Pancharatna Rathayatra: : ತುಂತರು ಮಳೆ ಲೆಕ್ಕಿಸದೇ ಪಂಚರತ್ನ ರಥಯಾತ್ರೆಗೆ ಹರಿದು ಬಂತು ಜನಸಾಗರ

Published : Nov 23, 2022, 09:37 PM ISTUpdated : Nov 23, 2022, 09:39 PM IST
Pancharatna Rathayatra: : ತುಂತರು ಮಳೆ ಲೆಕ್ಕಿಸದೇ ಪಂಚರತ್ನ ರಥಯಾತ್ರೆಗೆ ಹರಿದು ಬಂತು ಜನಸಾಗರ

ಸಾರಾಂಶ

ತುಂತರು ಮಳೆ ಲೆಕ್ಕಿಸದೇ ಪಂಚರತ್ನ ರಥಕ್ಕೆ ಸ್ವಾಗತ ಕೈವಾರದಿಂದ ಚಿಂತಾಮಣಿವರೆಗೂ ಭರ್ಜರಿ ರೋಡ್‌ ಶೋ

ಚಿಕ್ಕಬಳ್ಳಾಪುರ (ನ.23) : ತುಂತರು ಮಳೆಯನ್ನು ಲೆಕ್ಕಿಸಿದೇ ಪಂಚರತ್ನ ರಥಯಾತ್ರೆಗೆ ಕಾರ್ಯಕರ್ತರಿಂದ ಆದ್ಧೂರಿ ಸ್ವಾಗತ, ಕೈವಾರದಲ್ಲಿ ದೇಗುಲ. ಮಸೀದಿಗೆ ಎಚ್‌.ಡಿ.ಕುಮಾರಸ್ವಾಮಿ ಟೆಂಪಲ್‌ ರನ್‌, ಬುದ್ದಿಮಾಂದ್ಯ ಮಕ್ಕಳಿಗೆ ಸಮವಸ್ತ್ರ ವಿತರಣೆ, ಕೈವಾರದಿಂದ ಚಿಂತಾಮಣಿ ನಗರದವರೆಗೂ ತೆರೆದ ವಾಹನದಲ್ಲಿ ಭರ್ಜರಿ ರೋಡ್‌ ಶೋ... ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ನಡೆಸಿ ಬುಧವಾರ ಶ್ರೀನಿವಾಸಪುರದ ಮೂಲಕ ಜಿಲ್ಲೆಯ ಚಿಂತಾಮಣಿಗೆ ಪ್ರವೇಶ ಮಾಡಿದ ಪಂಚರತ್ನ ರಥಯಾತ್ರೆಗೆ ಮೊದಲ ದಿನವೇ ಜಿಲ್ಲೆಯ ಚಿಂತಾಮಣಿಯಲ್ಲಿ ಆದ್ದೂರಿ ಸ್ವಾಗತ ಸಿಕ್ಕಿತು.

ಗೌನಿಪಲ್ಲಿಯಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಬೆಳಗ್ಗೆ ಕೈವಾರಕ್ಕೆ ಆಗಮಿಸಿ ಕೈವಾರ ತಾತಯ್ಯನಗರಿಗೆ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಕುಮಾರಸ್ವಾಮಿ ಸಾಗಿದ ಹಾದಿಯಲ್ಲಿ ಹೂ ಮಳೆ ಸುರಿಸಿದ ಕಾರ್ಯಕರ್ತರು ಕುಮಾರಸ್ವಾಮಿ ಮುಂದಿನ ಸಿಎಂ ಎಂದು ಘೋಷಣೆ ಕೂಗಿದರು. ಕುಮಾರಸ್ವಾಮಿಗೆ ಬೃಹತ್‌ ಸೇಬಿನ ಹಾರಗಳನ್ನು ಕ್ರೈನ್‌ಗಳ ಮೂಲಕ ಹಾಕಿ ಅಭಿನಂದಿಸಿದರು.

Pancharatna Rathayatra: ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಿರಿ: ಎಚ್ಡಿಕೆ ವಾಗ್ದಾಳಿ

ಕೈವಾರದಿಂದಲೇ ತೆರೆದ ವಾಹನದಲ್ಲಿ ಹೊರಟ ರೋಡ್‌ ಶೋ ಕೈವಾರ ಕ್ರಾಸ್‌ ಮೂಲಕ ಪೆರಮಾಚನಹಳ್ಳಿ, ಚಿನ್ನಸಂದ್ರದ ಮೂಲಕ ಚಿಂತಾಮಣಿ ನಗರಕ್ಕೆ ಪ್ರವೇಶಿಸಿತು. ಈ ವೇಳೆ ಯುವ ಜೆಡಿಎಸ್‌ ಕಾರ್ಯಕರ್ತರು ಬೈಕ್‌ ರಾರ‍ಯಲಿ ಮೂಲಕ ತೆರೆದ ವಾಹಾನದಲ್ಲಿ ಕುಮಾರಸ್ವಾಮಿರನ್ನು ನಗರಕ್ಕೆ ಬರಮಾಡಿಕೊಂಡರು.

ಬುದ್ಧಿಮಾಂದ್ಯ ಮಕ್ಕಳಿಗೆ ಸಮವಸ್ತ್ರ ವಿತರಣೆ

ಪಂಚರತ್ನ ರಥಯಾತ್ರೆಗೆ ಚಾಲನೆ ನೀಡುವ ವೇಳೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಕೈವಾರ ಗ್ರಾಮದಲ್ಲಿರುವ ಸ್ಪಂದನ ಟ್ರಸ್ಟ್‌ನ ಬುದ್ದಿಮಾಂದ್ಯ ಮಕ್ಕಳ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದರು. ಬಳಿಕ ಗ್ರಾಮದಲ್ಲಿನ ಹಜರತ್‌ ಸೈಯದ್‌ ಇಬ್ರಾಹಿಂ ಶಾ ವಲಿ ಹಾಗೂ ಹಜರತ್‌ ಸೈಯದ್‌ ಮಖ್ದುಂ ಶಾ ವಲಿ ದರ್ಗಾ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು 

Pancharatna Rathayatra: ಕೋಲಾರಕ್ಕೆ ಯಾರೇ ಬಂದ್ರೂ ನಮ್ಮ ಅಭ್ಯರ್ಥಿ ಬದಲಿಲ್ಲ: ಎಚ್‌ಡಿಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ