
ಬೆಂಗಳೂರು: ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು ಕಾಂಗ್ರೆಸ್ ಶಾಸಕ ಸಂಗಮೇಶ್ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರು ಧರ್ಮ, ರಾಜಕೀಯ ಹಾಗೂ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಯತ್ನಾಳ ಅವರು ಸಂಗಮೇಶ್ ನೀಡಿದ ಮುಂದಿನ ಜನ್ಮದ ಕುರಿತ ಹೇಳಿಕೆಯನ್ನು ಟೀಕಿಸಿದರು. ಮುಸ್ಲಿಂ ಧರ್ಮದಲ್ಲಿ ಮುಂದಿನ ಜನ್ಮ ಎಂಬ ನಂಬಿಕೆ ಇಲ್ಲ. ಅಲ್ಲಿ ಹಿಂದೂಗಳ ಕೊಲೆ ಮಾಡಿ ಬಾ ಜನ್ನತ್ ಗೆ ಹೋಗ್ತಾರೆ ಅಂತಾ ಇದೆ. 72 ಸುಂದರ ಕನ್ಯೆಯರು ಜನ್ನತ್ ನಲ್ಲಿ ಇರುತ್ತಾರೆ. ಅವ್ರು 34 ಅಡಿ ಉದ್ದ ಇರುತ್ತಾರೆ. ಅವರನ್ನು ಹೀಗೆ ಕತ್ತು ಎತ್ತಿ ನೋಡಬೇಕಾಗುತ್ತೆ. ಇಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡಿ ಬಾಂಬ್ ಹಾಕಿ ಹೋದ್ರೆ ಅಲ್ಲಿ ಸ್ವರ್ಗ ಅಂತೆ ಸುಂದರಿ ಯರು ಸಿಗ್ತಾರಂತೆ. ಇವರು ಮೂರೂವರೆ ಅಡಿ ಇರ್ತಾರೆ, ಆ ಸುಂದರಿಯರು ಆರಡಿ ಇರ್ತಾರೆ. ಅವರನ್ನು ಈ ಮಕ್ಕಳು ತಲೆಯೆತ್ತಿ ನೋಡಬೇಕು ಅಲ್ಲಿ. ಸಂಗಮೇಶ್ ಅವರಿಗೆ ಹೇಳ್ತೇನೆ ಈ ಜನ್ಮದಲ್ಲಿ ಈಗಾಗಲೇ ಮುಸ್ಲಿಂ ಧರ್ಮ ಕ್ಕೆ ಹೋಗಲಿ ಸಂಗಮೇಶ್ ಆದಷ್ಟು ಬೇಗ ಇಸ್ಲಾಂ ಹೋಗಿ, ನಿಮಗೆ ಹಿಂದೂಗಳ ಮತ ಬೇಡ, ಸಲಾದ್ದುನ್ ಖಿಲ್ಜಿ, ಸಲ್ಮಾನ್ ಖಾನ್ ಅಂತಾ ಹೆಸರು ಬದಲಿಸಿಕೊಳ್ಳಿ . ಇಸ್ಲಾಂ ಅಂದ್ರೆ ಶಾಂತಿ ಅಂತಾ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಸಿಎಂ ಕೂಡ ಇಸ್ಲಾಂಗೆ ಹೋಗಲಿ. ಆಗ ಹಿಂದೂ ಸಮಾಜ ಶಾಂತವಾಗಿರಲಿದೆ. ಆದಷ್ಟು ಬೇಗ ಎಲ್ಲರೂ ಇಸ್ಲಾಂ ಧರ್ಮಕ್ಕೆ ಸೇರಿಕೊಳ್ಳಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಮುಸ್ಲಿಂ ಗುಂಪುಗಳು ಕಲ್ಲು ತೂರಾಟ ನಡೆಸಿವೆ, ಮಕ್ಕಳು ಕೂಡಾ ಅಸಭ್ಯ ವರ್ತನೆ ತೋರಿದ್ದಾರೆ. ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತಪ್ಪು ಅವರದ್ದು ಆದರೂ ಕ್ರಮ ಹಿಂದುಗಳ ವಿರುದ್ಧವಾಗಿದೆ. ರಾಜ್ಯದಲ್ಲಿ ಈಗ ಔರಂಗಜೇಬನ ಸರ್ಕಾರ ಇರುವಂತಾಗಿದೆ. ಇದು ಶೀಘ್ರದಲ್ಲೇ ಪತನವಾಗಲಿದೆ” ಎಂದು ಯತ್ನಾಳ್ ಆರೋಪಿಸಿದರು.
“ನನ್ನ ಮೇಲೂ ಈಗಾಗಲೇ 70ಕ್ಕೂ ಹೆಚ್ಚು ಪ್ರಕರಣಗಳಿವೆ. ನಾವು ಅಂಜುವುದಿಲ್ಲ, ಹೆದರುವುದಿಲ್ಲ. ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡದೆ ಇರುವ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಯತ್ನಾಳ ಅವರು ಮದ್ದೂರಿನಲ್ಲಿ ನಡೆಯಲಿರುವ ಹೋರಾಟದ ಕುರಿತು ಮಾತನಾಡಿದ ಅವರು, ಕರ್ನಾಟಕದ ಜನತೆ ಬಿಜೆಪಿ ನಾಯಕರ ಹೊಂದಾಣಿಕೆ ರಾಜಕಾರಣವನ್ನು ಒಪ್ಪುತ್ತಿಲ್ಲ. ಪೂಜ್ಯ ತಂದೆಯವರಿಗೂ ಅವರ ಪುತ್ರನಿಗೂ ಜನ ಬೆಂಬಲವಿದೆ ಎಂದು ಹೇಳಲಾಗುತ್ತಿತ್ತು. ಆದರೆ ಜನ ಈಗ ಅವರ ಹಿಂದೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಹೈಕಮಾಂಡ್ ಕೂಡ ಅದನ್ನು ಅರಿತುಕೊಂಡಿದೆ. ಹೊಂದಾಣಿಕೆ ರಾಜಕಾರಣ ಬಿಟ್ಟು ನೈಜ ಹೋರಾಟ ನಡೆಸಬೇಕು” ಎಂದು ಕಿಡಿಕಾರಿದರು.
ಜನರು ಪೂಜ್ಯ ತಂದೆಯವ್ರು ಹಾಗೂ ಅವ್ರ ಮಗನ ಜೊತೆ ಇದ್ದಾರೆ ಅಂತಾ ಅನ್ಕೊಂಡಿದ್ದಾರೆ. ಅದನ್ನು ಬಟಾಬಯಲು ಮಾಡುದೇ ನನ್ನ ಹೋರಾಟ. ಈಗ ಜನರು ಅವರ ಹಿಂದೆ ಇಲ್ಲ ಅನ್ನೋದು ಹೈಕಮಾಂಡ್ ಈಗ ಅರ್ಥವಾಗಿದೆ. ಸದಸನದಲ್ಲಿ ಆರ್ ಸಿಬಿ ಚರ್ಚೆಯಾದಾಗದ ಪೂಜ್ಯ ತಂದೆಯವ್ರ ಮಗ ಮಾತನಾಡಿಲ್ಲ. ಆರ್ .ಅಶೋಕ್ ಮಾತನಾಡಿದ್ರು.. ಕರಿಬಸವ, ಬಿಳಿ ಬಸವ ಅಂತಾ ಏನೇನೋ ಮಾತಾಡಿದ್ರು. ಸಿಎಂ,ಡಿಸಿಎಂ ಟಾರ್ಗೆಟ್ ಮಾಡಿ ಮಾತನಾಡಿಲಿಲ್ಲ. ನಿಮ್ಮನ್ನ ಜನರು ಒಪ್ಪುತ್ತಿಲ್ಲ. ಹೊಂದಾಣಿಕೆ ರಾಜಕಾರಣವನ್ನು ಬಿಡಿ ನೇಪಾಳದ ಸ್ಥಿತಿ ಕರ್ನಾಟಕಕ್ಕೆ ಬರಲಿದೆ. ಅವ್ರು 40% ಇದ್ರು ಇವ್ರು 90%. ಎಲ್ಲರೂ ಹೊಂದಾಣಿಕೆ ರಾಜಕಾರಣ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಬಿವಿಪಿ ಕಾರ್ಯಕ್ರಮದಲ್ಲಿ ಪರಮೇಶ್ವರ್ ಭಾಗಿಯಾಗಿದ್ದು ತಪ್ಪೇನಲ್ಲ. ದೇಶದ್ರೋಹಿ ಸಂಘಟನೆಗಳಲ್ಲಿ ಭಾಗಿಯಾಗುವುದೇ ತಪ್ಪು. ಎಬಿವಿಪಿ ಯಾವಾಗಲೂ ದೇಶಾಭಿಮಾನಿ ಸಂಘಟನೆ. ಆದರೆ ಕಾಂಗ್ರೆಸ್ ಸದಾ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ನಿರ್ದೇಶನದಂತೆ ನಡೆಯುತ್ತಿದೆ” ಎಂದು ಯತ್ನಾಳ ಆರೋಪಿಸಿದರು.
ಬ್ಯಾಲೆಟ್ ಪೇಪರ್ ಮತದಾನದ ಮೂಲಕ ಗೂಂಡಾಗಳು ರಿಗ್ಗಿಂಗ್ ಮಾಡುತ್ತಾರೆ. ಇವಿಎಂನಲ್ಲಿ ಯಾವುದೇ ತಪ್ಪುಗಳು ಇದ್ದರೆ ಸಾಕ್ಷಿ ಕೊಡಬಹುದು. ಹಿಂದೆಯೂ ಕಾಂಗ್ರೆಸ್ ಪರ ಮತಗಳು ತಿರುಗಿಬಿದ್ದವು ಎಂಬ ಅನುಮಾನಗಳು ಕೇಳಿಬಂದಿದ್ದವು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತ. ಅದನ್ನು ತಪ್ಪಿಸಲು ಬ್ಯಾಲೆಟ್ ಪೇಪರ್ ವಿಧಾನವನ್ನು ಮುಂದಿಟ್ಟಿದ್ದಾರೆ” ಎಂದು ಅವರು ಹೇಳಿದರು.
ಕಾಂಗ್ರೆಸ್ ಮನೆ-ಮಠ ಹಾಳು ಮಾಡುವ ಕೆಲಸ ಮಾಡುತ್ತಿದೆ. ಹಿಂದುಗಳನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿದೆ. ಇಸ್ಲಾಂ ಎಂದರೆ ಶಾಂತಿ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಹಾಗಾದರೆ ಸಿಎಂ ಸ್ವತಃ ಇಸ್ಲಾಂ ಧರ್ಮಕ್ಕೆ ಸೇರಲಿ, ಆಗ ಹಿಂದೂ ಸಮಾಜ ಶಾಂತವಾಗುತ್ತದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.