ಪಕ್ಷೇತರ ಸಂಸದೆಯಾಗಿರುವ ಸುಮಲತಾ ಬಿಜೆಪಿ ಸೇರುವ ಬಗ್ಗೆ ಗುಸು ಗುಸು ಚರ್ಚೆಗೆ ಅವರ ನಡೆ ಸಾಕಷ್ಟು ಪುಷ್ಠಿಯನ್ನು ನೀಡುವಂತೆ ಮಾಡಿದೆ.
ಮಂಡ್ಯ(ಮಾ.04): ಬಿಜೆಪಿ ಪಾಳಯದಲ್ಲಿ ಸಂಸದೆ ಸುಮಲತಾ ಪ್ರತ್ಯಕ್ಷ, ಕೇಸರಿ ಶಾಲು ನೀಡಿ ಸ್ವಾಭಿಮಾನಿ ಸಂಸದೆಗೆ ಕೇಸರಿ ನಾಯಕರಿಂದ ಸ್ವಾಗತ, ಕೇಸರಿ ಶಾಲು ಧರಿಸದೆ ಕೈಯಲ್ಲಿ ಹಿಡಿದ ಸಂಸದೆ, ಮೋದಿ ಭೇಟಿ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಭಾಗಿ..!
ಮಾ.12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಮಂಡ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳ ಪರಿಶೀಲನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶುಕ್ರವಾರ ಮಂಡ್ಯಕ್ಕೆ ಆಗಮಿಸಿದ್ದರು. ಸಚಿವರಾದ ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ, ಸಂಸದೆ ಸುಮಲತಾ, ಮೈಸೂರು ಸಂಸದ ಪ್ರತಾಪ್‌ಸಿಂಹ ಸಾಥ್ ನೀಡಿದ್ದರು.
undefined
ಎಲ್ಲೆಲ್ಲೋ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣ ನಮಗೇಕೆ? ಜಿಲ್ಲೆಯಲ್ಲೇ ಸಾಕಷ್ಟು ಹಗರಣಗಳಿವೆ: ಸುಮಲತಾ
ಪಕ್ಷ ಸೇರ್ಪಡೆ ಬಗ್ಗೆ ಜನಾಭಿಪ್ರಾಯ ಕೇಳುತ್ತೇನೆ. ಯಾವ ಪಕ್ಷ ಸೇರಬೇಕೆಂಬ ಬಗ್ಗೆ ನಂತರ ನಿರ್ಧರಿಸುತ್ತೇನೆ ಎಂದು ಹೇಳುವ ಸಂಸದೆ ಸುಮಲತಾ ಅಂಬರೀಶ್ ಶುಕ್ರವಾರ ಕೇಸರಿ ನಾಯಕರೊಂದಿಗೆ ಕಾಣಿಸಿಕೊಳ್ಳುವುದರೊಂದಿಗೆ ಎಲ್ಲರಲ್ಲೂ ಕುತೂಹಲ ಮೂಡುವಂತೆ ಮಾಡಿದರು.
ಕಾರ್ಯಕ್ರಮ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನಡೆಸಿದ ಅಧಿಕಾರಿಗಳ ಸಭೆ, ಕಾರ್ಯಕರ್ತರ ಸಭೆಯಲ್ಲೂ ಸಂಸದೆ ಸುಮಲತಾ ಭಾಗವಹಿಸಿದ್ದು ವಿಶೇಷವಾಗಿತ್ತು. ಬಿಜೆಪಿ ಸಭೆಯಲ್ಲಿ ಭಾಗಿಯಾದ ಸಂಸದೆ ಸುಮಲತಾ ಅವರಿಗೆ ಕಾರ್ಯಕರ್ತರು ಕೇಸರಿ ಟವಲ್ ನೀಡಿ ಸ್ವಾಗತಿಸಿದರು. ಟವಲ್‌ನ್ನು ಮೈಮೇಲೆ ಧರಿಸದೆ ಕೈಯಲ್ಲೇ ಹಿಡಿದು ಕುಳಿತರು. ಪಕ್ಷೇತರ ಸಂಸದೆಯಾಗಿರುವ ಸುಮಲತಾ ಬಿಜೆಪಿ ಸೇರುವ ಬಗ್ಗೆ ಗುಸು ಗುಸು ಚರ್ಚೆಗೆ ಇಂದಿನ ಅವರ ನಡೆ ಸಾಕಷ್ಟು ಪುಷ್ಠಿಯನ್ನು ನೀಡುವಂತೆ ಮಾಡಿದೆ.