಿಕೆಶಿ ಅವರು, ಕರ್ನಾಟಕದಲ್ಲಿ ಹುಟ್ಟಿದ್ದೇನೆ. ಅದನ್ನೇ ಪ್ರೀತಿಸಬೇಕು. ಇಲ್ಲಿಯ ಭಾಷೆ, ಗಾಳಿ ಎಲ್ಲವನ್ನೂ ಪ್ರೀತಿಸುವುದು ನಮ್ಮ ಕೆಲಸ ಎನ್ನುವ ಮೂಲಕ ಕರ್ನಾಟಕದ ಮೇಲಿನ ಪ್ರೀತಿಯನ್ನು ಮರೆದಿದ್ದಾರೆ.
ಇದನ್ನೂ ಓದಿ: ನಾನು ಮುಂದಿನ ಮುಖ್ಯಮಂತ್ರಿ ಆದ್ರೆ... ಮೂರು ಗ್ಯಾರೆಂಟಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್- ಏನದು ನೋಡಿ...
ಇದೇ ವೇಳೆ ಅವರಿಗೆ ಕರ್ನಾಟಕದಲ್ಲಿ ನಿಮಗೆ ಏನು ಇಷ್ಟ. ಒಂದು ವೇಳೆ ಕರ್ನಾಟಕದ ಬಗ್ಗೆ ಸಿನಿಮಾ ಮಾಡುವುದಾದರೆ ಏನೆಂದು ಹೆಸರು ಇಡಲು ಬಯಸುವಿರಿ ಎನ್ನುವ ಪ್ರಶ್ನೆಗೆ ಶಿವಕುಮಾರ್ ಅವರು, ಕರ್ನಾಟಕದ ಹವಾಮಾನ ಮತ್ತು ಇಲ್ಲಿಯ ಸಂಸ್ಕೃತಿ ತುಂಬಾ ವಿಭಿನ್ನವಾಗಿದ್ದು, ಒಳ್ಳೆಯದ್ದಾಗಿದೆ. ಇದು ನನಗೆ ತುಂಬಾ ಇಷ್ಟ. ಇದರ ಬಗ್ಗೆನೇ ಸಿನಿಮಾ ಮಾಡಬಹುದು. ಅದಕ್ಕೆ ಹೆಸರು ಇಡುವುದಾದರೆ 'ತಣ್ಣನೆಯ ಗಾಳಿ' ಎಂದು ಹೆಸರು ಕೊಡುತ್ತಿದ್ದೆ ಎಂದಿದ್ದಾರೆ. ಶಾಲಾ ದಿನಗಳಲ್ಲಿ ಮುಂದಿನ ಬೆಂಚ್ ಹುಡುಗನೋ, ಹಿಂದಿನ ಬೆಂಚ್ (back bench student) ಆಗಿದ್ರೋ ಎನ್ನುವ ಪ್ರಶ್ನೆಗೆ ಅವರು, ನಾನು ಎಂದಿಗೂ ಮುಂದಿನ ಸೀಟಿನ ಹುಡುಗನೇ, ಯಾವತ್ತೂ ಹಿಂದಿನ ಬೆಂಚಿನವ ಆಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ರಾಜಕಾರಣಕ್ಕೆ ಬರುವ ಆಸೆ ಇತ್ತು. ಆದ್ದರಿಂದ ಮೊದಲಿನ ಬೆಂಚಿನಲ್ಲಿಯೇ ಇದ್ದೆ ಎಂದಿದ್ದಾರೆ.
ಒಂದು ವೇಳೆ ರಾಜಕಾರಣಕ್ಕೆ ಬರದಿದ್ದರೆ, ಯಾವ ಕ್ಷೇತ್ರದಲ್ಲಿ ಇರುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಅವರು, ನಾನು ಮೊದಲಿನಿಂದಲೂ ರಾಜಕಾರಣವನ್ನೇ ಬಯಸಿದವ. ಹುಟ್ಟಿದ್ದು ರಾಜಕಾರಣಕ್ಕಾಗಿಯೇ, ಆದ್ದರಿಂದ ಇಲ್ಲಿ ಬರದೇ ಬೇರೆ ಎಲ್ಲಿಯೂ ಇರಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ತಮ್ಮ ಮಕ್ಕಳು ರಾಜಕಾರಣಕ್ಕೆ ಬರುವುದು ತಮಗೆ ಇಷ್ಟವಿಲ್ಲ ಎಂದೂ ಹೇಳಿದ್ದಾರೆ. ಮನೆಯಲ್ಲಿ ಯಾರು ಬಾಸ್ ಎಂದು ಪ್ರಶ್ನಿಸಿದಾಗ, ಡಿ.ಕೆ.ಶಿವಕುಮಾರ್ ನಾನೇ ಬಾಸ್. ಈ ಸ್ಥಾನವನ್ನುಯಾರೂ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.
ಎತ್ತ ಸಾಗುತ್ತಿದೆ ಕರ್ನಾಟಕ? 10 ತಿಂಗಳಲ್ಲಿ 26 ಸಾವಿರ ಅಪ್ರಾಪ್ತ ಗರ್ಭಿಣಿಯರು! ಕಾರಣವೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.