ಮಮತಾ ಬ್ಯಾನರ್ಜಿ ಟೀಕಿಸಿದ ಕಾಂಗ್ರೆಸ್ ವಕ್ತಾರ ಬಂಧನ, ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮ!

By Suvarna NewsFirst Published Mar 4, 2023, 4:33 PM IST
Highlights

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ ಕಾರಣಕ್ಕೆ ಕಾಂಗ್ರೆಸ್ ವಕ್ತಾರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ಕುರಿತು ಯಾವುದೇ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಇತ್ತ ಪಶ್ಚಿಮ ಬಂಗಾಳದಲ್ಲಿ ಭಾರಿ ಹೈಡ್ರಾಮ ನಡೆದಿದೆ. ಮಮತಾ ಬ್ಯಾನರ್ಜಿ ಅಧಿಕಾರಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನೆ ನಡೆಯುತ್ತಿದೆ.
 

ಕೋಲ್ಕತಾ(ಮಾ.04): ಪಶ್ಟಿಮ ಬಂಗಾಳದಲ್ಲಿ ರಾಜಕೀಯ ಹೈಡ್ರಾಮಕ್ಕೆ ಯಾವುದೇ ಕೊರತೆ ಇಲ್ಲ. ಗೂಂಡಾ ವರ್ತನೆ, ದಾಂಧಲೆ, ಪ್ರತಿಭಟನೆ, ಆರೋಪ ಪ್ರತ್ಯಾರೋಪ ಸೇರಿದಂತೆ ಹಲವು ಅತೀರೇಖದ ಘಟನೆಗಳು ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯವಾಗಿದೆ. ಇದೀಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಉಪಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ವಕ್ತಾರ ಸೇರಿದಂತೆ ಹಲವು ನಾಯಕರು ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಮುಂದಿಟ್ಟು ಟೀಕಿಸಿದ್ದರು. ಜನತೆ ಕಾಂಗ್ರೆಸ್ ಪರವಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಮೊದಲೇ ಸೋಲಿನಿಂದ ಕಂಗೆಟ್ಟಿದ್ದ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಪರಿಣಾಮ ಕಾಂಗ್ರೆಸ್ ವಕ್ತಾರ ಕೌಸ್ತವ್ ಬಗ್ಚಿಯನ್ನು ಬಂಗಾಳ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಉಪಚುನಾವಣೆ ಫಲಿತಾಂಶ (By poll Result) ಪ್ರಕಟಗೊಂಡಿದೆ. ಇದರಲ್ಲಿ ಸಗರ್ದಿಗಿ ಕ್ಷೇತ್ರದಲ್ಲಿ ಟಿಎಂಸಿ ಮಣಿಸಿದ ಕಾಂಗ್ರೆಸ್(Congress) ಜಯಭೇರಿ ಬಾರಿಸಿದೆ. ಇದು ಟಿಎಂಸಿ (TMC) ಕಾರ್ಯಕರ್ತರು ಹಾಗೂ ಸ್ವತಃ ಮಮತಾ ಬ್ಯಾನರ್ಜಿ (CM Mamata Banerjee) ಪಿತ್ತ ನೆತ್ತಿಗೇರಿಸಿದೆ. ಸಗರ್ದೀಗಿ ಕ್ಷೇತ್ರದಲ್ಲಿ ಜನರು ಟಿಎಂಸಿ ಪರವಾಗಿದ್ದಾರೆ. ಇಲ್ಲಿ ಗೂಂಡಾ ರಾಜಕೀಯ, ಹಣದ ಆಮಿಷ ನಡೆಯುವುದಿಲ್ಲ ಎಂದು ಟಿಎಂಸಿ ಹೇಳಿತ್ತು. ಆದರೆ ಫಲಿತಾಂಸ ಕಾಂಗ್ರೆಸ್ ಪರವಾಗಿ ಬಂದಿದೆ. ಹೀಗಾಗಿ ಜನರು ಗೂಂಡಾ ರಾಜಕೀಯ ಹಾಗೂ ಹಣದ ಆಮಿಷದ ರಾಜಕೀಯವನ್ನು ತರಿಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿತ್ತು. ಇದರ ಜೊತೆ ಕೆಲ ವೈಯುಕ್ತಿಕ ಟೀಕೆಗಳನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ.

 

ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಮಣಿಸಲು ಒಂದಾದ ಶತ್ರುಗಳು!

ಕೌಸ್ತವ್ ಬಗ್ಚಿ ಹೇಳಿಕೆ ನೀಡಿದ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತರು ದೂರು ನೀಡಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳ (Wetst bengal) ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿ ಕೌಸ್ತವ್ ಬಗ್ಚಿಯನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ 3.30ಕ್ಕೆ 24 ಪರಗಣ ಜಿಲ್ಲೆಯಲ್ಲಿರುವ ಭಗ್ಚಿ ಮನೆಗೆ ದಾಳಿ ಮಾಡಿದ ಪೊಲೀಸರು(Police) ಬಂಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ನಿದ್ದೆಯಿಂದ ಏಳುವ ಮೊದಲೇ ಬಂಧನ ಕಾರ್ಯ ಮುಗಿದಿದೆ.

ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳದ ಹಲವು ಭಾಗದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಟಿಎಂಸಿ ಗೂಂಡಾ ವರ್ತನೆ ಹಾಗೂ  ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ ಎಂದು ಪ್ರತಿಭಟನೆ (Protest) ಮಾಡಲಾಗಿದೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಭಾರಿ ಹೈಡ್ರಾಮ ನಡೆದಿದೆ. ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಟಿಎಂಸಿ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.

 

ಮೋದಿ ಕಾರ್ಯಕ್ರಮದಲ್ಲಿ ಹೈಡ್ರಾಮ, ಜೈಶ್ರೀರಾಮ್ ಘೋಷಣೆಯಿಂದ ವೇದಿಕೆಗೆ ಹತ್ತದೆ ದೀದಿ ಗರಂ!

ಕೌಸ್ತವ್ ಬಗ್ಚಿ ವಿರುದ್ಧ 120(B), 504 ಹಾಗೂ 506 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ಕೌಸ್ರವ್ ಬಗ್ಚಿ ಬಂಧವನ್ನು ಕಾಂಗ್ರೆಸ್ ಖಂಡಿಸಿದೆ. ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆ ತೋರುವ ಮಮತಾ ಬ್ಯಾನರ್ಜಿಗೆ ಮಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

click me!